ಬಸವಣ್ಣ, ರಾಮಾನುಜರ ನೆನೆದು ಬೇಸಿಗೆಗೆ ತಂಪೆರೆದ ಮನ್ ಕೀ ಬಾತ್
ಏಪ್ರಿಲ್ 30ರ ಮನ್ ಕೀ ಬಾತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೀವನ ಆಸ್ವಾದಿಸಲು ಅದ್ಭುತವಾದ ಸಲಹೆಗಳನ್ನು ಕೊಟ್ಟಿದ್ದಾರೆ. ಅವರ ಸಲಹೆಗಳ ಬಗ್ಗೆ ತಿಳಿಯಲು ಈ ಲೇಖನ ಓದಿ
ನವದೆಹಲಿ, ಏಪ್ರಿಲ್ 30: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿ ತಿಂಗಳು ದೇಶದ ಜನತೆ ಎದುರು ಬರುವ ಮನ್ ಕೀ ಬಾತ್ ನ ರೇಡಿಯೋ ಕಾರ್ಯಕ್ರಮದಲ್ಲಿ ಭಾನುವಾರ ಏನು ಹೇಳಿದರು ಅಂತ ಗೊತ್ತಾಯ್ತಾ? ಈ ಕಾರ್ಯಕ್ರಮಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ಇದೆ. ಅದರಲ್ಲೂ ನಗರ-ಪಟ್ಟಣ ಪ್ರದೇಶದಲ್ಲಿ ಒಳ್ಳೆ ಸ್ಪಂದನೆ ಇದೆ.
ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಮುಂಬೈ, ಚೆನ್ನೈ ಸೇರಿದಂತೆ ಆರು ಪ್ರಮಖ ನಗರಗಳಲ್ಲಿ ಈ ಕಾರ್ಯಕ್ರಮ ಜನಪ್ರಿಯವಾಗಿದೆ. ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ, ಬಾಂಗ್ಲಾದೇಶದ ಜತೆಗೆ ದೇಶದ ಬಾಂಧವ್ಯದ ಬಗ್ಗೆ ಮನ್ ಕೀ ಬಾತ್ ನಲ್ಲಿ ಮಾತನಾಡಿದ್ದರು. ಸ್ವಚ್ಛತೆಯ ಮಹತ್ವದ ಪ್ರಸ್ತಾವ ಮಾಡಿದ್ದರು.['ಮನ್ ಕಿ ಬಾತ್' ನಲ್ಲಿ ಮೋದಿ ಹೊಗಳಿದ ಬಾಲಕಿ ಯಾರು?]

ಡಿಜಿಧನ್ ಮೇಳ, ಹೆರಿಗೆ ರಜಾ ಹಾಗೂ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದ್ದರು. ಈ ಬಾರಿ ಯಾವೆಲ್ಲ ವಿಚಾರ ಮಾತನಾಡಿದ್ದಾರೆ, ಏನು ಮಾತನಾಡಿದ್ದಾರೆ ಎಂಬುದರ ಮುಖ್ಯಾಂಶಗಳು ಇಲ್ಲಿವೆ...
* ಈ ಸಮಾಜಕ್ಕೆ ಕೊಡುಗೆ ನೀಡಿದವರಿಗೆ ಮೊದಲಿಗೆ ಅಭಿನಂದನೆ ಸಲ್ಲಿಸುತ್ತೇನೆ.
* ಗುಜರಾತ್ ಹಾಗೂ ಮಹಾರಾಷ್ಟ್ರದ ಜನರು ಭಾರತದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದಾರೆ.[ಮೋದಿ ಮನ್ ಕಿ ಬಾತ್ ನಲ್ಲಿ ಇಸ್ರೋ, ಕ್ಷಿಪಣಿ, ಡಿಜಿಟಲ್ ಮನಿ, ಕೃಷಿ]

