• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ: ಪ್ರಮುಖ ಅಂಶಗಳು

|

ನವದೆಹಲಿ, ಫೆಬ್ರವರಿ.08: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಹೊಸ ಉತ್ಸಾಹ, ಹೊಸ ನಂಬಿಕೆ ಮತ್ತು ವಿಶ್ವಾಸವು ಭಾರತದ ಮುಂದಿನ ಹಾದಿಯನ್ನು ತೋರಿಸುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಂದನಾ ಭಾಷಣವನ್ನು ಮಾಡಿದರು. 13 ಗಂಟೆಗಳ ಅವಧಿಯಲ್ಲಿ 50 ಸದಸ್ಯರು ತಮ್ಮ ಅಭಿಪ್ರಾಯದ ಬಗ್ಗೆ ಸದನದಲ್ಲಿ ಹಂಚಿಕೊಂಡಿದ್ದಾರೆ. ಎಲ್ಲ ಸಂಸದರಿಗೆ ನಾನು ಕೃತಜ್ಞತೆ ಅರ್ಪಿಸುತ್ತೇನೆ ಎಂದರು.

ಮೋದಿ "ಮ್ಯಾಚ್ ಫಿಕ್ಸಿಂಗ್" ಹೇಳಿಕೆ; ಪಶ್ಚಿಮ ಬಂಗಾಳ ವಿರೋಧ ಪಕ್ಷಗಳಿಂದ ಭಾರೀ ಟೀಕೆ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು, ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟ, ಉತ್ತರಾಖಂಡ್ ನಲ್ಲಿ ಸಂಭವಿಸಿದ ಹಿಮಪರ್ವತ ಸ್ಫೋಟ ಸೇರಿದಂತೆ ಹಲವು ವಿಷಯಗಳ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ.

ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶ:

- ಇಡೀ ಜಗತ್ತು ಭಾರತದ ಮೇಲೆ ಹೆಚ್ಚು ನಿರೀಕ್ಷೆಗಳನ್ನು ಹೊಂದಿದ್ದು, ನಮ್ಮ ದೇಶದ ಮೇಲೆ ವಿಶ್ವವೇ ಕಣ್ಣಿಟ್ಟಿದೆ. ತಮ್ಮ ದೇಶದ ಸುಧಾರಣೆಗೆ ಭಾರತ ಕೊಡುಗೆ ನೀಡುತ್ತದೆ ಎಂಬ ವಿಶ್ವಾಸವನ್ನು ಹೊಂದಿವೆ.

- ಕೊರೊನಾವೈರಸ್ ಸಮಯದಲ್ಲಿ ದೀಪ ಬೆಳಗಿಸಿ ಎಂದು ಕರೆ ನೀಡಿದಾಗ ಸಾಕಷ್ಟು ಜನರು ಅದನ್ನು ಅಪಹಾಸ್ಯ ಮಾಡಿದರು. ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಿರಬಹುದು. ವೃದ್ಧೆಯೊಬ್ಬಳು ತನ್ನ ಗುಡಿಸಲಿನ ಹೊರಗೆ ಫುಟ್‌ಪಾತ್‌ನಲ್ಲಿ ಕುಳಿತು, ಬೆಳಗಿದ ಮಣ್ಣಿನ ದೀಪದೊಂದಿಗೆ, ಭಾರತದ ಕಲ್ಯಾಣಕ್ಕಾಗಿ ಪ್ರಾರ್ಥಿಸುತ್ತಾಳೆ. ನಾವು ಅವಳನ್ನು ಅಪಹಾಸ್ಯ ಮಾಡುತ್ತಿದ್ದೇವೆ!

- ಪೋಲಿಯೊ, ಸಿಡುಬು ರೋಗಗಳನ್ನು ನೋಡಿದ್ದೇವೆ. ಭಾರತಕ್ಕೆ ಲಸಿಕೆ ಸಿಗುತ್ತದೆಯೇ ಅಥವಾ ಎಷ್ಟು ಜನರಿಗೆ ಸಿಗುತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಇದೀಗ ನಮ್ಮ ದೇಶವು ಇಡೀ ಜಗತ್ತಿಗೆ ಲಸಿಕೆಗಳನ್ನು ನೀಡುವ ಮಟ್ಟಕ್ಕೇರಿದ್ದು, ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

- ಭಾರತದ ರಾಷ್ಟ್ರೀಯತೆ ಈಗ ಕಿರಿದಾಗಿಲ್ಲ ಸ್ವಾರ್ಥಿ ಮತ್ತು ಆಕ್ರಮಣಕಾರಿ ಕೂಡ ಅಲ್ಲ. ಇದು 'ಸತ್ಯ ಶಿವ ಸುಂದರಂ' ಮೌಲ್ಯಗಳಿಂದ ಪ್ರೇರಿತವಾಗಿದೆ. ಈ ಉಲ್ಲೇಖವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ನೀಡಿದ್ದಾರೆ.

