ಬಿಪಿಎಲ್ ಕಾರ್ಡ್‌ದಾರರಿಗೆ ಗ್ಯಾಸ್ ಸಂಪರ್ಕ, ಸ್ಟವ್, ಸಿಲಿಂಡರ್ ಉಚಿತ.. ಇಲ್ಲಿದೆ ವಿವರ

LPG Gas: ದೇಶದಲ್ಲಿ ಸೌದೆ ಒಲೆ ಬಳಸಿ ಅಡುಗೆ ಮಾಡುತ್ತಿರುವ ಬಡ ಕುಟುಂಬಗಳಿಗೆ ಎಲ್‌ಪಿಜಿ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೊಳಿಸಿದೆ. ಪ್ರಸ್ತುತ ಈ ಯೋಜನೆಯ ಎರಡನೇ ಹಂತವಾದ 2.0 ಜಾರಿಯಲ್ಲಿದ್ದು, ಅರ್ಹ ಮಹಿಳೆಯರಿಗೆ ಉಚಿತವಾಗಿ ಎಲ್‌ಪಿಜಿ ಸಂಪರ್ಕವನ್ನು ನೀಡಲಾಗುತ್ತಿದೆ.

ಪ್ರಸ್ತುತ ಯೋಜನೆಯ ಎರಡನೇ ಹಂತವಾದ ಉಜ್ವಲ 2.0 ಮೂಲಕ ಅರ್ಹ ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ವ್ಯವಸ್ಥೆ ಮುಂದುವರೆದಿದೆ. ಗ್ಯಾಸ್ ಸಂಪರ್ಕ ಇಲ್ಲದ ಕುಟುಂಬಗಳ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದು. ಆದರೆ ಸೌಲಭ್ಯಗಳ ಲಭ್ಯತೆ ಮತ್ತು ವಿತರಣೆ ಸಂಬಂಧಿತ ಅಧಿಕೃತ ನಿಯಮಗಳಿಗೆ ಒಳಪಟ್ಟಿರುತ್ತದೆ.

PM Ujjwala Yojana 2 0 Get Free LPG Gas Cylinder Connection Stove and RS 300 Subsidy in India

ಯೋಜನೆಯ ಪ್ರಮುಖ ಸೌಲಭ್ಯಗಳು

* ಉಚಿತ ಗ್ಯಾಸ್ ಸಂಪರ್ಕ: ಯೋಜನೆಯಡಿ ಬರುವ ಅರ್ಹ ಮಹಿಳೆಯರಿಗೆ ಯಾವುದೇ ಹಣ ಇಲ್ಲದೆ ಹೊಸ ಎಲ್‌ಪಿಜಿ ಸಂಪರ್ಕ ದೊರೆಯುತ್ತದೆ.

* ಸರ್ಕಾರದ ನಿಯಮದ ಪ್ರಕಾರ ಫಲಾನುಭವಿಗೆ ಮೊದಲ ಬಾರಿ ಅಡುಗೆ ಅನಿಲದ ಸಿಲಿಂಡರ್ ಮತ್ತು ಗ್ಯಾಸ್ ಸ್ಟವ್ ಉಚಿತವಾಗಿ ಸಿಗುತ್ತದೆ.

* ಯೋಜನೆಯ ಫಲಾನುಭವಿಗಳಿಗೆ ರೀಫಿಲ್ ಮಾಡಿಸುವ ಪ್ರತಿ ಸಿಲಿಂಡರ್‌ಗೆ ₹300 ಸಹಾಯಧನ (ಸಬ್ಸಿಡಿ) ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆಯಾಗುತ್ತದೆ.

ಅರ್ಹತಾ ಮಾನದಂಡಗಳು

* ಅರ್ಜಿ ಸಲ್ಲಿಸುವ ಅರ್ಜಿದಾರರು ಕಡ್ಡಾಯವಾಗಿ ಮಹಿಳೆಯಾಗಿರಬೇಕು ಹಾಗೂ ಕನಿಷ್ಠ 18 ವರ್ಷ ತುಂಬಿರಬೇಕು.
* ಅರ್ಜಿದಾರರ ಕುಟುಂಬದಲ್ಲಿ ಯಾವುದೇ ಎಲ್‌ಪಿಜಿ ಸಂಪರ್ಕ ಹೊಂದಿರಬಾರದು.
* ಬಿಪಿಎಲ್ ಕುಟುಂಬಗಳು, ಎಸ್‌ಸಿ/ಎಸ್‌ಟಿ (SC/ST), ಪ್ರಧಾನಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳು, ಅಂತ್ಯೋದಯ ಯೋಜನೆ ಮತ್ತು ಇತರೆ ಹಿಂದುಳಿದ ವರ್ಗಗಳ ಬಡ ಕುಟುಂಬದ ಮಹಿಳೆಯರು ಅರ್ಹರಾಗಿರುತ್ತಾರೆ.