* ಈ ಬಾರಿ ಮನ್ ಕೀ ಬಾತ್ ನಲ್ಲಿ ಯಾವ ವಿಚಾರ ಮಾತನಾಡಲಿ ಅಂತ ಕೇಳಿದಾಗ ನಿರೀಕ್ಷೆಯಂತೆಯೇ ಜನ ಬೇಸಿಗೆ ಬಗ್ಗೆ ಎಂದು ಉತ್ತರ ನೀಡಿದ್ದಾರೆ
* ಪಕ್ಷಿಗಳಿಗಾಗಿ ನೀರು ಹಾಕುವ ವಿಚಾರಕ್ಕೆ ಬಂದರೆ ಮಕ್ಕಳೇ ಅದರಲ್ಲಿ ಮುಂದು ಅನ್ನೋದನ್ನು ನಾನು ಗಮನಿಸಿದ್ದೀನಿ
* ನಿಮ್ಮ ಗೆಳಯನಾಗಿ ನಾನು ಕೆಲವು ಸಲಹೆ ಕೊಡ್ತೀನಿ.[ಟೀಂ ಇಂಡಿಯಾ ಬಗ್ಗೆ 'ಮನ್ ಕಿ ಬಾತ್'ನಲ್ಲಿ ಮೋದಿ ಮನದಾಳದ ಮಾತು]
* ರಿಸರ್ವೇಷನ್ ಮಾಡಿಸದೆ ದ್ವಿತೀಯ ದರ್ಜೆ ರೈಲ್ವೆ ಬೋಗಿಯಲ್ಲಿ ಪ್ರಯಾಣ ಮಾಡಿದ್ದೀರಾ? ಅಥವಾ ಕನಿಷ್ಠ ಇಪ್ಪತ್ನಾಲ್ಕು ಗಂಟೆ ಪ್ರಯಾಣ ಮಾಡಿದ್ದೀರಾ?

* ಈ ಭಾರಿಯ ರಜಾ ದಿನದಲ್ಲಿ ಹೊಸದೇನಾದರೂ ಕಲಿಯಿರಿ. ಹೊಸ ಸ್ಥಳಕ್ಕೆ ಹೋಗಿ
* ರಜಾ ದಿನದಲ್ಲಿ ಕ್ರೀಡೆಗಳಲ್ಲಿ ಕಾಲ ಕಳೆಯಿರಿ. ಹತ್ತಿರದ ಪ್ರದೇಶದ ಮಕ್ಕಳ ಜತೆಗೆ ಆಟವಾಡಿ
* ನಮ್ಮ ಸಾಮಾಜಿಕ ಬದುಕಿನೊಳಗೆ ತಂತ್ರಜ್ಞಾನದ ಪ್ರವೇಶವಾಗಿ ಕುಟುಂಬಗಳು ಬೇರ್ಪಡುತ್ತಿವೆ
* ತಂತ್ರಜ್ಞಾನದಿಂದ ಸ್ವಲ್ಪ ಮಟ್ಟಿಗೆ ದೂರ ಇದ್ದು, ನಿಮ್ಮ ಜತೆಗೆ ನೀವು ಸಮಯ ಕಳೆಯಿರಿ[ಕೊಪ್ಪಳದ ಮಲ್ಲಮ್ಮ ಬಗ್ಗೆ 'ಮನ್ ಕೀ ಬಾತ್'ನಲ್ಲಿ ಮಾತನಾಡಿದ ಮೋದಿ]
* ನಿಮಗೆ ಈಜು ಬರುವುದಿಲ್ಲ ಅಂತಾದರೆ ಈಜು ಕಲಿಯಿರಿ. ತುಂಬ ಒಳ್ಳೆ ಚಿತ್ರಕಾರರಾಗಬೇಕು ಅಂತಿಲ್ಲ. ಆದರೂ ಚಿತ್ರಕಲೆ ಕಲಿಯಿರಿ

* ಸಂಗೀತ ವಾದ್ಯಗಳನ್ನು ಕಲಿಯಿರಿ. ಔಟ್ ಆಫ್ ದ ಬಾಕ್ಸ್ ಅನ್ನೋ ಥರದ ಯೋಚನೆ ಮಾಡಿ. ಹೊಸ ಭಾಷೆಗಳನ್ನು ಕಲಿಯುವುದಕ್ಕೆ ಪ್ರಯತ್ನಿಸಿ.
* ನೀವು ಪ್ರವಾಸ ಹೋದಾಗ ತೆಗೆದ ಫೋಟೋಗಳನ್ನು ನನ್ನೊಂದಿಗೆ ಹಂಚಿಕೊಳ್ಳಿ. ನಿಮ್ಮ ಅನುಭವವನ್ನು ಹೇಳಿಕೊಳ್ಳಿ.
* ಈ ಅಪ್ಲಿಕೇಷನ್ ಬಗ್ಗೆ ಇತರರಿಗೂ ತಿಳಿಸಿ. ಹೊಸ ಸದಸ್ಯರು ಮೂರು ವ್ಯವಹಾರ ಅದರಲ್ಲಿ ಮಾಡಿದರೆ ನಿಮಗೆ ಹತ್ತು ರುಪಾಯಿ ಪ್ರೋತ್ಸಾಹ ಧನ ಸಿಗುತ್ತದೆ.[ಮನ್ ಕಿ ಬಾತ್‌ನಲ್ಲಿ ಯೋಧರಿಗೆ ಗೌರವ ಸಲ್ಲಿಸಿದ ಮೋದಿ]
* ಅಕ್ಟೋಬರ್ 14ರಿಂದ ಈ ಯೋಜನೆ ಬಂದಿದೆ. ಡಿಜಿಟಲ್ ಇಂಡಿಯಾಗೆ ನಿಮ್ಮ ಕೊಡುಗೆ ನೀಡಿ.
* ಭಾರತ ಸರಕಾರ ನಿಮಗೊಂದು ಉತ್ತಮ ಅವಕಾಶ ನೀಡಿದೆ. ಭೀಮ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಂಡು, ಬಳಸಿ
* ಭಾರತದಲ್ಲಿ ಯಾವುದೇ ವ್ಯಕ್ತಿ, ಯಾವುದೇ ಸ್ಥಾನದಲ್ಲಿರಬಹುದು. ಕೆಂಪು ದೀಪದ ವಾಹನದಲ್ಲಿ ಸಂಚರಿಸಲ್ಲ.

* ವಾಹನಗಳ ಮೇಲೆ ಇನ್ನು ಕೆಂಪು ದೀಪಗಳು ಕಾಣಲ್ಲ. ಇದರ ಜತೆಗೆ ನಮ್ಮ ಮನಸುಗಳು ಶುದ್ಧವಾಗಬೇಕು.
* ರಾಮಾನುಜಾಚಾರ್ಯರು ಸಾಮಾಜಿಕ ಪಿಡುಗಗಳ ವಿರುದ್ಧ ಮಾಡಿದ ಹೋರಾಟದ ಬಗ್ಗೆ ಬಹಳ ಮಂದಿಗೆ ತಿಳಿದಿಲ್ಲ
* ನವಭಾರತದ ನಮ್ಮ ಕಲ್ಪನೆಯಲ್ಲಿ ವಿಐಪಿ ಜಾಗದಲ್ಲಿ ಇಪಿಐ (ಎವರಿ ಪರ್ಸನ್ ಇಂಪಾರ್ಟೆಂಟ್) ಅಂದರೆ ಪ್ರತಿ ವ್ಯಕ್ತಿಯು ಮುಖ್ಯ ಎಂಬ ನಿಲುವಿಗೆ ಪ್ರಾಶಸ್ತ್ಯ[ನಿಮ್ಮೊಂದಿಗೆ ಹೋರಾಡಿ, ಇತರರೊಂದಿಗೆ ಸ್ಪರ್ಧಿಸಬೇಡಿ: ಮೋದಿ]
* ರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಸಂಭ್ರಮದಲ್ಲಿದ್ದೇವೆ. ಅವರಿಂದ ಸ್ಫೂರ್ತಿ ಪಡೆಯಬೇಕು.
* ಮೇ 1ರ ಕಾರ್ಮಿಕರ ದಿನದಂದು ಕಾರ್ಮಿಕರ ಕಲ್ಯಾಣಕ್ಕೆ ಶ್ರಮಿಸಿದ ಡಾ ಬಾಬಾಸಾಹೇಬ್ ಅಂಬೇಡ್ಕರ್ ರ ಪಾತ್ರವನ್ನು ಸ್ಮರಿಸೋಣ

* ಇಂದು ಶ್ರಮಿಕ ವರ್ಗಕ್ಕೆ ಸಿಕ್ಕಿರುವ ಗೌರವ ಹಾಗೂ ಅನುಕೂಲಕ್ಕಾಗಿ ನಾವು ಬಾಬಾ ಸಾಹೇಬ್ ರಿಗೆ ಧನ್ಯವಾದ ಹೇಳಬೇಕು
* ರಾಮಾನುಜಾಚಾರ್ಯರ ಸ್ಮರಣೆಯ ನಿಮಿತ್ತ ಭಾರತ ಸರಕಾರ ಮೇ 1ರಂದು ಅಂಚೆ ಚೀಟಿ ಬಿಡುಗಡೆ ಮಾಡಲಿದೆ.
* ಈ ಸಂದರ್ಭದಲ್ಲಿ 12ನೇ ಶತಮಾನದ ಮಹಾನ್ ಸಂತ, ಕರ್ನಾಟಕದ ಸಮಾಜ ಸುಧಾರಣೆ ಹರಿಕಾರ ಜಗದ್ಗುರು ಬಸವೇಶ್ವರ ಅವರನ್ನು ಸ್ಮರಿಸ್ತೀನಿ.
* 12ನೇ ಶತಮಾನದಲ್ಲಿ ಆ ಮಹನೀಯರು ತಮ್ಮ ವಿಚಾರಧಾರೆಯಿಂದ ಕಾರ್ಮಿಕರು ಹಾಗೂ ಶ್ರಮಿಕ ವರ್ಗದ ಮೇಲೆ ಪ್ರಭಾವ ಬೀರಿದ್ದರು

* ಎಲ್ಲರ ಜತೆಗೆ, ಎಲ್ಲರ ಅಭಿವೃದ್ಧಿ ಎಂಬ ಮಾತು ಬರೀ ಭಾರತಕ್ಕಷ್ಟೇ ಅನ್ವಯಿಸುವುದಲ್ಲ, ಜಾಗತಿಕವಾಗಿ ಈ ಮಾತು ಸಲ್ಲುತ್ತದೆ
* ಎಲ್ಲರ ಜತೆಗೆ, ಎಲ್ಲರ ಅಭಿವೃದ್ಧಿ ಎಂಬ ಗುರಿಯೊಂದಿಗೆ ಭಾರತವು ಅಭಿವೃದ್ಧಿಯ ಕಡೆಗೆ ಹೆಜ್ಜೆ ಹಾಕುತ್ತಿದೆ.
* ಮೇ 5ರಂದು ಭಾರತವು ದಕ್ಷಿಣ ಏಷ್ಯಾದ ಉಪಗ್ರಹಗಳ ಉಡಾವಣೆ ಮಾಡಲಿದೆ.
* ಉಪಗ್ರಹಗಳ ಸಾಮರ್ಥ್ಯ ಮತ್ತು ಅವುಗಳು ಒದಗಿಸುವ ಸೌಕರ್ಯವು ದೀರ್ಘಾವಧಿಯಲ್ಲಿ ದಕ್ಷಿಣ ಏಷ್ಯಾ ಆರ್ಥಿಕ ಮತ್ತು ಅಭಿವೃದ್ಧಿಯ ಆದ್ಯತೆಯಾಗಲಿದೆ
* ದಕ್ಷಿಣ ಏಷ್ಯಾದ ದೇಶಗಳೊಂದಿಗೆ ಭಾರತ ಸಹಕಾರ ವೃದ್ಧಿ ಮಾಡಿಕೊಳ್ಳಲು ಹೆಜ್ಜೆ ಇಡುತ್ತಿದೆ. ನಮ್ಮ ಜತೆ ಕೈ ಜೋಡಿಸಲು ಎಲ್ಲ ದಕ್ಷಿಣ ಏಷ್ಯಾ ದೇಶಗಳನ್ನು ಸ್ವಾಗತಿಸುತ್ತೇನೆ
* ತಡೆಯಲು ಸಾಧ್ಯವೇ ಇಲ್ಲದಂಥ ಬಿಸಿಲಿದೆ. ನಿಮ್ಮ ಹಾಗೂ ನಿಮ್ಮ ಪ್ರೀತಿ ಪಾತ್ರರ ಕಾಳಜಿ ಮಾಡಿ, ನಿಮಗೆಲ್ಲ ಶುಭವಾಗಲಿ
-
ಆದಿಚುಂಚನಗಿರಿ ಮಠಕ್ಕೆ ಇಂದು ಪ್ರಧಾನಿ ಮೋದಿ ಭೇಟಿ: ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆಗೆ ಸಕಲ ಸಿದ್ಧತೆ -
Buttermilk Summer Benefits: ಪ್ರತಿದಿನ ಮಜ್ಜಿಗೆ ಕುಡಿಯುವವರು ತಪ್ಪದೇ ತಿಳಿದುಕೊಳ್ಳಬೇಕಾದ ವಿಷಯಗಳು -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು












Click it and Unblock the Notifications