PM Surya Ghar Scheme: ಒಂದೇ ವರ್ಷದಲ್ಲಿ ಯೋಜನೆಗೆ ಭರ್ಜರಿ ಸ್ಪಂದನೆ: 10 ಲಕ್ಷ ಘಟಕ ಸ್ಥಾಪನೆ, ನೀವು ಅರ್ಜಿ ಹಾಕಿ
ನವದೆಹಲಿ, ಮಾರ್ಚ್ 12: ಕೇಂದ್ರ ಸರ್ಕಾರ ಜಾರಿಗೆ ತಂದ ಮಹತ್ವದ 'ಪಿಎಂ ಸೂರ್ಯ ಘರ್ ಯೋಜನೆ'ಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ವಿಶ್ವದ ಅತಿ ದೊಡ್ಡ ಸೌರ ಶಕ್ತಿ ಯೋಜನೆ ಎಂಬ ಹೆಗ್ಗಳಿಕೆ ಇರುವ ಈ ಯೋಜನೆಯಡಿ ಮನೆ ಮೇಲ್ಛಾವಣಿಯಲ್ಲಿ ಸೌರ ವಿದ್ಯುತ್ ಉತ್ಪಾದನಾ ಘಟಕ ಅಳವಡಿಕೆಯಲ್ಲಿ ಮೈಲಿಗಲ್ಲು ಸಾಧನೆ ಆಗಿದೆ. 10 ಲಕ್ಷ ಸೌರ ಮೇಲ್ಛಾವಣಿ ಸ್ಥಾಪನೆ ಆಗಿವೆ ಎಂದು ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.
ದೇಶದ ನಾಗರಿಕರಿಗೆ ಅನುಕೂಲವಾಗುವಂತೆ, ವಿದ್ಯುತ್ ಸಮಸ್ಯೆ ತೆಲದೂರದಂತೆ ತಡೆಯಲು ಜೊತೆಗೆ ಹಣ ಉಳಿತಾಯವಾಗುವ ಯೋಜನೆಯನ್ನು ಪ್ರಧಾನಿ ಮೋದಿಯವರು 2024ರ ಫೆಬ್ರವರಿಯಲ್ಲಿ ಜಾರಿಗೆ ತಂದರು. ಇದರಡಿ ನೀವು ನಿಮ್ಮ ಮನೆ, ವಾಣಿಜ್ಯ ಕಟ್ಟಡದ ಮೇಲೆ ಸೌರ ವಿದ್ಯುತ್ ಘಟಕ ಸ್ಥಾಪಿಸಿದಲ್ಲಿ ನೀವು ದೀರ್ಘ ಕಾಲದವರೆಗೆ ಆದಾಯ ಗಳಿಸಬಹುದು. ಇದಕ್ಕಾಗಿ ನೀವು ಬ್ಯಾಂಕ್ ಹಾಗೂ ಸರ್ಕಾರಿ ಹಣಕಾಸು ಮೂಲಗಳಿಂದ ಕಡಿಮೆ ಬಡ್ಡಿಗೆ ಸಾಲ ಪಡೆಯಬಹುದು.

ಕೇವಲ ₹15 ಸಾವಿರ ಹೂಡಿಕೆ ಲಕ್ಷ ಲಕ್ಷ ಆದಾಯ
ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯಡಿ ನೀವು 3 ಕಿಲೋ ವ್ಯಾಟ್ ಉತ್ಪಾದನೆ ವಿದ್ಯುತ್ ಘಟಕ ಸ್ಥಾಪನೆಗೆ ಕೇಲವ ₹15,000 ಕ್ಕಿಂತ ಕಡಿಮೆ ಹಣ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ನೀವು ಬಳಕೆ ಮಾಡಿಕೊಂಡು ಉಳಿಯುವ ವಿದ್ಯುತ್ ಅನ್ನು ಪುನಃ ಸರ್ಕಾರಕ್ಕೆ ಹಣಕ್ಕೆ ಮಾರಾಟ ಮಾಡಬಹುಸು. ಹೀಗೆ 25 ವರ್ಷ ಮಾಡಿದಲ್ಲಿ ನೀವು ಬರೋಬ್ಬರಿ ₹15 ಲಕ್ಷದವರೆಗೆ ಆದಾಯ ಗಳಿಸಬಹುದೆಂದು ಸಚಿವರು ವಿವರಿಸಿದರು.
ಯೋಜನೆಯಡಿ 10 ಲಕ್ಷ ಮೇಲ್ಚಾವಣಿ ಹೂಡಿಕೆ ಆಗಿದೆ. ಕೇಂದ್ರ ಸರ್ಕಾರ ಒಟ್ಟು 1 ಕೋಟಿ ಮನೆಗಳಿಗೆ ಸೌರ ಮೇಲ್ಛಾವಣಿ ಅಳವಡಿಕೆ, ಉಚಿತ ವಿದ್ಯುತ್ ಒದಗಿಸುವ ಗುರಿ ಹೊಂದಿದೆ. 12 ಸಾರ್ವಜನಿಕ ವಲಯದ ಬ್ಯಾಂಕ್ ಗಳ (PSB) ಮೂಲಕ ₹2 ಲಕ್ಷವರೆಗಿನ ಸಾಲಗಳಿಗೆ ಶೇ.6.75 ಸಬ್ಸಿಡಿ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುತ್ತದೆ. ಇದರ ಪಾವತಿ ಅವಧಿಯು ದೀರ್ಘಕಾಲದವರೆಗೆ ಇರುತ್ತದೆ.

ಈ ಯೋಜನೆಯಡಿ ಸೌರ ವಿದ್ಯುತ್ ಸ್ಥಾಪಿಸಲು ಆಸಕ್ತಿ ಇರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಈವರೆಗೆ 3.10 ಲಕ್ಷ ಅರ್ಜಿಗಳು ಸಲ್ಲಿಕೆ ಆಗಿವೆ. ಆಕಾಂಕ್ಷಿತರಿಂದ ಸಾಲದ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಹಣಕಾಸು ಸಂಸ್ಥೆಗಳು 1.58 ಲಕ್ಷ ಘಟಕ ಸ್ಥಾಪನೆಗೆ ಈಗಾಗಲೇ ಸಾಲ ಮಂಜೂರು ಮಾಡಿದೆ. 1.28 ಲಕ್ಷ ಫಲಾನುಭವಿಗಳೂ ಸಾಲ ಪಡೆದು ಸೌರ ಘಟಕ ಸ್ಥಾಪಿಸಿದ್ದಾರೆ ಎಂದು ಸಚಿವರು ಅಂಕಿ ಸಂಖ್ಯೆ ನೀಡಿದ್ದಾರೆ.
ಸಚಿವಾಲಯಕ್ಕೆ ಸಲ್ಲಿಕೆಯಾದ ಒಟ್ಟು ಅರ್ಜಿಗಳು?
ಸೌರ್ ವಿದ್ಯುತ್ ಘಟಕ ನಿರ್ಮಾಣದ ಅರಿವು ಹೊಂದಿರುವವರು ಒಟ್ಟು 47.3 ಲಕ್ಷ ಅರ್ಜಿಗಳನ್ನು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಸಲ್ಲಿಸಿದ್ದಾರೆ. 6.13 ಲಕ್ಷ ಫಲಾನುಭವಿಗಳು ₹ 4,770 ಕೋಟಿ ಮೊತ್ತದ ಸಬ್ಸಿಡಿ ಪಡೆದಿದ್ದಾರೆ. ಕೆಲವು ಸಾಲ ಮಂಜೂರು ಪ್ರಕ್ರಿಯೆಯಲ್ಲಿದೆ. ಸಂಪೂರ್ಣ ಸ್ವಯಂಚಾಲಿತ ಅರ್ಜಿಯೊಂದಿಗೆ www.pmsuryaghar.gov.in ಮೂಲಕ ಸಲ್ಲಿಸಬೇಕು. ಮಾರಾಟಗಾರರ ಆಯ್ಕೆ ಮತ್ತು ಸಬ್ಸಿಡಿ ರಿಡೀಮ್ ಪ್ರಕ್ರಿಯೆಗೆ ಪೂರ್ಣಗೊಳ್ಳುತ್ತಿದ್ದಂತೆ ಎರಡು ವಾರಗಳಲ್ಲಿ ಅರ್ಜಿದಾರರ ಬ್ಯಾಂಕ್ ಅಕೌಂಟ್‌ಗೆ ₹78000 ವರೆಗೆ ಸಬ್ಸಿಡಿ ಜಮಾ ಆಗುತ್ತದೆ.
ಪಿಎಂ ಸೂರ್ಯ ಘರ್ ಯೋಜನೆ ದೇಶದ ಅನೇಕ ರಾಜ್ಯಗಳಲ್ಲಿ ಮೈಲಿಗಲ್ಲುಸಾಧಿಸಿದೆ. ಚಂಡೀಗಢ, ದಮನ್ ಮತ್ತು ಡಿಯುಗಳು ಸರ್ಕಾರಿ ಕಟ್ಟಡಗಳು ಸೌರ ಮೇಲ್ಛಾವಣಿ ಅಳವಡಿಸಿ ನೂರಕ್ಕೆ ನೂರು ಪ್ರಗತಿ ಸಾಧಿಸಿವೆ. ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನಂತಹ ರಾಜ್ಯಗಳಲ್ಲೂ ಅಳವಡಿಕೆ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಸಚಿವರು ತಿಳಿಸಿದರು.












Click it and Unblock the Notifications