ಓಯೋ ರೂಮ್‌ನಲ್ಲಿ ಮಾಡಬಾರದ್ದನ್ನ ಮಾಡಿ ತಗ್ಲಾಕೊಂಡ ಪ್ರೇಮಿಗಳು
OYO Rooms: ಓಯೋ ರೂಮ್ಸ್ ಇದೀಗ ದೇಶಾದ್ಯಂತ ಟ್ರೆಂಡ್‌ನಲ್ಲದೆ. ತುಂಬಾ ಪ್ರೇಮಿಗಳು, ಯುವಕರು ಯುವತಿಯರ ತಾಣವಾಗಿಬಿಟ್ಟಿದೆ ಎನ್ನುವ ಮಾತಿದೆ. ಮತ್ತೊಂದೆಡೆ ನೋಡೋದಾದ್ರೆ, ದೂರದ ಊರುಗಳಿಂದ ಬಂದವರಿಗೆ ಅತೀ ಕಡಿಮೆ ವೆಚ್ಚದಲ್ಲಿ ತಂಗಲು ಇದು ಸೂಕ್ತವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದೇ ಓಯೋ ರೂಮ್ಸ್‌ನಲ್ಲಿ ಪ್ರೇಮಿಗಳಿಬ್ಬರು ಮಾಡಬಾರದ್ದನ್ನ ಮಾಡಿ ಪೊಲೀಸರ ಕೈಗೆ ತಗ್ಲಾಕೊಂಡ ಘಟನೆ ನಡೆದಿದೆ.
ಓಯೋ ಅಂದಾಕ್ಷಣ ಬಹುತೇಕ ಮಂದಿ ತಲೆಗೆ ಮೊದಲು ಬರುವುದೇ ಇದನ್ನು ಅನೈತಿಕ ಚಟುವಟಿಕೆಗಾಗಿ ಬಳಸಿಕೊಳ್ಳುತ್ತಾರೆ ಎನ್ನುವುದು. ಆದರೆ, ಮತ್ತೊಂದು ಒಳ್ಳೆಯ ದೃಷ್ಟಿಯಲ್ಲಿ ನೋಡೋದಾದ್ರೆ, ದೂರದ ಊರುಗಳಿಂದ ಬಂದಂಥವರಿಗೆ ಕಡಿಮೆ ವೆಚ್ಚದಲ್ಲಿ ತಂಗಲು ಇದು ತುಂಬಾ ಸಹಾಯಕ ಆಗಿದೆ ಅಂತಲೂ ಹೇಳಬಹುದು. ಆದರೆ, ಕೆಲವರು ಪ್ರೇಮಿಗಳೆಂದು ಹೇಳಿಕೊಂಡು ತಂಗುವ ನೆಪದಲ್ಲಿ ಅನೈತಿಕ ಕೆಲಸಗಳಿಗೆ ಕೈಹಾಕುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ಅಂತರರಾಜ್ಯ ಪ್ರೇಮಿಗಳಿಬ್ಬರು ತುಂಬಾ ದುಡ್ಡು ಮಾಡಿ ಐಶಾರಾಮಿ ಜೀವನ ಸಾಗಿಸೋಣ ಎನ್ನುವ ಯೋಜನೆ ಹಾಕಿಕೊಂಡು ಮಾಡಿ ಗಾಂಜಾ ವ್ಯಾಪಾರ ಶುರು ಮಾಡಿದ ಘಟನೆ ನಡೆದಿದೆ. ಈ ಕಳ್ಳ ಜೋಡಿ ಪೊಲೀಸರ ಕೈಗೆ ಸಿಗದೇ ಇರಲು ಓಯೋ ರೂಮ್‌ನಲ್ಲಿ ಉಳಿದುಕೊಂಡು ಅಲ್ಲಿಂದಲೇ ಗಾಂಜಾ ದಂಧೆ ಆರಂಭ ಮಾಡಿ ಇದೀಗ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾರೆ.
ಇದರ ಸುಳಿವು ಸಿಕ್ಕ ಕೂಡಲೇ ಪೊಲೀಸರು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಹೈದರಾಬಾದ್ ನಗರದ ಕೊಂಡಾಪುರದ ಓಯೋ ರೂಮ್ಸ್‌ನಲ್ಲಿ ನಡೆದಿದೆ. ಇದೀಗ ಯುವಕ ಹಾಗೂ ಯುವತಿಯನ್ನ ಎಸ್‌ಟಿಎಫ್ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಎಸ್‌ಟಿಎಫ್ ಅಧಿಕಾರಿ ನಂದ್ಯಾಲ ಅಂಜಿರೆಡ್ಡಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆ ಕವಾಲಿಯ ದೇವೆಂದೂಲ ರಾಜು (25) ಮಧ್ಯಪ್ರದೇಶದ ಸಂಜನಾ ಮಂಜ (18) ಬಂಧಿತರಾಗಿದ್ದಾರೆ. ಇವರು ಭೇಟಿಯಾದ ಕೆಲವೇ ದಿನಗಳಲ್ಲಿ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬಳಿಕ ಹಣ ಗಳಿಸುವ ಯೋಜನೆ ರೂಪಿಸಿದ್ದು, ಒಯೋ ರೂಮ್‌ಗಳನ್ನು ಬಾಡಿಗೆಗೆ ತೆಗೆದುಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಇವರಿಬ್ಬರು ಕೊಂಡಾಪುರದ ಓಯೋ ರೂಮ್‌ನಲ್ಲಿ ತಂಗಿದ್ದು, ತುಂಬಾ ದಿನಗಳಿಂದ ಗಾಂಜಾ ದಂಧೆ ನಡೆಸುತ್ತಿದ್ದರು. ಶುಕ್ರವಾರ ರಾತ್ರಿ ಎಸ್‌ಟಿಎಫ್ ತಂಡ ತಪಾಸಣೆ ನಡೆಸಿ ದಾಳಿ ನಡೆಸಿದೆ. ಇಬ್ಬರೂ ಬೇರೆ ಬೇರೆ ಕಡೆಯಿಂದ ಗಾಂಜಾ ತಂದು ಓಯೋ ಕೊಠಡಿಯಿಂದ ಗಾಂಜಾ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಓಯೋ ರೂಮ್ಸ್ ತೆರೆದಿರುವುದು ಒಳ್ಳೆಯ ಉದ್ದೇಶಕ್ಕೆ ಆದರೂ, ಕೆಲವರು ಇದನ್ನೇ ಬಂಡವಾಳ ಪ್ರೇಮಿಗಳೆಂದು ಹೇಳಿಕೊಂಡು ಅಲ್ಲೇ ತಂಗಿ ಅನೈತಿಕ ಚಟುವಟಿಕೆಗೆ ಇಳಿಯುತ್ತಿರುವುದು ಬೆಳಕಿಗೆ ಬರುತ್ತಿದೆ. ಹೀಗೆ ಯಾರೋ ಕೆಲವು ಮಂದಿ ಮಾಡುವ ತಪ್ಪಿನಿಂದ ಕಡಿಮೆ ವೆಚ್ಚದಲ್ಲಿ ರೂಮ್ಸ್ ಸಗುತ್ತದೆವೆಂದು ಓಯೋ ಕೊಠಡಿಗೆ ತಂಗಲು ಬಂದಂತಹ ಹಾಗೂ ಬರುವಂತಹವರಿಗೆ ಸಂಕಷ್ಟ ಎದುರಾದಂತಾಗಿದೆ. ಈಗಾಗಲೇ ದೇಶದ ಹಲವೆಡೆ ಓಯೋ ರೂಮ್ಸ್‌ಗೆ ಅವಿವಾಹಿತರಿಗೆ ಪ್ರವೇಶ ನಿರ್ಬಂಧದ ನಿಯಮ ಹೊರಡಿಸಲಾಗಿದೆ. ಈ ನಿಯಮವನ್ನು ಎಲ್ಲಾ ಕಡೆ ಜಾರಿ ಮಾಡಬೇಕೆಂಬ ಕೂಗುಗಳು ಕೇಳಿಬರುತ್ತಿವೆ.












Click it and Unblock the Notifications