Narendra Modi: ಸರ್ಕಾರ ರಚನೆಗೆ ನರೇಂದ್ರ ಮೋದಿಗೆ ಆಹ್ವಾನ; ಭಾನುವಾರ ಪ್ರಮಾಣ ವಚನ

2024ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆ ಸುಗಮವಾಗಿದೆ. ಮೈತ್ರಿಕೂಟದ ನಾಯಕರಾಗಿ ನರೇಂದ್ರ ಮೋದಿ ಅವರನ್ನು ಆಯ್ಕೆ ಮಾಡಲಾಗಿದೆ. ಸರ್ಕಾರ ರಚನೆ ಮಾಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ.

ಭಾನುವಾರ ಸಂಜೆ 6 ಗಂಟೆಗೆ ತಮ್ಮ ನೂತನ ಸಚಿವ ಸಂಪುಟದ ಸದಸ್ಯರ ಜೊತೆ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸತತ ಮೂರನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಜವಹರಲಾಲ್ ನೆಹರು ಬಳಿಕ ಈ ಸಾಧನೆ ಮಾಡಿದ ಎರಡನೇ ಪ್ರಧಾನಿಯಾಗಲಿದ್ದಾರೆ.

pm narendra modi invited to form next government oath ceremony sunday

ರಾಷ್ಟ್ರಪತಿ ಭವನದ ಹೇಳಿಕೆಯ ಪ್ರಕಾರ, ದ್ರೌಪದಿ ಮುರ್ಮು ಅವರು "ವಿವಿಧ ಬೆಂಬಲ ಪತ್ರಗಳ ಆಧಾರದ ಮೇಲೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಸರ್ಕಾರ ರಚನೆಗೆ ಬೇಕಾದ ಬೆಂಬಲ ಇರುವುದನ್ನು ಖಚಿತಪಡಿಸಿಕೊಂಡಿದ್ದಾರೆ. 18 ನೇ ಲೋಕಸಭೆ ಮತ್ತು ರಚನೆಗೆ ಬಹುಮತದ ಬೆಂಬಲವಿದ್ದು, ಹಾಗಾಗಿ ನರೇಂದ್ರ ಮೋದಿ ಅವರನ್ನು ಭಾರತದ ಪ್ರಧಾನಿಯನ್ನಾಗಿ ನೇಮಿಸಲಾಗಿದೆ" ಎಂದು ಪ್ರಕಟಣೆ ತಿಳಿಸಿದೆ.

ಸಿಹಿ ಮೊಸರು ತಿನ್ನಿಸಿದ ದ್ರೌಪದಿ ಮುರ್ಮು

ನರೇಂದ್ರ ಮೋದಿ ಅವರು ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು. ರಾಷ್ಟ್ರಪತಿಗಳು ತಮ್ಮ ಭೇಟಿಯ ವೇಳೆ ಮೋದಿ ಅವರಿಗೆ ಸಿಹಿ ಮೊಸರು ತಿನ್ನಿಸಿದರು.

ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅವರನ್ನು ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದ ನಂತರ ರಾಷ್ಟ್ರಪತಿಗಳು ಕೇಂದ್ರದಲ್ಲಿ ಸರ್ಕಾರ ರಚಿಸಲು ಮೋದಿ ಅವರನ್ನು ಆಹ್ವಾನಿಸಿದರು.

ಆಹ್ವಾನ ನೀಡಿದ ಪ್ರಧಾನಿ ಮೋದಿ

ರಾಷ್ಟ್ರಪತಿಯವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ಇಂದು ಬೆಳಿಗ್ಗೆ ಎಲ್ಲಾ ಎನ್‌ಡಿಎ ಮಿತ್ರಪಕ್ಷಗಳು ನನ್ನನ್ನು ನಾಯಕನನ್ನಾಗಿ ಆಯ್ಕೆ ಮಾಡಿ ರಾಷ್ಟ್ರಪತಿಗಳಿಗೆ ತಿಳಿಸಿದವು. ನಂತರ ರಾಷ್ಟ್ರಪತಿಗಳು ನನ್ನನ್ನು ಕರೆದರು. ಮತ್ತು ನನ್ನನ್ನು ನಿಯೋಜಿತ ಪ್ರಧಾನಿಯಾಗಿ ನೇಮಿಸಿದರು. ನಾನು ಭಾನುವಾರ ಸಂಜೆ ಪ್ರಮಾಣ ವಚನ ಸ್ವೀಕರಿಸಲಿದ್ದೇನೆ, ಬನ್ನಿ ಎಂದು ಆಹ್ವಾನ ನೀಡಿದರು.

ಮೂರನೇ ಅಧಿಕಾರಕ್ಕೆ ಬರಲು ಮತ ನೀಡಿದ ದೇಶದ ಜನತೆಗೆ ನರೇಂದ್ರ ಮೋದಿ ಧನ್ಯವಾದ ತಿಳಿಸಿದರು. "ಎನ್‌ಡಿಎಗೆ ಮೂರನೇ ಬಾರಿಗೆ ರಾಷ್ಟ್ರದ ಸೇವೆ ಮಾಡಲು ಅವಕಾಶ ನೀಡಲಾಗಿದೆ. ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಈ ದೇಶದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ದೇಶವನ್ನು ವೇಗವಾಗಿ ಅಭಿವೃದ್ಧಿಪಡಿಸಲು ಬದ್ಧರಾಗಿದ್ದೇವೆ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+