ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಮ್ಮನಿರದೆ ಮತ್ತೆ ಇರುವೆ ಬಿಟ್ಟುಕೊಂಡ ಪ್ರಕಾಶ್ ರೈ!

By Sachhidananda Acharya
|
Google Oneindia Kannada News

Recommended Video

ಹಿಂದೂಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟ ಪ್ರಕಾಶ್ ರೈ | Oneindia Kannada

ಬೆಂಗಳೂರು, ನವೆಂಬರ್ 3: ಬಹುಭಾಷಾ ನಟ ಪ್ರಕಾಶ್ ರೈ ಮತ್ತೆ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಹಿಂದೂ ಭಯೋತ್ಪಾದನೆ ಬಗ್ಗೆ ತಮಿಳು ಸೂಪರ್ ಸ್ಟಾರ್ ಕಮಲ್ ಹಾಸನ್ ನೀಡಿರುವ ಹೇಳಿಕೆಗೆ ಪ್ರಕಾಶ್ ರೈ ಕೂಡ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.

ತಾಜ್ ಮಹಲ್ ನ್ನು ಯಾವಾಗ ಕೆಡವುತ್ತೀರಿ? ಪ್ರಕಾಶ್ ರೈ ಪ್ರಶ್ನೆತಾಜ್ ಮಹಲ್ ನ್ನು ಯಾವಾಗ ಕೆಡವುತ್ತೀರಿ? ಪ್ರಕಾಶ್ ರೈ ಪ್ರಶ್ನೆ

"ಧರ್ಮ, ಸಂಸ್ಕೃತಿ, ನೈತಿಕತೆ ಹೆಸರಿನಲ್ಲಿ ಭಯ ಬಿತ್ತುವುದು ಭಯೋತ್ಪಾದನೆ ಅಲ್ಲವಾದರೆ.. ಭಯೋತ್ಪಾದನೆ ಅಂದರೆ ಮತ್ತೇನು.. ಸುಮ್ಮನೆ ಕೇಳುತ್ತಿದ್ದೇನೆ," ಎನ್ನುವ ಅರ್ಥದ ಪ್ರಕಾಶ್ ರೈ ಟ್ವೀಟಿಸಿದ್ದಾರೆ.

ಕಮಲ್ ಹಾಸನ್ ಹೇಳಿಕೆ ಬೆಂಬಲಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿರುವ ಬೆನ್ನಿಗೆ ಇದೀಗ ಪ್ರಕಾಶ್ ರೈ ಟ್ವೀಟ್ ಕೂಡ ಸದ್ದು ಮಾಡುತ್ತಿದೆ.

Array

ಭಯೋತ್ಪಾದನೆ ಅಂದರೆ ಮತ್ತೇನು?

'ಇದು ಯಾರಿಗೆ ಸಂಬಂಧಿಸಿದ್ದೋ ಅವರಿಗೆ' ತಲೆ ಬರಹದಲ್ಲಿ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

"ನೈತಿಕ ಪೊಲೀಸ್ ಗಿರಿ ಹೆಸರಿನಲ್ಲಿ ಯುವ ಜೋಡಿಯ ಮೇಲೆ ನನ್ನ ದೇಶದ ರಸ್ತೆಯಲ್ಲಿ ದೌರ್ಜನ್ಯ, ಹಲ್ಲೆ ನಡೆಸುವುದು ಭಯೋತ್ಪಾದನೆಯಲ್ಲವಾದರೆ... ಗೋ ಹತ್ಯೆ ಮಾಡಿದ್ದಾರೆ ಎಂಬ ಸಣ್ಣ ಅನುಮಾನ ಬಂದ ಕೂಡಲೇ ಕಾನೂನನ್ನು ಕೈಗೆತ್ತಿಕೊಂಡು ಜನರ ಮೇಲೆ ದಾಳಿ ಮಾಡುವುದು ಭಯೋತ್ಪಾದನೆಯಲ್ಲವಾದರೆ... ಸಣ್ಣ ವಿರೋಧದ ಧ್ವನಿಯನ್ನೂ ಹತ್ತಿಕ್ಕಲು ದೌರ್ಜನ್ಯ, ಬೆದರಿಕೆಯ ಟ್ರೋಲ್ ಮಾಡುವುದು ಭಯೋತ್ಪಾದನೆಯಲ್ಲವಾದರೆ.. ಮತ್ತೇನು ಭಯೋತ್ಪಾದನೆ ಅಂದರೆ.. ಸುಮ್ಮನೆ ಕೇಳುತ್ತಿದ್ದೇನೆ." ಎಂದು ಟ್ವೀಟ್ ಮಾಡಿದ್ದಾರೆ.

