ಜೈಪುರ-ಮುಂಬೈ ಎಕ್ಸ್‌ಪ್ರೆಸ್ ರೈಲು: ಪೇದೆಯಿಂದ ಅಮಾಯಕರ ಕೊಲೆ, ಮೃತರ ಕುಟುಂಬಸ್ಥರ ಆಕ್ರಂದನ, ಪರಿಹಾರಕ್ಕೆ ಒತ್ತಾಯ
ನವದೆಹಲಿ, ಆಗಸ್ಟ್ 02: ಮಹಾರಾಷ್ಟ್ರದ ಫಾಲ್ಘರ್ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್‌ನಲ್ಲಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಅಧಿಕಾರಿ ಚೇತನ್ ಸಿಂಗ್ ತನ್ನ ಹಿರಿಯ, ಎಎಸ್‌ಐ ಟಿಕಾ ರಾಮ್ ಮೀನಾ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಕೊಂದಿದ್ದಾನೆ. ಮೃತಪಟ್ಟವರಲ್ಲಿ ಮೂವರು ಪ್ರಯಾಣಿಕರು ಎಂದು ತಿಳಿದು ಬಂದಿದೆ. ಮೃತಪಟ್ಟವರು ಯಾರು, ಈ ಭೀಕರ ಘಟನೆ ವಿವರ ಇಲ್ಲಿದೆ.
ಗುಂಡಿನ ದಾಳಿಗೆ ಮೃತಪಟ್ಟವರ ಪೈಕಿ ಸೈಯದ್ ಸೈಫುಲ್ಲಾ, ಅಬ್ದುಲ್ ಖಾದಿರ್ ಮೊಹಮ್ಮದ್ ಮತ್ತು ಅಸ್ಗರ್ ಶೇಖ್ ಎಂಬ ಮೂವರು ಪ್ರಯಾಣಿಕರಾಗಿದ್ದಾರೆ. ಅಸ್ಗರ್ ಕೆಲಸ ಹುಡುಕಿಕೊಂಡು ಮುಂಬೈಗೆ ತೆರಳುತ್ತಿದ್ದರು. ಇತ್ತ ಸೈಯದ್ ಮುಂಬೈ ಮೂಲಕ ಹೈದರಾಬಾದ್‌ಗೆ ಪ್ರಯಾಣ ಬೆಳಸಿದ್ದರು. ಹೋಗುತ್ತಿದ್ದ. ಅಬ್ದುಲ್ ಖಾದರ್ ಈ ತಿಂಗಳು ದುಬೈಗೆ ಹೋಗುವ ಚಿಂತನೆಯಲ್ಲಿದ್ದ ಎಂದು ಘಟನೆ ಬಳಿಕ ಮೃತರ ಕುಟುಂಬಸ್ಥರಿಂದ ವಿಚಾರ ಪೊಲೀಸರಿಗೆ ಗೊತ್ತಾಗಿದೆ.

ಸೈಯದ್ ಸೈಫುಲ್ಲಾ ಇವರು ಆರ್‌ಪಿಎಫ್ ಪೊಲೀಸ್ ಚೇತನ್ ಸಿಂಗ್ ನಿಂದ ಹತ್ಯೆಗೀಡಾಸ ನಾಲ್ಕನೇ ವ್ಯಕ್ತಿ. ಇವರು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದು, ಹೈದರಾಬಾದ್ ಒಂದು ಗ್ರಾಮದಲ್ಲಿ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಈಗ ಮೊಬೈಲ್ ಅಂಗಡಿಯ ಮಾಲೀಕರೊಂದಿಗೆ ಅಜ್ಮೀರ್ ಶರೀಫ್ ದರ್ಗಾಕ್ಕೆ ಭೇಟಿ ನೀಡಿ ಅಜ್ಮೀರ್‌ನಿಂದ ಹಿಂತಿರುಗುತ್ತಿದ್ದರು ಎಂದು ತಿಳಿದು ಬಂದಿದೆ.
ಮೃತರಿಗೆ ಪರಿಹಾರ ನೀಡುವಂತೆ ತೆಲಂಗಾಣ ಸಿಎಂಗೆ ಆಗ್ರಹ
ಮೃತರ ಪೈಕಿ ಸೈಯದ್ ಸೈಫುಲ್ಲಾ ಅವರ ಸಾವಿನಿಂದ ಅವರ ಕುಟುಂಬ ದುಸ್ಥಿತಿಯಲ್ಲಿದೆ. ಹೀಗಾಗಿ ಅವರ ಕುಟುಂಬಕ್ಕೆ ನೆರವಾಗುವಂತೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರಿಗೆ ಆಗ್ರಹಿಸಿದ್ದಾರೆ.
ಇನ್ನೂ ಕೆಲಸ ಹುಡುಕಿಕೊಂಡು ಮುಂಬೈಗೆ ತೆರಳುತ್ತಿದ್ದ ಮೃತ 48 ವರ್ಷದ ಅಸ್ಗರ್ ಶೇಖ್ ಅದೇ ರೈಲಿನಲ್ಲಿ ಪ್ರಯಾಣ ಬೆಳಸಿದ್ದರು. ಇವರು ಮೂಲತಃ ಬಿಹಾರದ ಮಧುಬನಿ ಜಿಲ್ಲೆಯವರಾಗಿದ್ದು, ಮೂರು ವರ್ಷಗಳಂದ ಜೈಪುರದಲ್ಲಿ ಬಳೆ ತಯಾರು ಮಾಡುತ್ತಾ ಜೀವನ ಸಾಗಿಸುತ್ತಿದ್ದರು. ಆದರೆ ಈ ಆದಾಯ ಜೀವನಕ್ಕೆ ಸಾಕಾಗದ್ದರಿಂದ ಅವರು ಮುಂಬೈನಲ್ಲಿ ಕೆಲಸ ಹುಡುಕಿಕೊಂಡು ಹೊರಟಿದ್ದರು. ಈ ವೇಳೆ ನಡೆದ ಘಟನೆಯಿಂದ ಸಾವಿಗೀಡಾಗಿದ್ದಾರೆ.

