ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ: ಪ್ರಧಾನಿ ಮೋದಿಯವರ ಪುಣೆ ಪ್ರವಾಸ ರದ್ದು

ಮುಂಬೈ ಸೆಪ್ಟೆಂಬರ್ 26: ಭಾರೀ ಮಳೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಮಹಾರಾಷ್ಟ್ರದ ಪುಣೆ ಪ್ರವಾಸ ಇಂದು ರದ್ದಾಗಿದೆ. ಕಳೆದ ದಿನದಿಂದ ಪುಣೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ರಸ್ತೆಗಳು ಜಲಾವೃತಗೊಂಡು ವಾಹನಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದೆ. ಅಲ್ಲದೆ ಪ್ರಧಾನಿ ಮೋದಿಯವರು ಭಾಗಿಯಾಗಬೇಕಿದ್ದ ಕಾರ್ಯಕ್ರಮಗಳಿಗೂ ಮಳೆರಾಯ ತೊಂದರೆಯನ್ನುಂಟು ಮಾಡಿದ್ದಾನೆ.

ಇಂದು ಸೋಲಾಪುರ ವಿಮಾನ ನಿಲ್ದಾಣ ಉದ್ಘಾಟನೆ ಸೇರಿದಂತೆ ಸುಮಾರು 22,600 ಕೋಟಿ ರೂಪಾಯಿ ವೆಚ್ಚದ ಹಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೆರವೇರಿಸಬೇಕಿತ್ತು. ಅಲ್ಲದೆ ಮೋದಿ ಅವರು ಪುಣೆ ಜಿಲ್ಲಾ ನ್ಯಾಯಾಲಯದ ಮೆಟ್ರೋ ನಿಲ್ದಾಣದಿಂದ (ಜಿಲ್ಲಾ ನ್ಯಾಯಾಲಯ ಮತ್ತು ಸ್ವರ್ಗೇಟ್ ನಡುವೆ ಸಾಗುವ) ಮೆಟ್ರೋ ಸೇವೆಯನ್ನು ಉದ್ಘಾಟನೆ ಮಾಡಬೇಕಾಗಿತ್ತು. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ಬುಧವಾರ ಸಂಜೆಯಿಂದಲೂ ಧಾರಾಕಾರ ಮಳೆ ಮುಂದುವರಿದಿದೆ.

Prime Minister Modi s visit to Pune has been canceled due to heavy rains

ಭಾರೀ ಮಳೆಯಿಂದಾಗಿ ಮಹಾರಾಷ್ಟ್ರದ ಹಲವು ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತವಾಗಿದೆ. ಅಲ್ಲದೆ ಮುಂಬೈ ಮತ್ತು ಪುಣೆಯಲ್ಲಿ ರೈಲು, ಬಸ್ ಮತ್ತು ವಿಮಾನ ಕಾರ್ಯಾಚರಣೆಗೆ ಮಳೆ ಅಡ್ಡಿಪಡಿಸಿದೆ. ಹೀಗಾಗಿ ಇಂದು ನಡೆಯಬೇಕಿದ್ದ ಮೋದಿ ಅವರ ಹಲವು ಕಾರ್ಯಕ್ರಮಗಳು ರದ್ದಾಗಿವೆ.

ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಎಚ್ಚರಿಕೆ!

ಭಾರತೀಯ ಹವಾಮಾನ ಇಲಾಖೆ (IMD) ಮಹಾರಾಷ್ಟ್ರದ ಹಲವೆಡೆ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿದೆ. IMD ಮುನ್ಸೂಚನೆಯ ಆಧಾರದ ಮೇಲೆ ನಗರ ಆಡಳಿತ ಮುಂಬೈನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ.

