ಐತಿಹಾಸಿಕ ಕೊರೊನಾ ಲಸಿಕಾ ಅಭಿಯಾನಕ್ಕೆ ಮೋದಿ ಚಾಲನೆ
ನವದೆಹಲಿ, ಜನವರಿ 16: ಭಾರತದಾದ್ಯಂತ ಐತಿಹಾಸಿಕ ಬೃಹತ್ ಕೊರೊನಾ ಲಸಿಕಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.
ಇಂದು 3006 ಲಸಿಕಾ ಕೇಂದ್ರಗಳಲ್ಲಿ 3 ಲಕ್ಷ ಮಂದಿಗೆ ಲಸಿಕೆ ನೀಡಲಾಗುತ್ತಿದ್ದು, ಈ ಬೃಹತ್ ಲಸಿಕಾ ಕಾರ್ಯಕ್ರಮ ಎಲ್ಲಾ ರಾಜ್ಯಗಳಲ್ಲೂ ಆರಂಭವಾಗಿದೆ. ಈ ಐತಿಹಾಸಿಕ ಲಸಿಕಾ ಕಾರ್ಯಕ್ರಮದ ಕುರಿತು ಪ್ರಧಾನಿ ಮೋದಿ ಅವರು ಮಾತುಗಳನ್ನಾಡಿದ್ದಾರೆ.
ಲಸಿಕೆಗಳ ಸಂಶೋಧನೆ, ಅಭಿವೃದ್ಧಿಗೆ ದೇಶದ ವಿಜ್ಞಾನಿಗಳು ಹಾಗೂ ವೈದ್ಯರಿಗೆ ಧನ್ಯವಾದ ಸಲ್ಲಿಸಿದ ಅವರು, ದೇಶದಲ್ಲಿ ನೀಡುತ್ತಿರುವ ಈ ಎರಡು ಕೊರೊನಾ ಲಸಿಕೆಗಳು ಬಹಳ ಮುಖ್ಯವೆಂದು ನಾನು ಜನರಿಗೆ ಹೇಳುತ್ತೇನೆ. ಎಲ್ಲರೂ ಈ ಅಭಿಯಾನಕ್ಕೆ ಸಹಕರಿಸಬೇಕು ಎಂದು ಕೋರಿದರು.

"ಎಂದಿಗೂ ಎಚ್ಚರ ತಪ್ಪಬೇಡಿ"
ಲಸಿಕೆ ಆರಂಭವಾಗಿದೆ ಎಂದು ಮಾಸ್ಕ್‌ಗಳನ್ನು ತೆಗೆಯುವುದು ಮತ್ತು ಮೊದಲ ಡೋಸ್ ಪಡೆದ ನಂತರ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ತಪ್ಪನ್ನು ಮಾಡಬೇಡಿ ಎಂದು ವಿನಂತಿಸುತ್ತೇನೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕಾ ಪ್ರಕ್ರಿಯೆಯನ್ನು ಇತಿಹಾಸದಲ್ಲಿ ಎಂದಿಗೂ ನಡೆಸಲಾಗಲಿಲ್ಲ. ಭಾರತ ಮೊದಲ ಹಂತದಲ್ಲಿಯೇ 3 ಕೋಟಿ ಜನರಿಗೆ ಲಸಿಕೆ ನೀಡುತ್ತಿದೆ. ಎರಡನೇ ಹಂತದಲ್ಲಿ, ನಾವು ಈ ಸಂಖ್ಯೆಯನ್ನು 30 ಕೋಟಿಗೆ ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರು.

ಅತಿ ಕಡಿಮೆ ಅವಧಿಯಲ್ಲೇ ಎರಡು ಲಸಿಕೆಗಳ ಅಭಿವೃದ್ಧಿ
ಕೊರೊನಾ ಸೋಂಕು ಕಾಣಿಸಿಕೊಂಡು ಎಲ್ಲರೂ ಆತಂಕದಿಂದ ಕೈಚೆಲ್ಲಿದ ಸಂದರ್ಭವನ್ನೇ ಭಾರತ ಸವಾಲಾಗಿ ತೆಗೆದುಕೊಂಡಿತು. ಅತಿ ಕಡಿಮೆ ಅವಧಿಯಲ್ಲಿ, ಒಂದಲ್ಲಾ, ಎರಡು ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಯಿತು. ಇದು ನಮ್ಮ ವಿಜ್ಞಾನಿಗಳು, ವೈದ್ಯರಿಗೆ ಸಲ್ಲಬೇಕಾದ ಗರಿಮೆ ಎಂದು ಹೇಳಿದರು.
Recommended Video

"ವಿಶ್ವಕ್ಕೇ ಭಾರತ ಮಾದರಿಯಾಗಿದೆ"
ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಒಂದು ಉತ್ತಮ ಉದಾಹರಣೆಯಾಗಿ ನಿಂತಿದೆ. ಚೀನಾದಲ್ಲಿ ಮೊದಲು ಕೊರೊನಾ ಪ್ರಕರಣ ಕಾಣಿಸಿಕೊಂಡಾಗ ಹಲವು ದೇಶಗಳು ತಮ್ಮ ನಾಗರಿಕರನ್ನು ಕರೆಸಿಕೊಳ್ಳಲು ಹಿಂದೇಟು ಹಾಕಿದವು. ಆದರೆ ಭಾರತ ಒಂದೇ ಭಾರತ್ ಮಿಷನ್ ಅಡಿಯಲ್ಲಿ ತನ್ನ ನಾಗರಿಕರನ್ನು ಕರೆಸಿಕೊಂಡಿತು. ಈ ಅವಧಿಯಲ್ಲಿ ಎಷ್ಟೋ ವೈದ್ಯರು, ಆರೋಗ್ಯ ಕಾರ್ಯಕರ್ತರು ತಮ್ಮ ಕುಟುಂಬಳಿಂದ ದೂರುವುಳಿದು ಕೊರೊನಾ ಸಲುವಾಗಿ ಕೆಲಸ ನಿರ್ವಹಿಸಿದ್ದಾರೆ. ಅವರ ಸೇವೆ ಮರೆಯಲು ಸಾಧ್ಯವೇ ಎಂದು ಸೇವೆಯನ್ನು ಸ್ಮರಿಸಿದರು.

"ಕೊರೊನಾದಿಂದ ಸಾಕಷ್ಟು ಕಲಿತಿದ್ದೇವೆ"
ಈ ಒಂದು ವರ್ಷಗಳ ಅವಧಿಯಲ್ಲಿ ಕೊರೊನಾ ಸೋಂಕಿನಿಂದ ಭಾರತ ಸಾಕಷ್ಟು ಪಾಠಗಳನ್ನು ಕಲಿತಿದೆ. ಆರೋಗ್ಯ ಕಾರ್ಯಕರ್ತರಿಗೆ ಮೊದಲ ಲಸಿಕೆಗಳನ್ನು ಕಾಯ್ದಿರಿಸುವ ಮೂಲಕ ಸಮಾಜವು ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications