ಮಮತಾ ಬ್ಯಾನರ್ಜಿ ಕೋಟೆಯಲ್ಲಿ ಒಂದೇ ದಿನ ನಾಲ್ಕು ಕಡೆ ಮೋದಿ ಚುನಾವಣಾ ಪ್ರಚಾರ
ಕೋಲ್ಕತ್ತಾ, ಮೇ. 12 : ಲೋಕಸಭಾ ಚುನಾವಣೆ ನಾಲ್ಕನೇ ಹಂತದ ಮತದಾನಕ್ಕೆ ದೇಶ ಸಿದ್ಧವಾಗುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ಕೋಲ್ಕತ್ತಾ ತಲುಪಿದ್ದಾರೆ.
ಭಾನುವಾರ ಪಶ್ಚಿಮ ಬಂಗಾಳದ ಮೂರು ಜಿಲ್ಲೆಗಳಲ್ಲಿ ನಾಲ್ಕು ಲೋಕಸಭಾ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಜಾರ್ಖಂಡ್‌ನಿಂದ ಪ್ರಚಾರ ಮುಗಿಸಿಕೊಂಡು ಕೋಲ್ಕತ್ತಾಗೆ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲಿ ಇಳಿದ ನಂತರ ಅವರು ಬಿಗಿ ಭದ್ರತೆಯ ನಡುವೆ ರಸ್ತೆ ಮೂಲಕ ರಾಜಭವನಕ್ಕೆ ತೆರಳಿದ್ದಾರೆ.

ಮೇ 13 ರಂದು ನಡೆಯಲಿರುವ ನಾಲ್ಕನೇ ಹಂತದ ಲೋಕಸಭಾ ಚುನಾವಣೆಗೆ ಒಡಿಶಾದಲ್ಲಿ ಚುನಾವಣಾ ಪ್ರಚಾರವನ್ನು ಮುಗಿಸಿದ ನಂತರ ಮೋದಿ, ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಪಶ್ಚಿಮ ಬಂಗಾಳಕ್ಕೆ ತಲುಪಿದ್ದಾರೆ. ಅವರು ಶುಕ್ರವಾರ ಸಂಜೆ ಭುವನೇಶ್ವರದಲ್ಲಿ ಬೃಹತ್ ರೋಡ್‌ಶೋ ನಡೆಸಿದ್ದರು. ಜಾರ್ಖಂಡ್‌ಗೆ ತೆರಳುವ ಮೊದಲು ಶನಿವಾರ ಒಡಿಶಾದಲ್ಲಿ ಮೂರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದರು.
ಒಡಿಶಾದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿದ್ದ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ಮೇಲೆ ತೀಕ್ಷ್ಣ ದಾಳಿ ಮಾಡಿದ್ದರು. ಒಂದು ತುಂಡು ಕಾಗದವನ್ನು ನೋಡದೆ ರಾಜ್ಯದ ಎಲ್ಲಾ ಜಿಲ್ಲೆಗಳು ಮತ್ತು ಅವುಗಳ ರಾಜಧಾನಿಗಳನ್ನು ಹೆಸರಿಸಲು ಸವಾಲು ಹಾಕಿದ್ದರು.
ದೀದಿ ನಾಡಿನಲ್ಲಿ ಇಂದು ಮೋದಿ ಹವಾ!
ಭಾನುವಾರ, ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದ ಮೂರು ಜಿಲ್ಲೆಗಳಲ್ಲಿ ನಾಲ್ಕು ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ . ಉತ್ತರ 24 ಪರಗಣ ಜಿಲ್ಲೆಯ ಬ್ಯಾರಕ್‌ಪೋರ್, ಹೌರಾದ ಪಂಚ್ಲಾ ಮತ್ತು ಹೂಗ್ಲಿ ಜಿಲ್ಲೆಯ ಚಿನ್ಸುರಾ ಮತ್ತು ಪುರ್ಸುರಾದಲ್ಲಿ ರ‍್ಯಾಲಿ ನಡೆಸಲಿದ್ದಾರೆ.

ಇಂದು ತಿಂಗಳಲ್ಲಿ ಪಶ್ಚಿಮ ಬಂಗಾಳದ ಕೋಲ್ಕತ್ತಾಗೆ ಪ್ರಧಾನಿಯವರ ಎರಡನೇ ಭೇಟಿ ಇದಾಗಿದೆ. ಮೇ 2 ರಂದು ನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿ, ರಾಜಭವನದಲ್ಲಿ ರಾತ್ರಿ ಕಳೆದ ನಂತರ ಮರುದಿನ ಕೃಷ್ಣನಗರ, ಪುರ್ಬಾ ಬರ್ಧಮಾನ್ ಮತ್ತು ಬೋಲ್ಪುರ್ ಲೋಕಸಭಾ ಕ್ಷೇತ್ರಗಳಲ್ಲಿ ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಈಗ ಮತ್ತೆ ಶನಿವಾರ ರಾತ್ರಿ ಪ್ರಧಾನಿ ಮೋದಿ ಅವರು ಜಾರ್ಖಂಡ್‌ನಿಂದ ರಸ್ತೆ ಮಾರ್ಗವಾಗಿ ಕೋಲ್ಕತ್ತಾ ತಲುಪಿದ್ದಾರೆ.
ಕೋಲ್ಕತ್ತಾದಲ್ಲಿ ಸಂಚಾರ ನಿರ್ಬಂಧ
ವಾರಾಂತ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೋಲ್ಕತ್ತಾಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕೋಲ್ಕತ್ತಾದಲ್ಲಿ ಭಾರೀ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ಮೇ 12 ರಂದು ಮಧ್ಯಾಹ್ನ 1 ಗಂಟೆಯವರೆಗೆ ರಾಜಭವನ, ರೆಡ್ ರೋಡ್, ಹೂಗ್ಲಿ ಸೇತುವೆ ಮತ್ತು ಜೆನ್ಸನ್ ಮತ್ತು ನಿಕೋಲ್ಸನ್ ದ್ವೀಪದಂತಹ ಪ್ರದೇಶಗಳಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಮೋದಿ ಅವರ ನಾಲ್ಕು ಚುನಾವಣಾ ಪ್ರಚಾರ ಸಬೆಗಳ ಒಂದು ದಿನ ಮೊದಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಸಪ್ತಗ್ರಾಮ್‌ನಲ್ಲಿ ಭರ್ಜರಿ ಸಮಾವೇಶ ನಡೆಸಿದ್ದಾರೆ. ಹೂಗ್ಲಿಯ ಟಿಎಂಸಿ ಅಭ್ಯರ್ಥಿಯ ಪರವಾಗಿ ಮತದಾರರಲ್ಲಿ ಮನವಿ ಮಾತನಾಡಿದ್ದರು.
ಪಶ್ಚಿಮ ಬಂಗಾಳದಲ್ಲಿ ಲೋಕಸಭೆ ಚುನಾವಣೆಯ 4 ನೇ ಹಂತದ ಪ್ರಚಾರವು ಮೇ 11 ರಂದು ಕೊನೆಗೊಂಡಿದೆ. ರಾಜ್ಯದ ಒಟ್ಟು ಎಂಟು ಕ್ಷೇತ್ರಗಳಿಗೆ ಮೇ 13 ರಂದು ಚುನಾವಣೆ ನಡೆಯಲಿದೆ. ಅವುಗಳೆಂದೆ ಬಹರಂಪುರ, ಕೃಷ್ಣನಗರ, ರಾಣಾಘಾಟ್, ಬರ್ಧಮಾನ್ ಪುರ್ಬಾ, ಬುರ್ದ್ವಾನ್-ದುರ್ಗಾಪುರ, ಅಸನ್ಸೋಲ್, ಬೋಲ್ಪುರ್, ಮತ್ತು ಬಿರ್ಭೂಮ್.












Click it and Unblock the Notifications