ಹೊಸ ಪಕ್ಷ ಸ್ಥಾಪಿಸಿದ ಪ್ರವೀಣ್ ತೊಗಾಡಿಯಾ, ಲೋಕಸಭೆಗೆ ಸ್ಪರ್ಧೆ
ನವದೆಹಲಿ, ಫೆಬ್ರವರಿ 10: ವಿಶ್ವ ಹಿಂದೂ ಪರಿಷತ್ತು(ವಿಎಚ್ ಪಿ)ಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿದ್ದ ಪ್ರವೀಣ್ ತೊಗಾಡಿಯಾ ಅವರು ಹೊಸ ರಾಜಕೀಯ ಪಕ್ಷ ಸ್ಥಾಪಿಸಿರುವುದಾಗಿ ಘೋಷಿಸಿದ್ದಾರೆ.
ಪ್ರವೀಣ್ ತೊಗಾಡಿಯಾ ಅವರು ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಿದ್ದು, ಹಿಂದೂಸ್ತಾನ್ ನಿರ್ಮಾನ್ ದಳ್ ಎಂದು ಹೆಸರಿಡಲಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೊಸ ಪಕ್ಷವು ಸ್ಪರ್ಧಿಸಲಿದ್ದಾರೆ ಎಂದಿದ್ದಾರೆ. ಲೋಕಸಭಾ ಚುನಾವಣೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿ ನಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಅವರು ಹೇಳಿದರು.
ಬಡತನ, ನಿರುದ್ಯೋಗ, ರೈತರ ಆತ್ಮಹತ್ಯೆಗಳು ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ಎಲ್ಲಾ ರಾಜಕೀಯ ಪಕ್ಷಗಳ ವೈಫಲ್ಯವನ್ನು ಟೀಕಿಸಿದ ತೊಗಡಿಯಾ, ತಮ್ಮ ಪಕ್ಷವು ಈ ಸಮಸ್ಯೆಗಳನ್ನು ನಿವಾರಿಸಲಿದೆ ಎಂದು ಹೇಳಿದರು.

ವಿಎಚ್ ಪಿ ಮುಖಂಡರಾಗಿದ್ದ ಪ್ರವೀಣ್ ತೊಗಾಡಿಯಾ ಅವರು ಮೊದಲಿಗೆ ನರೇಂದ್ರ ಮೋದಿಯ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು. ಕೇಂದ್ರ ಸರ್ಕಾರ ಹಾಗೂ ರಾಜಸ್ಥಾನ ಸರ್ಕಾರದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಎಲ್ಲರ ವಿರೋಧ ಕಟ್ಟಿಕೊಂಡರು. ವಿಶ್ವ ಹಿಂದೂ ಪರಿಷತ್ತು ಹಾಗೂ ಆರೆಸ್ಸೆಸ್ ಸೇರಿದಂತೆ ಹಿಂದೂ ಪರ ಸಂಘಟನೆಗಳಿಂದ ಪ್ರವೀಣ್ ತೊಗಡಿಯಾ ಅವರನ್ನು ದೂರ ಇರಿಸಲಾಯಿತು. ಹಳೆ ಕೇಸೊಂದಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಪೊಲೀಸರು ತೊಗಡಿಯಾ ಅವರ ಮೇಲೆ ಕಣ್ಣಿಟ್ಟಿದ್ದು, ಭದ್ರತಾ ಸಿಬ್ಬಂದಿಗೂ ಗೊತ್ತಾಗದಂತೆ ನಾಪತ್ತೆಯಾಗಿದ್ದ ಪ್ರಸಂಗವೂ ನಡೆದಿತ್ತು. ನನಗೆ ಜೀವಭಯವಿದೆ ಎಂದು ಪ್ರವೀಣ್ ತೊಗಡಿಯಾ ಅವರು ರಕ್ಷಣೆ ಕೋರಿದ್ದರು.












Click it and Unblock the Notifications