ಮಾಜಿ ಸಿಎಂ ಬಾಯಿಯಿಂದ ಪ್ರಧಾನಿ ಬಗ್ಗೆ ಇಂಥಾ ಕೀಳು ಮಾತಾ?

ಆಗ್ರಾ, ಜ 7: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಯಾವಾಗಲೂ ಕಿಡಿಕಾರುವ ಪ್ರಮುಖ ನಾಯಕರುಗಳಲ್ಲಿ ಮಂಚೂಣಿಯಲ್ಲಿ ಬರುವ ಹೆಸರು ಲಾಲೂ ಪ್ರಸಾದ್ ಮತ್ತು ಮುಲಾಯಂ ಸಿಂಗ್ ಯಾದವ್.

ಮೋದಿಯವರ 'ಸ್ವಚ್ಛ ಭಾರತ' ಅಭಿಯಾನದ ಬಗ್ಗೆ ಮಾತನಾಡುತ್ತಾ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್, ಪ್ರಧಾನಿ ವಿರುದ್ದ ಕೀಳು ಮಟ್ಟದ ಹೇಳಿಕೆಯನ್ನು ನೀಡಿದ್ದಾರೆ. (ವಿಜ್ಞಾನ, ತಂತ್ರಜ್ಞಾನ ಬಿಟ್ಟು ಅಭಿವೃದ್ಧಿ ಅಸಾಧ್ಯ:ಮೋದಿ)

ಮೋದಿಯವರ ಸ್ವಚ್ಛ ಭಾರತ ಅಭಿಯಾನ ಬರೀ ಪ್ರಚಾರಕ್ಕೆ. ಇಂಡಿಯಾ ಗೇಟ್ ಬಳಿ, ಮಾಧ್ಯಮದವರ ಮುಂದೆ ಪೊರಕೆ ಹಿಡಿದು ಪ್ರತ್ಯಕ್ಷರಾದರೆ ದೇಶ ಸ್ವಚ್ಛವಾಗುವುದಿಲ್ಲ. ಅವರಿಗೂ ನಿಜವಾಗಲೂ ಸ್ವಚ್ಛ ಭಾರತದ ಕನಸಿದ್ದರೆ ಉತ್ತರ ಪ್ರದೇಶಕ್ಕೆ ಬಂದು ಇಲ್ಲಿನ ಟಾಯ್ಲೆಟ್ ಗಳನ್ನು ಮೊದಲು ಕ್ಲೀನ್ ಮಾಡಲಿ ಎಂದು ಸವಾಲೆಸೆದಿದ್ದಾರೆ.

ದೇಶದಲ್ಲಿ ಶೌಚಾಲಯ ಕ್ಲೀನ್ ಇದ್ದರೆ ದೇಶ ಸ್ವಚ್ಛ ಆದಂತೆ, ಹಳ್ಳಿಹಳ್ಳಿಯಲ್ಲೂ ಈ ಕೆಲಸ ನಡೆಯಬೇಕು, ಬರೀ ಇಂಡಿಯಾ ಗೇಟ್ ಬಳಿಯಲ್ಲ ಎಂದು ಮುಲಾಯಂ ಲೇವಡಿ ಮಾಡಿದ್ದಾರೆ.

Prime Minister Narendra Modi should clean Uttar Pradesh toilets, Mulayam Singh Yadav

ದೇಶದಲ್ಲಿರುವ ಬಡತನವೇ ಶೌಚಾಲಯದ ಸಮಸ್ಯೆಗೆ ಮೂಲ ಕಾರಣ. ಪ್ರಧಾನಿ ಮೋದಿ ಈ ಬಗ್ಗೆ ಮೊದಲು ಗಮನ ಹರಿಸಲಿ. ಚುನಾವಣೆಯ ಸಮಯದಲ್ಲಿ ಮೋದಿ ಜನರಿಗೆ ನೀಡಿದ ಆಶ್ವಾಸನೆ ಕಾರ್ಯರೂಪಕ್ಕೆ ತರಲು ಮೊದಲು ಕಾರ್ಯೋನ್ಮುಖರಾಗಲಿ ಎಂದು ಮುಲಾಯಂ, ಮೋದಿಗೆ ಸಲಹೆ ನೀಡಿದ್ದಾರೆ.

ಆಗ್ರಾದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಲಾಯಂ, ಮೋದಿ ಸರಕಾರ ಅಧಿಕಾರಕ್ಕೆ ಬಂದು ಏಳು ತಿಂಗಳಾಯಿತು. ಚುನಾವಣೆಯಲ್ಲಿ ನೀಡಿದ್ದ ಯಾವುದಾದರೂ ಒಂದು ಆಶ್ವಾಸನೆಯನ್ನು ಸರಕಾರ ಕಾರ್ಯರೂಪಕ್ಕೆ ತಂದಿದೆಯೇ ಎಂದು ಪ್ರಶ್ನಿಸಿದ್ದಾರೆ.

ರಾಷ್ಟೀಯ ಸ್ವಯಂಸೇವಕ ಸಂಘದ ಬಗ್ಗೆ ಮಾತನಾಡುತ್ತಾ, ದೇಶಕ್ಕೆ ಆತಂಕವಿರುವುದೇ ಹಿಂದೂ ಪರ ಸಂಘಟನೆಗಳಿಂದ. ಕೋಮು ಗಲಭೆ ಆರಂಭವಾಗುವುದೇ ಇಂತಹ ಸಂಘಟನೆಗಳಿಂದ ಎಂದು ಮುಲಾಯಂ ವಿವಾದಕಾರಿ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+