ಮತ್ತೆ ವಿವಾದಕ್ಕೆ ಗುರಿಯಾದ ರಾಷ್ಟ್ರಪತಿ ಪ್ರಣಬ್ ಪುತ್ರ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ ಜಂಗೀಪುರದ ಕಾಂಗ್ರೆಸ್ ಸಂಸದ ಅಭಿಜಿತ್ ಮುಖರ್ಜಿ ಅವರು ಲಾಲುರನ್ನು ಭಾನುವಾರ ಭೇಟಿ ಮಾಡಿ 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಇದೊಂದು ಸೌಜನ್ಯದ ಭೇಟಿ ಎಂದು ಆರ್ ಜೆಡಿ ಮುಖಂಡರು ತಿಳಿಸಿದ್ದಾರೆ. ಆದರೆ, ಒಬ್ಬ ಸಂಸದ ಮತ್ತು ಅದಕ್ಕೂ ಹೆಚ್ಚಿಗೆ ರಾಷ್ಟ್ರಪತಿ ಪುತ್ರ ಎಂಬ ಕಾರಣಕ್ಕೆ ಈ ಭೇಟಿಗೆ ಹೆಚ್ಚಿನ ಮಹತ್ವ ಬಂದಿದೆ.
ಇದೊಂದು ವೈಯಕ್ತಿಕ ಭೇಟಿ ಎಂದು ಹೇಳಿರುವ ಮುಖರ್ಜಿ, ಆರ್ ಜೆಡಿ ಮುಖ್ಯಸ್ಥರ ಜತೆ ನಡೆದ ಮಾತುಕತೆ ವಿವರ ನೀಡಲು ನಿರಾಕರಿಸಿದರಾದರೂ, ರಾಜಕೀಯ ಮಟ್ಟದಲ್ಲಿ ಯಾವ ರೀತಿ ಕೆಲಸ ಮಾಡಬಹುದು ಎಂಬುದರ ಕುರಿತು ಮುಖರ್ಜಿ ಲಾಲೂಗೆ ಧೈರ್ಯ ತುಂಬಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಖರ್ಜಿ ಜತೆ ಗೊಡ್ಡಾ ಕ್ಷೇತ್ರದ ಆರ್ ಜೆಡಿ ಶಾಸಕ ಸಂಜಯ್ ಯಾದವ್ ಕೂಡ ಇದ್ದರು. 'ಲಾಲೂ ಒಬ್ಬ ಜನ ನಾಯಕ ಮತ್ತು ಜನಪ್ರಿಯ ಸಂಸದರಾಗಿರುವುದರಿಂದ ಸಹಜವಾಗಿ ತನ್ನ ಸಂಸದೀಯ ಸಹೋದ್ಯೋಗಿಗಳ ಗಮನ ಸೆಳೆದಿದ್ದಾರೆ ಎಂದಿರುವ ಸಂಜಯ್ ಯಾದವ್, ಮುಖರ್ಜಿ ಕೂಡ ಒಬ್ಬ ಸಂಸದರು ಮತ್ತು ಸಂಸತ್ತಿನ ಕೆಳಮನೆಯಲ್ಲಿ ಲಾಲೂ ಜತೆಗಿದ್ದರು. ಹೀಗಾಗಿ ಈ ಬಗ್ಗೆ ಯಾವುದೇ ಊಹಾಪೋಹ ಕಲ್ಪಿಸಿಕೊಳ್ಳಬೇಕಾಗಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications