ಬಂದರು ಅಧಿಕಾರ: ಭಾರತ, ಚೀನಾ ಮತ್ತು ಅದಾನಿ
ಆಸ್ಟೇಲಿಯಾದಿಂದ ಭಾರತ, ಶ್ರೀಲಂಕಾದಿಂದ ಆಫ್ರಿಕಾ ಮತ್ತು ಲಂಡನ್‌ನಿಂದ ನ್ಯೂಯಾರ್ಕ್ ತನಕ ರಾಜಕಾರಣಿಗಳು, ಶಾರ್ಟ್ ಸೆಲ್ಲರ್‌ಗಳು, ಎನ್‌ಜಿಒಗಳು, ಹೋರಾಟಗಾರರು, ವಕೀಲರು ಮತ್ತು ಮಾಧ್ಯಮಕ್ಕೆ ಅದಾನಿ ವಿರುದ್ಧ ಹಣಕಾಸು ನೆರವು ನೀಡುತ್ತಿರುವವರು ಯಾರು?
ಅಮೆರಿಕನ್ ಚೈನೀಸ್ ಹೂಡಿಕೆದಾರರು/ ಚೀನಾದ ಪತ್ತೇದಾರಿ ದಂಪತಿಗಳನ್ನು ಅದಾನಿ ವಿರುದ್ಧ ದಾಳಿಗಳನ್ನು ಮಾಡಲು ಹಿಂಡನ್ ಬರ್ಗ್ ನೇಮಕ ಮಾಡಿತ್ತು ಎಂಬುದು ಇತ್ತೀಚೆಗೆ ಬಹಿರಂಗವಾಗಿದೆ, ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಚೀನಾದ ಹಸ್ತಕ್ಷೇಪ ಇರುವ ಕುರಿತು ಅದಾನಿ ಕಥೆಗೆ ರೋಚಕ ತಿರುವು ನೀಡಿದ್ದಾರೆ. ಈ ವಿವರಗಳು ಸರಣಿ ಪ್ರಶ್ನೆಗಳನ್ನು ಎತ್ತಿದೆ. ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ ಒಂದಾದ ಚೀನಾ ಏಕೆ ಭಾರತೀಯ ಉದ್ಯಮಿ ಅದಾನಿಯನ್ನು ಗುರಿಯಾಗಿಸಿದೆ?. ಚೀನಾದ ವಿರುದ್ಧ ಅಮೆರಿಕ ಏಕೆ ಅದಾನಿಗೆ ಬೆಂಬಲ ನೀಡುತ್ತಿದೆ?.

ಅಮೆರಿಕ ರಾಯಭಾರಿ ಇತ್ತೀಚೆಗೆ ಅದಾನಿಯ ಗುಜರಾತ್‌ನ ಮುಂದ್ರಾ ಮತ್ತು ಖವ್ಡಾ ಸ್ಥಳಗಳಿಗೆ ಭೇಟಿ ಕೊಟ್ಟಿದ್ದರು. ಆದರೆ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳನ್ನು ಹಾಕುವುದಕ್ಕೆ ಹಿಂಜರಿದರು. ಅಮೆರಿಕ ಅದಾನಿಗೆ ಬೆಂಬಲ ನೀಡಲು ಸಿದ್ಧವಾಗಿದೆ ಎಂಬ ಬಲವಾದ ಪರೋಕ್ಷವಾದ ಸಂದೇಶ ಕಳುಹಿಸಿದರು. ಅಮೆರಿಕ ಸರ್ಕಾರದ ಸ್ವತ್ತಾದ ಡಿಎಫ್‌ಸಿ ಅದಾನಿಯ ಕೊಲಂಬೊ ಬಂದರು ಯೋಜನೆಗೆ ಹಣಕಾಸು ನೆರವನ್ನು 2023ರ ನವೆಂಬರ್‌ನಲ್ಲಿ ಒದಗಿಸಿತು ಮತ್ತು ಹಿಂಡನ್ ಬರ್ಗ್ ವರದಿಯನ್ನು ಅಸಂಬಂಧಿತವಾದ್ದು ಎಂದು ತಿರಸ್ಕರಿಸಿತು, ಅದಾನಿ ಷೇರುಗಳಲ್ಲಿ ತೀವ್ರಗತಿಯಲ್ಲಿ ಪುನರ್ ಸ್ಥಾಪನೆಯಾಗಲು ಪ್ರಮುಖ ಪಾತ್ರ ವಹಿಸಿತು.
2017ರಲ್ಲಿ ರಾಹುಲ್ ಗಾಂಧಿ ಏಕೆ ಚೀನಾದ ರಾಯಭಾರ ಕಚೇರಿಗೆ ರಹಸ್ಯ ಭೇಟಿ ಕೊಟ್ಟರು, ಸಚಿವರನ್ನು ಭೇಟಿ ಮಾಡಿದ್ದನ್ನು ನಿರಾಕರಿಸಿದರು. ನಂತರ ರಾಯಭಾರ ಕಚೇರಿ ಫೋಟೋ ಬಿಡುಗಡೆ ಮಾಡಿದಾಗ ಅದನ್ನು ಒಪ್ಪಿಕೊಂಡರು. 2018ರಲ್ಲಿ ಟಿಬೆಟ್‌ನ ಕೈಲಾಶ್ ಮಾನಸಸರೋವರ ಪ್ರವಾಸದಲ್ಲಿ ಗಾಂಧಿ ಮತ್ತೆ ಚೀನಾದ ಸಚಿವರನ್ನು ಗುಪ್ತವಾಗಿ ಏಕೆ ಭೇಟಿಯಾದರು?, ಕಾಂಗ್ರೆಸ್ ಏಕೆ ಅದಾನಿಯನ್ನು ಗುರಿಯಾಗಿಸಿಕೊಂಡಿದೆ?. ಪ್ರಧಾನಮಂತ್ರಿ ನರೇಂದ್ರ ಮೋದಿ ಏಕೆ ಲಕ್ಷದ್ವೀಪದಲ್ಲಿ ಸ್ನಾರ್ಕ್ಲಿಂಗ್ ಮಾಡಿದರು. ಅವರ ಗುರಿ ಮಾಲ್ಡೀವ್ಸ್ ಸರ್ಕಾರವೇ ಅಥವಾ ಚೀನಾವೇ?
ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚು ಇದೆಯೇ?
ದೊಡ್ಡ ಸಂಚನ್ನು ಅರ್ಥಮಾಡಿಕೊಳ್ಳುವ ಮೊದಲ ಭೌಗೋಳಿಕ ವ್ಯಾಪಾರ ಮಾರ್ಗವನ್ನು ಅರ್ಥೈಸಿಕೊಳ್ಳಬೇಕು. ಇತಿಹಾಸಿಕವಾಗಿ ಬಂದರುಗಳ ನಿಯಂತ್ರಣಕ್ಕಾಗಿ ನಡೆದ ಸಂಘರ್ಷಗಳು ಜಾಗತಿಕ ಶಕ್ತಿಯಾಗಿ ಬದಲಾಗುವಲ್ಲಿ ಸಮತೋಲನ ಪಾತ್ರವಹಿಸಿವೆ. ಕಾನ್ಸ್ಟಾಂಟಿನೋಪಲ್ (1453 ಕ್ರಿ.ಶ.) ವಶಪಡಿಸಿಕೊಳ್ಳುವ ಮೂಲಕ, ಒಟ್ಟೋಮನ್ ಟರ್ಕ್ಸ್ ರೇಷ್ಮೆ ಮಾರ್ಗದ ನಿಯಂತ್ರಣವನ್ನು ಪಡೆಕೊಳ್ಳುವ ಮೂಲಕ ಆ ಕಾಲದ ಅತ್ಯಂತ ಶಕ್ತಿಶಾಲಿ ಸಾಮ್ರಾಜ್ಯವಾಯಿತು. ಆಫ್ರಿಕಾ ಪಶ್ಚಿಮ ಕರಾವಳಿಯ ಸಮುದ್ರ ಮಾರ್ಗಗಳ ಅನ್ವೇಷಣೆಯ ಮೂಲಕ ಯುರೋಪಿಯನ್ನರು ಒಟ್ಟೋಮನ್‌ಗಳನ್ನು ದುರ್ಬಲವಾಗಿಸಿದರು. ಈ ಮೂಲಕ ಯುರೋಪಿಯನ್ (ಪೋರ್ಚುಗೀಸ್, ಬ್ರಿಟಿಷ್, ಡಚ್ ಮತ್ತು ಫ್ರೆಂಚ್) ಸಾಮ್ರಾಜ್ಯಗಳ ಉದಯವಾಯಿತು.
