ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಚುನಾವಣೆ: ಮತದಾನ ಮಾಡಿದ ಮೋದಿ, ಸೋನಿಯಾ

ದೇಶಾದ್ಯಂತ ನಡೆಯುತ್ತಿರುವ ರಾಷ್ಟ್ರಪತಿ ಚುನಾವಣೆ. ನವದೆಹಲಿಯ ಸಂಸತ್ತಿನಲ್ಲಿ ಮತ ಚಲಾಯಿಸಿದ ಪ್ರಧಾನಿ ನರೇಂದ್ರ ಮೋದಿ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯವರಿಂದಲೂ ಮತ ಚಲಾವಣೆ.

|
Google Oneindia Kannada News

ದೇಶಾದ್ಯಂತ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ವಿವಿಧ ರಾಜ್ಯಗಳ ವಿಧಾನಸೌಧಗಳಲ್ಲಿ ಆಯಾ ರಾಜ್ಯಗಳ ಸಂಸದರು, ಶಾಸಕರು ತಮ್ಮ ಆಯ್ಕೆಯ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸುತ್ತಿದ್ದಾರೆ.

ಇದೇ ವೇಳೆಯಲ್ಲೇ, ಸಂಸತ್ತಿನ ಅಧಿವೇಶನವೂ ಸೋಮವಾರ ಆರಂಭವಾಗಿದೆ. ಆದರೆ, ಮೊದಲ ದಿನ ಯಾವುದೇ ಕಲಾಪ ನಡೆಯಲಿಲ್ಲ.

ರಾಷ್ಟ್ರಪತಿ ಚುನಾವಣೆ: ಟ್ವಿಟ್ಟಿಗರು ಏನಂತಾರೆ?ರಾಷ್ಟ್ರಪತಿ ಚುನಾವಣೆ: ಟ್ವಿಟ್ಟಿಗರು ಏನಂತಾರೆ?

ಕಲಾಪ ಆರಂಭವಾಗುತ್ತಿದ್ದಂತೆ ಉಭಯ ಸದನಗಳಲ್ಲಿ ಇತ್ತೀಚೆಗೆ ಉಗ್ರರ ದಾಳಿಯಲ್ಲಿ ಅಸುನೀಗಿದ ಅಮರನಾಥ್ ಯಾತ್ರಿಗಳಿಗೆ ಒಂದು ನಿಮಿಷದ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆನಂತರ, ಸದನವನ್ನು ಮಂಗಳವಾರಕ್ಕೆ (ಜುಲೈ 18) ಮುಂದೂಡಲಾಯಿತು.

ಆನಂತರ, ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಹಾಕಲು ಸಂಸದರು ತೆರಳಿದರು.

ಕ್ರಿಮಿನಲ್ ಹಿನ್ನೆಲೆಯುಳ್ಳ 1,581 ಎಂಪಿಗಳಿಂದ ಮತದಾನಕ್ರಿಮಿನಲ್ ಹಿನ್ನೆಲೆಯುಳ್ಳ 1,581 ಎಂಪಿಗಳಿಂದ ಮತದಾನ

ದೇಶಾದ್ಯಂತ ನಡೆಯುತ್ತಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಮಧ್ಯಾಹ್ನದೊಳಗೆ ಮತ ಚಲಾಯಿಸಿದ ಪ್ರಮುಖ ಫೋಟೋಗಳು ಇಲ್ಲಿ ನಿಮಗಾಗಿ.

ಪ್ರಧಾನಿ ಹಕ್ಕು ಚಲಾವಣೆ

ಪ್ರಧಾನಿ ಹಕ್ಕು ಚಲಾವಣೆ

ಸಂಸತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮತ ಚಲಾಯಿಸಿದ್ದು ಹೀಗೆ. ಈ ಚುನಾವಣೆಯಲ್ಲಿ 776 ಸಂಸತ್ ಸದಸ್ಯರು ಮತ ಚಲಾಯಿಸಲಿದ್ದಾರೆ.

ಒಡಿಶಾ ಸಿಎಂ ಮತ

ಒಡಿಶಾ ಸಿಎಂ ಮತ

ಭುವನೇಶ್ವರದಲ್ಲಿ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರು, ಅಲ್ಲಿನ ವಿಧಾನಸಭೆಯಲ್ಲಿ ಮತ ಚಲಾಯಿಸಿದರು.

ಸರ್ಬಾನಂದ ಮತದಾನ

ಸರ್ಬಾನಂದ ಮತದಾನ

ಗುವಾಹಟಿಯಲ್ಲಿ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರು ತಮ್ಮ ಆಯ್ಕೆ ಅಭ್ಯರ್ಥಿಗೆ ಮತ ಚಲಾಯಿಸಿದರು.

ಕಾಂಗ್ರೆಸ್ ಉಪಾಧ್ಯಕ್ಷರ ಮತದಾನ

ಕಾಂಗ್ರೆಸ್ ಉಪಾಧ್ಯಕ್ಷರ ಮತದಾನ

ನವದೆಹಲಿಯ ಸಂಸತ್ ಭವನದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಮತ ಚಲಾಯಿಸಿದರು.

ಕಾಂಗ್ರೆಸ್ ಅಧಿನಾಯಕಿ ಮತದಾನ

ಕಾಂಗ್ರೆಸ್ ಅಧಿನಾಯಕಿ ಮತದಾನ

ಸಂಸತ್ ಅಧಿವೇಶನಕ್ಕಾಗಿ ಆಗಮಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ಮತ ಚಲಾಯಿಸಿದರು.

English summary
Prime Minister Narendra Modi and BJP chief Amit Shah were among the first to cast their votes to elect the 14th President of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X