India
  • search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಚುನಾವಣೆ ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ: ರಾಹುಲ್‌

|
Google Oneindia Kannada News

ನವದೆಹಲಿ, ಜೂ. 27: ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯು ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ, ಬದಲಾಗಿ ಇದು ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸೋಮವಾರ ಹೇಳಿದ್ದಾರೆ.

ಯುಪಿಎ ಮೈತ್ರಿಕೂಟದ ಅಭ್ಯರ್ಥಿ ಯಶವಂತ್ ಸಿನ್ಹಾ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಹಲವು ವಿರೋಧ ಪಕ್ಷಗಳ ನಾಯಕರು ಇದೇ ಉದ್ಘಾರವನ್ನು ಸೋಮವಾರ ತೆಗೆದಿದ್ದಾರೆ ಎಂದು ರಾಹುಲ್‌ ಹೇಳಿದರು.

ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆ ರಾಷ್ಟ್ರಪತಿ ಚುನಾವಣೆ: ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಕೆ

ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಒಂದು ಕಡೆ ಆರ್‌ಎಸ್‌ಎಸ್‌ ದ್ವೇಷ ಮತ್ತು ಇನ್ನೊಂದು ಕಡೆ ಎಲ್ಲ ವಿರೋಧ ಪಕ್ಷಗಳ ಅನುಕಂಪ ಎಂಬ ಎರಡು ಸಿದ್ಧಾಂತಗಳ ನಡುವಿನ ನಿಜವಾದ ಹೋರಾಟ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

"ನಾವೆಲ್ಲರೂ ಒಗ್ಗಟ್ಟಿನಿಂದ ಯಶವಂತ್ ಸಿನ್ಹಾ ಬೆಂಬಲಿಸುತ್ತೇವೆ. ನಾವು ವ್ಯಕ್ತಿಯನ್ನು ಬೆಂಬಲಿಸುತ್ತೇವೆ. ಆದರೆ ನಿಜವಾದ ಹೋರಾಟ ಇರುವುದು ಎರಡು ಸಿದ್ಧಾಂತಗಳ ನಡುವೆ ಆಗಿದೆ. ಒಂದು ಆರ್‌ಎಸ್‌ಎಸ್‌ನ ಸಿದ್ಧಾಂತ, ಅದು ಕೋಪ, ದ್ವೇಷ ಮತ್ತು ಇನ್ನೊಂದು ಸಿದ್ಧಾಂತ ಎಲ್ಲಾ ವಿರೋಧ ಪಕ್ಷಗಳ ಸಹಾನುಭೂತಿಯಾಗಿದೆ. ಇಡೀ ವಿಪಕ್ಷ ಸಿನ್ಹಾ ಜೊತೆ ನಿಂತಿದೆ" ಎಂದು ಹೇಳಿದರು.

ರಾಷ್ಟ್ರಪತಿ ಚುಣಾವಣೆ: ಯಶವಂತ್ ಸಿನ್ಹಾ ಬೆಂಬಲಿಸಿದ ಟಿಆರ್‌ಎಸ್‌ರಾಷ್ಟ್ರಪತಿ ಚುಣಾವಣೆ: ಯಶವಂತ್ ಸಿನ್ಹಾ ಬೆಂಬಲಿಸಿದ ಟಿಆರ್‌ಎಸ್‌

ಕೋಮುವಾದ ಮತ್ತು ಜಾತ್ಯತೀತತೆ ವಿರುದ್ಧದ ಹೋರಾಟ

ಕೋಮುವಾದ ಮತ್ತು ಜಾತ್ಯತೀತತೆ ವಿರುದ್ಧದ ಹೋರಾಟ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ಪಕ್ಷದ ಅಭ್ಯರ್ಥಿಯಾಗಿರುವ ಸಿನ್ಹಾ ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದು ಟಿಎಂಸಿ ನಾಯಕ ಸೌಗತಾ ರಾಯ್ ಹೇಳಿದ್ದಾರೆ. ಇದು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಹೋರಾಟವಲ್ಲ. ಇದು ಎರಡು ಸಿದ್ಧಾಂತಗಳ ನಡುವಿನ ಹೋರಾಟ. ಅದುವೇ ಕೋಮುವಾದ ಮತ್ತು ಜಾತ್ಯತೀತತೆ, ನಿರಂಕುಶವಾದ ಮತ್ತು ಪ್ರಜಾಪ್ರಭುತ್ವದ ನಡುವಿನ ಹೋರಾಟ. ಈ ಪರಿಸ್ಥಿತಿಯಲ್ಲಿ ಮಾಜಿ ಐಎಎಸ್ ಅಧಿಕಾರಿ, ಮಾಜಿ ಕೇಂದ್ರ ಹಣಕಾಸು ಮತ್ತು ವಿದೇಶಾಂಗ ಸಚಿವರಾದ ಯಶವಂತ್ ಸಿನ್ಹಾ ಅತ್ಯುತ್ತಮ ಅಭ್ಯರ್ಥಿ ಎಂದು ನಾನು ಭಾವಿಸುತ್ತೇನೆ ಎಂದು ರಾಯ್ ಹೇಳಿದರು.

 ವಿರೋಧ ಪಕ್ಷಗಳ ಸಂಪೂರ್ಣ ಬೆಂಬಲ ಅವರಿಗಿದೆ

ವಿರೋಧ ಪಕ್ಷಗಳ ಸಂಪೂರ್ಣ ಬೆಂಬಲ ಅವರಿಗಿದೆ

ವ್ಯಕ್ತಿಯಿಂದ ವ್ಯಕ್ತಿಗೆ ಆಧಾರದ ಮೇಲೆ ಸಿನ್ಹಾ ಉತ್ತಮ ಅಭ್ಯರ್ಥಿಯಾಗಿದ್ದಾರೆ. ಎಲ್ಲಾ ವಿರೋಧ ಪಕ್ಷಗಳು ಅವರನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿವೆ. ಕಾಂಗ್ರೆಸ್, ಡಿಎಂಕೆ, ಸಮಾಜವಾದಿ ಪಕ್ಷಗಳು ಮತ್ತು ಎಡ ಪಕ್ಷಗಳು ಅವರನ್ನು ಬೆಂಬಲಿಸುತ್ತಿವೆ. ಇದು ಅತ್ಯುತ್ತಮ ಮೌಲ್ಯಗಳ ಕಾಮನಬಿಲ್ಲಿನ ಬಣ್ಣದ ಒಕ್ಕೂಟ ಎಂದು ನಾನು ಭಾವಿಸುತ್ತೇನೆ ಟಿಎಂಸಿ ನಾಯಕ ರಾಯ್‌ ಹೇಳಿದರು.

ನಾವು ದ್ರೌಪದಿ ಅವರನ್ನು ಗೌರವಿಸುತ್ತೇವೆ

ನಾವು ದ್ರೌಪದಿ ಅವರನ್ನು ಗೌರವಿಸುತ್ತೇವೆ

ಇದು ಐಡೆಂಟಿಟಿ ರಾಜಕಾರಣದ ಪ್ರಶ್ನೆಯಲ್ಲ, ನಾವು ದ್ರೌಪದಿ ಮುರ್ಮು ಗೌರವಿಸುತ್ತೇವೆ, ಆದರೆ ಇದು ಸಿದ್ಧಾಂತಗಳ ಸ್ಪರ್ಧೆಯಾಗಿದೆ ಎಂದು ಸಿಪಿಐ ಎಂನ ಸೀತಾರಾಂ ಯೆಚೂರಿ ಹೇಳಿದ್ದಾರೆ. ಜುಲೈ 18ರ ರಾಷ್ಟ್ರಪತಿ ಚುನಾವಣೆಗೆ ಸಿನ್ಹಾ ಅವರು ನಾಮಪತ್ರ ಸಲ್ಲಿಸುವಾಗ ಹಲವಾರು ವಿರೋಧ ಪಕ್ಷದ ನಾಯಕರು ಜೊತೆಗಿದ್ದರು.

ಈಗಾಗಲೇ ಸಂಸತ್ತಿನಲ್ಲಿ ನಾಮಪತ್ರ ಸಲ್ಲಿಕೆ

ಈಗಾಗಲೇ ಸಂಸತ್ತಿನಲ್ಲಿ ನಾಮಪತ್ರ ಸಲ್ಲಿಕೆ

ಎನ್‌ಡಿಎಯ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ಪಿಯೂಷ್ ಗೋಯಲ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಯೋಗಿ ಆದಿತ್ಯನಾಥ್, ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್ ಖಟ್ಟರ್, ಬಿ.ಎಸ್. ಬೊಮ್ಮಾಯಿ, ಭೂಪೇಂದ್ರ ಪಟೇಲ್, ಹಿಮಂತ ಬಿಸ್ವ ಶರ್ಮಾ, ಪುಷ್ಕರ್ ಸಿಂಗ್ ಧಾಮಿ, ಪ್ರಮೋದ್ ಸಿಂಗ್ ಧಾಮಿ ಸಾವಂತ್ ಮತ್ತು ಎನ್. ಬಿರೇನ್ ಸಿಂಗ್ ಮುಂತಾದವರೊಂದಿಗೆ ಆಗಮಿಸಿ ಅವರು ಶುಕ್ರವಾರ ನಾಪತ್ರ ಸಲ್ಲಿಸಿದರು.

English summary
Congress leader Rahul Gandhi said that the presidential election on July 18 is not a contest between two people but a fight between two ideologies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X