ಪ್ರಧಾನಿ ಮೋದಿ, ಅರವಿಂದ್ ಕೇಜ್ರಿವಾಲ್ ಹೇಡಿಗಳು & ಭ್ರಷ್ಟರು: ಪ್ರಿಯಾಂಕಾ ಗಾಂಧಿ
ನವದೆಹಲಿ, ಫೆಬ್ರವರಿ 01: ದೆಹಲಿ ಚುನಾವಣೆಗೆ ಕೇವಲ ನಾಲ್ಕು ದಿನಗಳು ಮಾತ್ರವೇ ಬಾಕಿ ಇದೆ. ಶುಕ್ರವಾರ ದೆಹಲಿ ಮಸ್ತಫಾಬಾದ್‌ನಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಸಂಸದೆ ಪ್ರಿಯಾಂಕಾ ಗಾಂಧಿಯವರು 2020 ರಲ್ಲಿ ನಡೆದ ಗಲಭೆ ಸ್ಮರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಇಬ್ಬರು 'ಹೇಡಿಗಳು ಮತ್ತು ಭಷ್ಟರು' ಎಂದು ಗಂಭೀರ ಆರೋಪ ಮಾಡಿದ್ದಾರೆ. ಅವರ ಈ ಹೇಳಿಕೆ ವ್ಯಾಪಕ ಚರ್ಚೆ ಸಹ ಆಗುತ್ತಿದೆ.
ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಬ್ಬರ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಭ್ರಷ್ಟಚಾರದಲ್ಲಿ ಇಬ್ಬರು ಒಂದೇ ಎಂದಿದ್ದಾರೆ. ಇವರಿಬ್ಬರ ರಾಜಕೀಯವು ಒಂದೇ ಆಗಿದೆ ಎಂದು ಜರಿದರು ಎಂದು ಪಿಟಿಐ ವರದಿ ಮಾಡಿದೆ.

ಮೊದಲಿನಿಂದಲೂ ಪ್ರಧಾನಿ ಮೋದಿಯವರು ದೇಶದ ಪ್ರಪ್ರಥಮ ಪ್ರಧಾನಿ ಕಾಂಗ್ರೆಸ್ ನಾಯಕ ದಿ. ಜವಾಹರಲಾಲ್ ನೆಹರು ಅವರನ್ನು ದೂಷಿಸುತ್ತಲೇ ಬಂದಿದ್ದಾರೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಮೋದಿಯವರನ್ನು ದೂಷಿಸುತ್ತಾರೆ. ಈ ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ನಡೆದ ವಿಚಾರಗಳನ್ನು ಪ್ರಧಾನಿ ಪ್ರಸ್ತಾಪಿಸಿ ಮಾತನಾಡುತ್ತಾರೆ. ಇವರು ಅವರನ್ನು, ಅವರು ಇವರನ್ನು ದೂಷಿಸುತ್ತಾರೆ. ನಿಜವಾಗಿ ರಾಜ್ಯದಲ್ಲಿ ಅಭಿವೃದ್ಧಿ ಮಾಡುತ್ತಿರುವವರಾರು, ಅದರ ಜವಾಬ್ದಾರಿ ಹೊರುವವರು ಯಾರು ಎಂದು ಸಂಸದೆ ಪ್ರಶ್ನಿಸಿದ್ದಾರೆ.
ಈ ಇಬ್ಬರು ನಾಯಕರು ಜನರ ಹಿತಾಸಕ್ತಿಗಿಂತ ಸ್ವ ಹಿತಾಸಕ್ತಿಯೇ ಮುಖ್ಯವಾಗಿದೆ. ಸ್ವಾರ್ಥ ರಾಜಕೀಯ ಮಾಡುತ್ತಾರೆ ಎಂದು ಆರೋಪಿಸಿದರು. ಪಿಎಂ ಮೋದಿ ಮತ್ತು ಕೇಜ್ರಿವಾಲ್ ತಮ್ಮನ್ನು ತಾವು ನಾಯಕರು ಎಂದು ಕರೆದುಕೊಳ್ಳುತ್ತಾರೆ. ಜವಾಬ್ದರಿ ಇಲ್ಲದವರು ನಾಯಕರು ಹೇಗಾಗುತ್ತಾರೆ. ನಾಯಕರಾದವರು ಜನರನ್ನು ಜಗಳಕ್ಕೆ ಪ್ರೇರೆಪಿಸುವುದಿಲ್ಲ. ಜನರ ಸಮಸ್ಯೆ ನಿವಾರಿಸಲು ಮುಂದಾಗುತ್ತಾರೆ ಎಂದು ಕುಟಿಕಿದರು.
ಇವರಿಬ್ಬರದ್ದು ಸ್ವಾರ್ಥ ರಾಜಕಾರಣ
ಭ್ರಷ್ಟ ಮತ್ತು ಹೇಡಿ ನಾಯಕರಾದ ಪ್ರಧಾನಿ ಮೋದಿ ಮತ್ತು ಅರವಿಂದ್ ಕೇಜ್ರಿವಾಲ್ ತಮ್ಮ ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತಾರೆ. ಜನರ ಬಗ್ಗೆ ಕಿಂಚಿತ್ತು ಯೋಚನೆ ಇಲ್ಲ. ಇನ್ನೂ ಸಂಸದ ರಾಹುಲ್ ಗಾಂಧಿ ಅವರು ಯಾವಾಗಲು ಸತ್ಯ ಮಾತನಾಡುತ್ತಾರೆ. ಅವರು ಸತ್ಯ ಮಾತನಾಡಲು ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ಸಹೋದರನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಕೇಜ್ರಿವಾಲ್ ಅವರ 'ಶೀಶ್ ಮಹಲ್' ಮತ್ತು ಮೋದಿ ಅವರ 'ರಾಜಮಹಲ್' ವಿವಾದವನ್ನು ಸಂಸದೇ ಪ್ರಸ್ತಾಪಿಸಿದರು. ಇವರಿಬ್ಬರ ಭ್ರಷ್ಟಾಚಾರದಿಂದ 'ದೊಡ್ಡ ಮಹಲ್' ನಿರ್ಮಿಸಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ಎರಡು ಪಕ್ಷಗಳು ವಿಫಲಗೊಂಡಿವೆ. ಇವರಿಗೆ ಜನರ ಸಮಸ್ಯೆ ಬೇಡ ಎಂದು ವಾಗ್ದಾಳಿ ನಡೆಸಿದ್ದಾರೆ.
ಇಂದು ಕೇಂದ್ರ ಬಜೆಟ್ ಮಂಡನೆ ಆಗಲಿದೆ. ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದು, ಈ ಕುರಿತು ಕಾಂಗ್ರೆಸ್ ನಾಯಕರು ಕಾದು ಕುಳಿತಿದ್ದಾರೆ. ಇದರಲ್ಲಿ ಏನೆಲ್ಲ ಪ್ರಯೋಜನಕಾರಿ ಅಂಶಗಳಿವೆ ಎಂದು ಪರಿಶೀಲಿಸಿ, ಕೇಂದ್ರ ಸರ್ಕಾರ ಹಾಗೂ ಬಜೆಟ್ ಬಗ್ಗೆ ಅಭಿಪ್ರಾಯ ಹೊರ ಹಾಕಲಿದ್ದಾರೆ. ಈ ವೇಳೆ ಸಂಸದ ಪ್ರಿಯಾಂಕಾ ಗಾಂಧಿ ಸಹ ಪ್ರತಿಕ್ರಿಯಿಸುವ ನಿರೀಕ್ಷೆ ಇದೆ.












Click it and Unblock the Notifications