Narendra Modi: ಭಾರತದ ಯಾವುದೇ ಪ್ರಧಾನಿ ಮಾಡದ ಸಾಧನೆ ಮಾಡುತ್ತಿದ್ದಾರೆ ನರೇಂದ್ರ ಮೋದಿ!
ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರ ಜಾಗತಿಕ ಮಟ್ಟದಲ್ಲಿ ಹಲವು ಬದಲಾವಣೆ ನಡೆದಿವೆ. ಅದರಲ್ಲೂ, ಜಾಗತಿಕ ಮಟ್ಟದಲ್ಲಿ 2 ಭೀಕರ ಯುದ್ಧಗಳು ನಡೆಯುತ್ತಿವೆ. ಹೀಗಾಗಿ ಜಗತ್ತು 2 ಓಳಾಗಿ ಹರಿದು ಹಂಚಿ ಹೋಗುತ್ತಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗಿದ್ದರೂ ಭಾರತ ಯಾವುದೇ ಒಂದು ದೇಶದ ಜೊತೆಗೆ ಗುರುತಿಸಿಕೊಳ್ಳದೆ, ಎಲ್ಲಾ ದೇಶಗಳ ಜೊತೆ ಸ್ನೇಹ ಬೆಳೆಸಿಕೊಂಡು ತನ್ನ ಅಭಿವೃದ್ಧಿ ಓಟ ಮುಂದುವರಿಸಿದೆ. ಹೀಗಿದ್ದಾಗಲೇ ಭಾರತದ ಯಾವುದೇ ಪ್ರಧಾನಿ ಮಾಡದ ಸಾಧನೆ ಮಾಡಲು ಈಗ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ!
ಪ್ರಧಾನಿ ನರೇಂದ್ರ ಮೋದಿ ಇದೀಗ ಉಕ್ರೇನ್ ದೇಶದ ರಾಜಧಾನಿ ಕೀವ್‌ಗೆ ತೆರಳಲು ರೈಲಿನ ಮೂಲಕ ಪ್ರಯಾಣ ಆರಂಭ ಮಾಡಿದ್ದಾರೆ. ಯುರೋಪ್ ದೇಶವಾದ ಪೋಲೆಂಡ್ ಮೂಲಕ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ & ಸುರಕ್ಷಿತ ರೈಲಿನಲ್ಲಿ ಪ್ರಯಾಣವನ್ನ ಆರಂಭಿಸಿದ್ದಾರೆ. ಸುಮಾರು 10 ಗಂಟೆಗಳ ನಿರಂತರ ಪ್ರಯಾಣದ ನಂತರ ಅವರು ಉಕ್ರೇನ್ ರಾಜಧಾನಿಗೆ ತಲುಪಲಿದ್ದಾರೆ. ವಿಷಯ ಇದಲ್ಲ 1991ರ ನಂತರ ಉಕ್ರೇನ್‌ಗೆ ಭಾರತದ ಯಾವುದೆ ಪ್ರಧಾನಿ ಭೇಟಿ ನೀಡಿಲ್ಲ. ಯಾಕಂದ್ರೆ 1991ಕ್ಕೂ ಮೊದಲು ಉಕ್ರೇನ್ ದೇಶ 'ಸೋವಿಯತ್ ರಷ್ಯಾ' ಭಾಗವಾಗಿತ್ತು, ಆದರೆ 1991 ರಲ್ಲಿ ಉಕ್ರೇನ್ ಸ್ವಾತಂತ್ರ್ಯ ಪಡೆದಿತ್ತು.

ಪ್ರಧಾನಿ ಮೋದಿ ಅವರಿಂದ ಇತಿಹಾಸ
'ಸೋವಿಯತ್ ರಷ್ಯಾ' ವಿಘಟನೆ ನಂತರ 1991 ರಲ್ಲಿ ಸ್ವಾತಂತ್ರ್ಯ ಪಡೆದ ಉಕ್ರೇನ್ ದೇಶಕ್ಕೆ ಭಾರತದ ಯಾವುದೇ ಪ್ರಧಾನಿಗಳು ಭೇಟಿ ನೀಡಿರಲಿಲ್ಲ. ಆದರೆ ಇದೇ ಮೊದಲ ಬಾರಿ ನಮ್ಮ ಭಾರತದ ಪ್ರಧಾನಿ ಒಬ್ಬರು ಉಕ್ರೇನ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಉಕ್ರೇನ್ ರಾಜಧಾನಿ ಕೀವ್ ನಗರಕ್ಕೆ ತೆರಳಿ, ಅಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆಗೆ ಮಾತನಾಡಲು ಈಗ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣ ಆರಂಭ ಮಾಡಿದ್ದಾರೆ. ಹಾಗಾದ್ರೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯಾಣ ಮಾಡುತ್ತಿರುವ ಆ ವಿಶೇಷ ರೈಲು ಯಾವುದು? ಮುಂದೆ ಓದಿ.
'ಟ್ರೇನ್ ಪೋರ್ಸ್ ಒನ್' ರೈಲು!
ಅಷ್ಟಕ್ಕೂ ಇದೀಗ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧವು ಘೋರವಾಗಿದೆ. ಅದರಲ್ಲೂ ಈ ಯುದ್ಧದಲ್ಲಿ ವೈಮಾನಿಕ ದಾಳಿ ಹೆಚ್ಚಾಗಿದ್ದು, ಪ್ರಧಾನಿ ಮೋದಿ ಅವರನ್ನು ಉಕ್ರೇನ್ ನೆಲಕ್ಕೆ ತೆರಳುವಂತೆ ವ್ಯವಸ್ಥೆ ಮಾಡಲು ರೈಲು ಮಾರ್ಗದ ವ್ಯವಸ್ಥೆ ಮಾಡಲಾಗಿದೆ. 'ಟ್ರೇನ್ ಪೋರ್ಸ್ ಒನ್' ಹೆಸರಿನ ವಿಶೇಷ ರೈಲಿನಲ್ಲಿ ಪ್ರಧಾನಿ 20 ಗಂಟೆಗಳ ಕಾಲ ಪ್ರಯಾಣಿಸಲಿದ್ದಾರೆ. ಒಂದ್ಕಡೆ ಉಕ್ರೇನ್ ರಾಜಧಾನಿಗೆ ತೆರಳಲು ಮೋದಿ ಅವರಿಗೆ 10 ಗಂಟೆ ಕಾಲಾವಕಾಶ ಬೇಕಿದೆ. ಚರ್ಚೆ ನಂತರ ಮತ್ತೆ ಪೋಲೆಂಡ್ ವಾಪಸ್ ಬರಲು ಪ್ರಧಾನಿ ಮೋದಿ ಅವರು ಸಜ್ಜಾಗಲಿದ್ದು ಆಗ ಕೂಡ 10 ಗಂಟೆಗಳ ಕಾಲ ಮತ್ತೆ ರೈಲು ಪ್ರಯಾಣ ಮಾಡಲಿದ್ದಾರೆ.












Click it and Unblock the Notifications