Chandrayaan 3: ಮತ್ತೆ ಟ್ವೀಟ್ ಮಾಡಿದ ಪ್ರಕಾಶ್ ರಾಜ್, ಈ ಬಾರಿ ಏನಿದೆ?

ಚಂದ್ರಯಾನ 3 ಬಗ್ಗೆ ಟ್ವೀಟ್ ಮಾಡುವ ವಿವಾದ ಮೈಮೇಲೆ ಎಳೆದುಕೊಂಡಿದ್ದ ನಟ ಪ್ರಕಾಶ್ ರಾಜ್ ಈಗ ಮತ್ತೊಮ್ಮೆ ಟ್ವೀಟ್ ಮಾಡಿದ್ದು ಸುದ್ದಿಯಾಗಿದ್ದಾರೆ. ಚಂದ್ರಯಾನ 3 ನೌಕೆ ಚಂದಿರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದ ನಂತರ ಪ್ರಕಾಶ್ ರಾಜ್ ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ.

ಟ್ವೀಟ್ ಮಾಡುವ ಮೂಲಕ ಇಸ್ರೋಗೆ ಧನ್ಯವಾದ ಹೇಳಿದ್ದಾರೆ. "ಭಾರತದ ಮನುಕುಲದ ಹೆಮ್ಮೆಯ ಕ್ಷಣಗಳಿವು. ಧನ್ಯವಾದಗಳು ಇಸ್ರೋ, ಚಂದ್ರಯಾನ 3, ವಿಕ್ರಮ್ ಲ್ಯಾಂಡರ್ ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು, ಸಂಭ್ರಮಿಸಲು, ಇದು ದಾರಿಯಾಗಲಿ" ಎಂದು ಟ್ವೀಟ್ ಮಾಡಿದ್ದಾರೆ.

ವೈರಲ್ ಆದ ಪ್ರಕಾಶ್ ರಾಜ್ ಟ್ವೀಟ್

ಚಂದ್ರಯಾನ 3 ಬಗ್ಗೆ ಪ್ರಕಾಶ್ ರಾಜ್ ಮಾಡಿರುವ ಟ್ವೀಟ್ ವೈರಲ್ ಆಗಿದ್ದು, ಕೇವಲ ಒಂದು ಗಂಟೆಯ ಅವಧಿಯಲ್ಲಿ 21 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದ್ದು, 2700 ಬಾರಿ ರಿಟ್ವೀಟ್ ಆಗಿದೆ. 8 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆ ಪಡೆದುಕೊಂಡಿದೆ.

 Prakash Raj Tweets on Chandrayaan 3s Moon Landing

ಈ ಟ್ವೀಟ್‌ಗೂ ಹಲವರು ಪ್ರತಿಕ್ರಿಯೆ ನೀಡಿದ್ದು, ಪ್ರಕಾಶ್ ರಾಜ್‌ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಚಾಯ್‌ವಾಲಾ ಮತ್ತು ಇಸ್ರೋ ವಿಜ್ಞಾನಿಗಳು ಸೇರಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಪ್ರಕಾಶ್ ರಾಜ್‌ಗೆ ತಿರುಗೇಟು ನೀಡಿದ್ದಾರೆ.

ವಿವಾದ ಸೃಷ್ಟಿಸಿದ್ದ ಪ್ರಕಾಶ್ ರಾಜ್ ಟ್ವೀಟ್

ಇದಕ್ಕೂ ಮೊದಲು ಪ್ರಕಾಶ್ ರಾಜ್ ಮಾಡಿದ್ದ ಟ್ವೀಟ್ ಭಾರಿ ವಿವಾದ ಸೃಷ್ಟಿಸಿತ್ತು. ಚಾಯ್‌ ಮಾರುವ ವ್ಯಕ್ತಿಯ ಚಿತ್ರವನ್ನು ಹಂಚಿಕೊಂಡಿದ್ದ ಅವರು, ಚಂದ್ರನ ಅಂಗಳದಿಂದ ಬಂದ ಮೊದಲ ಚಿತ್ರ ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್‌ಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು, ನಂತರ ಸ್ಪಷ್ಟನೆ ನೀಡಿದ್ದ ಪ್ರಕಾಶ್ ರಾಜ್ ಇದು ಹಳೆಯ ಜೋಕ್ ಎಂದು ಹೇಳಿದ್ದರು. ಆದರೂ, ಕೂಡ ಪ್ರಕಾಶ್ ರಾಜ್ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರು. ಈ ಬಗ್ಗೆ ದೂರು ಕೂಡ ದಾಖಲಾಗಿದೆ.

ಯಶಸ್ವಿಯಾದ ಚಂದ್ರಯಾನ 3 ಲ್ಯಾಂಡಿಂಗ್

ಆಗಸ್ಟ್ 23ರಂದು ಮೊದಲೇ ನಿಗದಿಪಡಿಸಿದಂತೆ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಆಗಿದೆ. ಈ ಮೂಲಕ ಚಂದ್ರನ ಮೇಲೆ ನೌಕೆ ಇಳಿಸಿದ ನಾಲ್ಕನೇ ರಾಷ್ಟ್ರ ಎನಿಸಿಕೊಂಡಿದೆ. ಅದರಲ್ಲೂ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಜಗತ್ತಿನ ಮೊದಲ ದೇಶ ಎನಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+