ದೇಶವನ್ನು ಬೆಚ್ಚಿಬೀಳಿಸಿದ ಪತ್ರಕರ್ತನ ಹತ್ಯೆ: ರಾಜಕಾರಣಿಗಳ ಕಂಬನಿ

ಶ್ರೀನಗರ, ಜೂನ್ 15: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಜೂನ್ 15 ರಂದು ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ 'ರೈಸಿಂಗ್ ಕಾಶ್ಮೀರ್' ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಹತ್ಯೆಗೆ ಹಲವು ರಾಜಕಾರಣಿಗಳು ಕಂಬನಿ ಮಿಡಿದಿದ್ದಾರೆ.

ಮಾಧ್ಯಮ ವಲಯದಲ್ಲಿ ಈ ಹತ್ಯೆ ತೀವ್ರ ಆಘಾತವನ್ನುಂಟು ಮಾಡಿದೆ. 18 ವರ್ಷದ ಹಿಂದೆಯೂ ಒಮ್ಮೆ ದಾಳಿಗೊಳಗಾಗಿದ್ದ ಶುಜಾತ್ ಅವರಿಗೆ ಅಂದಿನಿಂದ ರಕ್ಷಣೆ ನೀಡಲಾಗಿತ್ತು. ಇಬ್ಬರು ರಕ್ಷಣಾ ಸಿಬ್ಬಂದಿಯ ಜೊತೆಯಲ್ಲೇ ಇದ್ದ ಶುಜಾತ್ ಅವರ ಮೇಲೆ ನಿನ್ನೆ ದಾಳಿ ನಡೆಸಿದ ದುಷ್ಕರ್ಮಿಗಳು ಅವರನ್ನು ಹತ್ಯೆಗೈಯ್ದಿದ್ದಾರೆ. ಅವರೊಂದಿಗಿದ್ದ ರಕ್ಷಣಾ ಸಿಬ್ಬಂದಿಗೂ ತೀವ್ರ ಗಾಯವಾಗಿದ್ದು, ಆಸ್ಪತ್ರೆಗೆ ರವಾನಿಸಲಾಗಿದೆ.

ಘಟನೆ ಕುರಿತು ತೀವ್ರ ಸಂಪಾತ ಸೂಚಿಸಿರುವ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ, ಮೃತ ಪತ್ರಕರ್ತ ಶುಜಾತ್ ಕುಟುಂಬದ ಜನರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. "ಈ ಘಟನೆ ನಿಜಕ್ಕೂ ನನಗೆ ತೀವ್ರ ಆಘಾತ ತಂದಿದೆ. ಕೆಲವೇ ದಿನಗಳ ಹಿಂದೆ ಅವರು ನನ್ನನ್ನು ಭೇಟಿಯಾಗಲು ಬಂದಿದ್ದರು" ಎಂದು ಸಂತಾಪ ತೋಡಿಕೊಂಡಿದ್ದಾರೆ ಮುಫ್ತಿ.

Array

ರಾಜನಾಥ್ ಸಿಂಗ್ ಶ್ರದ್ಧಾಂಜಲಿ

ಶುಜಾತ್ ಹತ್ಯೆ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್, ಇದೊಂದು ಹೇಡಿತನದ ಕೃತ್ಯ. ಕಾಶ್ಮೀರದಲ್ಲಿ ಧೈರ್ಯವಾಗಿ ದನಿ ಎತ್ತುವವರ ಧ್ವನಿಯನ್ನು ಅಡಗಿಸುವ ಯತ್ನ ಇದು. ಅವರು ಒಬ್ಬ ಧೈರ್ಯವಂತ ಮತ್ತು ನಿರ್ಭೀತ ಪತ್ರಕರ್ತರಾಗಿದ್ದರು. ಈ ಘಟನೆ ನನಗೆ ಆಘಾತವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ನನ್ನ ಪ್ರಾರ್ಥನೆ ಎಂದು ಟ್ವೀಟ್ ಮಾಡಿದ್ದಾರೆ.

Array

ರಾಹುಲ್ ಗಾಂಧಿ ಸಂತಾಪ

"ಶುಜಾತ್ ಬುಖಾರಿ ಅವರ ಹತ್ಯೆಯ ಕುರಿತು ಕೇಳಿ ನನಗೆ ಅತ್ಯಂತ ಬೇಸರವಾಗಿದೆ. ಅವರೊಬ್ಬ ಧೈರ್ಯವಂತ ಪತ್ರಕರ್ತ. ನ್ಯಾಯ ಮತ್ತು ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡುವ ಸಲುವಾಗಿ ನಿರ್ಭೀತವಾಗಿ ಹೋರಾಡಿದವರು ಬುಖಾರಿ. ನಾವು ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಅವರು ಕಾಶ್ಮೀರದ ಗಟ್ಟಿ ಧ್ವನಿಯಾಗಿದ್ದರು!

"ಶುಜಾತ್ ಬುಖಾರಿ ಮತ್ತು ನಾನು ಇಬ್ಬರೂ ಸಹೋದ್ಯೋಗಿಗಳಾಗಿದ್ದೆವು. ಅವರೊಬ್ಬ ಪ್ರತಿಭಾವಂತ ವರದಿಗಾರರು. ಮತ್ತು ರೈಸಿಂಗ್ ಕಾಶ್ಮೀರದ ಸಂಪಾದಕರಾಗಿ, ಒಂದು ಶಕ್ತಿಶಾಲಿ ಧ್ವನಿಯಾಗಿದ್ದವರು. ವಿವೇಚನೆ ಮತ್ತು ವಿವೇಕದ ನಿಜವಾದ ಧ್ವನಿ. ಅವರನ್ನು ಕೊಂದವರನ್ನು ಹೇಗೆ ತೆಗಳುವುದು ಎಬುದಕ್ಕೆ ಶಬ್ದಗಳು ಸಿಗುತ್ತಿಲ್ಲ" ಎಂದಿದ್ದಾರೆ ಸಿದ್ಧಾರ್ಥ ಎಂಬುವವರು.

ಹತ್ಯೆ ಸುದ್ದಿಯಿಂದ ಅತ್ಯಂತ ಆಘಾತ

ಶುಜಾತ್ ಅವರ ಹತ್ಯೆಯ ಕುರಿತು ಕೇಳಿ ಆಘಾತವಾಯಿತು. ಅವರು ಯಾವುದೇ ವಿಷಯವನ್ನು ಒಪ್ಪಿಕೊಳ್ಳಲಿ, ಬಿಡಲಿ ಯಾವಾಗಲೂ ವಿನಯದಿಂದ ಇರುತ್ತಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು. ಇಂದು ನಾವು ಸಾಕಷ್ಟು ದರಿದ್ರರಾಗುತ್ತಿದ್ದೇವೆ ಎಂದಿದ್ದಾರೆ ಅಶೋಕ್ ಮಲೀಕ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+