• search

ಕೇದಾರನಾಥ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ

By Sachhidananda Acharya
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಉತ್ತರಾಖಂಡ್, ಅಕ್ಟೋಬರ್ 20: ಕೇದಾರನಾಥ ದೇವಸ್ಥಾನಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದರು. ಈ ವೇಳೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.

  ಬಳಿಕ ಕೇದರನಾಥದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮೋದಿ, "ದೀಪಾವಳಿಯ ಮರುದಿನ ನಾನು ಕೇದಾರನಾಥದಲ್ಲಿರುವುದಕ್ಕೆ ಸಂತಸ ಪಡುತ್ತೇನೆ. ಇವತ್ತು ಗುಜರಾತಿಗಳಿಗೆ ಹೊಸ ವರ್ಷಾರಂಭ. ಈ ಸಂದರ್ಭದಲ್ಲಿ ನಾನು ಜಗತ್ತಿನಾದ್ಯಂತ ಹೊಸ ವರ್ಷಾರಂಭವನ್ನು ಆಚರಣೆ ಮಾಡುವವರಿಗೆ ಶುಭಾಷಯಗಳನ್ನು ಕೋರುತ್ತೇನೆ," ಎಂದು ಹೇಳಿದರು.

  PM Modi underscores development of Kedarnath

  ಜನ ಸೇವೆಯೇ ಜನಾರ್ಧನ ಸೇವೆ ಎಂದು ಹೇಳಿದ ಪ್ರಧಾನಿ ಮೋದಿ, "2022ಕ್ಕೆ ಸ್ವತಂತ್ರ ಭಾರತಕ್ಕೆ 75 ವರ್ಷ ತುಂಬಲಿದೆ. ಈ ಹಿನ್ನಲೆಯಲ್ಲಿ ಇವತ್ತು ಕೇದಾರನಾಥದ ನೆಲದಲ್ಲಿ ನಿಂತು ನಾನು ಅಭಿವೃದ್ಧಿ ಹೊಂದಿದ ಭಾರತದ ಕನಸ್ಸನ್ನು ನನಸಾಗಿಸಲು ನಾನು ಭೋಲೇ ಬಾಬಾ ಆಶೀರ್ವಾದವನ್ನು ಬೇಡುತ್ತೇನೆ," ಎಂದು ಹೇಳಿದರು

  "2013ರಲ್ಲಿ ಸಂಭವಿಸಿದ ಪ್ರವಾಹ ನಮ್ಮನ್ನೆಲ್ಲಾ ಬೇಸರಗೊಳ್ಳುವಂತೆ ಮಾಡಿತ್ತು. ಆ ಸಂದರ್ಭದಲ್ಲಿ ನಾನು ಪ್ರಧಾನಿಯಾಗಿರಲಿಲ್ಲ; ಗುಜರಾತ್ ಮುಖ್ಯಮಂತ್ರಿಯಾಗಿದ್ದೆ. ಆಗ ನಾನು ಸಂತ್ರಸ್ತರಿಗೆ ನನ್ನಿಂದ ಸಾಧ್ಯವಿರುವ ಸಹಾಯ ಮಾಡಲು ಇಲ್ಲಿಗೆ ಬಂದಿದ್ದೆ," ಎಂದು ಪ್ರಧಾನಿ ನೆನಪಿಸಿಕೊಂಡರು.

  ಮಾದರಿ ತೀರ್ಥ ಕ್ಷೇತ್ರವೆಂದರೆ ಹೇಗಿರಬೇಕು ಎಂಬುದನ್ನು ಕೇದಾರನಾಥ ಅಭಿವೃದ್ಧಿಯ ಮೂಲಕ ನಾವು ತೋರಿಸಲು ಹೊರಟಿದ್ದೇವೆ. ಭಕ್ತರಿಗೆ ಸ್ನೇಹಿಯಾಗಿರುವ, ಅ಻ರ್ಚಕರಿಗೆ ಅನುಕೂಲವಾಗಿರುವಂತೆ ಕೇದರನಾಥ ದೇವಸ್ಥಾನ ಅಭಿವೃದ್ಧಿಪಡಿಸುವುದು ನಮ್ಮ ಗುರಿ ಎಂದು ಅವರು ಹೇಳಿದರು.

  PM Modi underscores development of Kedarnath

  "ನಾವು ಕೇದಾರನಾಥದಲ್ಲಿ ಗುಣಮಟ್ಟದಲ್ಲಿ ಮೂಲಸೌಕರ್ಯ ನಿರ್ಮಿಸಲಿದ್ದೇವೆ. ಇದು ಅತ್ಯಾಧುನಿಕವಾಗಿರಲಿದೆ. ಆದರೆ ಸಾಂಪ್ರದಾಯಿಕ ಮೌಲ್ಯಗಳನ್ನು ಬಿಟ್ಟು ಕೊಡುತ್ತಿಲ್ಲ. ಹಾಗೂ ಪರಿಸರಕ್ಕೆ ಯಾವುದೇ ರೀತಿಯಲ್ಲೂ ಹಾನಿ ಮಾಡುವುದಿಲ್ಲ ಎಂಬ ಭರವಸೆ ನೀಡುತ್ತೇನೆ," ಎಂಬುದಾಗಿ ಪ್ರಧಾನಿ ಹೇಳಿದರು.

  ಇದೇ ವೇಳೆ ಅವರು ಹಿಮಾಲಯಕ್ಕೆ ಬಂದು ವಿಶಿಷ್ಟ ಅನುಭವಗಳನ್ನು ಪಡೆಯುವಂತೆ ದೇಶದ ಜನತೆಗೆ ಕರೆ ನೀಡಿದರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Prime Minister Narendra Modi on Friday sought the blessings of 'Bhole Baba' in Kedarnath and pledge to devote himself fully to realising the dream of a developed India by 2022.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more