ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಪಿಇ ಕಿಟ್ ಹಗರಣ: ಕೇರಳ ಮಾಜಿ ಆರೋಗ್ಯ ಸಚಿವೆ ಕೆಕೆ ಶೈಲಜಾ ವಿರುದ್ಧ ತನಿಖೆ

|
Google Oneindia Kannada News

ತಿರುವನಂತಪುರಂ, ಅಕ್ಟೋಬರ್ 17: ಕೇರಳದಲ್ಲಿ ಕೋವಿಡ್‌ನ ಆರಂಭಿಕ ಅವಧಿಯಲ್ಲಿ ಪಿಪಿಇ ಕಿಟ್‌ಗಳು ಮತ್ತು ಇತರ ವೈದ್ಯಕೀಯ ಉಪಕರಣ ಖರೀದಿಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮಾಜಿ ಆರೋಗ್ಯ ಸಚಿವೆ ಕೆಕೆ ಶೈಲಜಾ ಮತ್ತು ಇತರ ಕೆಲವರ ವಿರುದ್ಧ ಕೇರಳ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ.

ಕಳೆದ ಡಿಸೆಂಬರ್ 8ರಂದು ಸಿಪಿಐ(ಎಂ) ನಾಯಕಿಗೆ ಭ್ರಷ್ಟಾಚಾರ ವಿರೋಧಿ ಸಂಸ್ಥೆ ಸಮನ್ಸ್ ನೀಡಿದೆ. 2020ರಲ್ಲಿ ಮಾಡಿದ ಖರೀದಿಗಳಲ್ಲಿ ಕಿಕ್‌ಬ್ಯಾಕ್ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ವೀಣಾ ಎಸ್ ನಾಯರ್ ಆರೋಪಿಸಿದ್ದರು. ಈ ಕುರಿತು ದೂರನ್ನೂ ಸಹ ನೀಡಿದ್ದು, ಇದರ ಬೆನ್ನಲ್ಲೇ ಬೆಳವಣಿಗೆಗಳು ನಡೆಯುತ್ತಿವೆ.

ಈ ದೂರಿನ ಪ್ರಕಾರ, ಕೋವಿಡ್-19 ಪಿಡುಗಿನ ಸಂದರ್ಭದಲ್ಲಿ ಪಿಪಿಇ ಕಿಟ್‌ಗಳನ್ನು ಪ್ರತಿ ಯೂನಿಟ್‌ಗೆ 1,550 ರೂ.ಗೆ ಖರೀದಿಸಲಾಗಿದೆ. ಇದು ಮುಕ್ತ ಮಾರುಕಟ್ಟೆಯಲ್ಲಿನ ಬೆಲೆಗಿಂತ ಹೆಚ್ಚು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

PPE kits Scam Probe against Kerala Ex-health minister KK Shailaja

ಮಾಜಿ ಸಚಿವೆ ಕೆಕೆ ಶೈಲಜಾ ನೀಡಿದ್ದ ಸಮರ್ಥನೆ:

ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಪಿಪಿಇ ಕಿಟ್ ಕೊರತೆಯು ಹೆಚ್ಚಾಗಿ ಬಾಧಿಸುತ್ತಿತ್ತು. ಹೀಗಾಗಿ ಹೆಚ್ಚಿದ ಬೆಲೆಯನ್ನು ಕೊಟ್ಟು ಕಿಟ್ ಖರೀದಿ ಮಾಡಲಾಗಿತ್ತು. ಅಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅನುಮತಿಯೊಂದಿಗೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿತ್ತು ಎಂದು ಮಾಜಿ ಆರೋಗ್ಯ ಸಚಿವೆ ಕೆಕೆ ಶೈಲಜಾ ಸಮರ್ಥಿಸಿಕೊಂಡಿದ್ದರು. ಅಲ್ಲದೇ, ಜನರ ಜೀವನವು ಹೆಚ್ಚು ಮಹತ್ವದ್ದಾಗಿರುವುದರಿಂದ ಗುಣಮಟ್ಟವನ್ನು ಖಾತ್ರಿಪಡಿಸಿದ ನಂತರ ಕಿಟ್‌ಗಳ ಖರೀದಿಗೆ ಸಿಎಂ ಅನುಮೋದನೆ ನೀಡಿದ್ದರು ಎಂದು ಅವರು ಹೇಳಿದ್ದರು.

ಕಾಂಗ್ರೆಸ್ ಮಾಡಿರುವ ಆರೋಪವೇನು?

