ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಿನ್ನಾಭಿಪ್ರಾಯ ಮರೆತು ಕೈಜೋಡಿಸೋಣ, ನಿತೀಶ್ ಗೆ ಮೋದಿ ಕರೆ

By Mahesh
|
Google Oneindia Kannada News

ಪಾಟ್ನ, ಜುಲೈ 26: ಬಿಹಾರದಲ್ಲಿ ಮಹಾಮೈತ್ರಿಕೂಟದಿಂದ ಹೊರ ಬಂದು ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಿದ್ದಾರೆ. ಬಿಹಾರ ಸಿಎಂ ನಿತೀಶ್ ಅವರ ರಾಜೀನಾಮೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ನಿತೀಶ್ ಮುಂದಿನ ರಕ್ಷಣಾ ಸಚಿವರಾಗಲಿː ಟ್ವಿಟ್ಟಿಗರ ಆಶಯ ನಿತೀಶ್ ಮುಂದಿನ ರಕ್ಷಣಾ ಸಚಿವರಾಗಲಿː ಟ್ವಿಟ್ಟಿಗರ ಆಶಯ

ಸತ್ಯ, ಧರ್ಮ, ನಿಷ್ಠೆಯಿಂದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿ, ಐದನೇ ಬಾರಿಗೆ ಬಿಹಾರ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದ ನಿತೀಶ್ ಅವರು ಈಗ ಲಾಲೂ ಪ್ರಸಾದ್ ಕುಟುಂಬದ ಭ್ರಷ್ಟಾಚಾರಕ್ಕೆ ಬೇಸತ್ತು, ಸಿಎಂ ಸ್ಥಾನದಿಂದ ಕೆಳಗಿಳಿದಿದ್ದಾರೆ.

PM Narendra Modi reaction to Bihar Chief Minsiter Nitish Kumar's resignation

ನಿತೀಶ್ ಕುಮಾರ್ ಅವರ ನಿಲುವನ್ನು ಮೆಚ್ಚಿ ನರೇಂದ್ರ ಮೋದಿ ಅವರು ಎರಡು ಟ್ವೀಟ್ ಮಾಡಿದ್ದು, ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿರುವ ನಿಮ್ಮ ಕ್ರಮಕ್ಕೆ 125 ಕೋಟಿ ಭಾರತೀಯರ ಬೆಂಬಲವಿದೆ ಎಂದಿದ್ದಾರೆ.

ನಾವು ನಮ್ಮ ರಾಜಕೀಯ ಭಿನ್ನಾಭಿಪ್ರಯ, ನಿಲುವುಗಳನ್ನು ಬದಿಗೊತ್ತಿ, ಬಿಹಾರ ಹಾಗೂ ದೇಶದ ಅಭಿವೃದ್ಧಿಗಾಗಿ ಕೈಜೋಡಿಸಬೇಕಿದೆ ಎಂದು ನಿತೀಶ್ ಅವರಿಗೆ ಮೋದಿ ಅವರು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

243 ವಿಧಾನಸಭಾ ಕ್ಷೇತ್ರಗಳಲ್ಲಿ 178 ಸ್ಥಾನಗಳನ್ನು ಗಳಿಸಿತ್ತು. ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ 71 ಸೀಟುಗಳನ್ನು ಪಡೆದಿದ್ದರೆ, ಲಾಲು ಪ್ರಸಾದ್ ಅವರ ಪಕ್ಷ 80 ಸ್ಥಾನಗಳನ್ನು ಹೊಂದಿದೆ. ಅಲ್ಲಿ ಒಟ್ಟು ಸ್ಥಾನಗಳ ಸಂಖ್ಯೆ 243 ಇದ್ದು, ಸರ್ಕಾರ ರಚಿಸಲು ಬೇಕಾದ ಬಹುಮತಕ್ಕೆ 122 ಸ್ಥಾನಗಳು ಬೇಕಿವೆ. ಈಗ ನಿತೀಶ್ ಅವರು ಬಿಜೆಪಿಯ ಬಾಹ್ಯ ಬೆಂಬಲದಿಂದ(58 ಸ್ಥಾನ) ಮತ್ತೊಮ್ಮೆ ಸರ್ಕಾರ ಸ್ಥಾಪಿಸುವ ಸಾಧ್ಯತೆಯೂ ಇದೆ.

English summary
Prime Minister Narendra Modi took to Twitter to react about Bihar Chief Minsiter Nitish Kumar's resignation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X