ಕರ್ನಾಟಕದಲ್ಲಿ ಸಿಜೆ ರಾಯ್ ಸಾವು, ಕೇರಳ ರಾಜಕೀಯದಲ್ಲಿ ಶುರುವಾಯ್ತು ಸಂಚಲನ... Political Repercussions
ಕರ್ನಾಟಕ ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಉದ್ಯಮಗಳಲ್ಲಿ ದೊಡ್ಡ ಹೆಸರು ಮಾಡಿದ್ದ & ಜಗತ್ತಿನ ಹಲವು ಭಾಗದಲ್ಲಿ ಬ್ಯುಸಿನೆಸ್ ಹೊಂದಿದ್ದ ಉದ್ಯಮಿ ಸಿ.ಜೆ. ರಾಯ್ ಸಾವಿನ ಸುದ್ದಿ ಭಾರಿ ದೊಡ್ಡ ಕಲಹ ಎಬ್ಬಿಸಿದೆ. ಕಾನ್‌ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್ ಆತ್ಮಹತ್ಯೆ ಕೇಸ್ ಇದೀಗ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಾವಿರಾರು ಕೋಟಿ ರೂಪಾಯಿ ಆಸ್ತಿ ಹೊಂದಿದ್ದ, ಅತ್ಯಂತ ಶ್ರೀಮಂತ ಉದ್ಯಮಿಗಳ ಪೈಕಿ ಒಬ್ಬರಾಗಿದ್ದ ಸಿ.ಜೆ. ರಾಯ್ ಮೇಲೆ ಐಟಿ ದಾಳಿ ಆಗಿತ್ತು. ಈ ಸಮಯದಲ್ಲಿ ತಮಗೆ ತಾವೇ ಗುಂಡು ಹಾರಿಸಿಕೊಂಡು ಸಿ.ಜೆ. ರಾಯ್ ಆತ್ಮಹತ್ಯೆಗೆ ಶರಣಾಗಿ ಸಂಚಲನ ಸೃಷ್ಟಿಸಿದ್ದರು. ಇದೀಗ ಕೇರಳದಲ್ಲೂ ಈ ವಿಚಾರ ರಾಜಕೀಯ ಬಿರುಗಾಳಿ ಎಬ್ಬಿಸಿದೆ.
ಪದೇ ಪದೇ ಉದ್ಯಮಿಗಳ ಆತ್ಮಹತ್ಯೆ ಹಾಗೂ ಸಾವಿನ ಸುದ್ದಿಗಳು ಭಾರಿ ದೊಡ್ಡ ಚರ್ಚೆಗೆ ಇದೀಗ ವೇದಿಕೆ ಒದಗಿಸಿದೆ. ದೇಶದಲ್ಲಿ ಉದ್ಯಮಿಗಳಿಗೆ ಸ್ವಾತಂತ್ರ್ಯ ಇಲ್ಲ ಎಂಬ ಆರೋಪವನ್ನು ಕೂಡ, ವಿರೋಧ ಪಕ್ಷಗಳ ನಾಯಕರು ಮಾಡುತ್ತಿದ್ದಾರೆ. ಅದರಲ್ಲೂ ಇನ್ನೇನು ಕೆಲವೇ ದಿನಗಳಲ್ಲಿ ಭಾರಿ ಹೈವೋಲ್ಟೇಜ್ ವಿಧಾನಸಭೆ ಚುನಾವಣೆ ನಡೆಯಲಿರುವ, ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ ಕೂಡ ಸಿ.ಜೆ. ರಾಯ್ ಸಾವಿನ ಸುದ್ದಿ ಬಿರುಗಾಳಿ ಎಬ್ಬಿಸಿದೆ. ಕರ್ನಾಟಕದಲ್ಲಿ ಸಿ.ಜೆ. ರಾಯ್ ಅವರ ಸಾವು ಸಂಭವಿಸಿತ್ತು, ಈ ವಿಚಾರವಾಗಿ ಇದೀಗ ಕೇರಳ ಸಿಎಂ ಮಹತ್ವದ ಡಿಮ್ಯಾಂಡ್ ಇಟ್ಟಿದ್ದಾರೆ.

