ಮತದಾರನ ಅಳೆದಿದ್ದ ಸಮೀಕ್ಷೆ ಹೇಳಿದ್ದೇನು, ಆಗಿದ್ದೇನು?

ಆದರೆ ನಾಲ್ಕೂ ರಾಜ್ಯಗಳ ಚುನಾವಣೆಗಳು ಘೋಷಣೆಯಾಗುವುದಕ್ಕೂ ಸಾಕಷ್ಟು ಮುನ್ನವೇ ಅಂದರೆ ಕಳೆದ ಆರೇಳು ತಿಂಗಳಿಂದ ಮಾಧ್ಯಮಗಳು ಒಂದೇ ಸಮನೆ ಚುನಾವಣಾ ಸಮೀಕ್ಷೆಗಳನ್ನು ನಿರಂತರವಾಗಿ ಬಿತ್ತರಿಸತೊಡಗಿದವು. ಕೊನೆಗೆ ಡಿ. 4ರಂದು ದಿಲ್ಲಿ ಮತದಾನ ಮುಗಿಯುತ್ತಿದ್ದಂತೆ ಒಟ್ಟೂ ರಾಜ್ಯಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಫಲಿತಾಂಶ ಇಷ್ಟೇ ಕಣಣ್ಣೋ ಎಂದು exit poll ಸಹ ಪ್ರಕಟಿಸಿತು.
ಫಲಿತಾಂಶಗಳು ಹೊರಬೀಳುತ್ತಿರುವ ಇಂದಿನ ಸಂದರ್ಭದಲ್ಲಿ ಈ exit poll ಮತ್ತು poll surveyಗಳನ್ನು ಪರಾಮರ್ಶಿಸಿದಾಗ ಮತ್ತೊಮ್ಮೆ ಸಮೀಕ್ಷೆಗಳದ್ದೇ ಮೇಲುಗೈ ಎಂಬುದು ಸಾಬೀತಾಗಿದೆ. ಈ ಮಧ್ಯೆ, ತನಗೆ ವ್ಯತಿರಿಕ್ತವಾಗಿರುವ ಸಮೀಕ್ಷೆಗಳು ಬೇಡ್ವೇ ಬೇಡ ಎಂದು ಕಾಂಗ್ರೆಸ್ ಮತ್ತು ಜೆಡಿಯು ಪಕ್ಷಗಳು ಚುನಾವಣಾ ಆಯೋಗವನ್ನು ಅವಲತ್ತುಕೊಳ್ಳೂವ ಕೆಲಸಬೂ ನಡೆಯಿತು. ಒಂದು ರೀತಿಯಲ್ಲಿ ಇದು ಇಂಡಿಯಾ ಟುಡೇ, ಸಿವೋಟರ್ (ಜಂಟಿಯಾಗಿ), ಐಬಿಎನ್, ದಿ ವೀಕ್, ಸಿಎಸ್ಡಿಎಸ್ (ಜಂಟಿಯಾಗಿ), ಎನ್ ಡಿಟಿವಿ, ನೀಲ್ಸೇನ್, ಟುಡೇಸ್ ಚಾಣಕ್ಯ ನಡೆಸಿದ exit poll ಮತ್ತು poll surveyಗಳ ಫಲಿತಾಂಶವೂ ಆಗಿದೆ.
ದೆಹಲಿ ಮತ್ತು ಛಿತ್ತೀಸ್ ಗಢದಲ್ಲಿ (ಇನ್ನೂ ಪೂರ್ಣ ಫಲಿತಾಂಶ ಪ್ರಕಟವಾಗಬೇಕಿದೆ) exit poll ಸಮೀಕ್ಷೆ ಸ್ವಲ್ಪ ಮಟ್ಟಿಗೆ ವ್ಯತಿರಿಕ್ತವಾಗಿದೆ. ಆದರೆ ನಿರಂತರವಾಗಿ ಪ್ರಕಟವಾಗುತ್ತಿದ್ದ poll surveyಗಳು ಮಾತ್ರ ಕರಾರುವಕ್ಕಾಗಿ ಪೂರ್ವ ಸಮೀಕ್ಷೆ ಮಾಡಿಮುಗಿಸಿವೆ. ಇಂದು ಅವುಗಳ ಫಲಿತಾಂಶವನ್ನು ಓರೆಗೆ ಹಚ್ಚಿದಾಗ ಪ್ರಮುಖ ಸಮೀಕ್ಷೆಗಳು ಏನು ಹೇಳಿದ್ದವು ಎಂಬುದನ್ನು ಖುದ್ದಾಗಿ ನೀವೇ ಪರಾಮರ್ಶಿಸಿ.












Click it and Unblock the Notifications