ಆದರೆ ಈಗ, ಜಾಗತಿಕ ಶಕ್ತಿಯು ಪೂರ್ವದ ಕಡೆಗೆ ಸಾಗುತ್ತಿದೆ. 21ನೇ ಶತಮಾನದ ಭೌಗೋಳಿಕ ಶಕ್ತಿಯು ಪ್ರಮುಖ ಬಂದರು ಹೊಂದಿರುವ ದೇಶಗಳಿಂದ ತೀರ್ಮಾನವಾಗುತ್ತಿದೆ ಮತ್ತು ಚೀನಾ ಇತ್ತೀಚೆಗೆ ಇದರಲ್ಲಿ ಸ್ಪಷ್ಟವಾಗಿ ಜಯಗಳಿಸಿದೆ. ವ್ಯಾಪಾರ ಮತ್ತು ಸೈನಿಕ ಹಿತಾಸಕ್ತಿಗಳನ್ನು ರಕ್ಷಣೆ ಮಾಡಲು ಮತ್ತು ಈ ಪ್ರದೇಶದಲ್ಲಿ ಹಿಡಿತ ಸಾಧಿಸಲು ಚೀನಾ 1 ಟ್ರಿಲಿಯನ್ ಅಮೆರಿಕನ್ ಡಾಲರ್ 'ಒನ್ ಬೆಲ್ಟ್ ಅಂಡ್ ಒನ್ ರೋಡ್' ಎಂಬ ತಂತ್ರವನ್ನು ಅನುಷ್ಠಾನಗೊಳಿಸಿತು. ಇದರಲ್ಲಿ ಪ್ರಮುಖವಾಗಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಮತ್ತು ಹಿಂದೂಮಹಾಸಾಗರದಲ್ಲಿ ಸ್ಟ್ರಿಂಗ್ ಆಫ್ ಪರ್ಲ್ಸ್ ಒಳಗೊಂಡಿದೆ, ಇದು ಭಾರತದ ರಾಷ್ಟ್ರೀಯ ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ. ಭಾರತವನ್ನು ಸುತ್ತುವರಿದು ಶಕ್ತಿ ಪ್ರದರ್ಶನ, ವ್ಯಾಪಾರ ಮತ್ತು ಸಾಧ್ಯವಾದಷ್ಟು ಭೂಪ್ರದೇಶದ ಅಖಂಡತೆಗೆ ಬೆದರಿಕೆ ಉಂಟುಮಾಡುವುದು ಚೀನಾದ ತಂತ್ರವಾಗಿದೆ.
ಆದರೆ ಕೆಲವು ವರ್ಷಗಳ ಹಿಂದೆ ಜಾಗತಿಕ ವ್ಯಾಪಾರದ ಮೇಲೆ ಬೆಳೆಯುತ್ತಿರುವ ಚೀನಾದ ಹಿಡಿತಕ್ಕೆ ಭಾರತ ಸವಾಲು ಹಾಕಿತು. ಅದು ಭಾರತೀಯ ಸರ್ಕಾರವಲ್ಲ, ಆದರೆ ಖಾಸಗಿ ವ್ಯಕ್ತಿ, ಪಶ್ಚಿಮ ಕರಾವಳಿಯ ಮುಂದ್ರಾ ಎಂಬ ಅತ್ಯಂತ ಪರಿಣಾಮಕಾರಿ ಬಂದರನ್ನು ನಿರ್ಮಿಸಲು ಯಶಸ್ವಿಯಾದರು ಮತ್ತು ಮಾಧ್ಯಮಗಳು ಅವರನ್ನು ಮೋದಿಯ ಆಪ್ತ ಎಂದು ಉಲ್ಲೇಖಿಸಿದವು. ಬ್ರಿಟಿಷರ ನಂತರ ಅದಾನಿ ಗ್ರೂಪ್ ಭಾರತೀಯ ಬಂದರು ಮತ್ತು ಮೂಲಸೌಕರ್ಯ ಅಭಿವೃದ್ಧಿಪರವಾಗಿದ್ದು, ದೊಡ್ಡ ಮಟ್ಟದ ಮೂಲಸೌಕರ್ಯ ಯೋಜನೆಗಳನ್ನು ನಿರ್ಮಿಸಲು ಮತ್ತು ಕಾರ್ಯಗತಗೊಳಿಸಲು ಸಾಮರ್ಥ್ಯವಿದೆ ಎಂದು ತೋರಿಸಿತು. ಭಾರತದ ಬಂದರು ಉದ್ಯಮದಲ್ಲಿ, ಇದು ಕಾರ್ಯಾಚರಣೆ ಕ್ಷೇತ್ರದಲ್ಲಿಇತರ ಎಲ್ಲಾ ಬಂದರುಗಳನ್ನು ಸುಲಭವಾಗಿ ಸೋಲಿಸುತ್ತಿತ್ತು. ರಾಜ್ಯದ ನಿರ್ವಹಣೆ ಮಾಡುವ ಸಂಸ್ಥೆಗಳು ಸಹ ವಿಫಲವಾಗಿದ್ದವು. ಮೊದಲ ಎರಡು ದಶಕಗಳ ಪಾಠಗಳಿಂದ ಮುಂದ್ರಾ ಕಾರ್ಯಾಚರಣೆ ಹಣ ಬಳಸಿಕೊಂಡು, ಅದಾನಿ ಭಾರತದ ಸಮುದ್ರ ತೀರದಾದ್ಯಂತದ ತನ್ನ ಸ್ವಾಧೀನಗಳನ್ನು ಬಲಪಡಿಸಿತು. ರಾಷ್ಟ್ರ ನಿರ್ಮಾಣ ವ್ಯವಹಾರದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಭಾರತ ಸರ್ಕಾರವು 2010ರಿಂದ ಬೆಂಬಲ ನೀಡಿತು, ಆದ್ದರಿಂದ ಇದು ಚೀನಾವನ್ನು ನೇರವಾಗಿ ಎದುರಿಸಿದಂತಾಗಿದೆ. ಅದಾನಿಯನ್ನು ಕುಗ್ಗಿಸುವ ಮೂಲಕ ಚೀನಾ ಅರ್ಧ ಯುದ್ಧ ಗೆದ್ದಂತೆ.