Prime Minister Modi s visit to Pune has been canceled due to heavy rains

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಮಹಾರಾಷ್ಟ್ರದಾದ್ಯಂತ ಭಾರತೀಯ ಹವಾಮಾನ ಇಲಾಖೆ (IMD) ಧಾರಾಕಾರ ಮಳೆಯ ಮುನ್ಸೂಚನೆಯನ್ನು ನೀಡಿದೆ. ಹೀಗಾಗಿ ಪುಣೆ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ನೀಡಿದ್ದು ಪುಣೆಗೆ ಆರೆಂಜ್ ಅಲರ್ಟ್ ಘೋಷಿಸಿದೆ.

ಇಂದು ಮಳೆ ತೀವ್ರಗೊಳ್ಳುತ್ತಿದ್ದಂತೆ ರೆಡ್ ಅಲರ್ಟ್

ಹವಾಮಾನದ ಬಗ್ಗೆ ವಿವರವಾದ ಮಾಹಿತಿ ನೀಡಿದ ಐಎಂಡಿ ನಿರ್ದೇಶಕ ಸುನೀಲ್ ಕಾಂಬ್ಳೆ, ಮುಂಬೈನಲ್ಲಿ ನಿನ್ನೆ ಮಧ್ಯಾಹ್ನದವರೆಗೆ ಆರೆಂಜ್ ಅಲರ್ಟ್ ನೀಡಲಾಗಿತ್ತು. ಆದರೆ ಮಳೆ ತೀವ್ರಗೊಂಡಿದ್ದರಿಂದ ನಾವು ಇಂದು ಬೆಳಿಗ್ಗೆ 8:30 ರವರೆಗೆ ರೆಡ್ ಅಲರ್ಟ್ ನೀಡಿದ್ದೇವೆ ಎಂದರು.

ಮುಂಬೈ ಪ್ರದೇಶಗಳಲ್ಲಿ 200 ಮಿ.ಮೀ.ಗೂ ಹೆಚ್ಚು ಮಳೆ ದಾಖಲು

ಮುಂಬೈ ಪ್ರದೇಶಗಳಲ್ಲಿ 200 ಮಿ.ಮೀ.ಗೂ ಹೆಚ್ಚು ಮಳೆ ದಾಖಲಾಗಿದೆ. ರೆಡ್ ಅಲರ್ಟ್ ನೀಡಿದ ತಕ್ಷಣ, ಮುಂಬೈನ ಪ್ರದೇಶಗಳಲ್ಲಿ 200 ಮಿಮೀ ಗಿಂತ ಹೆಚ್ಚು ಮಳೆ ದಾಖಲಾಗಿದೆ ಎಂದು ಐಎಂಡಿ ಹೇಳಿಕೆ ನೀಡಿದೆ. ಇನ್ನೂ ಗುರುವಾರ ಮುಂಬೈಗೆ ಆರೆಂಜ್ ಅಲರ್ಟ್ ನೀಡಿದ್ದೇವೆ ಎಂದು ಸುನೀಲ್ ಕಾಂಬ್ಳೆ ಹೇಳಿದರು.

ಮುಂದಿನ 5-6 ದಿನಗಳಲ್ಲಿ ಮುಂಗಾರು ಪ್ರಭಾವ ಕಡಿಮೆಯಾಗುವ ಸಾಧ್ಯತೆ

ಮುಂದಿನ 5-6 ದಿನಗಳಲ್ಲಿ ಮುಂಗಾರು ಪ್ರಭಾವ ಕಡಿಮೆಯಾಗುವ ಸಾಧ್ಯತೆ ಇದೆ. ನಾಳೆಯಿಂದ ರಾಜ್ಯದಾದ್ಯಂತ ಗ್ರೀನ್ ಮತ್ತು ಹಳದಿ ಅಲರ್ಟ್ ಘೋಷಿಸಲಾಗುವುದು. ಮುಂದಿನ 5-6 ದಿನಗಳಲ್ಲಿ ಮುಂಗಾರು ಮಳೆಯ ಪ್ರಭಾವ ಕಡಿಮೆಯಾಗಲಿದ್ದು, ಅಕ್ಟೋಬರ್ 5ರ ವೇಳೆಗೆ ಮಳೆ ಕಡಿಮೆಯಾಗಲಿದೆ ಎಂದು ಐಎಂಡಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+