‘ಪ್ರಧಾನಿ ಸಿದ್ಧಾಂತ ಮಣಿಪುರಕ್ಕೆ ಬೆಂಕಿ ಹಚ್ಚಿತು’: ಸ್ಮೃತಿ ಇರಾನಿ ದಾಳಿಯ ಮರುದಿನ ರಾಹುಲ್ ಗಾಂಧಿ
ನವದೆಹಲಿ ಜುಲೈ 27: ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಣಿಪುರಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಬುಧವಾರ ಆರೋಪಿಸಿದ್ದರು. ಹಾಗಾದರೆ ಮಣಿಪುರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಏನು ಮಾಡಿದ್ದಾರೆ ಎಂದು ಕೇಳುವ ಮೂಲಕ ರಾಹುಲ್ ಗಾಂಧಿ ಸಚಿವೆ ಸ್ಮೃತಿ ಇರಾನಿಗೆ ತಿರುಗೇಟು ನೀಡಿದರು. ಮೋದಿ ಅವರ ಸಿದ್ಧಾಂತ ರಾಜ್ಯವನ್ನು ಸುಟ್ಟಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ರಾಹುಲ್ ಗಾಂಧಿ, "ಅವರು ಮಣಿಪುರದ ಬಗ್ಗೆ ಏಕೆ ಏನೂ ಮಾತನಾಡುತ್ತಿಲ್ಲ? ಇದಕ್ಕೆ ಕಾರಣ ನರೇಂದ್ರ ಮೋದಿ ಜಿ ಮಣಿಪುರದೊಂದಿಗೆ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದ್ದಾರೆ. ''ನರೇಂದ್ರ ಮೋದಿ ಜೀ ಮಣಿಪುರದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ, ಅವರ ಸಿದ್ಧಾಂತ ಮಣಿಪುರವನ್ನು ಸುಟ್ಟುಹಾಕಿದೆ" ಎಂದು ರಾಜ್ಯಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಇರಾನಿ ಮಾಡಿರುವ ಆರೋಪಗಳಿಗೆ ರಾಹುಲ್ ಉತ್ತರಿಸಿದರು.

ರಾಜ್ಯಸಭೆಯಲ್ಲಿ ತಮ್ಮ ಭಾಷಣದ ವೇಳೆ, ಬಿಜೆಪಿಯೇತರ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ವಿರೋಧ ಪಕ್ಷಗಳು ಧ್ವನಿ ಎತ್ತುತ್ತಿಲ್ಲ ಎಂದು ಇರಾನಿ ಆರೋಪಿಸಿದರು. ನಂತರ ಅವರು ರಾಹುಲ್ ಗಾಂಧಿ ಮಣಿಪುರಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದರು.
प्रधानमंत्री नरेंद्र मोदी जी मणिपुर के लिए क्या कर रहे हैं?
— Congress (@INCIndia) July 27, 2023
वे मणिपुर के बारे में कुछ बोल क्यों नहीं रहे हैं?
ऐसा इसलिए है क्योंकि नरेंद्र मोदी जी को मणिपुर से कोई लेना देना नहीं है।
वो जानते हैं कि उनकी ही विचारधारा ने मणिपुर को जलाया है।
: @RahulGandhi जी pic.twitter.com/Hj8jF6Orrp
"ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಹೇಗೆ ಅತ್ಯಾಚಾರ ನಡೆಯುತ್ತಿದೆ ಎಂದು ಹೇಳುವ ಧೈರ್ಯ ನಿಮಗೆ ಯಾವಾಗ ಬರುತ್ತದೆ? ರಾಹುಲ್ ಗಾಂಧಿ ಮಣಿಪುರವನ್ನು ಹೇಗೆ ಬೆಂಕಿ ಹಚ್ಚಿದರು ಎಂದು ಹೇಳುವ ಧೈರ್ಯ ನಿಮಗೆ ಯಾವಾಗ ಬರುತ್ತದೆ? ಈ ಕ್ಯಾಬಿನೆಟ್‌ನಲ್ಲಿರುವ ಮಹಿಳಾ ಮಂತ್ರಿಗಳ ಮೇಲೆ ಆಗ್ರಹಗಳನ್ನು ಮಾಡಬೇಡಿ," ಎಂದು ಇರಾನಿ ಅವರು ಆಕ್ರೊಶಗೊಂಡರು.

ಮಣಿಪುರದಲ್ಲಿ ವಿರೋಧ VS ಕೇಂದ್ರ
ಜುಲೈ 20 ರಂದು ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ ಪ್ರತಿಪಕ್ಷಗಳು ಮತ್ತು ಕೇಂದ್ರದ ನಡುವೆ ಮಣಿಪುರ ವಿಚಾರಕ್ಕೆ ವಾಗ್ವಾದ ನಡೆಯುತ್ತಿದೆ. ಸಂಸತ್ತಿನಲ್ಲಿ ಮಣಿಪುರದ ಕುರಿತು ಪ್ರಧಾನಿ ಹೇಳಿಕೆ ನೀಡುವಂತೆ ಪ್ರತಿಪಕ್ಷಗಳು ಒತ್ತಾಯಿಸುತ್ತಿದ್ದರೆ, ಬಿಜೆಪಿ ನೇತೃತ್ವದ ಸರ್ಕಾರ ಈ ವಿಷಯದ ಬಗ್ಗೆ ಚರ್ಚೆಗೆ ಅನುಕೂಲಕರ ವಾತಾವರಣವನ್ನು ಪ್ರತಿಪಕ್ಷಗಳು ಮಾಡುತ್ತಿಲ್ಲ ಎಂದು ಆರೋಪಿಸಿದೆ.
ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ವಿಡಿಯೋ ವೈರಲ್ ಆದ ನಂತರ ಪ್ರತಿಪಕ್ಷಗಳು ಸರ್ಕಾರದ ಮೇಲೆ ತನ್ನ ದಾಳಿಯನ್ನು ಹೆಚ್ಚಿಸಿವೆ. ಈ ಘಟನೆಯ ಬಗ್ಗೆ ಮಾತನಾಡಲು ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸುತ್ತಿವೆ.
ಈ ವರ್ಷದ ಮೇ ತಿಂಗಳಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದಿತು. ಇದರಲ್ಲಿ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು ಮತ್ತು ನೂರಾರು ಜನರು ಗಾಯಗೊಂಡರು. ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನಕ್ಕಾಗಿ ಮೀಟೈ ಹಾಗೂ ಕುಕಿ ಸಮುದಾಯದ ನಡುವೆ ಮೇ 3 ರಿಂದ ಹಿಂಸಾಚಾರ ಭುಗಿಲೆದ್ದಿದೆ.












Click it and Unblock the Notifications