Get Updates
Get notified of breaking news, exclusive insights, and must-see stories!

Independence Day 2025: ಯುಎಸ್ ವ್ಯಾಪಾರ ಬಿಕ್ಕಟ್ಟಿನ ಮಧ್ಯೆ ಸ್ವಾವಲಂಬನೆ ಪ್ರತಿಪಾದಿಸಿದ ಪ್ರಧಾನಿ ಮೋದಿ

ನವದೆಹಲಿ, ಆಗಸ್ಟ್ 15: ಭಾರತ ಸರ್ಕಾರವು ದೇಶದ ರೈತರ ಹಿತಾಸಕ್ತಿಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಲ್ಲ. ರೈತರು ದೇಶವನ್ನು "ಸ್ವಾವಲಂಬಿ"ಯನ್ನಾಗಿ ಮಾಡಿದ್ದಾರೆ ಎಂದು ಹೇಳುವ ಮೂಲಕ ವ್ಯಾಪಾರ ಒಪ್ಪಂದದ ಕುರಿತಾದ ಬಿಕ್ಕಟ್ಟಿನ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿರಿಸಿಕೊಂಡು ಪ್ರಧಾನಿ ಮೋದಿಯವರು ಸೂಕ್ಷ್ಮ ಸಂದೇಶ ರವಾನಿಸಿದರು. ಅಮೆರಿಕದ ವ್ಯಾಪಾರ ಬಿಕ್ಕಟ್ಟಿನ ನಡುವೆ ದೇಶದ ಸ್ವಾವಲಂಬನೆಯನ್ನು ಎತ್ತಿ ಹಿಡಿದಿದ್ದಾರೆ.

ಇಂದು ಆಗಸ್ಟ್ 15ರಂದು ದೆಹಲಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಇಂದು ಅವರು ಸತತ 12 ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯದ ನಂತರ ಎಲ್ಲರಿಗೂ ಆಹಾರ ಭದ್ರತೆ ಖಚಿತಪಡಿಸುವುದು ಒಂದು ಸವಾಲಾಗಿತ್ತು. ಈ ಸವಾಲಿರಗೆ ನಮ್ಮ ರೈತರು ಹಗೆಲು ಕೊಟ್ಟು ನಮ್ಮನ್ನು ಸ್ವಾವಲಂಬಿಗಳನ್ನಾಗಿ ಮಾಡಿದ್ದಾರೆ.

PM Modi Vows to Protect Farmers Interests Stresses Self-Reliance Amid US Trade Stalemate

'ಆತ್ಮನಿರ್ಭರ ಭಾರತ' ಕುರಿತು ಮಾನತಾಡಿದ ಪ್ರಧಾನಿಯವರು, ಇದು ಇತರ ದೇಶಗಳ ಮೇಲೆ ಅವಲಂಬಿತರಾಗುವುದನ್ನು ತಪ್ಪಿಸುವ ಮಾರ್ಗವಾಗಿದೆ. ಭಾರತದ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ನಾವು ಸ್ವಾವಲಂಬಿಗಳಾಗಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.

ಭಾರತದ ನೀರಿನ ಹಕ್ಕು ಭಾರತೀಯರಿಗೆ: ಮೋದಿ

ಭಾರತದಲ್ಲಿ ಹುಟ್ಟುವ ನದಿ ನೀರಿನ ಹಕ್ಕು ಭಾರತೀರಿಗೆ ಇದೆ. ದೇಶದ ರೈತರಿಗೆ ಇದೆ. ಕಳೆದ ಏಳು ದಶಕಗಳಿಂದ ಒಪ್ಪಂದದ ಮೇರೆಗೆ ಬೇರೆ ದೇಶಗಳಿಗೆ ಭಾರತ ನೀರುಣಿಸುತ್ತಿತ್ತು. ನಮ್ಮ ಭೂಮಿ ಬರಿದಾಗುತ್ತಿತ್ತು. ಅಂದ ಮೇಲೆ ಅಂತಹ ಒಪ್ಪಂದ ಏಕೆ ಬೇಕು ಎಂದು ಅವರು ಪ್ರಶ್ನೆ ಮಾಡಿದರು. ಭಾರತದ ಹಾಗೂ ನಮ್ಮ ರೈತರ ಹಿತದೃಷ್ಠಿಯಿಂದ ಪಾಕ್‌ ಜತೆಗಿನ ಸಿಂಧು ನದಿ ಒಪ್ಪಂದಕ್ಕೆ ಮುಂದೆಂದೂ ಒಪ್ಪಿಗೆ ನೀಡುವುದಿಲ್ಲ ಎಂದು ತಿಳಿಸಿದರು.

