• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಸವಣ್ಣ ಪ್ರತಿಮೆ ಅನಾವರಣ ಆಹ್ವಾನ ಸ್ವೀಕರಿಸಿದ ಮೋದಿ

By Mahesh
|

ನವದೆಹಲಿ, ಅ.26: ಲಂಡನ್ನಿನ ಥೇಮ್ಸ್ ನದಿ ತಟದಲ್ಲಿ 'ಜಗಜ್ಯೋತಿ ಬಸವೇಶ್ವರ' ಪ್ರತಿಮೆ ಅನಾವರಣಕ್ಕೆ ಮುಹೂರ್ತ ನಿಗದಿ ಮಾಡಲಾಗಿದೆ. ಮಾರ್ಚ್ ತಿಂಗಳಿನಲ್ಲಿ ಲ್ಯಾಂಬೆತ್ ನ ಮಾಜಿ ಮೇಯರ್ ಕನ್ನಡಿಗ ನೀರಜ್ ಪಾಟೀಲ್ನೀಡಿದ ಆಹ್ವಾನವನ್ನು ಸ್ವೀಕರಿಸುವುದಾಗಿ ಪ್ರಧಾನಿ ಮೋದಿ ಅವರು ಘೋಷಿಸಿದ್ದಾರೆ.

12ನೇ ಶತಮಾನದ ಮಾನವತಾವಾದಿ, ಕ್ರಾಂತಿಯೋಗ ಬಸವಣ್ಣ ಅವರ ಪ್ರತಿಮೆಯನ್ನು ಲಂಡನ್ನಿನಲ್ಲಿ ಸ್ಥಾಪಿಸಲು ಪ್ರಮುಖ ಕಾರಣಕರ್ತರಾದವರು ಲ್ಯಾಂಬೆತ್​ನ ಮಾಜಿ ಮೇಯರ್ ನೀರಜ್ ಪಾಟೀಲ್.

ಮಾ.24ರಂದು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದ ನೀರಜ್ ಅವರು ಬಸವಣ್ಣ ಪ್ರತಿಮೆ ಅನಾವರಣಕ್ಕೆ ಆಹ್ವಾನ ನೀಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜೂನ್ ಜುಲೈ ತಿಂಗಳಿನಲ್ಲೇ ಕಾರ್ಯಕ್ರಮ ನಡೆಯಬೇಕಿತ್ತು. ಅದರೆ, ಮೋದಿ ಅವರು ವಿದೇಶಿ ಪ್ರವಾಸ ನಿರತರಾಗಿದ್ದರಿಂದ ಸಾಧ್ಯವಾಗಲಿಲ್ಲ.

ಈಗ ನವೆಂಬರ್​ ಎರಡನೇ ವಾರದಲ್ಲಿ ಮೋದಿ ಅವರು ಬ್ರಿಟನ್ ಪ್ರವಾಸ ಕೈಗೊಳ್ಳಲಿದ್ದಾರೆ ಈ ಸಂದರ್ಭದಲ್ಲಿ ನ .14ರಂದು ಬಸವೇಶ್ವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ.

ಥೇಮ್ಸ್ ನದಿ ತೀರದಲ್ಲಿ ಜಗಜ್ಯೋತಿ ಬಸವೇಶ್ವರರ 3.5 ಅಡಿ ಎತ್ತರದ ಪ್ರತಿಮೆ ಸ್ಥಾಪಿಸುವ ಸಲುವಾಗಿ 2010ರ ಜನವರಿ 19ರಂದು ಬಸವೇಶ್ವರ ಫೌಂಡೇಶನ್ ಸ್ಥಾಪಿಸಲಾಗಿತ್ತು.

ಪ್ರತಿಮೆ ನಿರ್ಮಾಣ ಸಂಬಂಧಿಸಿ 2.50 ಲಕ್ಷ ಪೌಂಡ್​ಗಳನ್ನು ಬ್ರಿಟನ್ ಮತ್ತು ಸಾಗರೋತ್ತರ ರಾಷ್ಟ್ರಗಳಲ್ಲಿರುವ ಭಾರತೀಯ ಸಮುದಾಯದವರು ನೀಡಿದ್ದರು. ಅಂದಿನ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 2010-11ರ ಬಜೆಟ್​ನಲ್ಲಿ 3 ಕೋಟಿ ರು. ಅನುದಾನ ನೀಡಿತ್ತು.[ಲಂಡನ್‌ನಲ್ಲಿ ಬಸವಣ್ಣ ಪುತ್ಥಳಿ ಸ್ಥಾಪನೆಗೆ ಕೌನ್ಸಿಲ್ ಒಪ್ಪಿಗೆ]

ಮೂರ್ತಿ ಸ್ಥಾಪನೆ ಸಂಬಂಧ ಲ್ಯಾಂಬೆತ್ ಯೋಜನಾ ಸಮಿತಿಗೆ ಪ್ರಸ್ತಾವನೆಗೆ ಅನುಮತಿ ಸಿಕ್ಕ ಬಳಿಕ ವಾಕ್ಸ್​ಹಾಲ್ ಸ್ಟ್ರಿಂಗ್ ಉದ್ಯಾನವನದ ಅಭಿವೃದ್ಧಿಗೆ ಈ ಮೊತ್ತವನ್ನು ಬಳಸಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಭಾರತದ ಸಂಸತ್ತಿನಲ್ಲಿಯೂ ಬಸವಣ್ಣನವರ ಪ್ರತಿಮೆ ಅನಾವರಣಗೊಳಿಸಲಾಗಿದ್ದು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi in his Mann ki Baat said he has accepted Neeraj Patil, former mayor of the London borough of Lambeth's invitation to unveil a statue of 12th century Indian philosopher 'Basaveshwara' here on the banks of the river Thames. The event will be held on November 14.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more