ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Vande Bharat Express ಉದ್ಘಾಟನೆ: ತೆಲಂಗಾಣಕ್ಕೆ ಮೋದಿ ಭೇಟಿ ಇಲ್ಲ- ಕಾರಣವೇನು?

|
Google Oneindia Kannada News

ಹೈದರಾಬಾದ್‌, ಜನವರಿ 12: Vande Bharat Express ಉದ್ಘಾಟನೆ ಮಾಡಲು ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಅಂದರೆ ಜನವರಿ 15 ರಂದು ಸಿಕಂದರಾಬಾದ್‌ನಿಂದ ವಿಶಾಖಪಟ್ಟಣಕ್ಕೆ ಭಾರತದ ಎಂಟನೇ ವಂದೇ ಭಾರತ್ ರೈಲಿಗೆ ಚಾಲನೆ ದೊರೆಯಲಿದೆ. ಈ ಮೊದಲು ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಆಗಮಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದು ರದ್ದಾಗಿದೆ. ಪ್ರಧಾನಿ ಮೋದಿ ಅವರು ವರ್ಚುವಲ್‌ ಆಗಿ ಈ ರೈಲಿಗೆ ಚಾಲನೆ ನೀಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜನವರಿ 19 ರಂದು ರಾಜ್ಯಕ್ಕೆ ನೀಡಬೇಕಿದ್ದ ಸಂಕ್ಷಿಪ್ತ ಭೇಟಿಯನ್ನು ಪ್ರಧಾನಿ 'ತಾತ್ಕಾಲಿಕವಾಗಿ ಮುಂದೂಡಿದ್ದಾರೆ' ಎಂದು ಹೇಳಲಾಗಿದೆ. ಅವರ ಭೇಟಿಯನ್ನು ಮುಂದೂಡಲು ಯಾವುದೇ ಕಾರಣವನ್ನು ಬಿಜೆಪಿಯಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಉಲ್ಲೇಖಿಸಿಲ್ಲ ಎಂದು 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ರೈಲಿನ ಉದ್ಘಾಟನೆಯ ಜೊತೆಗೆ, ಪ್ರಧಾನ ಮಂತ್ರಿ ಸಿಕಂದರಾಬಾದ್‌ನ ಪರೇಡ್ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ವಿವಿಧ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

PM Modi to virtually launch Secunderabad-Vishakapatnam Vande Bharat Express

ಮಕರ ಸಂಕ್ರಾಂತಿಯಂದು ಹೈಸ್ಪೀಡ್ ರೈಲಿನ ಉದ್ಘಾಟನೆ ತೆಲಂಗಾಣ ಮತ್ತು ಆಂಧ್ರಪ್ರದೇಶ ಎರಡೂ ರಾಜ್ಯಗಳ ಜನರಿಗೆ ಉಡುಗೊರೆಯಾಗಿದೆ ಎಂದು ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಹೇಳಿದರು. ಜನವರಿ 15 ರಂದು ಬೆಳಿಗ್ಗೆ 10 ಗಂಟೆಗೆ ಪ್ರಧಾನಿ ರೈಲಿಗೆ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದರು.

ಮಕರ ಸಂಕ್ರಾಂತಿ ವಿಶೇಷ ಪುಟ

ರೈಲು ಎಂಟು ಗಂಟೆಗಳಲ್ಲಿ ಸಂಪೂರ್ಣ ದೂರವನ್ನು ಕ್ರಮಿಸುತ್ತದೆ. ವಾರಂಗಲ್, ವಿಜಯವಾಡ, ಖಮ್ಮಂ ಮತ್ತು ರಾಜಮಂಡ್ರಿಗಳನ್ನು ಮಧ್ಯಂತರ ನಿಲ್ದಾಣಗಳಾಗಿ ಕಲ್ಪಿಸಲಾಗಿದೆ.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಮತ್ತು ಜಿ. ಕಿಶನ್ ರೆಡ್ಡಿ ಅವರು ಸಿಕಂದರಾಬಾದ್‌ನ ರೈಲು ನಿಲ್ದಾಣದಲ್ಲಿ ರೈಲಿಗೆ ಚಾಲನೆ ನೋಡುವಾಗ ಉಪಸ್ಥಿತರಿರುತ್ತಾರೆ. ರೈಲು ಬುಧವಾರ ಸಂಜೆ ವಿಶಾಖಪಟ್ಟಣಂ ತಲುಪಿದೆ. ಇದಕ್ಕೆ ಜನವರಿ 15 ರಂದು ಅದರ ಸಿಕಂದರಾಬಾದ್‌ನಲ್ಲಿ ಚಾಲನೆ ದೊರೆಯಲಿದೆ.

PM Modi to virtually launch Secunderabad-Vishakapatnam Vande Bharat Express

ಹಿಂದಿನ ಯೋಜನೆಯಂತೆ, ಮೋದಿ ಅವರು ಜನವರಿ 19 ರಂದು ಸಿಕಂದರಾಬಾದ್‌ನಿಂದ ರೈಲಿಗೆ ಫ್ಲ್ಯಾಗ್ ಆಫ್ ಮಾಡಬೇಕಿತ್ತು. ಮಹಬೂಬ್‌ನಗರ ಮತ್ತು ಸಿಕಂದರಾಬಾದ್ ನಡುವಿನ ಹಳಿಗಳನ್ನು ದ್ವಿಗುಣಗೊಳಿಸುವ ಯೋಜನೆಗೆ ಅಡಿಪಾಯ ಹಾಕಬೇಕಿತ್ತು. ಇದರ ಅಂದಾಜು ವೆಚ್ಚ 1,231 ರೂ. ಆಗಿದೆ.

ವಾರಂಗಲ್ ಬಳಿಯ ಸ್ಥಳದಲ್ಲಿ ಸುಮಾರು 500 ಮಿಲಿಯನ್ ವೆಚ್ಚದಲ್ಲಿ ವ್ಯಾಗನ್ ವರ್ಕ್‌ಶಾಪ್ ಸ್ಥಾಪಿಸುವ ಯೋಜನೆಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಿಕಂದರಾಬಾದ್ ರೈಲು ನಿಲ್ದಾಣದ ಕಾಮಗಾರಿಗೆ ಸುಮಾರು 700 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಮೋದಿ ಅವರು ಐಐಟಿ ಹೈದರಾಬಾದ್‌ಗೆ ಭೇಟಿ ನೀಡಬೇಕಿತ್ತು. 2,597 ಕೋಟಿ ರೂಪಾಯಿಗಳ ಮೌಲ್ಯದ ವಿವಿಧ ಯೋಜನೆಗಳನ್ನು ಅನಾವರಣಗೊಳಿಸಬೇಕಿತ್ತು. ಇವುಗಳಲ್ಲಿ ಕೆಲವು ಶೈಕ್ಷಣಿಕ ಕಟ್ಟಡಗಳು, ಸಂಶೋಧನಾ ಉದ್ಯಾನವನ, ಜ್ಞಾನ ಕೇಂದ್ರ, ಉಪನ್ಯಾಸ ಸಭಾಂಗಣ, ಆರೋಗ್ಯ ರಕ್ಷಣಾ ಸಂಕೀರ್ಣ ಮತ್ತು ಅತಿಥಿ ಗೃಹವನ್ನು ಒಳಗೊಂಡಿವೆ.

English summary
To Inaugurate Vande Bharat Express India's eighth Vande Bharat train from Secunderabad to Visakhapatnam will be launched on the occasion of Makar Sankranti January 15
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X