ಹಿಂದೂ ಭಯೋತ್ಪಾದನೆ ಹೇಳಿಕೆ, ಕಮಲ್ ಹಾಸನ್ ವಿರುದ್ಧ ದೂರುಹಿಂದೂ ಭಯೋತ್ಪಾದನೆ ಹೇಳಿಕೆ, ಕಮಲ್ ಹಾಸನ್ ವಿರುದ್ಧ ದೂರು

ಕಮಲ್ ಹಸನ್ ಗೆ ಬೆಂಬಲ

ಕಮಲ್ ಹಸನ್ ಗೆ ಬೆಂಬಲ

ಹಿಂದೂಗಳಲ್ಲಿ ಉಗ್ರವಾದ, ಭಯೋತ್ಪಾದನೆ ಇದೆ. ಇಲ್ಲ ಎಂದು ಬಲಪಂಥೀಯರು ಸವಾಲು ಹಾಕುವಂತಿಲ್ಲ. ಕಾರಣ, ಹಿಂದೂಗಳ ಕ್ಯಾಂಪಿನಲ್ಲೂ ಭಯೋತ್ಪಾದನೆ ಹರಡಿದೆ ಎಂದು ಕಮಲ್ ಹಸನ್ ತಮ್ಮ ಅಂಕಣದಲ್ಲಿ ಹೇಳಿದ್ದರು.

ತಮಿಳು ನಿಯತಕಾಲಿಕೆಗೆ ಬರೆದ ತಮ್ಮ ವಾರದ ಅಂಕಣದಲ್ಲಿ ಕಮಲ್ ಹಾಸನ್, "ಹಿಂದೂ ಸಂಘಟನೆಗಳು ವಿರೋಧಿಗಳ ಧ್ವನಿ ಅಡಗಿಸಲು ಭುಜ ಬಲ ಬಳಸುತ್ತಿದ್ದಾರೆ," ಎಂದು ಹೇಳಿದ್ದರು.

ಇದಕ್ಕೀಗ ಬೆಂಬಲವಾಗಿ ಪ್ರಕಾಶ್ ರೈ ಕೂಡಾ ಟ್ವೀಟ್ ಮಾಡಿದ್ದಾರೆ.

ಅಪನಗದೀಕರಣ ತಪ್ಪು ನಡೆ ಎಂದು ಮೋದಿ ಒಪ್ಪಿಕೊಳ್ಳಲಿ: ಕಮಲ್ಅಪನಗದೀಕರಣ ತಪ್ಪು ನಡೆ ಎಂದು ಮೋದಿ ಒಪ್ಪಿಕೊಳ್ಳಲಿ: ಕಮಲ್

ಕಮಲ್ ಹಾಸನ್ ವಿರುದ್ಧ ಪ್ರಕರಣ

ಕಮಲ್ ಹಾಸನ್ ವಿರುದ್ಧ ಪ್ರಕರಣ

ಹಿಂದೂ ಭಯೋತ್ಪಾದನೆ ಇದೆ ಎಂದು ಹೇಳಿದ್ದ ಕಮಲ್ ಹಾಸನ್ ವಿರುದ್ಧ ಪ್ರಕರಣ ಕೂಡಾ ದಾಖಲಾಗಿದೆ. ಐಪಿಸಿ ಸೆಕ್ಷನ್ 500, 511, 298, 295 (a) ಮತ್ತು 505 (c) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ವಿಚಾರಣೆ ನಾಳೆ ಅಂದರೆ ಶನಿವಾರ ನಡೆಯಲಿದೆ.

ಕಮಲ್ ಗೆ ದಿನೇಶ್ ಗುಂಡೂರಾವ್ ಬೆಂಬಲ

ಕಮಲ್ ಗೆ ದಿನೇಶ್ ಗುಂಡೂರಾವ್ ಬೆಂಬಲ

'ಹೌದು ಹಿಂದೂ ಭಯೋತ್ಪಾದನೆ ಇದೆ' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈ ಮೂಲಕ ನಟ ಕಮಲ್ ಹಸನ್ ಹೇಳಿಕೆಯನ್ನು ದಿನೇಶ್ ಗುಂಡೂರಾವ್ ಕೂಡಾ ಬೆಂಬಲಿಸಿದ್ದಾರೆ.

"ಮೂಲಭೂತವಾದ ದೇಶದಲ್ಲಿ ಇದೆ. ನಾವು ಇದನ್ನು ಕಂಡು ಓಡಿ ಹೋಗುವುದಲ್ಲ. ಇದನ್ನು ಎದುರಿಸಬೇಕು," ಎಂದು ಅವರು ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹೌದು ಹಿಂದೂ ಭಯೋತ್ಪಾದನೆ ಇದೆ; ಕಮಲ್ ಗೆ ದಿನೇಶ್ ಗುಂಡೂರಾವ್ ಬೆಂಬಲಹೌದು ಹಿಂದೂ ಭಯೋತ್ಪಾದನೆ ಇದೆ; ಕಮಲ್ ಗೆ ದಿನೇಶ್ ಗುಂಡೂರಾವ್ ಬೆಂಬಲ

ಪ್ರಕಾಶ್ ರೈ ಹೇಳಿಕೆ ಹೊಸದೇನೂ ಅಲ್ಲ

ಪ್ರಕಾಶ್ ರೈ ಹೇಳಿಕೆ ಹೊಸದೇನೂ ಅಲ್ಲ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ಮಾತನಾಡುತ್ತಾ ಹೇಳಿಕೆ ನೀಡಿದ್ದ ಪ್ರಕಾಶ್ ರೈ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮಖ್ಯಮಂತ್ರಿ ಯೋಗಿ ಆದಿತ್ಯನಾಥ್ ನನಗಿಂತ ದೊಡ್ಡ ನಟರಂತೆ ಕಾಣಿಸುತ್ತಾರೆ. ಅವರಿಗೆ ನನಗೆ ಸಿಕ್ಕಿದ ಐದು ರಾಷ್ಟ್ರೀಯ ಪುರಸ್ಕಾರಗಳನ್ನು ನೀಡಿ ಬಿಡೋಣ ಅನಿಸುತ್ತದೆ ಎಂದು ಹೇಳಿದ್ದರು.

ನಂತರ ತಾಜ್ ಮಹಲ್ ಯಾವಾಗ ಕೆಡವುತ್ತೀರಿ ಎಂದು ಪ್ರಕಾಶ್ ರೈ ಪ್ರಶ್ನಿಸಿದ್ದರು. ಇದೀಗ ಕಮಲ್ ಹೇಳಿಕೆ ಬೆಂಬಲಿಸಿದ್ದಾರೆ. ಮತ್ತದೇ ಆರ್.ಎಸ್.ಎಸ್ ಮತ್ತು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

English summary
Noted South Indian actor Prakash Raj supported Tamil mega-star Kamal Haasan. Kamal saying that terrorism has infected right-wing groups.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X