ಅದಾನಿ v/s ಚೀನಾ
1. ಆಸ್ಟ್ರೇಲಿಯಾದಲ್ಲಿ
ಚೀನಾದ ನಂತರ, ವಿಶ್ವದ ಅತ್ಯಂತ ದೊಡ್ಡ ಭಾರತೀಯ ಮೂಲದ ಕಂಪನಿ ಅದಾನಿ ಆಸ್ಟ್ರೇಲಿಯಾದಲ್ಲಿ ಪ್ರವೇಶಿಸಿತು. ಹೊರಗಿನ ಸವಾಲುಗಳ ನಡುವೆಯೋ ಆಸ್ಟ್ರೇಲಿಯಾದ ಕಾರ್ಯಾಚರಣೆಗೆ ಈವರೆಗೆ ಸುಮಾರು 9 ಬಿಲಿಯನ್ ಅಮೆರಿಕನ್ ಡಾಲರ್ (ಪೂರ್ಣವಾಗಿ ಸ್ವಂತ ಹಣ/ ಈಕ್ವಿಟಿ) ಹೂಡಿಕೆ ಮಾಡಿದೆ. ಅದಾನಿ ಪ್ರವೇಶಕ್ಕೂ ಮೊದಲು ಚೀನಾ ಆಸ್ಟ್ರೇಲಿಯಾದ ನೈಸರ್ಗಿಕ ಸಂಪತ್ತು ವಿಶೇಷವಾಗಿ ಕಲ್ಲಿದ್ದಲು ಖರೀದಿದಾರರಾಗಿದ್ದರು. ಅದಾನಿಯ ಪ್ರವೇಶ ಆ ಪ್ರದೇಶದಲ್ಲಿ ಚೀನಾದ ಪ್ರಭಾವಕ್ಕೆ ಬೆದರಿಕೆಯಂತೆ ಕಂಡಿತು. 2020ರಲ್ಲಿ ಆಸ್ಟ್ರೇಲಿಯಾದ ಯಾಂಕೋಲ್‌ನಲ್ಲಿ ಹಲವಾರು ಗಣಿ ಹೊಂದಿರುವ ಚೀನಾದ ಕಲ್ಲಿದ್ದಲು ಉತ್ಪಾದನೆಗಿಂತ ಅದಾನಿ ಉತ್ಪಾದನೆ 20ಪಟ್ಟು ಹೆಚ್ಚು ಉತ್ಪಾದಿಸಿತು ಮತ್ತು ಒಟ್ಟು ರಫ್ತುಗಳಲ್ಲಿ ಸುಮಾರು ಶೇ 40ರಷ್ಟು ಪಾಲು ಹೊಂದಿತ್ತು. ಆದರೆ ಅದು ಅದಾನಿ ಎದುರಿಸಿದಂತೆ ಎನ್‌ಜಿಒಗಳಿಂದ ಯಾವುದೇ ಪ್ರಮುಖ ಸಮಸ್ಯೆ ಎದುರಿಸಲಿಲ್ಲ.
ಆಗಸ್ಟ್ 2010 - ಆದಾನಿ ಆಸ್ಟ್ರೇಲಿಯಾದಲ್ಲಿ ಕಾರ್ಮಿಕಲ್ ಗಣಿಗಳನ್ನು ವಶಕ್ಕೆ ಪಡೆದುಕೊಂಡರು, ಇದು ನೈಸರ್ಗಿಕ ಸಂಪತ್ತುಗಳಿಗಾಗಿ ಆಸ್ಟ್ರೇಲಿಯಾ ಪ್ರವೇಶಿಸಿದ ಮೊದಲ ಭಾರತೀಯ ಸಂಸ್ಥೆಯಾಗಿತ್ತು. ಅಲ್ಲಿಯ ತನಕ ಬಹುತೇಕ ಕಲ್ಲಿದ್ದಲು ಚೀನಾ ಮತ್ತು ಇತರ ಪೂರ್ವ ಏಷ್ಯಾ ದೇಶಗಳಿಗೆ ರಫ್ತಾಗುತ್ತಿತ್ತು.
ಮೇ 2011 - ಭಾರತಕ್ಕೆ ಕಲ್ಲಿದ್ದಲು ರಫ್ತು ಮಾಡಲು ಆದಾನಿ ಆಸ್ಟ್ರೇಲಿಯಾದ ಉತ್ತರ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಅಬಾಟ್ ಪಾಯಿಂಟ್ ಕಲ್ಲಿದ್ದಲು ಟರ್ಮಿನಲ್ ಅನ್ನು ಪಡೆದುಕೊಂಡರು
2012 - #STOPADANI ಅಭಿಯಾನ ಆರಂಭವಾಯಿತು, ಗ್ರೂಪ್ ಪರಿಸರ ಹೋರಾಟಗಾರರಿಂದ ಇಲ್ಲಿಯ ತನಕ 1000ಕ್ಕೂ ಹೆಚ್ಚು ಪ್ರತಿಭಟನೆಯನ್ನು ಎದುರಿಸಿತು. ದೇಶದ ಕಲ್ಲಿದ್ದಲು ಉತ್ಪಾದನೆಯ ಶೇ 2 ಕ್ಕಿಂತ ಕಡಿಮೆ ಉತ್ಪಾದನೆ ಮಾಡುತ್ತಿದ್ದರೂ. ಆಸ್ಟ್ರೇಲಿಯಾದಲ್ಲಿ ಇತರ ಯಾವುದೇ ಸಮೂಹ ಇಂತಹ ವಿರೋಧವನ್ನು ಎದುರಿಸಿಲ್ಲ.
ಏಪ್ರಿಲ್ 2014 - ವಿಶ್ವದ ಅತಿದೊಡ್ಡ ಕಲ್ಲಿದ್ದಲು ಬಂದರು ನ್ಯೂಕ್ಯಾಸಲ್ ಅನ್ನು ಮಿಕ್ ಬೈರ್ಡ್ ನ್ಯೂ ಸೌತ್ ವೇಲ್ಸ್ ಮುಖ್ಯಮಂತ್ರಿಯಾಗಿದ್ದಾಗ 98 ವರ್ಷಗಳಿಗೆ $1.75 ಬಿಲಿಯನ್‌ಗೆ ಚೀನಾದ ಬೆಂಬಲಿತ ಒಕ್ಕೂಟಕ್ಕೆ ಆಸ್ಟ್ರೇಲಿಯಾ ಸರ್ಕಾರದಿಂದ ಹಸ್ತಾಂತರಗೊಂಡಿತು. 2015ರಲ್ಲಿ ಬೈರ್ಡ್ ಅವರನ್ನು ವಿವಿಧ ವರದಿಗಳು ಭ್ರಷ್ಟಾಚಾರದ ಆರೋಪಿ ಎಂದವು.
2015 - ಚೀನಾ ಉತ್ತರ ಭಾಗದ ಡಾರ್ವಿನ್ ಬಂದರನ್ನು US$506 ಮಿಲಿಯನ್ ಒಪ್ಪಂದದಲ್ಲಿ 99 ವರ್ಷಗಳಿಗೆ ಗುತ್ತಿಗೆ ಪಡೆಯಿತು.
2017 - 2017ರಲ್ಲಿ ಮನಿಲಾದಲ್ಲಿ ನಡೆದ ಆಸಿಯನ್ ಶೃಂಗಸಭೆಯಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ, ಆಸ್ಟ್ರೇಲಿಯಾ ಪ್ರಧಾನಿ ಮಾಲ್ಕಮ್ ಟರ್ನ್ಬುಲ್, ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ವಾಡ್ ಮೈತ್ರಿಕೂಟವನ್ನು ಪುನರ್‌ಜ್ಜೀವನಗೊಳಿಸಲು ಒಪ್ಪಿದರು, ಇದು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾವನ್ನು ಅದರಲ್ಲೂ ದಕ್ಷಿಣ ಚೀನಾದಲ್ಲಿ ರಕ್ಷಣೆ ಮತ್ತು ರಾಜತಾಂತ್ರಿಕವಾಗಿ ಎದುರಿಸಲು, ಕ್ವಾಡ್ ಸದಸ್ಯರ ಒಪ್ಪಿಗೆಯನ್ನು ಕೆಲವು ವಿಮರ್ಶಕರು ಈ ಪ್ರದೇಶದ 'ಹೊಸ ಶೀತ ಸಮರ' ಎಂದು ಕರೆಯಲ್ಪಟ್ಟಿತು.
