Narendra Modi: ಈ ಕಾರಣಕ್ಕೆ ಕ್ಷಮೆ ಕೇಳಿದ ಪ್ರಧಾನಿ ನರೇಂದ್ರ ಮೋದಿ, ಏನದು ?
Narendra Modi: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಕ್ಷಮೆಯಾಚಿಸಿದ್ದಾರೆ. ದೇಶದಲ್ಲಿ ಯಾವುದಾದರೂ ವಿಷಯಗಳು ನಡೆದಾಗ ಪ್ರಧಾನಿ ನರೇಂದ್ರ ಮೋದಿ ಅವರು ರಿಯಾಕ್ಟ್ ಮಾಡುವುದು ಇದೆ. ಇದೀಗ ದೇಶದಲ್ಲಿನ ಪ್ರಮುಖ ಘಟನೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಸಾರಿ ಎಂದು ಅವರು ಹೇಳಿದ್ದಾರೆ. ಅದೇನು ಎನ್ನುವ ವಿವರ ಇಲ್ಲಿದೆ.
ದೇಶದಲ್ಲಿ ಅದ್ಧೂರಿಯಾಗಿ ನೆರವೇರಿರುವ ಮಹಾ ಕುಂಭಮೇಳವು ಮುಕ್ತಾಯವಾಗಿದೆ. ಮಹಾ ಕುಂಭಮೇಳಕ್ಕೆ ಕೋಟ್ಯಾಂತರ ಜನ ಸಾಕ್ಷಿಯಾಗಿದ್ದಾರೆ.

ಮಹಾ ಕುಂಭಮೇಳ ಅದ್ಧೂರಿಯಾಗಿ ನೆರವೇರಿದೆ. ಆದರೆ ಈ ಮೇಳದಲ್ಲಿ ಕೆಲವೊಂದು ಅಚಾತುರ್ಯಗಳು ಸಹ ಸಂಭವಿಸಿವೆ. ಇದೀಗ ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದಾರೆ. ಮಹಾಕುಂಭ ಮುಕ್ತಾಯವಾಗಿದೆ. ಏಕತೆಯ ಮಹಾಯಜ್ಞ ಮುಗಿದಂತೆ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಅಲ್ಲದೇ ಗಂಗಾ ಮಾತೆ, ತಾಯಿ ಯಮುನೆ ಹಾಗೂ ಸರಸ್ವತಿಯೊಂದಿಗೆ ಜನರೂ ಸಹ ನನಗೆ ದೇವರಿಗೆ ಸಮಾನರಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಮುಂದುವರಿದು ಈ ಮಹಾ ಕುಂಭಮೇಳವು ಅದ್ಧೂರಿಯಾಗಿ ಹಾಗೂ ಅವಿಸ್ಮರಣೀಯವಾಗಿ ಉಳಿದಿದೆ. ಆದರೆ, ಈ ಮಹಾ ಕುಂಭಮೇಳದ ಸಮಯದಲ್ಲಿ ನಿಮ್ಮ ಸೇವೆಯನ್ನು ಮಾಡುವುದರಲ್ಲಿ ಏನಾದರೂ ತಪ್ಪಾಗಿದ್ದರೆ ನನ್ನನ್ನು ಕ್ಷಮಿಸಿ ಎಂದು ಅವರು ಜನರಲ್ಲಿ ಕೇಳಿಕೊಂಡಿದ್ದಾರೆ. ಈ ಸಂಬಂಧ ಅವರು ಸುದೀರ್ಘ ಪತ್ರವನ್ನೇ ಬರೆದಿದ್ದು. ಇದೀಗ ಈ ಪತ್ರ ವೈರಲ್ ಆಗುತ್ತಿದೆ.
ಹೌದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬರೋಬ್ಬರಿ 144 ವರ್ಷಗಳಿಗೆ ಒಮ್ಮೆ ನಡೆಯುವ ಮಹಾ ಕುಂಭಮೇಳವು ಮುಕ್ತಾಯವಾಗಿದ್ದು. ಈ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಇದೀಗ ಮೋದಿ ಅವರು ಮಾತನಾಡಿದ್ದಾರೆ. ಮಹಾಕುಂಭ ಮೇಳವು ಜನವರಿ 13ಕ್ಕೆ ಪ್ರಾರಂಭವಾಗಿತ್ತು. 45 ದಿನಗಳವರೆಗೆ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಮಹಾಕುಂಭ ಮೇಳ ನಡೆದಿತ್ತು. ಈ ಧಾರ್ಮಿಕ ಕಾರ್ಯಕ್ರಮದ ಬಗ್ಗೆ ಅವರು ಸುದೀರ್ಘ ಪತ್ರವನ್ನು ಬರೆದಿದ್ದಾರೆ. ಇದನ್ನು ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಭಾರೀ ವೈರಲ್ ಆಗುತ್ತಿದೆ.
ಅಮೆರಿಕದ ಎರಡಷ್ಟು ಜನ ಭಾಗಿ: ಇನ್ನು ಈ ಮಹಾಕುಂಭ ಮೇಳದಲ್ಲಿ ಅಮೆರಿಕದಲ್ಲಿನ ಎರಡರಷ್ಟು ಜನ ಭಾಗವಹಿಸಿದ್ದಾರೆ. ದೇಶದ ಇತಿಹಾಸದ ಪುಟಗಳಲ್ಲಿ ಈ ಮಹಾಕುಂಭ ಮೇಳ ಸೇರಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಕಳೆದ ಬಾರಿ ಕುಂಭಮೇಳ ನಡೆದ ವಿಷಯಗಳ ಆಧಾರದ ಮೇಲೆ ಈ ಬಾರಿ ಕುಂಭಮೇಳವನ್ನು ಆಯೋಜನೆ ಮಾಡಲಾಗಿತ್ತು. ಕೋಟ್ಯಾಂತರ ಜನರಿಗೆ ವ್ಯವಸ್ಥೆ ಕಲ್ಪಿಸುವುದು ಸಣ್ಣ ವಿಷಯವಲ್ಲ ಎಂದು ಮೋದಿ ಅವರು ಹೇಳಿದ್ದಾರೆ. ಅಲ್ಲದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕೆಲಸಕ್ಕೆ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.
ಮುಂದುವರಿದು ಗಂಗೆ ಹಾಗೂ ಯಮುನೆ ಸೇರಿದಂತೆ ದೇಶದ ನದಿಗಳ ಸ್ವಚ್ಛತೆ ಜನರ ಬದುಕಿನೊಂದಿಗೆ ನಂಟು ಇದೆ. ದೇಶದ ನದಿಗಳ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡಬೇಕು ಎನ್ನುವುದು ನನ್ನ ಬದ್ಧತೆ ಆಗಿದೆ. ಈ ಬದ್ಧತೆಗೆ ಕಾರ್ಯಕ್ರಮವು ಬೂಸ್ಟ್ ನೀಡಿದೆ ಎಂದು ಮೋದಿ ಅವರು ಹೇಳಿದ್ದಾರೆ.












Click it and Unblock the Notifications