- ನೇತಾಜಿಯ ಆದರ್ಶಗಳನ್ನು ನಾವು ಮರೆತಿದ್ದೇವೆ. ನಾವು ನಮ್ಮನ್ನು ಶಪಿಸಲು ಪ್ರಾರಂಭಿಸಿದ್ದೇವೆ. ನಾನು ಕೆಲವೊಮ್ಮೆ ಆಶ್ಚರ್ಯ ಪಡುತ್ತೇನೆ, ಜಗತ್ತು ನಮಗೆ ಒಂದು ಪದವನ್ನು ನೀಡುತ್ತದೆ ಮತ್ತು ನಾವು ಅದನ್ನು ಅನುಸರಿಸಲು ಪ್ರಾರಂಭಿಸುತ್ತೇವೆ - 'ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ' - ಇದನ್ನು ಕೇಳಲು ಸಂತೋಷವಾಗುತ್ತದೆ. ಆದರೆ ಭಾರತವು ಪ್ರಜಾಪ್ರಭುತ್ವದ ತಾಯಿ ಎಂದು ನಾವು ನಮ್ಮ ಯುವಕರಿಗೆ ಕಲಿಸಲಿಲ್ಲ.

- ಮನಮೋಹನ್ ಸಿಂಗ್ ಅವರು ಇಲ್ಲಿದ್ದಾರೆ. ನಾನು ಅವರ ಉಲ್ಲೇಖವನ್ನು ಓದುತ್ತೇನೆ. "1930 ರ ದಶಕದಲ್ಲಿ ಸ್ಥಾಪಿಸಲಾದ ಮಾರ್ಕೆಟಿಂಗ್ ಆಡಳಿತದಿಂದಾಗಿ ಇತರ ಕಠಿಣತೆಗಳಿವೆ, ಇದು ನಮ್ಮ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವುದನ್ನು ತಡೆಯುತ್ತದೆ, ಅಲ್ಲಿ ಅವರು ಹೆಚ್ಚಿನ ಲಾಭವನ್ನು ಪಡೆಯುತ್ತಾರೆ." ಈ ಮಾತಿಗೆ ಇಂದು ಅವರ ಜೊತೆಗೇ ಇರುವವರು ಯು-ಟರ್ನ್ (ಕೃಷಿ ಕಾನೂನುಗಳು) ತೆಗೆದುಕೊಳ್ಳುತ್ತಿದ್ದಾರೆ.

- ರೈತರು ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀತಿ ಈ ಮೊದಲು ಜಾರಿಯಲ್ಲಿತ್ತು. ಪ್ರಸ್ತುತದಲ್ಲೂ ಇದೆ, ಭವಿಷ್ಯದಲ್ಲಿಯೂ ಕನಿಷ್ಠ ಬೆಂಬಲ ಬೆಲೆ ಇರುತ್ತದೆ.

- ಪಂಜಾಬ್‌ನಲ್ಲಿ ಈ ಹಿಂದೆ ನಡೆದಿರುವುದನ್ನು ನಾವು ಮರೆಯಬಾರದು. ವಿಭಜನೆ ಸಂದರ್ಭದಲ್ಲಿ 1984ರಲ್ಲಿ ಗಲಭೆಗಳು ನಡೆದವು. ಅಂದು ರಾಜ್ಯದಲ್ಲಿನ ಜನರು ಬಹಳಷ್ಟು ನೋವು ಅನುಭವಿಸಿದರು. ಜಮ್ಮು ಕಾಶ್ಮೀರದಲ್ಲಿ ಮುಗ್ಧರನ್ನು ಕೊಲ್ಲಲ್ಪಟ್ಟರು. ಈಶಾನ್ಯ ರಾಜ್ಯಗಳಲ್ಲಿ ಶಸ್ತ್ರಾಸ್ತ್ರಗಳ ವ್ಯವಹಾರ ನಡೆಸಿದ್ದು ಸೇರಿ ಎಲ್ಲವೂ ದೇಶದ ಮೇಲೆ ಪರಿಣಾಮ ಬೀರಿದವು.

English summary
PM Modi will reply to the President's speech in the Rajya Sabha today. Here is the PM Modi Speech highlights in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X