ಪ್ರಣವ್ ನಿರ್ಗಮನ-ಕೋವಿಂದ್ ಆಗಮನದ ಒಂದು ಸಂಜೆಯ ಮಳೆ

Posted By:
Subscribe to Oneindia Kannada

ಐದು ವರ್ಷಗಳ ಅವಧಿ ಮುಗಿಸಿ ರಾಷ್ಟ್ರಪತಿ ಭವನದಿಂದ ಪ್ರಣವ್ ಮುಖರ್ಜಿ ಹೊರಟಿದ್ದಾರೆ. ಇನ್ನು ರಾಮ್ ನಾಥ್ ಕೋವಿಂದ್ ಜವಾಬ್ದಾರಿಯುತ ಸ್ಥಾನದ ನಿರ್ವಹಣೆ ವಹಿಸಿಕೊಳ್ಳುತ್ತಾರೆ. ಮಂಗಳವಾರ ನಡೆದ ರಾಷ್ಟ್ರಪತಿ ಪದ ಸ್ವೀಕಾರ ಸಮಾರಂಭ ಭಾವುಕ ಎನಿಸುವಂಥ ಕ್ಷಣಗಳನ್ನು ಕಟ್ಟಿಕೊಟ್ಟಿತು.

ತುಂಬ ಹಿಂದಿನಿಂದಲೂ ನಡೆದುಬಂದ ಪದ್ಧತಿಗಳನ್ನು ಅನುಸರಿಸುವುದನ್ನು ನೋಡುವುದು ಸಹ ಅದ್ಭುತವಾದ ಅನುಭವ. ನಿರ್ಗಮಿತ ರಾಷ್ಟ್ರಪತಿ ಹಾಗೂ ಹೊಸದಾಗಿ ಆಯ್ಕೆಯಾದ ರಾಷ್ಟ್ರಪತಿಗಳ ಮಧ್ಯೆ 'ಅಧಿಕಾರ ಹಸ್ತಾಂತರ' ಎಂಬಂತೆ ನಡೆಯುವ ವಿವಿಧ ಕಾರ್ಯಕ್ರಮಗಳು ಭಾವನಾತ್ಮಕ ಎನಿಸುವಂತೆ ಇರುತ್ತವೆ.

'ವಸುಧೈವ ಕುಟುಂಬಕಂ' ತತ್ವದಡಿ ಮುನ್ನಡೆಯೋಣ: ಕೋವಿಂದ್

ಮಂಗಳವಾರದ ದಿನ ಕೂಡ ಆಗಿದ್ದು ಅದೇ. ತಮ್ಮ ಐದು ವರ್ಷದ ಅನುಭವವನ್ನು ಹೇಳಿಕೊಂಡಿದ್ದರು ಪ್ರಣವ್ ಮುಖರ್ಜಿ. ಭವಿಷ್ಯದ ತಮ್ಮ ಜವಾಬ್ದಾರಿಗಳ ಬಗ್ಗೆ, ಸಿಕ್ಕ ಅವಕಾಶಗಳ ಬಗ್ಗೆ ತುಂಬ ನಮ್ರವಾಗಿ ಮಾತನಾಡಿದರು ರಾಮ್ ನಾಥ್ ಕೋವಿಂದ್. ಪದಸ್ವೀಕಾರ ಸಮಾರಂಭದ ಕೆಲವು ಚೆಂದ ಎನಿಸುವ ಕ್ಷಣಗಳನ್ನು ಸೆರೆ ಹಿಡಿದ ಫೋಟೋಗಳು ಇಲ್ಲಿವೆ.

ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ ವಚನ

ಪಿಟಿಐ ಸುದ್ದಿ ಸಂಸ್ಥೆಯ ಈ ಫೋಟೋಗಳು ಹಲವು ಭಾವಗಳನ್ನು ಕಟ್ಟಿಕೊಟ್ಟಿದೆ. ನೀವೂ ಒಮ್ಮೆ ನೋಡಿಬಿಡಿ.

ಗೌರವ ಸ್ವೀಕಾರ

ಗೌರವ ಸ್ವೀಕಾರ

ರಾಷ್ಟ್ರಪತಿಯಾಗಿ ಹೊಸದಾಗಿ ಅಧಿಕಾರ ಸ್ವೀಕಾರ ಮಾಡಿದ ರಾಮ್ ನಾಥ್ ಕೋವಿಂದ್ ರಾಷ್ಟ್ರಪತಿ ಭವನದಲ್ಲಿ ಗೌರವ ಸ್ವೀಕಾರ ಮಾಡಿದ ಸಂದರ್ಭದಲ್ಲಿ ಕೈ ಬೀಸಿದರು.

ನೆರೆದಿದ್ದವರಿಗೆ ನಮಸ್ಕಾರ

ನೆರೆದಿದ್ದವರಿಗೆ ನಮಸ್ಕಾರ

ನವದೆಹಲಿಯ ಸಂಸತ್ ನಲ್ಲಿರುವ ಸೆಂಟ್ರಲ್ ಹಾಲ್ ನಲ್ಲಿ ಪ್ರಮಾಣವಚನ ಸ್ವೀಕರಿಸಿದ ನಂತರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೆರೆದಿದ್ದವರಿಗೆ ನಮಸ್ಕರಿಸಿದರು.

ರಾಷ್ಟ್ರಪತಿ ಭವನದಿಂದ ಸಂಸತ್ ಭವನಕ್ಕೆ

ರಾಷ್ಟ್ರಪತಿ ಭವನದಿಂದ ಸಂಸತ್ ಭವನಕ್ಕೆ

ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಹೊಸದಾಗಿ ಆಯ್ಕೆಯಾದ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು ರಕ್ಷಣಾ ಸಿಬ್ಬಂದಿ ರಾಷ್ಟ್ರಪತಿ ಭವನದಿಂದ ಸಂಸತ್ ಭವನಕ್ಕೆ ಕರೆತಂದರು.

ಮನ್ ಮೋಹನ್ ಸಿಂಗ್ ಗೆ ಅಭಿನಂದನೆ

ಮನ್ ಮೋಹನ್ ಸಿಂಗ್ ಗೆ ಅಭಿನಂದನೆ

ರಾಮ್ ನಾಥ್ ಕೋವಿಂದ್ ರಾಷ್ಟ್ರಪತಿ ಪದ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಮನ್ ಮೋಹನ್ ಸಿಂಗ್ ಅವರನ್ನು ಅಭಿನಂದಿಸಿದರು.

ಕುರ್ಚಿ ಬದಲಾವಣೆ

ಕುರ್ಚಿ ಬದಲಾವಣೆ

ರಾಮ್ ನಾಥ್ ಕೋವಿಂದ್ ಹಾಗೂ ಪ್ರಣವ್ ಮುಖರ್ಜಿ ಕುರ್ಚಿ ವಿನಿಮಯ ಮಾಡಿಕೊಂಡ ಕ್ಷಣದ ಚಿತ್ರವಿದು. ಅಧಿಕೃತವಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಇಂಥದ್ದೊಂದು ಸಂಪ್ರದಾಯವಿದೆ.

Ram Nath Kovind to be sworn in as 14th President of India on July 25 |
ಸಂಸತ್ ಭವನದಿಂದ ರಾಷ್ಟ್ರಪತಿ ಭವನಕ್ಕೆ

ಸಂಸತ್ ಭವನದಿಂದ ರಾಷ್ಟ್ರಪತಿ ಭವನಕ್ಕೆ

ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರಪತಿ ಪ್ರಮಾಣವಚನ ಸ್ವೀಕಾರ ಮಾಡಿದ ನಂತರ ಸಂಸತ್ ಭವನದಿಂದ ರಾಷ್ಟ್ರಪತಿ ಭವನಕ್ಕೆ ರಕ್ಷಣಾ ಸಿಬ್ಬಂದಿ ವ್ಯವಸ್ಥೆ ಜತೆಗೆ ಕೋವಿಂದ್ ಹಾಗೂ ಪ್ರಣವ್ ಮುಖರ್ಜಿ ಬಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pranav exit-Ram nath entry in to Rashtrapathi Bhavan -This event represent through PTI photos.
Please Wait while comments are loading...