ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಚುನಾವಣೆ : ಮಮತಾ ಬ್ಯಾನರ್ಜಿ ಸಭೆಯತ್ತ ಎಲ್ಲರ ಚಿತ್ತ

|
Google Oneindia Kannada News

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಟಿಎಂಸಿ ಮುಖ್ಯಸ್ಥೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕರೆದಿರುವ ವಿರೋಧ ಪಕ್ಷಗಳ ಸಭೆಗೆ ಸುಮಾರು 16ಪಕ್ಷಗಳ ನಾಯಕರು, ಮುಖಂಡರು ಭಾಗವಹಿಸಲಿದ್ದಾರೆ. ಇದಕ್ಕೂ ಮುನ್ನ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಮುಖಂಡ ಶರದ್ ಪವಾರ್ ಜತೆಗೆ ಬುಧವಾರ ಮಮತಾ ಸುಮಾರು ಅರ್ಧ ಗಂಟೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ ಅವರ ಅಧಿಕಾರಾವಧಿ ಜು. 24ರಂದು ಕೊನೆಗೊಳ್ಳಲಿದೆ. ಈ ಸಂಬಂಧ ಜು. 18ರಂದು ರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆ ಹಿನ್ನೆಲೆ ದೆಹಲಿಯಲ್ಲಿಬುಧವಾರ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆಯಲಿರುವ ಸಭೆಯತ್ತ ಎಲ್ಲರ ಗಮನ ಹರಿದಿದೆ. ವಿರೋಧ ಪಕ್ಷಗಳ ಕೆಲವು ರಾಷ್ಟ್ರ ಮತ್ತು ರಾಜ್ಯದ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆ, ಮಮತಾ ಸಭೆಯಲ್ಲಿ ಎಚ್‌ಡಿಕೆ ಭಾಗಿರಾಷ್ಟ್ರಪತಿ ಚುನಾವಣೆ, ಮಮತಾ ಸಭೆಯಲ್ಲಿ ಎಚ್‌ಡಿಕೆ ಭಾಗಿ

ಆಡಳಿತ ಮತ್ತು ಬಲಾಡ್ಯ ಪ್ರತಿಪಕ್ಷಗಳಿಂದ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಾರೆ. ಸ್ಥಳಿಯ ಪಕ್ಷಗಳು ಸೇರಿಕೊಂಡು ಯಾವ ಅಭ್ಯರ್ಥಿಯನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರೆ ರಾಜಕೀಯವಾಗಿ ಆಡಳಿತ ಪಕ್ಷವನ್ನು ಮಣಿಸಬಹುದು ಎಂದೆಲ್ಲ ಚರ್ಚೆಯಾಗುತ್ತಿವೆ. ಸ್ಥಳೀಯ ಪಕ್ಷಗಳು ಒಟ್ಟಾಗಿ ಆಡಳಿತ ಪಕ್ಷವನ್ನು ಕಟ್ಟಿಹಾಕಲು ಆ ಮೂಲಕ ರಾಷ್ಟ್ರಪತಿ ಸ್ಥಾನ ಚುನಾವಣೆಗೆ ತಂತ್ರಗಾರಿಕೆ ರೂಪಿಸುವತ್ತ ಮಮತಾ ಬ್ಯಾನರ್ಜಿ ಚಿತ್ತ ನೆಟ್ಟಿದ್ದಾರೆ.

Presidential Election: Mamatha Banarjee Led Oppostion Parties Meeting in Delhi

ವಿರೋಧ ಪಕ್ಷದ ನಾಯಕರೊಬ್ಬರನ್ನು ಕಣ್ಣಕ್ಕಿಳಿಸುವ ಕುರಿತು ಮಂಗಳವಾರವೇ ಎನ್ ಸಿಪಿ ಪಕ್ಷದ ನೇತೃತ್ವ ವಹಿಸಿರುವ ಶರದ್ ಪವಾರ್ ಜತೆಗೆ ಮಮತಾ ಕೆಲ ಹೊತ್ತು ಚರ್ಚಿಸಿ ಮನವಿ ಮಾಡಿದ್ದಾರೆ. ಆದರೆ ಶರದ್ ಪವಾರ್ ಅವರು ಮಮತಾ ಮನವಿ ತಿರಸ್ಕರಿಸಿದ್ದಾರೆ. ಸಭೆಯಲ್ಲಿ ನಿರ್ಣಯ ಬಗ್ಗೆ ಸಂಜೆ ನಂತರ ಸಷ್ಟ ಮಾಹಿತಿ ಸಿಗಲಿದೆ.

ರಾಷ್ಟ್ರಪತಿ ಚುನಾವಣೆ; ಶರದ್‌ ಪವಾರ್‌ ಮಮತಾ ಬ್ಯಾನರ್ಜಿ ಭೇಟಿರಾಷ್ಟ್ರಪತಿ ಚುನಾವಣೆ; ಶರದ್‌ ಪವಾರ್‌ ಮಮತಾ ಬ್ಯಾನರ್ಜಿ ಭೇಟಿ

ಸಭೆಗೆ ರಾಜ್ಯ ನಾಯಕರು:?

ಕರ್ನಾಟಕದ ಜೆಡಿಎಸ್ ನಿಂದ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಿಂದ ದೆಹಲಿಗೆ ತೆರಳಿದ್ದಾರೆ. ಇತ್ತ ಕಾಂಗ್ರೆಸ್ ಸೇರಿದಂತೆ ಸಿಪಿಐನ ಹಲವು ನಾಯಕರು ಹಾಜರಾಗುವುದಿಲ್ಲ ಎಂದು ತಿಳಿಸಿದ್ದಾರೆ. ಡಿಎಂಕೆ, ಶಿವಸೇನೆ ಮತ್ತಿತರ ಪಕ್ಷಗಳ ನಾಯಕರು ಪಾಲ್ಗೊಳ್ಳುವುದು ಖಚಿತವಾಗಿದೆ.

ಉತ್ಸುಕರಾಗಿರುವ ಮಮತಾ

ಕಳೆದ ಬಾರಿ ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಬೃಹತ್ ವಿಜಯ ಸಾಧಿಸಿ ಹೊರ ಹೊಮ್ಮಿದ ಟಿಎಂಸಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ರಾಜಕೀಯದಲ್ಲಿ ಹೆಚ್ಚು ಉತ್ಸುಕರಾಗಿದ್ದಾರೆ. ಇತ್ತೀಚೆಗೆ ಪ್ರವಾದಿ ಮಹಮ್ಮದ್ ಹೇಳಿಕೆ ವಿರುದ್ಧ ನಡೆದ ಕೆಲ ಬೆಳವಣಿ ಹಿನ್ನೆಲೆ ಆಡಳಿತ ಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.

English summary
Leaders of many opposition parties attending the meeting led by Mamatha Banerjee in Delhi. HD Kumaraswamy too is attending this meeting where discussion will be done on presidential polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X