ಪಾಕಿಸ್ತಾನದ ಜೊತೆಗಿನ ಜಲ ಒಪ್ಪಂದ ರದ್ದು ಕುರಿತು ಮಾತನಾಡಿದ ಪ್ರಧಾನಿ, ಭಯೋತ್ಪಾದಕತೆ ಪೋಷಿಸುವವರನ್ನು ನಾವು ಇನ್ನು ಮುಂದೆ ಬೇರೆ ಬೇರೆ ಎಂದು ಪರಿಗಣಿಸದೇ ಅವರೆಲ್ಲರನ್ನು ಒಂದೇ ಎಂದು ಕರೆಯುತ್ತೆವೆ. ಉಗ್ರರಿಗೆ ಸಹಾಯ ಮಾಡುವವರೆಲ್ಲರನ್ನು ಭಯೋತ್ಪಾದಕರಂತೆ ಕಾಣುತ್ತೇವೆ ಎಂದು ಪಾಕ್‌ ಹಾಗೂ ಉಗ್ರರ ಪರ ದೇಶಗಳಿಗೆ ಎಚ್ಚರಿಕೆ ನೀಡಿದರು.

ಅಮೆರಿಕದ ಕೃಷಿ ಹಾಗೂ ಡೈರಿ ಉತ್ಪನ್ನಗಳಿಗೆ ತನ್ನ ದೇಶೀಯ ಮಾರುಕಟ್ಟೆ ತೆರೆಯಲು ಟ್ರಂಪ್ ಒತ್ತಡಕ್ಕೆ ಭಾರತ ಮಣಿದಿಲ್ಲ. ಇದರಿಂದ ವ್ಯಾಪಾರ ಒಪ್ಪಂದ ನಿಂತಿದೆ. ಇದೆಲ್ಲ ಬಿಕ್ಕಟ್ಟಿನ ಮಧ್ಯೆ ಅಮೆರಿಕಾ ಅಧ್ಯಕ್ಷರು ಭಾರತದ ಮೇಲೆ ಶೇಕಡಾ 25ರಷ್ಟು ಸುಂಕ ವಿಧಿಸಿದ್ದಾರೆ. ಭಾರತವು ರಷ್ಯಾದ ತೈಲವನ್ನು ನಿರಂತರ ಖರೀದಿಸುವುದರ ಮೇಲೂ ಶೆಕಡಾ 25ರಷ್ಟು ಹೆಚ್ಚುವರಿ ಸುಂಕ ಘೋಷಿಸಿದ್ದಾರೆ.

ದೆಹಲಿಯಾದ್ಯಂತ ಹೈ ಅಲರ್ಟ್, ಬಿಗಿ ಭದ್ರತೆ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದೆಹಲಿಯಾದ್ಯಂತ ಕಟ್ಟೆಚ್ಚರ ವಹಿಸಲಾಗಿತ್ತು. .ವಿವಿಧ ಹಂತಗಳಲ್ಲಿ ಭದ್ರತೆ ಒದಗಿಸಲಾಗಿತ್ತು. 14,000 ಸಿಬ್ಬಂದಿ, ಡ್ರೋನ್ ವಿರೋಧಿ ವ್ಯವಸ್ಥೆ ನಿಯೋಜಿಸಲಾಗಿತ್ತು. ಶುಕ್ರವಾರದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕಾಗಿ ರಾಷ್ಟ್ರ ರಾಜಧಾನಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಎತ್ತರದ ಕಟ್ಟಡಗಳಲ್ಲಿ ಸ್ನೈಪರ್‌ಗಳು, ಹೆಚ್ಚಿನ ಕ್ಯಾಮೆರಾ ಕಣ್ಗಾವಲು ವ್ಯವಸ್ಥೇ ಇತ್ತು. ಅಗತ್ಯ ಸಂಚಾರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಲೈಟಿಂಗ್ಸ್‌ಗಳಿಂದ ದೆಹಲಿ ಕೆಂಪು ಕೋಟೆ ಸಿಂಗಾರಗೊಂಡಿತ್ತು. ಇಲ್ಲಿ ಐದು ಪಾರ್ಕಿಂಗ್ ಪ್ರದೇಶಗಳಲ್ಲಿ ವಾಹನಗಳ ಕೆಳಭಾಗವನ್ನು ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಅಥವಾ ನಿಷಿದ್ಧ ವಸ್ತುಗಳಿಗಾಗಿ ಸ್ಕ್ಯಾನ್ ಮಾಡಲು ಅಂಡರ್-ವೆಹಿಕಲ್ ಕಣ್ಗಾವಲು ವ್ಯವಸ್ಥೆಗಳನ್ನು (UVSS) ಸಹ ನಿಯೋಜನೆಗೊಂಡಿತ್ತು. ಪೊಲೀಸ್, ಸಂಚಾರಿ ಪೊಲೀಸ್ ಸೇರಿದಂತೆ ಅಗತ್ಯ ಎಲ್ಲ ವಿಧದ ಗಸ್ತು ವಹಿಸಲಾಗಿತ್ತು. ಇದರ ನಡುವೆ ಪ್ರಧಾನಿ ಮೋದಿಯವರು ಧ್ವಜಾರೋಹಣ ನೆರವೇರಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+