ಆರೆಸ್ಸೆಸ್, ಪ್ರಣಬ್ ಮುಖರ್ಜಿ ಮತ್ತು ರಾಷ್ಟ್ರಭಕ್ತಿ ಸ್ಫುರಿಸುವ ಮಾತು

ನಾಗ್ಪುರ, ಜೂನ್ 8: "ತತ್ವಗಳು ಮತ್ತು ಗುರುತು ಅಥವಾ ಧರ್ಮ, ಪ್ರದೇಶ, ದ್ವೇಷ ಮತ್ತು ಅಸಹಿಷ್ಣುತೆಗಳ ವಿಷಯದಲ್ಲಿ ನಮ್ಮ ರಾಷ್ಟ್ರೀಯತೆಯನ್ನು ವಿವರಿಸುವ ಯಾವುದೇ ಪ್ರಯತ್ನ ನಮ್ಮ ಗುರುತನ್ನು ದುರ್ಬಲಗೊಳಿಸುತ್ತದೆ" ಎಂಬ ಪ್ರಣಬ್ ಮಾತಿನ ಅರ್ಥವೇನು?

ಆರೆಸ್ಸೆಸ್ ನಾಯಕರಿಗೆ ಈ ಮೂಲಕ ಪರೋಕ್ಷ ಛಾಟಿ ನೀಡಿದರಾ ಮುಖರ್ಜಿ? ಅಥವಾ ಅದೆಲ್ಲವನ್ನೂ ಮೀರಿ ಶುದ್ಧ ದೇಶಭಕ್ತಿಯನ್ನು ಸ್ಫುರಿಸುವುದಷ್ಟೇ ಅವರ ಉದ್ದೇಶವಾಗಿತ್ತಾ? ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ನಡೆದ ಮೂರನೇ ವರ್ಷದ ಶಿಕ್ಷಾ ವರ್ಗ್ ನಲ್ಲಿ ಭಾಗವಹಿಸಿದ್ದ ಮಾಜಿ ರಾಷ್ಟ್ರಪತಿ, ಕಾಂಗ್ರೆಸ್ ನಾಯಕ ಪ್ರಣಬ್ ಮುಖರ್ಜಿ ಅವರ ಭಾಷಣದ ತುಂಬ ದೇಶಭಕ್ತಿ ಮತ್ತು ಜಾತ್ಯಾತೀತತೆಯ ಸಂದೇಶವೇ ಅಡಕವಾಗಿದ್ದು ವಿಶೇಷ.

ಪ್ರಣಬ್ ದಾ ಅವರು ಆರೆಸ್ಸೆಸ್ ನ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರಾ ಎಂದಾಗಿನಿಂದಲೂ ಸಾಕಷ್ಟು ಪರ ವಿರೋಧ ಚರ್ಚೆ ನಡೆಯುತ್ತಲೇ ಇದೆ. ಇದೀಗ ಅವರ ಭಾಷಣದ ನಂತರವೂ ಟ್ವಿಟ್ಟರ್ ನಲ್ಲಿ ಪ್ರಣಬ್ ಮುಖರ್ಜಿ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.

ಕಾಂಗ್ರೆಸ್ಸಿಗರಿಗೆ ಆರೆಸ್ಸೆಸ್ ಎಂದಿಗೂ ಅಸ್ಪೃಶ್ಯವೇ!

ಭಾರತದಲ್ಲಿ ಕಾಂಗ್ರೆಸ್ ಪಕ್ಷ ಇಂದು ಕಮ್ಯುನಿಸ್ಟ್, ಮಾವೋಇಸ್ಟ್, ಇಸ್ಲಾಮಿಸ್ಟ್ ಗಳೊಂದಿಗೆ ಹೊಂದಿಕೊಳ್ಳಲು ಯಾವುದೇ ತಕರಾರು ತೆಗೆಯುವುದಿಲ್ಲ. ಆದರೆ ಅದರ ಪಾಲಿಗೆ ಆರೆಸ್ಸೆಸ್ ಎಂದಿಗೂ ಅಸ್ಪೃಶ್ಯವೇ. ಈ ಪೂರ್ವಗ್ರಹವನ್ನು ಪ್ರಣಬ್ ಮುಖ್ರ್ಜಿ ಅವರು ತೊಡೆದು ಹಾಕಿದ್ದನ್ನು ಕಂಡು ಸಂತಸವಾಯಿತು ಎಂದಿದ್ದಾರೆ ಡಾ.ಡೇವಿಡ್ ಫ್ರಾಲಿ.

ಉದಾರ, ಜಾತ್ಯಾತೀತ ಸಮುದಾಯದ ಸಮಸ್ಯೆ ಏನು?

ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಣಬ್ ಮುಖರ್ಜಿ ಇಬ್ಬರೂ ಮಾತನಾಡಿದ್ದು ಒಂದೇ ವಿಷಯವನ್ನು. ಇಬ್ಬರೂ ದೇಶವನ್ನು ಅರ್ಥಮಾಡಿಕೊಂಡಿದ್ದು ಒಂದೇ ರೀತಿಯಾಗಿ. ದೇಶ, ರಾಷ್ಟ್ರೀಯತೆ, ದೇಶಭಕ್ತಿ ಎಲ್ಲಕ್ಕೂ ಇಬ್ಬರ ವ್ಯಾಖ್ಯಾನವೂ ಒಂದೇ. ಇಬ್ಬರೂ ವಿವಿಧತೆಯ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ರಾಷ್ಟ್ರೀಯತೆಗೆ ಯಾವುದೇ ಧರ್ಮದ ಕಟ್ಟುಪಾಡು ಇಲ್ಲ, ಅದು ಎಲ್ಲವನ್ನೂ ಮೀರಿದ್ದು ಎಂದು ಇಬ್ಬರೂ ಅಭಿಪ್ರಾಯ ಪಟ್ಟಿದ್ದಾರೆ. ಇಬ್ಬರ ಅಭಿಪ್ರಾಯವೂ ಒಂದೇ ಎಂದ ಮೇಲೆ ಈ ಉದಾರವಾದಿಗಳು, ಜಾತ್ಯಾತೀತವಾದಿಗಳ ಸಮಸ್ಯೆ ಏನು? ಎಂದು ಪ್ರಶ್ನಿಸಿದ್ದಾರೆ ಎಸ್ ಗುರುಮೂರ್ತಿ ಎಂಬುವವರು.

