ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಮೊರ್ಬಿಡಿಟಿಯನ್ನು ಸಾಬೀತು ಪಡಿಸಲು ಯಾವುದೇ ದಾಖಲೆ ಬೇಡ: ಕೇಂದ್ರ ಸ್ಪಷ್ಟಣೆ

|
Google Oneindia Kannada News

ನವದೆಹಲಿ, ಡಿಸೆಂಬರ್‌ 28: ಕೊರೊನಾ ಲಸಿಕೆಯ ಮುನ್ನೆಚ್ಚರಿಕೆಯ ಡೋಸ್‌ ಅನ್ನು ಪಡೆಯಲು ಬಯಸುವ ವ್ಯಕ್ತಿಗೆ ಕೊಮೊರ್ಬಿಡಿಟಿಯನ್ನು ಸಾಬೀತು ಪಡಿಸಲು ಯಾವುದೇ ದಾಖಲೆ ಬೇಡ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯವು ಹೇಳಿದೆ.

ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯವು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. "ಹಿರಿಯ ನಾಗರಿಕರಿಗೆ ಮೂರನೇ ಡೋಸ್‌ ಲಸಿಕೆಯನ್ನು ಪಡೆಯಲು ಯಾವುದೇ ಕೊಮೊರ್ಬಿಡಿಟಿ ದಾಖಲೆಗಳು ಬೇಕಾಗಿಲ್ಲ. ಯಾರು ಮೂರನೇ ಡೋಸ್‌ ಲಸಿಕೆ ಅಥವಾ ಮುನ್ನೆಚ್ಚರಿಕೆಯ ಡೋಸ್‌ ಅನ್ನು ಪಡೆಯಲು ಬಯಸುತ್ತಾರೋ ಅವರು ತಮ್ಮ ವೈದ್ಯರ ಬಳಿ ಸಲಹೆಯನ್ನು ಪಡೆದು ಬಳಿಕ ಮೂರನೇ ಡೋಸ್‌ ಲಸಿಕೆಯನ್ನು ಪಡೆದುಕೊಳ್ಳಬಹುದು," ಎಂದು ಆರೋಗ್ಯ ಸಚಿವಾಲಯವು ಹೇಳಿಕೆಯ ಮೂಲಕ ತಿಳಿಸಿದೆ.

ಮುನ್ನೆಚ್ಚರಿಕೆ ಡೋಸ್ V/s ಬೂಸ್ಟರ್ ಡೋಸ್: ವ್ಯತ್ಯಾಸ ತಿಳಿಯಿರಿ ಮುನ್ನೆಚ್ಚರಿಕೆ ಡೋಸ್ V/s ಬೂಸ್ಟರ್ ಡೋಸ್: ವ್ಯತ್ಯಾಸ ತಿಳಿಯಿರಿ

"ಕೊಮೊರ್ಬಿಡಿಟಿಯನ್ನು ಸಾಬೀತು ಪಡಿಸಲು ವೈದ್ಯರ ಪ್ರಿಸ್ಕ್ರಿಪ್ಶನ್‌ ಅಥವಾ ಪ್ರಮಾಣ ಪತ್ರವನ್ನು ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಸೂಚನೆಯನ್ನು ನೀಡುವುದಿಲ್ಲ. ತಮ್ಮ ವೈದ್ಯರ ಬಳಿ ಸಲಹೆಯನ್ನು ಪಡೆದು ಹಿರಿಯ ನಾಗರಿಕರುಗಳು ಮೂರನೇ ಡೋಸ್ ಲಸಿಕೆ ಅಥವಾ ಮುನ್ನೆಚ್ಚರಿಕೆಯ ಡೋಸ್‌ ಅನ್ನು ಪಡೆಯಬಹುದು," ಎಂದು ಅಧಿಕೃತ ಹೇಳಿಕೆಯು ಉಲ್ಲೇಖ ಮಾಡಿದೆ.

Precaution dose for senior citizens: No certificate required to prove comorbidity Says Health Ministry

2022 ರ ಜನವರಿ 10 ರಿಂದ ದೇಶದಾದ್ಯಂತ ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು ಹಾಗೂ 60 ವರ್ಷಕ್ಕೂ ಅಧಿಕ ವಯಸ್ಸಿನ ಹಿರಿಯ ನಾಗರಿಕರಿಗೆ ಬೂಸ್ಟರ್‌ ಡೋಸ್ ಅಥವಾ ಮುನ್ನೆಚ್ಚರಿಕೆಯ ಡೋಸ್‌ ಅನ್ನು ನೀಡಲಾಗುತ್ತದೆ ಎಂದು ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಣೆಯನ್ನು ಮಾಡಿದ್ದಾರೆ. ಹಾಗೆಯೇ ಜನವರಿ ಮೂರರಿಂದ 15 ರಿಂದ 18 ವಯಸ್ಸಿನವರಿಗೆ ಕೊರೊನಾ ಲಸಿಕೆಯನ್ನು ನೀಡಲು ಆರಂಭ ಮಾಡಲಾಗುತ್ತದೆ. ಲಸಿಕೆಗಾಗಿ ಕೋವಿಡ್‌ ಆಪ್‌ ಮೂಲಕ ಜನವರಿ ಒಂದರಿಂದ ಬುಕ್ಕಿಂಗ್‌ ಮಾಡಬಹುದಾಗಿದೆ.