ಅಗತ್ಯವಿರುವ ದಾಖಲೆಗಳು

ಅರ್ಜಿ ಸಲ್ಲಿಸುವ ಮಹಿಳೆಯರು ಆಧಾರ್ ಕಾರ್ಡ್, ಪಡಿತರ ಚೀಟಿ, ಬ್ಯಾಂಕ್ ಖಾತೆ ವಿವರಗಳು, ವಿಳಾಸದ ಪುರಾವೆ ಹಾಗೂ ಅಗತ್ಯ ಘೋಷಣಾ ಪತ್ರವನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಅರ್ಜಿಯ ಸಂದರ್ಭದಲ್ಲಿ ತೈಲ ಕಂಪನಿ ಕೇಳುವ ಕೆವೈಸಿ ದಾಖಲೆಗಳನ್ನೂ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

* ಮೊದಲು ಪ್ರಧಾನಮಂತ್ರಿ ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್ https://www.pmuy.gov.in/ujjwala2.htmlಗೆ ಭೇಟಿ ನೀಡಿ.
* ಕಂಪನಿ ಆಯ್ಕೆ ಮಾಡಿ.
* ಪೋರ್ಟಲ್‌ನಲ್ಲಿ ಕಾಣಿಸುವ 'Apply for New Ujjwala 2.0 Connection' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. * ಅಲ್ಲಿ ಕಾಣಿಸುವ ಮೂರು ಪ್ರಮುಖ ತೈಲ ಸಂಸ್ಥೆಗಳಾದ ಇಂಡೇನ್ (Indane), ಭಾರತ್ ಗ್ಯಾಸ್ (Bharatgas), ಅಥವಾ ಎಚ್‌ಪಿ ಗ್ಯಾಸ್ (HP Gas) ಇವುಗಳಲ್ಲಿ ನಿಮಗೆ ಸೂಕ್ತ ಎನಿಸುವ ಕಂಪನಿಯನ್ನು ಆಯ್ಕೆ ಮಾಡಿ.
* ಅರ್ಜಿ ಭರ್ತಿ ಹಾಗೂ ದಾಖಲೆ ಅಪ್‌ಲೋಡ್ ಮಾಡಿ.
* ಆಯ್ಕೆ ಮಾಡಿದ ಕಂಪನಿಯ ಅಧಿಕೃತ ಪೋರ್ಟಲ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ವಿಳಾಸ, ಆಧಾರ್ ಮತ್ತು ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ.
* ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಿ.

ಗ್ರಾಹಕರಿಗೆ ಮಹತ್ವಸ ಸೂಚನೆ

ಅರ್ಜಿ ಸಲ್ಲಿಕೆಯಾದ ನಂತರ ಸಂಬಂಧಪಟ್ಟ ಸ್ಥಳೀಯ ಗ್ಯಾಸ್ ವಿತರಕರು ನಿಮ್ಮ ದಾಖಲೆಗಳು ಮತ್ತು ಅರ್ಹತೆಯನ್ನು ಪರಿಶೀಲಿಸುತ್ತಾರೆ. ದಾಖಲೆಗಳು ಸರಿಯಾಗಿದ್ದಲ್ಲಿ, ನಿಮ್ಮ ಹೆಸರಿಗೆ ಸಂಪರ್ಕ ಮಂಜೂರಾಗುತ್ತದೆ. ಆದರೆ ಹೊಸ ಗ್ಯಾಸ್ ಸಂಪರ್ಕ ಪಡೆಯಲು ಯಾವುದೇ ಮಧ್ಯವರ್ತಿಗಳು ಅಥವಾ ದಲ್ಲಾಳಿಗಳಿಗೆ ಹಣ ನೀಡಬೇಡಿ. ಆನ್‌ಲೈನ್ ಮೂಲಕ ಸ್ವತಃ ಅರ್ಜಿ ಸಲ್ಲಿಸಿ ಅಥವಾ ನೇರವಾಗಿ ನಿಮ್ಮ ಸಮೀಪದ ಅಧಿಕೃತ ಗ್ಯಾಸ್ ವಿತರಕರ ಬಳಿ ತೆರಳಿ ಉಚಿತವಾಗಿ ಮಾಹಿತಿ ಹಾಗೂ ಸೌಲಭ್ಯ ಪಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+