ವಿಶ್ವೇಶ್ವರ ಭಟ್

ಭಾರತದ ರಾಷ್ಟ್ರಪತಿಯಾಗಿ ಅವರು ಹಲವು ಬಾರಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಆಗ ಯಾರೂ ಅವರ ಮಾತನ್ನು ಕೇಳಿಲ್ಲ, ತಲೆಕೆಡಿಸಿಕೊಂಡಿಲ್ಲ. ಆದರೆ ಇಂದು ಅವರು ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ ಎಂದರೆ ಇಡೀ ದೇಶವೂ ಅದನ್ನು ಅತ್ಯಂತ ಆಸಕ್ತಿಯಿಂದ, ತದೇಕಚಿತ್ತದಿಂದ ಕೇಳುತ್ತದೆ. ಎಂಥ ವೈರುಧ್ಯ ಎಂದಿದ್ದಾರೆ ಪತ್ರಕರ್ತ ವಿಶ್ವೇಶ್ವರ ಭಟ್.

ಕಾಂಗ್ರೆಸ್ಸಿಗರಲ್ಲಿ ಭಯವೇಕೆ?

ಮಾಜಿ ಉಪರಾಷ್ಟ್ರಪತಿ ಹಮಿದ್ ಅನ್ಸಾರಿ ಭಯೋತ್ಪಾದಕ ಸಂಪರ್ಕ ಹೊಂದಿರುವ ಪಿಎಫ್ ಐ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದಾಗ ಯಾವ ಕಾಂಗ್ರೆಸ್ಸಿಗರೂ ಅವರನ್ನು ತಡೆಯುವ ಪ್ರಯತ್ನ ಮಾಡಲಿಲ್ಲ, ವಿರೋಧಿಸಲಿಲ್ಲ. ಆದರೆ ಯಾವುದೇ ಮತಾಂತರದ ಉದ್ದೇಶವಿಲ್ಲದೆ, ರಕ್ಷಣಾ ಕಾರ್ಯ ಮಾಡುವ, ಸಮಾಜ ಸೇವೆ ಮಾಡುವ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಪ್ರಣಬ್ ಮುಖರ್ಜಿ ಹೋದರೆ ಕಾಂಗ್ರೆಸ್ಸಿಗರಲ್ಲಿ ಭಯವೇಕೆ ಎಂದು ಪ್ರಶ್ನಿಸಿದ್ದಾರೆ ಅಭಿಜಿತ್ ಮಜುಂದಾರ್.

ಆರ್ ಎಸ್ ಎಸ್ ಗೆ ಟಾಂಗ್!

ಧೈರ್ಯ ಅಂದ್ರೆ ಇದು! ಪ್ರಣಬ್ ಮುಖರ್ಜಿ ಅವರು ಆರ್ ಎಸ್ ಎಸ್ ಸಿದ್ಧಾಂತದಲ್ಲಿರುವ ಸಮಸ್ಯೆ ಏನು ಎಂಬುದನ್ನು ತೋರಸಿಕೊಟ್ಟಿದ್ದಾರೆ. ಧರ್ಮ ವಿಭಜಿಸುವ ಮೂಲಕ ಈ ದೇಶವನ್ನು ಜಾತ್ಯಾತೀತಗೊಳಿಸುವುದಕ್ಕೆ ಸಾಧ್ಯವಿಲ್ಲ ಎಂಬ ಪ್ರಣಬ್ ಮಾತನ್ನು ಈ ದೇಶದ ಜನರು ಮತ್ತೊಮ್ಮೆ ವಿವೇಚಿಸಬೇಕಿದೆ ಎಂದಿದ್ದಾರೆ ಮುರುಗೇಸನ್.

ವಿರೋಧಿಸಬೇಕೆಂದು ವಿರೋಧಿಸಬೇಡಿ!

ಆರ್ ಎಸ್ ಎಸ್ ಅನ್ನು ವಿರೋಧಿಸಬೇಕು ಎಂಬ ಕಾರಣಕ್ಕೆ ವಿರೋಧಿಸಬೇಡಿ. ರಚನಾತ್ಮಕ ಮನಸ್ಥಿತಿಯಿಂದ, ಚರ್ಚಾ ಮನೋಭಾವದಿಂದ ಯೋಚಿಸಿ. ಆರೆಸ್ಸೆಸ್ ಎಂದಿಗೂ ಉತ್ತಮ, ಕ್ರಿಯಾಶೀಲ ಪರಿಕ್ಲಪನೆಗಳನ್ನು ಸ್ವಾಗತಿಸಿದೆ. ಆದ್ದರಿಂದಲೇ 1925 ರಲ್ಲಿ ಸಂಘ ಸ್ಥಾಪನೆಯಾದಾಗ ಎಷ್ಟು ಪ್ರಸ್ತುತವಾಗಿತ್ತೋ, ಅಷ್ಟೇ ಪ್ರಸ್ತುತತೆ ಅದಕ್ಕೆ 2018 ರಲ್ಲೂ ಇದೆ ಎಂದಿದ್ದಾರೆ ಪಾರ್ಥಸಾರಥಿ ಶರ್ಮಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+