2018 - ಆಸ್ಟ್ರೇಲಿಯಾದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ, ಸರ್ಕಾರ, ವಿಶ್ವವಿದ್ಯಾಲಯಗಳು ಮತ್ತು ಮಾಧ್ಯಮ ಸೇರಿದಂತೆ, ಚೀನಾದ ರಾಜಕೀಯ ಪ್ರಭಾವದ ಬಗ್ಗೆ ಹೆಚ್ಚುತ್ತಿರುವ ಕಾರಣದಿಂದ ಆಸ್ಟ್ರೇಲಿಯಾ ಮತ್ತು ಚೀನಾ ನಡುವಿನ ಸಂಬಂಧಗಳು ಹದಗೆಡಲು ಪ್ರಾರಂಭಿಸಿತು, ಜೊತೆಗೆ ದಕ್ಷಿಣ ಚೀನಾ ಸಮುದ್ರ ವಿವಾದದ ಮೇಲೆ ಚೀನಾದ ನಿಲುವು ಕೂಡ ಹೆಚ್ಚಾಯಿತು.
2020 - ಚೀನಾ ಆಸ್ಟ್ರೇಲಿಯಾದ ಕಲ್ಲಿದ್ದಲಿಗೆ ಅನಧಿಕೃತ ನಿಷೇಧ ಹೇರಿತು, ಕೆನಡಾದಿಂದ ಕಲ್ಲಿದ್ದಲು ಖರೀದಿ ಪ್ರಾರಂಭಿಸಿತು. ಬಳಿಕ 2023ರಲ್ಲಿ ಚೀನಾ ಈ ಅನಧಿಕೃತ ನಿಷೇಧ ತೆಗೆದುಹಾಕಿದರೂ, ಎರಡು ದೇಶಗಳ ನಡುವಿನ ಸಂಬಂಧವು ಸುಧಾರಿಸಿಲ್ಲ.
2. ಶ್ರೀಲಂಕಾದಲ್ಲಿ
ಆಗಸ್ಟ್ 2011 - ಕೊಲಂಬೊ ಅಂತಾರಾಷ್ಟ್ರೀಯ ಕಂಟೈನರ್ ಟರ್ಮಿನಲ್ ಎಂದು ಕರೆಯಲ್ಪಡುವ ದಕ್ಷಿಣ ಟರ್ಮಿನಲ್ ಅನ್ನು ನಿರ್ವಹಿಸಲು ಚೀನಾದ ಮರ್ಚೆಂಟ್ ಪೋರ್ಟ್ಸ್ 2011ರಲ್ಲಿ ಶ್ರೀಲಂಕಾ ಪೋರ್ಟ್ಸ್ ಪ್ರಾಧಿಕಾರದೊಂದಿಗೆ 35 ವರ್ಷದ ಒಪ್ಪಂದಕ್ಕೆ ಸಹಿ ಹಾಕಿತು. ಇದು ಹಿಂದೂ ಮಹಾಸಾಗರದ ಅತ್ಯಂತ ಪ್ರಮುಖ ಸ್ಥಳ. ಚೀನಾದ ಹೂಡಿಕೆ ಮತ್ತು ಕೊಲಂಬೊ ಬಂದರಿನ ವಿಸ್ತರಣೆ ಶ್ರೀಲಂಕಾದ ಬಂದರು ಉದ್ಯಮಕ್ಕೆ ಮಹತ್ವದ ತಿರುವು ನೀಡಿತು, ಈಗ ಬಂದರು ಭಾರತದ ಶೇ 50ಕ್ಕಿಂತ ಹೆಚ್ಚು ಸರಕು ಟ್ರಾನ್ಶಿಪ್‌ಮೆಂಟ್ ನಿಯಂತ್ರಿಸುತ್ತದೆ.
ಆಗಸ್ಟ್ 2015 - ಅದಾನಿ ಕೇರಳ ಸರ್ಕಾರದೊಂದಿಗೆ ವಿಜಿನ್ಜಾಮ್ ಅಂತಾರಾಷ್ಟ್ರೀಯ ಸಮುದ್ರ ಬಂದರಿನ ಅಭಿವೃದ್ಧಿ ಮತ್ತು ನಿರ್ವಹಣೆಗೆ ಒಪ್ಪಂದವನ್ನು ಮಾಡಿಕೊಂಡಿತು. ಇದು ಸಂಪೂರ್ಣವಾಗಿ ಸರಕು ಸಾಗಣೆಗೆ ಮೀಸಲು. ಈ ಯೋಜನೆಗೆ ಸ್ಥಳೀಯ ಚರ್ಚ್ ಮತ್ತು ಮೀನುಗಾರ ಸಮುದಾಯದ ವಿರೋಧ ಎದುರಾಯಿತು, ಪ್ರತಿಭಟನೆ ನಡೆಯಿತು. ಕರಾವಳಿಯನ್ನು ಹಾಳು ಮಾಡುತ್ತಾರೆ ಎಂಬ ಆರೋಪಿಸಲಾಯಿತು. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಈ ಯೋಜನೆಯ ಪರಿಣಾಮವನ್ನು ಮೇಲ್ವಿಚಾರಣೆ ಮಾಡಿತು. ಯಾವುದೇ ಪರಿಸರ ನಿಯಮ ಉಲ್ಲಂಘನೆಗಳು ಕಂಡುಬರಲಿಲ್ಲ. ನವೆಂಬರ್ 2022ರಲ್ಲಿ ಲ್ಯಾಟಿನ್ ಚರ್ಚ್ ಬೋರ್ಡ್ ಸದಸ್ಯರು ತಮ್ಮ ಬ್ಯಾಂಕ್ ಖಾತೆಗಳಿಗೆ ವಿದೇಶಿ ಹಣಕಾಸು ನೆರವು ಪಡೆಯುತ್ತಿರುವುದು ಕಂಡುಬಂದಿತು, ಖಾತೆಗಳನ್ನು ಸ್ಥಗಿತಗೊಳಿಸುವುದಕ್ಕೆ ಹಿಂಸಾತ್ಮಕ ಪ್ರತಿಭಟನೆ ನಡೆದವು.
ಈಗ ಯೋಜನೆ ಪೂರ್ಣಗೊಂಡಿರುವುದರಿಂದ, ಎಲ್‌ಡಿಎಫ್ ಮತ್ತು ಯುಡಿಎಫ್ ಎರಡು ಸಹ ತಮ್ಮ ಶ್ರಮದ ಫಲ ಎಂದು ಹೇಳಲು ಹೋರಾಟ ಮಾಡುತ್ತಿವೆ. ಆದರೆ ಈ ಯೋಜನೆ ಯಶಸ್ವಿಯಾಗಲು ಕೇರಳದ ರಾಜಕೀಯ ಪಕ್ಷಗಳ ಪಕ್ವತೆ ಮತ್ತು ಬೆಂಬಲವೇ ಕಾರಣ.
