ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ 28ರಂದು 100ನೇ ಕಿಸಾನ್ ರೈಲಿಗೆ ಮೋದಿಯಿಂದ ಹಸಿರು ನಿಶಾನೆ

|
Google Oneindia Kannada News

ನವದೆಹಲಿ, ಡಿ. 27: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2020ರ ಡಿಸೆಂಬರ್ 28ರಂದು ಮಧ್ಯಾಹ್ನ 4.30ಕ್ಕೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಹಾರಾಷ್ಟ್ರದ ಸಂಗೋಲ ಮತ್ತು ಪಶ್ಚಿಮ ಬಂಗಾಳದ ಶಾಲಿಮಾರ್ ನಡುವೆ ಸಂಚರಿಸಲಿರುವ 100ನೇ ಕಿಸಾನ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಬಹು ಸಾಮಗ್ರಿಯ ಈ ರೈಲು ಸೇವೆಯಲ್ಲಿ ತರಕಾರಿ ಅಂದರೆ ಹೂಕೋಸು, ದೊಣ್ಣೆಮೆಣಸಿನಕಾಯಿ, ಎಲೆ ಕೋಸು, ನುಗ್ಗೆಕಾಯಿ, ಮೆಣಸಿನಕಾಯಿ, ಈರುಳ್ಳಿ ಮತ್ತು ಹಣ್ಣುಗಳಾದ ದ್ರಾಕ್ಷಿ, ಕಿತ್ತಲೆ, ದಾಳಿಂಬೆ, ಬಾಳೆಹಣ್ಣು, ಮರಸೇಬು ಇತ್ಯಾದಿಯನ್ನು ಸಾಗಿಸಲಿದೆ. ಬೇಗ ಹಾಳಾಗುವ ಸರಕುಗಳನ್ನು ಲೋಡ್ ಮಾಡಲು ಮತ್ತು ಇಳಿಸಲು ಪ್ರಮಾಣದ ಮೇಲೆ ಯಾವುದೇ ನಿರ್ಬಂಧವಿಲ್ಲದ ಎಲ್ಲಾ ನಿಲುಗಡೆಗಳಲ್ಲಿ ಅನುಮತಿಸಲಾಗುತ್ತದೆ. ಭಾರತ ಸರ್ಕಾರ, ಹಣ್ಣುಗಳು ಮತ್ತು ತರಕಾರಿಗಳ ಸಾಗಣೆಗೆ ಶೇ.50 ಸಹಾಯಧನವನ್ನು ವಿಸ್ತರಿಸಿದೆ.

PM Modi to flag off 100th Kisan Rail on 28 December

ಕಿಸಾನ್ ರೈಲಿನ ಬಗ್ಗೆ:

ಪ್ರಥಮ ಕಿಸಾನ್ ರೈಲನ್ನು 2020ರ ಆಗಸ್ಟ್ 7ರಂದು ದೇವಾಲೈನಿಂದ ದನಾಪುರದವರೆಗೆ ಪರಿಚಯಿಸಲಾಯಿತು, ನಂತರ ಅದನ್ನು ಮುಜಾಫರ್ಪುರವರೆಗೆ ವಿಸ್ತರಿಸಲಾಯಿತು. ರೈತರಿಂದ ಉತ್ತಮ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ, ರೈಲಿನ ಆವರ್ತನೆಯನ್ನು ಸಹ ವಾರಕ್ಕೊಮ್ಮೆಯ ಬದಲು ವಾರದಲ್ಲಿ ಮೂರು ದಿನಗಳಿಗೆ ಹೆಚ್ಚಿಸಲಾಗಿದೆ. ಕಿಸಾನ್ ರೈಲು ಕೃಷಿ ಉತ್ಪನ್ನಗಳನ್ನು ದೇಶದಾದ್ಯಂತ ತ್ವರಿತವಾಗಿ ಸಾಗಿಸುವುದನ್ನು ಖಾತ್ರಿಪಡಿಸುವಲ್ಲಿ ಮಹತ್ವದ್ದಾಗಿದೆ. ಇದು ಬೇಗ ನಾಶವಾಗುವ ಉತ್ಪನ್ನಗಳ ತಡೆರಹಿತ ಸಾಗಾಟದ ಸರಪಳಿ ಒದಗಿಸುತ್ತದೆ.(ಪ್ರಧಾನಿ ಸಚಿವಾಲಯದ ಪ್ರಕಟಣೆ)

English summary
Prime Minister Narendra Modi will flag off the 100th Kisan Rail from Sangola in Maharashtra to Shalimar in West Bengal on 28th December 2020 at 4:30 PM via video conferencing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X