ಸಿ.ಜೆ. ರಾಯ್ ಪರ ಕೇರಳ ಸಿಎಂ
ಕೇರಳ ಮೂಲದ ನಂಟು ಹೊಂದಿದ್ದರೂ ಕನ್ನಡ ನಾಡಿನಲ್ಲಿ ದೊದ್ದ ಉದ್ಯಮ ಕಟ್ಟಿ, ಕನ್ನಡ ನಾಡಿನವರೇ ಆಗಿ ಹೋಗಿದ್ದ ಉದ್ಯಮಿ ಸಿ.ಜೆ. ರಾಯ್ ಅವರ ಸಾವು ಕೇರಳದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಆದಾಯ ತೆರಿಗೆ ಇಲಾಖೆ ತನಿಖೆ ನಡುವೆಯೇ, ಕರ್ನಾಟಕದ ಶ್ರೀಮಂತ ರಿಯಲ್ ಎಸ್ಟೇಟ್ ಡೆವಲಪರ್ಸ್ ಪೈಕಿ ಒಬ್ಬರ ಸಾವಿನ ಸುದ್ದಿ ಈಗ ನೆರೆ ರಾಜ್ಯ ಕೇರಳದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ವಿಚಾರವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸುತ್ತಾ, ದೇಶದ ತೆರಿಗೆ ಆಡಳಿತದ ಮೇಲಿನ ಒಂದು ಕಳಂಕ ಎಂದು ಆರೋಪ ಮಾಡಿದ್ದಾರೆ. ಅಲ್ಲದೆ ಇದು ರಾಜ್ಯದ ಜನ, ವ್ಯಾಪಾರ ಸಮುದಾಯ & ನಾಗರಿಕ ಸಮಾಜದಲ್ಲಿ ಆಘಾತ ಮತ್ತು ದುಃಖ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದ ಪತ್ರದಲ್ಲಿ ವಿಜಯನ್ ಬೇಸರ ಹೊರ ಹಾಕಿದ್ದಾರೆ.
ನ್ಯಾಯಾಂಗ ತನಿಖೆಗೆ ಕೇರಳ ಸಿಎಂ ಒತ್ತಾಯ
ಕಾನ್‌ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ ಕೇರಳ ರಾಜ್ಯದವರೆಗೂ ತಲುಪಲು ಕಾರಣ ಇದೆ, ಅದೇನೆಂದರೆ ಸಿ.ಜೆ. ರಾಯ್ ಅವರು ಮೂಲತಃ ಕೇರಳದವರು. ಇದರ ಜೊತೆಗೆ ಕೇರಳದಲ್ಲಿ ವಿರೋಧ ಪಕ್ಷಗಳ ಒಕ್ಕೂಟದ ಸರ್ಕಾರ ಅಧಿಕಾರದಲ್ಲಿದೆ, ಈ ಸಮಯದಲ್ಲೇ ಕೇಂದ್ರ ಸರ್ಕಾರದ ವಿರುದ್ಧ ಸಿ.ಜೆ. ರಾಯ್ ಅವರ ಆತ್ಮಹತ್ಯೆ ಘಟನೆ ಒಂದು ಪ್ರಮುಖ ಅಸ್ತ್ರವೇ ಆಗಿ ಹೋಗುತ್ತಿದೆ. ಕೇರಳ ವಿಧಾನಸಭೆಗೆ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದೆ, ಇಂತಹ ಮಹತ್ವದ ಸಂದರ್ಭದಲ್ಲಿ ಕೇರಳ ಸರ್ಕಾರ ಖುದ್ದಾಗಿ ಈ ಘಟನೆ ಬಗ್ಗೆ ತನಿಖೆಗೆ ಆಗ್ರಹ ಮಾಡುತ್ತಿದೆ. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇಂದ್ರ ಹಣಕಾಸು ಸಚಿವರಿಗೆ ಬರೆದ ಪತ್ರದಲ್ಲಿ, ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ವಿರುದ್ಧವೂ ವಿಜಯನ್ ಅಸ್ತ್ರ?
ಒಂದೆಡೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿದ್ದರೆ, ಇನ್ನೊಂದು ಕಡೆ ಸಿ.ಜೆ. ರಾಯ್ ಗುಂಡು ಹಾರಿಸಿಕೊಂಡು ಜೀವ ಕಳೆದುಕೊಂಡಿದ್ದು ಬೆಂಗಳೂರಿನಲ್ಲಿ. ಹೀಗಿದ್ದಾಗ ನ್ಯಾಯಾಂಗ ತನಿಖೆಗಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುವ ಮೂಲಕ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ವಿಚಾರವಾಗಿ ಕೇರಳ ರಾಜಕೀಯ ನಾಯಕರ ನಡುವೆ ದೊಡ್ಡ ವಾಗ್ವಾದ ಕೂಡ ಶುರುವಾಗಿದ್ದು, ಈ ವಿಚಾರ ಕೇರಳ ಚುನಾವಣೆ ಮುಗಿಯುವ ತನಕ ಇನ್ನಷ್ಟು ಕಿಚ್ಚು ಹೊತ್ತಿಸುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications