PM Modi Travel in Metro: ದೆಹಲಿ ವಿವಿ ಶತಮಾನೋತ್ಸವದಲ್ಲಿ ಮೋದಿ ಭಾಗಿ, ಮೋದಿ ಮೆಟ್ರೋ ಸಂಚಾರ ಪೂರ್ಣ ಮಾಹಿತಿ ಇಲ್ಲಿದೆ
ಬೆಂಗಳೂರು, ಜೂನ್ 30: ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲೆಂದು ಮೆಟ್ರೋದಲ್ಲಿ ಸಹಪ್ರಯಾಣಿಕರೊಂದಿಗೆ ಸಂಚರಿಸಿದರು. ಜನರೊಂದಿಗೆ ಮೆಟ್ರೋದಲ್ಲಿ ಪ್ರಧಾನಿಯೊಬ್ಬರ ಓಡಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಾಕಷ್ಟು ಚರ್ಚೆಗಳು ಆಗುತ್ತಿವೆ. ಸ್ವತಃ ಪ್ರಧಾನಿ ಮೋದಿಯವರೆಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಶುಕ್ರವಾರ ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಆಚರಣೆ ಸಮಾರೋಪ ಸಮಾರಂಭ ನಡೆಯಲಿದೆ. ಅಲ್ಲಿ ಪ್ರಧಾನಮಂತ್ರಿ ಮೋದಿಯವರು ನೂತನ ಮೂರು ಕಟ್ಟಡಗಳ ಶಂಕುಸ್ಥಾಪನೆ ನೇರವೇರಿಸುವ ಜೊತೆಗೆ ಕಾಫಿ ಟೇಬಲ್ ಪುಸ್ತಕಗಳ ಸೆಟ್ ಬಿಡುಗಡೆಗೊಳಿಸಿದರು.
PM Shri @narendramodi takes Delhi Metro to attend the centenary celebrations of Delhi University. pic.twitter.com/h39YnjMUoc
— BJP (@BJP4India) June 30, 2023

ಪ್ರಧಾನಿ ಮೆಟ್ರೋ ಪ್ರಯಾಣದ ವಿಡಿಯೋ ಹಂಚಿಕೊಂಡ ಬಿಜೆಪಿ
ಪ್ರಧಾನಿ ಮೋದಿಯವರು ಮೆಟ್ರೋದಲ್ಲಿ ಸಂಚರಿಸಿದ್ದಕ್ಕೆ ಸಹ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ. ಇತ್ತ ಭಾರತೀಯ ಜನತಾ ಪಕ್ಷದ (BJP) ಟ್ವಿಟರ್ ಖಾತೆಯಲ್ಲಿ ಸೂಕ್ತ ಬಿಗಿ ಭದ್ರತೆಯ ನಡುವೆ ಮೆಟ್ರೋ ಆವರಣಕ್ಕೆ ಪ್ರವೇಶಿಸಿ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸುತ್ತಿರುವ ಪ್ರಧಾನಿ ಮೋದಿ ವಿಡಿಯೋ ಹಂಚಿಕೊಳ್ಳಲಾಗಿದೆ.
ನರೇಂದ್ರ ಮೋದಿಯವರು ಬೆಳಗ್ಗೆ ಮೆಟ್ರೋ ಹಳದಿ ರೇಖೆಯ (Metro Yellow Line) ಸಮಯಪುರ್ ಬದ್ಲಿ ನಿಲ್ದಾಣದ ಕಡೆಗೆ ಹೋಗುವ ಮೆಟ್ರೋ ರೈಲು ಏರಿದರು. ಅಲ್ಲಿಂದ ಅವರು ದೆಹಲಿ ವಿಶ್ವವಿದ್ಯಾಲಯ ಕ್ಯಾಂಪಸ್‌ಗೆ ಹತ್ತಿರವಾದ ವಿಶ್ವವಿದ್ಯಾಲಯ ಮೆಟ್ರೋ ನಿಲ್ದಾಣ ತಲುಪಿದರು.

ಮೆಟ್ರೋ ಸಂಚಾರದ ವೀಡಿಯೊ ನೋಡುವುದಾದರೆ, ಅದರಲ್ಲಿ ಮೊದಲು ಪ್ರಧಾನಿಗಳು ಮೆಟ್ರೋ ಕಂಪಾರ್ಟ್‌ಮೆಂಟ್‌ಗೆ ಹತ್ತುವುದು ಕಾಣುತ್ತದೆ. ನಂತರ ಅವರು ಮೆಟ್ರೋದಲ್ಲಿ ಸಹಪ್ರಯಾಣಿಕರೊಂದಿಗೆ ಮಾತನಾಡುವ ದೇಶ್ಯಗಳು ಸಾಮಾನ್ಯ ಎಂಬಂತಿದೆ. ಪ್ರಧಾನಿ ಮೋದಿ ಅವರೊಂದಿಗಿನ ಪ್ರಯಾಣದ ಖಷಿಯನ್ನು ಯುವ ಪ್ರಯಾಣಿಕರು ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
ಮೆಟ್ರೋ ಪ್ರಯಾಣದ ಬಗ್ಗೆ ಪ್ರಧಾನಿ ಹೇಳಿದ್ದು ಹೀಗೆ
ದೆಹಲಿ ವಿಶ್ವವಿದ್ಯಾಲಯ ಸಮಾರಂಭದಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು, ಸಹ ಪ್ರಯಾಣಿಕರ ಜತೆಯಲ್ಲಿ ಹೀಗೆ ಮೆಟ್ರೋದಲ್ಲಿ ಪ್ರಯಾಣಿಸುವುದು, ಅವರೊಂದಿಗೆ ಹೀಗೆ ಕ್ಯಾಂಪಸ್‌ಗೆ ಬರುವುದು ಖಷಿ ತಂದಿದೆ. ಇಬ್ಬರು ಸ್ನೇಹಿತರು ಒಟ್ಟಿಗೆ ಕೂತು ಸೂರ್ಯ-ಚಂದ್ರರ ವಿಚಾರಗಳಿಂದ ಹಿಡಿದು ಇತ್ತೀಚೆಗೆ ಬಿಡುಗಡೆಯಾದ ಸಿನಿಮಾ, ತಾವು ನೋಡಿದ ಸಿನಿಮಾ, ಓಟಿಟಿ ವೇದಿಕೆ, ಸಾಮಾಜಿಕ ಜಾಲತಾಣಗಳ ಬಗ್ಗೆಯೂ ಮಾತನಾಡಿಕೊಂಡರು. ಇದೆಲ್ಲರ ಅನುಭವ ಹೊಂದಲು ನಾನು ಕಾರ್ಯಕ್ರಮಕ್ಕೆ ಬರಲು ಮೆಟ್ರೋ ಮಾರ್ಗ ಆಯ್ಕೆ ಮಾಡಿಕೊಂಡೆ ಎಂದು ತಿಳಿಸಿದರು.
PM Shri @narendramodi interacts with passengers in Delhi Metro during his ride to Delhi University. pic.twitter.com/NHYZlSUrYb
— BJP (@BJP4India) June 30, 2023
ಇದಕ್ಕು ಮೊದಲೇ ಗುರುವಾರವೇ ವಿಶ್ವವಿದ್ಯಾಲಯ ಮತ್ತು ಮೆಟ್ರೋ ಪ್ರಯಾಣ ಬಗ್ಗೆ ಅವರು ಟ್ವೀಟ್ ಮಾಡಿದ್ದರು. 100 ವರ್ಷಗಳನ್ನು ಪೂರೈಸಿದ ಪ್ರಮುಖ ಕೇಂದ್ರೀಯ ವಿಶ್ವವಿದ್ಯಾನಿಲಯದ ಸೇವಾ ಕಾರ್ಯಕ್ಕೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ನಾಳೆ ಜೂನ್ 30 ರಂದು ಬೆಳಿಗ್ಗೆ 11 ಗಂಟೆಗೆ ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾತರನಾಗಿದ್ದೇನೆ ಎಂದು ತಿಳಿಸಿದ್ದರು.
ವಿಶ್ವವಿದ್ಯಾಲಯ ಕಾರ್ಯ ಒಂದು ಮೈಲಿಗಲ್ಲು
ಕಲಿಕೆಯ ಪ್ರಮುಖ ಕೇಂದ್ರವಾಗಿರುವ ದೆಹಲಿ ವಿಶ್ವವಿದ್ಯಾಲವಯರು ಒಂದು ಶತಮಾನದವರೆಗೆ ಅನೇಕ ಪ್ರತಿಭೇಗಳನ್ನು ಫೋಷಿಸಿಕೊಂಡು ಬಂದಿದೆ. ಬೌದ್ಧಿಕ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಿಕೊಡುತ್ತಾ ಬಂದಿದ್ದು, ಇದೊಂದು ಮೈಲಿಗಲ್ಲು ಎಂದು ಕಾರ್ಯಕ್ರಮದಲ್ಲಿ ಅವರು ಹೊಗಳಿದರು.
ಜೊತೆಗೆ ದೆಹಲಿ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೆಂಟರ್ ಮತ್ತು ತಂತ್ರಜ್ಞಾನ ವಿಭಾಗದ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ವಿಶ್ವವಿದ್ಯಾನಿಲಯದ ಉತ್ತರ ಕ್ಯಾಂಪಸ್‌ನಲ್ಲಿ ನಿರ್ಮಿಸಲಿರುವ ಶೈಕ್ಷಣಿಕ ಬ್ಲಾಕ್ ಸ್ಥಾಪನೆಗೆ ಅವರು ಚಾಲನೆ ನೀಡಿದರು.
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ












Click it and Unblock the Notifications