Get Updates
Get notified of breaking news, exclusive insights, and must-see stories!

ವೈಯಕ್ತಿಕ ಬದುಕಿನಂತೆಯೇ ರಾಜಕೀಯ ಜೀವನದಲ್ಲೂ ಸಂಕೀರ್ಣ ಸಂಬಂಧಕ್ಕೆ ಕೈಚಾಚಿದ ನಟ ಪವನ್‌ ಕಲ್ಯಾಣ್‌

ಪ್ರಧಾನಿ ನರೇಂದ್ರ ಮೋದಿ ಹಾಗೂ ಪವರ್‌ಸ್ಟಾರ್‌ ಪವನ್‌ ಕಲ್ಯಾಣ್‌ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತೆಲಂಗಾಣದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಪವನ್‌ ಕಲ್ಯಾಣ್‌ ಆಂಧ್ರ ಪ್ರದೇಶದಲ್ಲಿ ಟಿಡಿಪಿ ಜೊತೆ ಸಂಬಂಧ ಬೆಳೆಸಿದ್ದಾರೆ. ಇದು ತೆಲುಗು ಭಾಷಿಗ ರಾಜ್ಯಗಳಲ್ಲಿ ಬಹುದೊಡ್ಡ ರಾಜಕೀಯ ಚರ್ಚೆಯನ್ನೇ ಹುಟ್ಟುಹಾಕಿದೆ.

ಜನಸೇನೆ ನಾಯಕ ಪವನ್ ಕಲ್ಯಾಣ್ ಅವರು ಹೈದರಾಬಾದ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಕಾಣಿಸಿಕೊಂಡರು. ಮಹತ್ವದ ಬೆಳವಣಿಗೆಯೊಂದರಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜನಸೇನೆ ಮೈತ್ರಿಕೂಟವು ಸ್ಪರ್ಧಿಸಲಿದೆ. ಬಿಜೆಪಿಯು ಜನಸೇನೆಗೆ ಎಂಟು ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.

Political Analysis: Relationship Status of PM Modi, Pawan Kalyan, Chandrababu Naidu is Complicated

ಇದೇ ಪವನ್‌ ಕಲ್ಯಾಣ್‌ ಅವರು ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅವರೊಂದಿಗೆ ಸಂಬಂಧ ಬೆಳೆಸಿದ್ದಾರೆ. ಕಳೆದ ತಿಂಗಳು ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ ಬಳಿಕ ಪವನ್‌ ಕಲ್ಯಾಣ್‌ ಅವರು ಆಂಧ್ರ ಸಿಎಂ ಜಗನ್‌ ಮೋಹನ್‌ ರೆಡ್ಡಿ ವಿರುದ್ಧ ಗುಡುಗುತ್ತಲೇ ಬಂದಿದ್ದಾರೆ. ಆಂಧ್ರದಲ್ಲಿ ಜಗನ್‌ ಅವರನ್ನು ಎದುರಿಸಲು ಚಂದ್ರಬಾಬು ನಾಯ್ಡು ಜೊತೆ ನಿಲ್ಲುವುದಾಗಿ ತಿಳಿಸಿದ್ದಾರೆ.

ಆಂಧ್ರದ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಜಗನ್‌ ಅವರನ್ನು ಸೋಲಿಸಲಿವೆ ಎಂದು ಪವನ್‌ ಕಲ್ಯಾಣ್ ಹೇಳಿದ್ದಾರೆ. ರಾಜಮಂಡ್ರಿ ಜೈಲಿನಲ್ಲಿದ್ದ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಲು ಸಿನಿಮೀಯ ಶೈಲಿಯಲ್ಲಿ ಪವನ್‌ ಕಲ್ಯಾಣ್‌ ತೆರಳಿದ್ದರು.

2024 ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಮತ್ತು ತೆಲುಗು ದೇಶಂ ಪಕ್ಷ ಒಟ್ಟಾಗಿ ಹೋರಾಡಲಿದೆ ಎಂದು ಘೋಷಿಸಿದ್ದಾರೆ.

Political Analysis: Relationship Status of PM Modi, Pawan Kalyan, Chandrababu Naidu is Complicated

ನಾವು ಎನ್‌ಡಿಎ ( ಬಿಜೆಪಿ ನೇತೃತ್ವದ ಮೈತ್ರಿಕೂಟ ) ಭಾಗವಾಗಿ ಈಗಲೂ ಉಳಿದಿದ್ದೇವೆ. ಆಂಧ್ರದಲ್ಲಿ ಜಗನ್‌ ಅವರನ್ನು ಸೋಲಿಸಲು ನಾನು ಈ ಮೈತ್ರಿಕೂಟವನ್ನು ತ್ಯಜಿಸಲು ಸಿದ್ದನಾಗಿದ್ದೇನೆ. ಬಿಜೆಪಿ ಬಯಸಿದರೇ ಟಿಡಿಪಿ-ಜನಸೇನೆ ಎನ್‌ಡಿಎ ಮೈತ್ರಿಕೂಟಕ್ಕೆ ಸೇರಬಹುದು. ನಾವು ಮೂವರೂ ಒಟ್ಟಾಗಿ ಜಗನ್‌ ವಿರುದ್ಧ ಹೋರಾಡಬಹುದು ಎಂದು ಪವನ್‌ ಕಲ್ಯಾಣ್‌ ಹೇಳಿದ್ದಾರೆ.

ಬಿಜೆಪಿಗೆ ಹತ್ತಿರವಾಗುತ್ತಿರುವ ಜಗನ್‌

ಆಂಧ್ರ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಅವರು ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯೊಂದಿಗೆ ಅವರು ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಪ್ರಧಾನಿ ಮೋದಿ ಅವರೂ ಸಹ ಜಗನ್‌ ಜೊತೆ ಸ್ನೇಹಕ್ಕೆ ಒಲವು ತೋರಿಸಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಒಂದು ವೇಳೆ, ಜಗನ್‌ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡರೆ, ಪವನ್‌ ಕಲ್ಯಾಣ್‌ ಅವರ ನಡೆ ಏನಾಗಿರಬಹುದು ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.

ಬಿಜೆಪಿಗೆ ಕೈಕೊಟ್ಟಿದ್ದ ಚಂದ್ರಬಾಬು ನಾಯ್ಡು

ಅಖಂಡ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು 2014 ರಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ತೊರೆದರು. 2018 ರ ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಸಖ್ಯ ಬೆಳೆಸಿದರು. ಈ ಹಿನ್ನೆಲೆಯಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಮತ್ತೊಮ್ಮೆ ನಂಬಲು ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ. ಚಂದ್ರಬಾಬು ನಾಯ್ಡು ಅವರು ಬಿಜೆಪಿ ನಾಯಕರ ಜೊತೆ ಮೈತ್ರಿ ಕುರಿತು ಹಲವು ಬಾರಿ ಮಾತುಕತೆ ನಡೆಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.

Political Analysis: Relationship Status of PM Modi, Pawan Kalyan, Chandrababu Naidu is Complicated

ಪವನ್‌ ಕಲ್ಯಾಣ್‌- ಸಂಕೀರ್ಣ ವ್ಯಕ್ತಿತ್ವದ ಮಾಸ್‌ ನಟ

ಪವನ್‌ ಕಲ್ಯಾಣ್‌ ಅವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುವುದಾದರೆ, ಅಲ್ಲೊಂದು ಸಂಕೀರ್ಣ ವ್ಯಕ್ತಿತ್ವ ಗೋಚರವಾಗುತ್ತದೆ. ಅವರು ವೈಯಕ್ತಿಕ ಹಾಗೂ ಸಾಮಾಜಿಕ ಬದುಕನ್ನು ಪ್ರತ್ಯೇಕವಾಗಿ ನೋಡುವುದಿಲ್ಲವೆಂಬುದು ಅರಿವಿಗೆ ಬರುತ್ತದೆ. ಅವರು ಎಲ್ಲವನ್ನೂ ಸಿನಿಮೀಯ ಶೈಲಿಯಲ್ಲಿಯೇ ಮಾಡಲು ಹೋಗುತ್ತಾರೆ. ತೆಲುಗು ಭಾಷಿಗ ರಾಜ್ಯಗಳಲ್ಲಿ ಪವನ್‌ ಕಲ್ಯಾಣ್‌ ಅವರಿಗೆ ಜನಪ್ರಿಯತೆ ಇದ್ದರೂ, ಅವರು ರಾಜಕೀಯವಾಗಿ ಈ ವರೆಗೆ ಸಫಲರಾಗಿಲ್ಲ ಎಂಬುದೇ ದುರಂತ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+