ಸುಪ್ರೀಂಕೋರ್ಟಿನ ಸಿಜೆಐ ಆಗಿ ಜೆಎಸ್ ಖೇಹರ್ ನೇಮಿಸಿದ ರಾಷ್ಟ್ರಪತಿ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 20: ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸುಪ್ರೀಂಕೋರ್ಟಿನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಜಗದೀಶ್‌ ಸಿಂಗ್ ಖೇಹರ್‌ ಅವರನ್ನು ನೇಮಕ ಮಾಡಿದ್ದಾರೆ. ಖೇಹರ್ ಅವರ ಅಧಿಕಾರ ಅವಧಿ ಜನವರಿ 4 2017ರಿಂದ ಇವರ ಅಧಿಕಾರ ಅವಧಿ ಆರಂಭವಾಗಿ ಅಗಸ್ಟ್ 28, 2017ರಲ್ಲಿ ಅಂತ್ಯವಾಗಲಿದೆ.

ಹಾಲಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್‌ ಅವರು ಖೇಹರ್ ಹೆಸರನ್ನು ಶಿಫಾರಸು ಮಾಡಿದ್ದರು. ಟಿಎಸ್ ಠಾಕೂರ್ ಅವರ ಅವಧಿ ಜನವರಿ ತಿಂಗಳಿಗೆ ಮುಗಿಯಲಿದೆ. ನಂತರ ಖೇಹರ್‌ 44ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.[ಮುಖ್ಯ ನ್ಯಾಯಮೂರ್ತಿಯಾಗಿ ಜೆಎಸ್ ಖೇಹರ್ ಆಯ್ಕೆ]

ನ್ಯಾ. ಜೆಎಸ್ ಖೇಹರ್‌ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.ಸುಪ್ರೀಂಕೋರ್ಟ್‌ನಲ್ಲಿರುವ ನ್ಯಾಯಮೂರ್ತಿಗಳ ಪೈಕಿ ಹಿರಿಯವರಾಗಿರುವ ಖೇಹರ್‌ ಅವರು ಸಿಖ್‌ ಸಮುದಾಯದಿಂದ ಸಿ.ಜೆ ಐ ಹುದ್ದೆಗೇರುತ್ತಿರುವ ಮೊದಲ ಸಿಖ್ ನ್ಯಾಯಮೂರ್ತಿ ಎನಿಸಲಿದ್ದಾರೆ.

President appoints Justice J S Khehar as Chief Justice of India

1979ರಲ್ಲಿ ವಕೀಲ ವೃತ್ತಿ ಆರಂಭಿಸಿದ ಖೇಹರ್ ಅವರು ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ ಸೇರಿದಂತೆ ಹಲವು ಹೈಕೋರ್ಟ್ ಗಳಲ್ಲಿ ಕಾರ್ಯನಿರ್ವಹಿಸಿದ್ದರು. ಉತ್ತರಾಖಂಡ್ ನ ಹೈಕೋರ್ಟ್ ಮುಖ್ಯ ಜಸ್ಟೀಸ್ ಆಗಿದ್ದ ಅವರು ನಂತರ 2010ರಲ್ಲಿ ಕರ್ನಾಟಕದ ಹೈಕೋರ್ಟ್ ಮುಖ್ಯ ಜಸ್ಟೀಸ್ ಆದರು. 2011ರಲ್ಲಿ ಸುಪ್ರೀಂಕೋರ್ಟಿನ ಜಡ್ಜ್ ಆಗಿ ನೇಮಕವಾದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The President of India today appointed Justice J S Khehar as the Chief Justice of India. He will take over the CJI on January 4 and succeed Justice T S Thakur. Incidentally Justice Khehar will be the first from the Sikh community to become the Chief Justice of India.
Please Wait while comments are loading...