ಸೆಪ್ಟೆಂಬರ್ 2017 - ಸಿಎಂ ಪೋರ್ಟ್‌ಗಳು ದಕ್ಷಿಣ ಕರಾವಳಿ ದ್ವೀಪದ ಹಂಬಂಟೋಟಾ ಬಂದರನ್ನು 99 ವರ್ಷಗಳಿಗೆ ಗುತ್ತಿಗೆ ಪಡೆದವು, ಇದು ತಕ್ಷಣ ವಿವಾದಕ್ಕೆ ಕಾರಣವಾಯಿತು. ಚೀನಾ ತನ್ನ ನೌಕಾಪಡೆ ಕಾರ್ಯಾಚರಣೆಗಳನ್ನು ಹಿಂದೂ ಮಹಾಸಾಗರದಲ್ಲಿ ಬಲಪಡಿಸಲು ಶ್ರೀಲಂಕಾದ ಹಂಬಂಟೋಟಾ ಬಂದರನ್ನು ಸ್ವಾಧೀನಪಡಿಸಿಕೊಳ್ಳಲು ಯೋಜನೆ ರೂಪಿಸಿತ್ತು. ಹಂಬಂಟೋಟಾ ಬಂದರಿನ ಜೊತೆಗೆ, ಈ ದೇಶಕ್ಕೆ ಚೀನಾ ತಾಂತ್ರಿಕ ಮತ್ತು ಆರ್ಥಿಕ ಸಹಾಯವನ್ನು ನೀಡುತ್ತದೆ, ಅಗತ್ಯದ ಸಮಯದಲ್ಲಿ ಭಾರತದ ವಿರುದ್ಧ ಅದರ ಪ್ರದೇಶವನ್ನು ಬಳಸಲು ಅನುಮತಿ ನೀಡುತ್ತದೆ.
ಸೆಪ್ಟೆಂಬರ್ 2021 - ಅದಾನಿ ಕೊಲಂಬೊ ಪೋರ್ಟ್ ಟರ್ಮಿನಲ್‌ನಲ್ಲಿ 700 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಿದರು. ಇದು ಶ್ರೀಲಂಕಾದ ಬಂದರಿನ ಉದ್ಯಮದಲ್ಲಿ ಇತಿಹಾಸದಲ್ಲೇ ಅತಿದೊಡ್ಡ ಹೂಡಿಕೆಯಾಗಿದೆ. ಈ ಪ್ರದೇಶಕ್ಕೆ ಭಾರತದ ಪ್ರವೇಶದ ಜೊತೆಗೆ ಚೀನಾವನ್ನು ಎದುರಿಸಿದಂತಾಯಿತು. ಭಾರತದ ಬೇರೆ ಯಾವುದೇ ಕಂಪನಿ ಶ್ರೀಲಂಕಾದಲ್ಲಿ ಹೂಡಿಕೆ ಮಾಡಲು ಇಚ್ಛೆ ಹೊಂದಿರಲಿಲ್ಲ.
ಫೆಬ್ರವರಿ 2023 - ಶ್ರೀಲಂಕಾ ಅದಾನಿಯ ವಿಂಡ್ ಪವರ್ ವಿದ್ಯುತ್ ಯೋಜನೆಗಳಿಗೆ 450 ಮಿಲಿಯನ್ ಡಾಲರ್ ಹೂಡಿಕೆಗಳಿಗೆ ಅನುಮತಿ ನೀಡಿತು.
ನವೆಂಬರ್ 2023 - ಅಮೆರಿಕ ಸರ್ಕಾರ ಬೆಂಬಲಿತ ಸಂಸ್ಥೆ ಡಿಎಫ್‌ಸಿ ಅದಾನಿ ಫೈನಾನ್ಸ್‌ನ ಕೊಲಂಬೊ ಟರ್ಮಿನಲ್‌ಗೆ 553 ಮಿಲಿಯನ್ ಡಾಲರ್ ಹೂಡಿಕೆ ಮಾಡಿತು. ಹಿಂಡೆನ್‌ಬರ್ಗ್ ವರದಿಯನ್ನು ಅಸಂಬದ್ಧ ಎಂದು ಹೇಳಿತು.
ಫೆಬ್ರವರಿ 2024 - ಪರಿಸರವಾದಿಗಳಿಂದ ಅದಾನಿ ವಿರುದ್ಧ ಭಾರಿ ಪ್ರತಿಭಟನೆಗಳು ಆರಂಭವಾದವು.
ಜೂನ್ 2024 - ಸುಪ್ರೀಂಕೋರ್ಟ್‌ನಲ್ಲಿ ಅದಾನಿ ವಿರುದ್ಧ ಮೊದಲ ಅರ್ಜಿ ಸಲ್ಲಿಕೆಯಾಗುತ್ತದೆ. ಇದರಲ್ಲಿ ವಿದ್ಯುತ್ ಯೋಜನೆಯ ಖರೀದಿ ಪ್ರಕ್ರಿಯೆ ಮತ್ತು ನಿರ್ಮಾಣವನ್ನು ಪ್ರಶ್ನಿಸಲಾಯಿತು. ಯೋಜನೆಗಳಿಂದ ಪರಿಸರಕ್ಕೆ ಆಗುವ ಪರಿಣಾಮಗಳ ಬಗ್ಗೆ ಪ್ರಶ್ನೆ ಎತ್ತಲಾಯಿತು. ಈ ಯೋಜನೆಗಳನ್ನು ಅದಾನಿಗೆ ನೀಡಿದ ಆಧಾರವನ್ನು ಪ್ರಶ್ನಿಸಲಾಯಿತು.
3. ಇಸ್ರೇಲ್‌ನಲ್ಲಿ
ಜನವರಿ 2023 - ಹೈಫಾ ಬಂದರು, ಇಸ್ರೇಲ್ - ಚೀನಾವನ್ನು ಹಿಂದಿಕ್ಕಿ ಅದಾನಿ ಹೈಫಾದ ಮೂಲ ಬಂದರನ್ನು ಪಡೆದುಕೊಂಡರು. ಇದು ಅದಾನಿ ಮತ್ತು ಭಾರತಕ್ಕೆ ದೊಡ್ಡ ಜಯವಾಗಿತ್ತು. ಏಕೆಂದರೆ ಇದು ಪೂರ್ವ ಮತ್ತು ಪಶ್ಚಿಮದ ಸಂಪರ್ಕದ ಸುಯೆಜ್ ಕಾಲುವೆಯ ಸಮೀಪದಲ್ಲಿತ್ತು. ಈಗಾಗಲೇ ಇಸ್ರೇಲ್‌ನಲ್ಲಿ ಚೀನಾದ ಎರಡು ಬಂದರುಗಳಿವೆ. ಅದಾನಿ ಮಾಲೀಕತ್ವದ ಹೈಫಾ ಬಂದರು ಚೀನಾದ ಶಾಂಘೈ ಅಂತಾರಾಷ್ಟ್ರೀಯ ಬಂದರು ಗ್ರೂಪ್ ನಿರ್ಮಿಸಿದ ಖಾಸಗಿ ಮಾಲೀಕತ್ವದ ಹೈಫಾ ಬೇಯ್ ಬಂದರಿನೊಂದಿಗೆ ಕಾರ್ಯನಿರ್ವಹಿಸುತ್ತಿದೆ, ಇದಕ್ಕೆ 25 ವರ್ಷಗಳ ನಿರ್ವಹಣಾ ಒಪ್ಪಂದವಾಗಿದೆ. ಈ ಗ್ರೂಪ್‌ನ ಹೈಫಾ ಬೇಯ್ಪೋರ್ಟ್ ಟರ್ಮಿನಲ್ ಸೆಪ್ಟೆಂಬರ್ 2021ರಲ್ಲಿ ಕಾರ್ಯಾರಂಭ ಮಾಡಿತು. ಚೀನಾದ ಒಂದು ಕಂಪನಿ ಅಶ್ಡೋಡ್ ಬಂದರಿನಲ್ಲಿ ಸರಕು ಟರ್ಮಿನಲ್ ಅನ್ನು ಕೂಡ ನಿರ್ವಹಣೆ ಮಾಡುತ್ತದೆ. ಆದರೆ ಅದು ಹೈಫಾದ ಟರ್ಮಿನಲ್‌ಗಳಷ್ಟು ಸಕ್ರಿಯವಾಗಿಲ್ಲ.
