Narendra Modi Birthday: ಮುಂದುವರಿದ ಪ್ರಧಾನಿ ಸ್ಥಿರ ನಾಯಕತ್ವ: "ನಮೋ'ಗೆ 75ನೇ ವಸಂತ
ದೇಶದಲ್ಲಿ ಸತತವಾಗಿ ಮೂರು ಬಾರಿಗೆ ಬಿಜೆಪಿಗೆ ಅಧಿಕಾರ ಗದ್ದುಗೆ ತಂದುಕೊಟ್ಟ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi Birthday) ಅವರು 75 ವರ್ಷ ಪೂರೈಸಿದ್ದಾರೆ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಬದಿಗೊತ್ತಿ ಸ್ವದೇಶ, ವಿದೇಶಿ ರಾಜಕೀಯ ನಾಯಕರು ಶುಭ ಹಾರೈಸಿದ್ದಾರೆ. ಭಾರತದ ಉದಯಗಾಥೆಯಲ್ಲಿ ಪ್ರಧಾನಿ ಮೋದಿಯವರು ಅಚಲ, ದೃಢ, ಮಣಿಯದ ವ್ಯಕ್ತಿತ್ವದ ಸಂಕೇತವಾಗಿ ಹೊರಹೊಮ್ಮಿದ್ದಾರೆ ಎಂದು ರಾಜ್ಯ ಬಿಜೆಪಿ ನಾಯಕರು ಬಣ್ಣಿಸಿದ್ದಾರೆ.
ರಾಜಕೀಯ ಹಿನ್ನೆಲೆಯ ಇಲ್ಲದೇ ದಶಕಗಳ ಕಾಲ ಈ ಕ್ಷೇತ್ರದಲ್ಲಿ ಸಕ್ರಿಯವಿರುವ ಪ್ರಧಾನಿ ಮೋದಿ ದೂರದೃಷ್ಟಿ, ರಾಜತಾಂತ್ರಿಕ ನಿಪುಣತೆಯನ್ನು, ನಾಯಕತ್ವವನ್ನು ಜಾಗತಿಕ ನಾಯಕರು ಕೊಂಡಾಡಿದ್ದಾರೆ. ಭಾರತದ ಸ್ನೇಹ ಬಯಸುತ್ತಿದ್ದಾರೆ. ಗುಜರಾತ್ ರಾಜ್ಯದಲ್ಲಿ ಆರಂಭವಾದ ರಾಜಕೀಯ ಜೀವನ ದೆಹಲಿಗೆ, ಪ್ರಧಾನಿ ಹುದ್ದೆಗೆ ಬಂದು ನಿಲ್ಲುವವರೆಗೂ ಹಾದಿ ಸುಗಮವಾಗಿರಲಿಲ್ಲ. ಅಭಿವೃದ್ಧಿ, ಸಾಧನೆ, ಚಿಂತನೆ, ಹಿಂದೂತ್ವ, ರಾಜಕಾರಣಕ್ಕೆ ಅವರಿಗಿರುವ ದೃಢ ನಿಶ್ಚಯಗಳು ಕಾರಣ ಅವರನ್ನು ಇಲ್ಲಿಯವರೆಗೆ ಕರೆತಂದಿವೆ.

ಸ್ವಾಮಿ ವಿವೇಕಾನಂದರಿಂದ ಸ್ಪೂರ್ತಿ ಪಡೆದ ಪ್ರಧಾನಿ ಅವರು ಅವರಂತೆ ದೇಶಕ್ಕಾಗಿ ಶಿಸ್ತು ಮತ್ತು ಸೇವಾ ಮನೋಭಾವ ಬೆಳೆಸಿಕೊಂಡವರು. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಪಡೆದ ಅನುಭವವು ಅವರ ವ್ಯಕ್ತಿತ್ವವನ್ನು ಮೆರಗುಗೊಳಿಸಿತು. 2001 ರಿಂದ 2014ರವರೆಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿ ಅವರು ಅಭಿವೃದ್ಧಿ ಮಾಡಿದ್ದಾರೆ.
ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ 2013ರಲ್ಲಿ ಆಯ್ಕೆಯಾದ ಅವರು, 2014ರ ಲೋಕಸಭಾ ಚುನಾವಣೆಯಲ್ಲಿ ಪಕ್ಷವನ್ನು ಐತಿಹಾಸಿಕ 282 ಸ್ಥಾನಗಳ ಗೆಲುವಿಗೆ ಕೊಂಡೊಯ್ದರು. ದೇಶದ ರಾಜಕೀಯದಲ್ಲಿ ಪ್ರಬಲ ರಾಜಕೀಯ ರಾಜವಂಶಗಳ ಹಿಡಿತವಿರುದ್ದರು ಸಹ ತಾಳ್ಮೆ ಮತ್ತು ಕಾರ್ಯಕ್ಷಮತೆ ಪಕ್ಷ ಗೆಲ್ಲುವಂತೆ ಮಾಡಿದರು.
ರಷ್ಯಾ, ಉಕ್ರೇನ್, ಇಸ್ರೇಲ್ ಹೀಗೆ ಬೇರೆ ಬೇರೆ ದೇಶಗಳಲ್ಲಿ ಯುದ್ಧ, ರಾಜಕೀಯ ಅಸ್ಥಿರತೆ, ಸರ್ಕಾರಗಳ ಕುಸಿತ ಸಾಮಾನ್ಯವಾಗಿವೆ. ಇಂತಹ ಸಮಯದಲ್ಲೂ ಸಹ ಕಳದೊಂದು ದರ್ಶಕದಿಂದ ಪ್ರಧಾನಿ ಮೋದಿ ಮಾತ್ರ ಸ್ಥಿರ ನಾಯಕತ್ವವನ್ನು ಪ್ರದರ್ಶಿಸುತ್ತಲೇ ಬಂದಿದ್ದಾರೆ. ಫ್ರಾನ್ಸ್, ಜಪಾನ್, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ, ಯುಕೆ ಮತ್ತು ಯುಎಸ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನಾಯಕತ್ವ ಬದಲಾಗಿದೆ. ಅಧ್ಯಕ್ಷರು ರಾಜೀನಾಮೆ ನೀಡುತ್ತಿದ್ದಾರೆ. ಅಲ್ಲಿ ರಾಜಕೀಯ ಪ್ರಕ್ಷುಬ್ಧತೆ ಮತ್ತು ಅಸ್ಥಿರತೆಯಿಂದ ಕೂಡಿದೆ. ಆದರೆ ಭಾರತದಲ್ಲಿ ಮೋದಿ ನಿರಂತರವಾಗಿ ಜನಮೆಚ್ಚುಗೆ ಗಳಿಸುತ್ತಿದ್ದಾರೆ.
ವ್ಯಾಪಾರ, ವಹೀವಾಟು, ರಫ್ತು ಸೇರಿದಂತೆ ಭಯೋತ್ಪಾದಕ ದಾಳಿಗಳ ಪರಿಣಾಮ ಭಾರತದ ಮೇಲಾದಾಗ ಪ್ರಧಾನಿ ಕೈಗೊಂಡ ನಿರ್ಧಾರ, ರಾಜತಾಂತ್ರಿಕ ಶಕ್ತಿಯು ದೇಶವನ್ನು ದೃಢವಾಗಿ ನಿಲ್ಲುವಂತೆ ಮಾಡಿತು. ಯುಕೆ ಜೊತೆ ಐತಿಹಾಸಿಕ ಎಫ್‌ಟಿಎಗೆ ಸಹಿ ಹಾಕಿದರು. ಡಿಜಿಟಲೀಕರಣ, ಡಾಲರ್ ಅವಲಂಬನೆ ಕಡಿಮೆ ಮಾಡಿ ರೂಪಾಯಿಗೆ ಬಲ ತಂದರು. ಇಂತಹ ಹಲವು ಕಾರಣಗಳಿಂದಲೇ ಪ್ರಧಾನಿಯನ್ನು ಜಾಗತಿಕ ನಾಯಕರು ಸಹ ಹೊಗಳುತ್ತಿದ್ದಾರೆ. ಭಾರತದೊಂದಿಗೆ ಉತ್ತಮ ಸಂಬಂಧ ಬಯಸುತ್ತಿದ್ದಾರೆ. ಸಕಾಲದಲ್ಲಿ ನಮೋ ಕೈಗೊಳ್ಳುವ ನಿರ್ಧಾರ ಟಿಕೆಗಳಿಗೆ ಒಳಗಾದರೂ ಅದನ್ನು ಅನುಷ್ಠಾನಕ್ಕೆ ತರುವಲ್ಲಿನ ಜಾಣ್ಮೆ ಮೆಚ್ಚುಗೆ ಪಾತ್ರವಾಗಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ











Click it and Unblock the Notifications