ಪತ್ನಿಗೆ ಸರ್ಕಾರಿ ನೌಕರಿ ನೀಡಿ
ಅದೇ ರೀತಿ ಮತ್ತೊಬ್ಬ ಪ್ರಯಾಣಿಕ ಅಸ್ಗರ್ ಶೇಖ್ ಮೃತ ದುರ್ದೈವಿಯು ಪತ್ನಿ, ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಅವರು ಕುಟುಂಬಸ್ಥರು ಕಣ್ಣೀರಾಗಿದ್ದು, ಪರಿಹಾರ ಹಾಗೂ ಪತ್ನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಓವೈಸಿ ಒತ್ತಾಯಿಸಿದ್ದಾರೆ.
ಆರೋಪಿ ಚೇತನ್ ಸಿಂಗ್ ಗುಂಡಿಗೆ ಬಲಿಯಾದ ನಾಲ್ವರಲ್ಲಿ ಒಬ್ಬರಾದ ಅಬ್ದುಲ್ ಖಾದಿರ್ ಮೊಹಮ್ಮದ್, ಇವುರ 25 ವರ್ಷದಿಂದ ಮಹಾರಾಷ್ಟ್ರ ರಾಜ್ಯದ ನಾಲಾ ಸೊಪಾರಾದಲ್ಲಿ ವಾಸಿಸುತ್ತಿದ್ದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಸೊಸೆ ಮೊಮ್ಮಕ್ಕಳು ಇದ್ದಾರೆ. ಅಬ್ದುಲ್ ಉದ್ಯಮಿ ಆಗಿದ್ದು, ಮೊಹರಂಗೆಂದು ಸ್ವಂತ ಗ್ರಾಮಕ್ಕೆ ಭಾನುಪುರಕ್ಕೆ ಬಂದಿದ್ದ ವೇಳೆ ರೈಲಿನಲ್ಲಿ ಗುಂಡಿಗೆ ಬಲಿಯಾಗಿದ್ದಾರೆ.
ಹತ್ಯೆ ಘಟನೆಯ ವಿವರ
ಸೋಮವಾರ ಮಹಾರಾಷ್ಟ್ರದ ಫಾಲ್ಘರ್ ರೈಲು ನಿಲ್ದಾಣದ ಬಳಿ ಜೈಪುರ-ಮುಂಬೈ ಸೆಂಟ್ರಲ್ ರೈಲು ಎಂದಿನಂತೆ ಸಂಚಾರ ನಡೆಸಿತ್ತು. ಈ ವೇಳೆ ರೈಲಿನಲ್ಲಿ ಪೊಲೀಸ್ ಪೇದೆ ಚೇತನ್ ಸಿಂಗ್ ಈತ ಎಸ್ಕಾರ್ಟ್ ಡ್ಯೂಟಿ ಇನ್‌ಚಾರ್ಜ್ ಎಎಸ್‌ಐ ಟಿಕಾ ರಾಮ್ ಮೀನಾ ರನ್ನು ಗುಂಡಿಕ್ಕಿ ಹತ್ತೆ ಮಾಡಿದ ಕೊಂದಿದ್ದಾನೆ. ಅಷ್ಟೇ ಅಲ್ಲದೇ ಬೇರೊಂದು ಕೋಚ್‌ಗೆ ತೆರಳಿ ಮೂವರು ಪ್ರಯಾಣಿಕರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ನಂತರ ಭಯಗೊಂಡ ಪ್ರಯಾಣಿಕರು ಮೀರಾ ರೋಡ್ ನಿಲ್ದಾಣದ ಬಳಿ ರೈಲಿನ ಚೈನ್ ಅನ್ನುಎಳೆದಿದ್ದಾರೆ. ಈ ವೇಳೆ ಆರೋಪ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆತನನ್ನು ಪಿಸ್ತೂಲ್ ಸಮೇತ ಬಂಧಿಸಿದ್ದಾರೆ.
ಸದ್ಯ ಆತನನ್ನು ವಿಚಾರಣೆ ನಡೆಸಿದ್ದು, 15 ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.












Click it and Unblock the Notifications