ಪಿಪಿಇ ಕಿಟ್‌ಗಳಲ್ಲದೇ, ಕೈಗವಸುಗಳು, ಥರ್ಮಾಮೀಟರ್‌ಗಳು ಮತ್ತು ಆಮ್ಲಜನಕ ಮೀಟರ್‌ಗಳು ಸೇರಿದಂತೆ ಇತರ ವೈದ್ಯಕೀಯ ಉಪಕರಣಗಳ ಖರೀದಿಯಲ್ಲೂ ಭ್ರಷ್ಟಾಚಾರ ನಡೆಸಲಾಗಿತ್ತು ಎಂದು ಕಾಂಗ್ರೆಸ್ ಆರೋಪಿಸಿದೆ.

PPE kits Scam Probe against Kerala Ex-health minister KK Shailaja

ಅಂದಿನ ಪರಿಸ್ಥಿತಿಯ ಬಗ್ಗೆ ವಿವರಿಸಿದ ಕೆಕೆ ಶೈಲಜಾ:

"ಕೇರಳ ಮೆಡಿಕಲ್ ಸರ್ವಿಸಸ್ ಕಾರ್ಪೊರೇಷನ್ ಲಿಮಿಟೆಡ್ (ಕೆಎಂಎಸ್‌ಸಿಎಲ್) ಕಾರ್ಯಕರ್ತರು ತಮ್ಮಲ್ಲಿ ಪಿಪಿಇ ಕಿಟ್‌ ಖಾಲಿಯಾಗುತ್ತಿವೆ. ಕಿಟ್‌ಗಳನ್ನು ಖರೀದಿಸದಿದ್ದರೆ ಆರೋಗ್ಯ ಕಾರ್ಯಕರ್ತರು ಅಪಾಯಕ್ಕೆ ಸಿಲುಕುತ್ತಾರೆ ಎಂದು ಹೇಳಿದರು. ನಾನು ಈ ಸಮಸ್ಯೆಯನ್ನು ಸಿಎಂ ಅವರೊಂದಿಗೆ ಚರ್ಚಿಸಿದಾಗ, ಅವರು ಅವುಗಳನ್ನು ಪಡೆಯಲು ಸೂಚಿಸಿದರು. ಉತ್ಪನ್ನದ ಗುಣಮಟ್ಟವನ್ನು ಖಾತ್ರಿಪಡಿಸಿಕೊಂಡ ನಂತರ ಮಾತ್ರ ಸಾಧ್ಯವಿರುವಲ್ಲೆಲ್ಲಾ ಖರೀದಿ ಮಾಡಲಾಯಿತು. ಈ ಹಿಂದೆ 500 ರೂ.ಗೆ ಲಭ್ಯವಿದ್ದ ಪಿಪಿಇ ಕಿಟ್ 1,500 ರೂ.ಗೆ ಮಾರಾಟವಾಗುತ್ತಿದೆ. ನಾವು ಇದನ್ನು ಖರೀದಿಸಬೇಕೇ ಎಂದು ನಾನು ಸಿಎಂಗೆ ಕೇಳಿದೆ, ಆದರೆ ಜನರ ಪ್ರಾಣವು ನಮಗೆ ಹೆಚ್ಚು ಮುಖ್ಯ ಎಂದು ಹೇಳಿದರು. ವಿಪತ್ತು ನಿರ್ವಹಣಾ ಕಾಯ್ದೆಯ ಪ್ರಕಾರ, ನಮಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸುವ ಹಕ್ಕಿದೆ. ಸುಮಾರು 15,000 ಕಿಟ್‌ಗಳನ್ನು ಖರೀದಿಸುವ ಹೊತ್ತಿಗೆ, ಅವುಗಳ ಮಾರುಕಟ್ಟೆ ಬೆಲೆ ಮತ್ತೆ ಕುಸಿಯಲು ಪ್ರಾರಂಭಿಸಿತು. ಹಾಗಾಗಿ ಉಳಿದ 35,000 ಕಿಟ್‌ಗಳ ಆರ್ಡರ್ ಅನ್ನು ನಾವು ರದ್ದುಗೊಳಿಸಿದ್ದೇವೆ ಮತ್ತು ಬದಲಿಗೆ ಮಾರುಕಟ್ಟೆ ಬೆಲೆಗೆ ಖರೀದಿಸಿದ್ದೇವೆ," ಎಂದು ಮಾಜಿ ಆರೋಗ್ಯ ಸಚಿವೆ ಕೆಕೆ ಶೈಲಜಾ ಕುವೈತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಮರ್ಥಿಸಿಕೊಂಡಿದ್ದರು.

English summary
PPE kits Scam Probe against Kerala Ex-health minister KK Shailaja. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X