ಏನಿದು ಕೊಮೊರ್ಬಿಡಿಟಿ ಪ್ರಮಾಣ ಪತ್ರ?

60 ವರ್ಷ ಮೇಲ್ಪಟ್ಟ ಹಿರಿಯರು, ಬಿಪಿ, ಡಯಾಬಿಟಿಸ್‌, ಕಿಡ್ನಿ ಸಮಸ್ಯೆ, ಹೃದಯಸಂಬಂಧಿ ಸಮಸ್ಯೆಗಳು ಹಾಗೂ ಇತರೆ ಯಾವುದೇ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರೆ, ಅವರು ಈ ಕೊಮೊರ್ಬಿಡಿಟಿ ಪಟ್ಟಿಯಡಿಯಲ್ಲಿ ಬರುತ್ತಾರೆ. ನೋಂದಾಯಿತ ವೈದ್ಯರಿಂದ ಸಹಿ ಮಾಡಿಸಿಕೊಂಡಿರುವ ಕೊಮೊರ್ಬಿಡಿಟಿಯ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ. ಈ ಹಿಂದೆ ಈ ಬೂಸ್ಟರ್ ಡೋಸ್ ಪಡೆಯಲು ಹಿರಿಯರು, ವೃದ್ಧರು ತಮ್ಮ ಕೊಮೊರ್ಬಿಡಿಟಿ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಹೇಳಿತ್ತು. ಈ ಬಗ್ಗೆ ಮಾಹಿತಿ ನೀಡಿದ್ದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಎಸ್.ಶರ್ಮಾ, "ಕೊರೊನಾ ವೈರಸ್‌ ಸೋಂಕಿನ ವಿರುದ್ಧವಾಗಿ ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆಯ ಡೋಸ್‌ ಅನ್ನು ಪಡೆಯಲು ಬಯಸುವ 60 ವರ್ಷಕ್ಕಿಂತ ಮೇಲ್ಪಟ್ಟವರು ತಮಗೆ ಕೊಮೊರ್ಬಿಡಿಟಿ ಅಂದರೆ ಬಿಪಿ, ಡಯಾಬಿಟಿಸ್‌, ಕಿಡ್ನಿ ಸಮಸ್ಯೆ, ಹೃದಯಸಂಬಂಧಿ ಸಮಸ್ಯೆಗಳು ಇದೆ ಎಂದು ಸಾಬೀತುಪಡಿಸಲು ವೈದ್ಯಕೀಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತೋರಿಸಬೇಕು," ಎಂದು ಹೇಳಿದ್ದರು.

2 ನೇ ಕೋವಿಡ್‌ ಲಸಿಕೆ, ಮುನ್ನೆಚ್ಚರಿಕೆ ಡೋಸ್‌ ನಡುವಿನ ಅಂತರ 9-12 ತಿಂಗಳಿರುವ ಸಾಧ್ಯತೆ2 ನೇ ಕೋವಿಡ್‌ ಲಸಿಕೆ, ಮುನ್ನೆಚ್ಚರಿಕೆ ಡೋಸ್‌ ನಡುವಿನ ಅಂತರ 9-12 ತಿಂಗಳಿರುವ ಸಾಧ್ಯತೆ

ಈ ನಡುವೆ ಕೋವಿಡ್‌ ಲಸಿಕೆಯ ಎರಡನೇ ಡೋಸ್ ಮತ್ತು ಮುನ್ನೆಚ್ಚರಿಕೆ ಡೋಸ್ ಎಂದು ಕರೆಯಲ್ಪಡುವ ಮೂರನೇ ಡೋಸ್ ನಡುವಿನ ಅಂತರವು ಒಂಬತ್ತರಿಂದ 12 ತಿಂಗಳವರೆಗೆ ಇರುತ್ತದೆ ಎಂದು ಭಾನುವಾರದಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಪ್ರಸ್ತುತ ಭಾರತದ ಇನಾಕ್ಯುಲೇಷನ್ ಪ್ರೋಗ್ರಾಂ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ನಲ್ಲಿ ಬಳಸಲಾಗುತ್ತಿರುವ ಲಸಿಕೆಗಳ ಅಂತರಗಳ ಕುರಿತು ಚರ್ಚೆ ನಡೆಸುತ್ತಿದೆ. ಈ ಬಗ್ಗೆ ಶೀಘ್ರವೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದು ವರದಿಯು ಉಲ್ಲೇಖ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

Recommended Video

IndiGo ವಿಮಾನದಲ್ಲಿ ಕೇಳಿಬಂತು ತುಳುಭಾಷೆಯಲ್ಲಿ ಅನೌನ್ಸ್ಮೆಂಟ್ | Oneindia Kannada

English summary
Precaution dose for senior citizens: No certificate required to prove comorbidity Says Health Ministry.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X