ಜನವರಿ 2023 - ಅದಾನಿ ಕುರಿತ ಹಿಂಡೆನ್‌ಬರ್ಗ್ ವರದಿ. ಮಹೇಶ್ ಜೇಠ್ಮಲಾನಿ ಅವರು ಚೀನಾದ ಸಂಪರ್ಕ ಹೊಂದಿರುವ ಒಬ್ಬ ಉದ್ಯಮಿ ಹಿಂಡೆನ್ ಬರ್ಗ್ ರಿಸರ್ಚ್ ಎಂಬ ಶಾರ್ಟ್ ಸೆಲ್ಲರ್ ಮೂಲಕ ವರದಿ ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿರು. ಇದರಿಂದ ಜನವರಿ 2023ರಲ್ಲಿ ಅದಾನಿ ಗ್ರೂಪ್‌ನ ಷೇರುಗಳಲ್ಲಿ ಕುಸಿತ ಉಂಟಾಯಿತು. ಜೇಠ್ಮಲಾನಿ ಹಿಂಡನ್ ಬರ್ಗ್ ಚೀನಾದ ಗೂಡಚಾರಿಯಾದ ಅನ್ಲಾ ಚೆಂಗ್ ಮತ್ತು ಅವರ ಪತಿ ಮಾರ್ಕ್ ಕಿಂಗ್ಡನ್ ಅವರನ್ನು ಅದಾನಿ ವಿರುದ್ಧದ ವರದಿ ತಯಾರಿಸಲು ನೇಮಿಸಿದ್ದಾರೆ ಎಂದು ಘೋಷಣೆ ಮಾಡಿದರು. ಅವರು ಕೋಟಕ್ ಮಹೀಂದ್ರ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್ (ಕೆಎಮ್‌ಐಎಲ್) ಅನ್ನು ಬಳಸಿಕೊಂಡು ಟ್ರೆಡಿಂಗ್ ಅಕೌಂಟ್ ಮಾಡಿ ಅದಾನಿ ಷೇರುಗಳನ್ನು ಕುಸಿತಗೊಳಿಸಿ ಚೀನಾಗೆ ಸಹಕಾರ ನೀಡಿದರು.
ಸ್ವತಂತ್ರ ಚೀನಾ ವ್ಯವಹಾರ, ಡಿಜಿಟಲ್ ಸುದ್ದಿ ಮತ್ತು ಕಾರ್ಯಕ್ರಮಗಳ ವೇದಿಕೆಯನ್ನು ಸ್ಥಾಪಿಸಿದ ನಂತರ ಚೆಂಗ್ 2016ರಲ್ಲಿ ಮುಖ್ಯ ವಾಹಿನಿಗೆ ಬಂದರು. ಇದು ಪಾಶ್ಚಾತ್ಯರಿಗಾಗಿ ಚೀನಾವನ್ನು ಆಳವಾಗಿ ಒಳಗೊಂಡಿರುವ ಕೆಲವು ಸ್ವತಂತ್ರವಾಗಿ ಹಣಕಾಸು ಹೊಂದಿದ ಇಂಗ್ಲಿಷ್ ಭಾಷೆಯ ಪ್ರಕಟಣೆಗಳಲ್ಲಿ ಒಂದು. 2022ರಲ್ಲಿ ಅಮೇರಿಕಾ-ಚೀನಾ ಸಂಬಂಧಗಳು ಹದಗೆಟ್ಟಾಗ ಇದನ್ನು ದಿ ಚೈನಾ ಪ್ರಾಜೆಕ್ಟ್ ಎಂದು ಮರುನಾಮಕರಣ ಮಾಡಲಾಯಿತು. ಇದರಲ್ಲಿ ಚೀನಾದ ಸುದ್ದಿ ಮತ್ತು ಪಾಡ್‌ಕಾಸ್ಟ್, ವೆಬ್‌ಸೈಟ್‌ನಲ್ಲಿ ವಿವಿಧ ಚೀನಾ ವಿಷಯಗಳ ಮೇಲಿನ ಲೇಖನಗಳು, ಚೈನಾ ಎಡ್ಜ್ ಸಮ್ಮೇಳನಗಳನ್ನು ಆಯೋಜಿಸುವುದು ಸೇರಿತ್ತು. ಚೆಂಗ್ ಅವರ ಮಾಧ್ಯಮ ಉದ್ಯಮ ಚೀನಾದ ಕಮ್ಯೂನಿಸ್ಟ್ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಗುಂಪು ಮತ್ತು ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಆರೋಪಿಸಲಾಯಿತು.
4 ತಾಂಜೇನಿಯಾ/ ಆಫ್ರಿಕಾದಲ್ಲಿ
ಮೇ 2024: ಅದಾನಿ ಆಫ್ರಿಕಾವನ್ನು ಚೀನಾದ ಪೋರ್ಟ್ ಕಂಪನಿ ಹಚಿನ್ಸನ್ ಪೋರ್ಟ್ ಹೋಲ್ಡಿಂಗ್ಸ್‌ನಿಂದ ಮೂಲಕ ದಾರ್ ಎಸ್ ಸಲಾಂ ಬಂದರನ್ನು ಖರೀದಿಸುವ ಮೂಲಕ ಆಫ್ರಿಕಾವನ್ನು ಪ್ರವೇಶಿಸಿದರು. ಮೂಲದ ಮಾಹಿತಿ ಪ್ರಕಾರ, ಚೀನಾದ ಹೆಚ್ಚುತ್ತಿರುವ ಪ್ರಭಾವದಿಂದ ತಾಂಜಾನಿಯಾ ಸರ್ಕಾರ ಅಸಮಾಧಾನಗೊಂಡಿತ್ತು, ಇದು ಮಾರಾಟಕ್ಕೆ ಪ್ರಮುಖ ಕಾರಣವಾಯಿತು.
ಆಫ್ರಿಕಾದ ಮೇಲೆ ಹೆಚ್ಚುತ್ತಿರುವ ಚೀನಾದ ನಿಯಂತ್ರಣವನ್ನು ಗಮನದಲ್ಲಿಟ್ಟುಕೊಂಡರೆ ಭಾರತಕ್ಕೆ ಈ ಕ್ರಮ ಮಹತ್ವದ್ದಾಗಿತ್ತು, ವಿಶೇಷವಾಗಿ ಆಫ್ರಿಕಾದ ಪೂರ್ವ ಕರಾವಳಿಯ ಮೇಲೆ, ಇದು ಪಾಶ್ಚಾತ್ಯ ಜಗತ್ತಿನೊಂದಿಗೆ ಭಾರತದ ವ್ಯಾಪಾರವನ್ನು ತಡೆಹಿಡಿಯಬಹುದಾಗಿತ್ತು. ಚೀನಾ ಫೆಬ್ರವರಿ 2016ರಲ್ಲಿ ಜಿಬೂಟಿಯಲ್ಲಿ ಮೊದಲ ವಿದೇಶಿ ನೌಕಾ ನೆಲೆ ಸ್ಥಾಪಿಸಿದೆ, ಕೆಂಪು ಸಮುದ್ರದ ಕಾರಿಡಾರ್‌ನಲ್ಲಿರುವ ಇದರಲ್ಲಿ ಸುಮಾರು 8 ಲಕ್ಷ ಜನರು ವಾಸಿಸುತ್ತಾರೆ. ಚೀನಾದ ಬ್ಯಾಂಕ್‌ಗಳು ಜಿಬೂಟಿಯ ಯೋಜನೆಗಳಿಗೆ ಪ್ರಮುಖ ಹಣಕಾಸು ನೆರವು ನೀಡಿವೆ ಇದು $20 ಬಿಲಿಯನ್‌ಗಿಂತ ಹೆಚ್ಚು ಮೌಲ್ಯದ್ದು ಎಂದು ಅಂದಾಜಿಸಲಾಗಿದೆ. ಯೋಜನೆಯು ರೈಲು, ರಸ್ತೆ ಮತ್ತು ಬಂದರು ಅಭಿವೃದ್ಧಿಯನ್ನು ಒಳಗೊಂಡಿದೆ. ಈ ಹೂಡಿಕೆ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಯುರೋಪಿಯನ್ ಒಕ್ಕೂಟ ಮತ್ತು ಇತರರೊಂದಿಗೆ ಹೊಂದಿರುವ ಒಟ್ಟು ಸಾಲಕ್ಕಿಂತ ಬಹಳಷ್ಟು ಹೆಚ್ಚು.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ), ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ ಯೋಜನೆ ಸವಾಲು ಎನಿಸುತ್ತದೆ. ಭಾರತ-ಮಧ್ಯಪ್ರಾಚ್ಯ-ಯೂರೋಪ್ ಆರ್ಥಿಕ ಮಾರ್ಗ ಏಷ್ಯಾ, ಪರ್ಷಿಯನ್ ಕೊಲ್ಲಿಯು ಮತ್ತು ಯೂರೋಪ್ ನಡುವೆ ಸಂಪರ್ಕ ಮತ್ತು ಆರ್ಥಿಕ ಏಕೀಕರಣವನ್ನು ಉತ್ತೇಜಿಸಲು ಉದ್ದೇಶಿಸಿದೆ. 2023ರ ಸೆಪ್ಟೆಂಬರ್ 10 ರಂದು, 2023 ನವದೆಹಲಿಯ ಜಿ-20 ಶೃಂಗಸಭೆಯಲ್ಲಿ ಅಮೆರಿಕ, ಯುಇಎ, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಜೋರ್ಡಾನ್ ಮತ್ತು ಯೂರೋಪಿಯನ್ ಯೂನಿಯನ್ ಸರ್ಕಾರಗಳು ಆರ್ಥಿಕ ಮಾರ್ಗ ನಿರ್ಮಾಣದ ಒಪ್ಪಂದಕ್ಕೆ ಸಹಿ ಹಾಕಿದವು. ಇದು ಭಾರತದಿಂದ ಯೂರೋಪ್‌ಗೆ ಯುಎಇ, ಸೌದಿ, ಇಸ್ರೇಲ್ ಮತ್ತು ಗ್ರೀಸ್ ಮೂಲಕ ಸಾಗಲಿದೆ. ಚೀನಾ ಕೀನ್ಯಾ, ಸುಡಾನ್ ಮತ್ತು ಈಜಿಪ್ಟ್ ಸೇರಿದಂತೆ ಇತರ ಪ್ರದೇಶಗಳಲ್ಲಿಯೂ ಬಂದರು ಹೊಂದಿದೆ.
5. ಮಯನ್ಮಾರ್‌ನಲ್ಲಿ
ಮೇ 2019: ಅದಾನಿ ಗ್ರೂಪ್ ಯಾಂಗೋನ್ ಪ್ರದೇಶದಲ್ಲಿ ಹೊಸ ಟರ್ಮಿನಲ್ ನಿರ್ಮಾಣ ಮಾಡಲು 290 ಮಿಲಿಯನ್ ಅಮೆರಿಕನ್ ಡಾಲರ್‌ಗಳವರೆಗೆ ಹೂಡಿಕೆ ಮಾಡುವುದಾಗಿ ಘೋಷಿಸಿತು. ಈ ಬಂದರು ಸೇನೆಯ ವಶದಲ್ಲಿರುವ ಭೂಮಿಯಲ್ಲಿ ನಿರ್ಮಾಣವಾಗಬೇಕಾಗಿತ್ತು. ದೇಶದ ಆಂತರಿಕ ರಾಜಕೀಯದಲ್ಲಿ ಸೇನಾ ಹಸ್ತಕ್ಷೇಪ ಒಳಗೊಂಡಿರುವ ಕಾರಣ ಇದು ಭಾರೀ ವಿರೋಧವನ್ನು ಎದುರಿಸಿತು. ಮಾನವ ಹಕ್ಕು ಉಲ್ಲಂಘನೆ ಆರೋಪಗಳ ನಂತರ, ಗ್ರೂಪ್ ಮೇ 2023ರಲ್ಲಿ ಬಂದರನ್ನು ಮಾರಟ ಮಾಡಲು ನಿರ್ಧರಿಸಿತು.
ಡಿಸೆಂಬರ್ 2023: ಮಯನ್ಮಾರ್ ಚೀನಾಗೆ ಕೌಕ್‌ಫ್ಯೂ ಬಂದರನ್ನು ನಿರ್ಮಿಸಲು ಅನುಮತಿ ನೀಡಿತು. ಈ ಯೋಜನೆಗಳು 2010ರಲ್ಲಿ ಪ್ರಾರಂಭವಾಗಿದ್ದವು. ಇದು ಚೀನಾಗೆ ಭಾರತದ ಮೇಲೆ ಭಾರತಕ್ಕೆ ಪೂರ್ವದಲ್ಲಿ (ಮಯನ್ಮಾರ್), ದಕ್ಷಿಣದಲ್ಲಿ (ಹಂಬಂಟೋಟಾ, ಶ್ರೀಲಂಕಾ), ಮತ್ತು ಪಶ್ಚಿಮದಲ್ಲಿ (ಗ್ವಾದರ್, ಪಾಕಿಸ್ತಾನ ಮತ್ತು ಜಿಬೌಟಿ ಬಂದರಿನಲ್ಲಿ ಸಂಪೂರ್ಣ ಪ್ರಮಾಣದ ನೌಕಾ ನಿಲ್ದಾಣ) ನೌಕಾ ನೆಲೆ ಹೊಂದಲು ಅನುಕೂಲ ಮಾಡಿಕೊಟ್ಟಿತು.
ಮಯನ್ಮಾರ್‌ನ ಕ್ಯಾಕ್‌ಫ್ಯೂ ಸೇನಾ ಅಭಿಯಾನದ ಮೂಲಕ ರೋಹಿಂಗ್ಯಾ, ಮುಸ್ಲಿಂ ಅಲ್ಪಸಂಖ್ಯಾತರನ್ನು ಹೊರಹಾಕಲು ಪ್ರಸಿದ್ಧವಾಗಿದೆ. ಅಲ್ಪಸಂಖ್ಯಾತರ ವಿರುದ್ಧ ಗಂಭೀರ ಮಾನವ ಹಕ್ಕು ಉಲ್ಲಂಘನೆಗಳನ್ನು ಮಾಡಲಾಗಿದೆ ಎಂದು ಚೀನಾದ ಮೇಲೆ ಆರೋಪಗಳಿವೆ. ರೋಹಿಂಗ್ಯಾಗಳು ಮಯನ್ಮಾರ್ ಬಂಧನ ಶಿಬಿರಗಳಿಗೆ ವಾಪಸ್ ಆಗುತ್ತಿದ್ದಾರೆ. ಮಾನವ ಹಕ್ಕು ಉಲ್ಲಂಘನೆ ಸೇರಿದಂತೆ ಯಾವುದೇ ನೈತಿಕ ಸಮಸ್ಯೆಗಳನ್ನು ಕಂಡುಬಂದಿಲ್ಲ.
6. ಬಾಂಗ್ಲಾದೇಶದಲ್ಲಿ
ಮಾರ್ಚ್ 2010 - ಚೀನಾ ಚಿಟಗಾಂಗ್‌ನಲ್ಲಿ ಆಳವಾದ ಸಮುದ್ರ ಬಂದರನ್ನು ಅಭಿವೃದ್ಧಿಪಡಿಸಲು ಬೆಂಬಲ ನೀಡಿತು.
ಆಗಸ್ಟ್ 2015 - ಅದಾನಿ ಗ್ರೂಪ್ 1600 ಮೆಗಾವಾಟ್ ಗೋಡ್ಡಾ ವಿದ್ಯುತ್ ಸ್ಥಾವರ ಯೋಜನೆಯನ್ನು ಭಾರತದ ನೆರೆ ಹೊರೆ ಮೇಲಿನ ಚೀನಾ ಪ್ರಭಾವಕ್ಕೆ ತಿರುಗೇಟು ನೀಡುವ ಪ್ರಧಾನಿಗಳ ಭೇಟಿ ಸಮಯದಲ್ಲಿ ಪ್ರಸ್ತಾಪಿಸಿತು. ಈ ಯೋಜನೆಗೆ ಭಾರತ ಮಾತ್ರವಲ್ಲ ಬಾಂಗ್ಲಾದೇಶದಲ್ಲಿಯೂ ಸಹ ಕಾರ್ಯಕರ್ತರು ಮತ್ತು ಎನ್‌ಜಿಒಗಳಿಂದ ವಿರೋಧ ಎದುರಾಯಿತು. ಅಂತಿಮವಾಗಿ 2023ರಲ್ಲಿ ಕಾರ್ಯಾರಂಭವಾಯಿತು.
ಅಕ್ಟೋಬರ್ 2016 - ಚೀನಾ ಢಾಕಾ ಜೊತೆ 26 ಒಪ್ಪಂದಗಳಿಗೆ ಸಹಿ ಹಾಕಿತು, ಅಧಿಕೃತವಾಗಿ ಬಾಂಗ್ಲಾದೇಶವನ್ನು ತನ್ನ ಪ್ರಮುಖ ಅಂತರಾಷ್ಟ್ರೀಯ ಮೂಲಸೌಕರ್ಯ ಕಾರ್ಯಕ್ರಮವಾದ ಬಿಆರ್‌ಐ ಭಾಗವನ್ನಾಗಿ ಮಾಡಿತು.
ಡಿಸೆಂಬರ್ 2020 ಮತ್ತು ಮೇ 2021 - ಚೀನಾದ 2640 ಮೆಗಾವಾಟ್ ಪಾಯ್ರಾ ವಿದ್ಯುತ್ ಯೋಜನೆ ಬಾಂಗ್ಲಾದೇಶದ ಅತಿದೊಡ್ಡ ಮತ್ತು 2023ರಲ್ಲಿ ಪ್ರತಿ ಯುನಿಟ್‌ಗೆ 18.37 ಟಕಾ ದರದಲ್ಲಿ ವಿದ್ಯುತ್ ಮಾರಾಟ ಮಾಡಿತು. ಆದರೆ ಅದಾನಿಯ ಗೋಡ್ಡಾ ವಿದ್ಯುತ್ ಯೋಜನೆ ಇದಕ್ಕಿಂತ ಕಡಿಮೆ ದರದಲ್ಲಿ ವಿದ್ಯುತ್ ಮಾರಾಟ ಮಾಡುತ್ತಿದೆ. 2023ರಲ್ಲಿ ಇದು ಪ್ರತಿ ಯುನಿಟ್‌ಗೆ 9.09 ಟಕಾ ದರದಲ್ಲಿ ವಿದ್ಯುತ್ ಮಾರಾಟ ಮಾಡಿತು.
7. ಇರಾನ್ ಮತ್ತು ಪಾಕಿಸ್ತಾನದಲ್ಲಿ
ಮೇ 2015 - ಇರಾನ್‌ನ ಚಾಬಹಾರ್ ಬಂದರು - ಈ ಬಂದರಿನ ಅಭಿವೃದ್ಧಿಗಾಗಿ ಭಾರತ ಒಪ್ಪಂದಕ್ಕೆ ಸಹಿ ಹಾಕಿತು ಮತ್ತು 23 ಮೇ 2016 ರಂದು, ಪ್ರಧಾನಿ ನರೇಂದ್ರ ಮೋದಿ ಇರಾನ್ ಭೇಟಿಯ ಸಂದರ್ಭದಲ್ಲಿ ಒಪ್ಪಂದ ಕಾರ್ಯಗತಗೊಳಿಸಲಾಯಿತು.
ಚೀನಾ-ಪಾಕಿಸ್ತಾನ ಮೈತ್ರಿ ಮತ್ತು ಚೀನಾದ ಬಹಳಷ್ಟು ಪ್ರಚಾರಿತವಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಮೇಲೆ ಭಾರತಕ್ಕೆ ಮಹತ್ವದ ಪ್ರಭಾವ ಮತ್ತು ತಂತ್ರಜ್ಞಾನ ಬಲವನ್ನು ನೀಡಲು ಉದ್ದೇಶಿತವಾಗಿದೆ. ಈ ಯೋಜನೆ ಭಾರತಕ್ಕೆ ಪಾಕಿಸ್ತಾನ ಸಂಪರ್ಕವಿಲ್ಲದೇ ಯುರೇಷಿಯಾದೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ, ಬೀಜಿಂಗ್‌ನ ಪ್ರಭಾವದಿಂದ ಪ್ರೇರಿತವಾಗಿರುವ ಪಾಕಿಸ್ತಾನವು ಪರಂಪರೆಯಿಂದಲೇ ಯುರೇಷಿಯಾವನ್ನು ನವದೆಹಲಿಯ ಸಂಪರ್ಕದಿಂದ ತಡೆಯುತ್ತಿದೆ.
ಚೀನಾ ಬಲೂಚಿಸ್ತಾನ್ ಪ್ರಾಂತ್ಯದ ಗ್ವಾದರ್ ಬಂದರಿನ ಅಭಿವೃದ್ಧಿಗೆ ಬಹಳಷ್ಟು ಹಣ ಹೂಡಿಕೆ ಮಾಡಿದೆ. ಇದು ಪಾಕಿಸ್ತಾನದ ಚಾಬಹಾರ್‌ನಿಂದ ಕೆಲವು ನೂರು ಕಿ. ಮೀ. ದೂರದಲ್ಲಿದೆ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅಡಿಯಲ್ಲಿ, ಇದು ಪ್ರಮುಖ ಯೋಜನೆಯಾಗಿದೆ.
ದಕ್ಷಿಣ ಏಷ್ಯಾದಲ್ಲಿ ಚೀನಾದಿಂದ ನಿರ್ವಹಿಸಲ್ಪಡುವ ಮೂರು ಬಂದರುಗಳು - ಬಾಂಗ್ಲಾದೇಶದ ಚಿಟಗಾಂ, ಶ್ರೀಲಂಕಾದ ಹಂಬಂಟೋಟಾ ಮತ್ತು ಪಾಕಿಸ್ತಾನದ ಗ್ವಾದರ್ ಭಾರತವನ್ನು ಸುತ್ತುವರೆದಿರುವ 'ತ್ರಿಕೋನ' ಎಂದು ಕರೆಯಲಾಗುತ್ತದೆ.
ಹಿಂದೂ ಮಹಾಸಾಗರದಲ್ಲಿ ಚೀನಾದ ಬಂದರು ಹೂಡಿಕೆಗಳು (2021 ಆಗಸ್ಟ್ 19 ರಂದು) ನಂತರ, ಅದಾನಿ ಚೀನಾ ಸಂಸ್ಥೆಯಿಂದ ದಾರ್ ಎಸ್ ಸಲಾಮ್ ಬಂದರನ್ನು ಪಡೆದುಕೊಂಡಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications