ಅವಿಶ್ವಾಸ ನಿರ್ಣಯ ಮಂಡನೆ ಬಗ್ಗೆ 2018ರಲ್ಲೇ ಪ್ರಧಾನಿ ಮೋದಿ ಹೇಳಿಕೆಯ ವಿಡಿಯೋ ವೈರಲ್
ಬೆಂಗಳೂರು, ಜುಲೈ 26: 2003ರ ನಂತರ ಇಷ್ಟು ವರ್ಷಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಮೊದಲ ಬಾರಿಗೆ ಬುಧವಾರ ಅವಿಶ್ವಾಸ ನಿರ್ಣಯ ಮಂಡನೆ ಆಗಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಮತ್ತು ಭಾರತ್ ರಾಷ್ಟ್ರ ಸಮಿತಿಯು ಅವಿಶ್ವಾಸ ನಿರ್ಣಯ ಮಂಡಿಸುತ್ತಿದ್ದಂತೆ, ಪ್ರಧಾನಿ ಮೋದಿ ಅವರು 2018ರಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ನುಡಿದಿದ್ದ ರಾಜಕೀಯ ಭವಿಷ್ಯದ ವಿಡಿಯೋ ಈಗ ವೈರಲ್ ಆಗುತ್ತಿದೆ.
2023ರಲ್ಲಿ ಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧರಾಗುವಂತೆ ಪ್ರತಿಪಕ್ಷಗಳಿಗೆ ಪ್ರಧಾನಿ ಮೋದಿ 2018ರಲ್ಲಿಯೇ ಒತ್ತಾಯಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಆಗ ಅವರ ಮಾತಿಗೆ ಇಡೀ ಲೋಕಸಭೆಯಲ್ಲಿ ನಗೆಗಡಲಲ್ಲಿ ತೇಲಿತು.
Opposition is bringing a No confidence motion against government which PM Modi had predicted 5 years ago! pic.twitter.com/PBCaUe3fqG
— DD News (@DDNewslive) July 26, 2023
2018ರಲ್ಲಿ ಎನ್‌ಡಿಎ ಭರ್ಜರಿ ಬಹುಮತದೊಂದಿಗೆ ವಿಶ್ವಾಸಮತ ಗೆದ್ದ ನಂತರ ಪ್ರಧಾನಿ ಮೋದಿ ಪ್ರತಿಪಕ್ಷಗಳ 2023ರಲ್ಲಿ ಅವಿಶ್ವಾಸ ಮಂಡಿಸುವ ಕುರಿತು ಅಂದೇ ಹೇಳಿದ್ದರು. ಈ ವಿಡಿಯೋವನ್ನು ದೂರದರ್ಶನ ನ್ಯೂಸ್ (DD News) ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

2018 ರಲ್ಲಿ ತೆಲುಗು ದೇಶಂ ಪಕ್ಷದಿಂದ ಅವಿಶ್ವಾಸ ಮತವನ್ನು ಮಂಡಿಸಲಾಗಿತ್ತು. ನಂತರ ವಿರೋಧ ಪಕ್ಷಗಳ ಪೈಕಿ ಹಲವು ಪಕ್ಷಗಳು ಬಿಜೆಪಿಗೆ ಬೆಂಬಲ ನೀಡಲು ಮುಂದೆ ಬಂದವು. ಇದೆಲ್ಲ ಬೆಳವಣಿಗೆ ಮಧ್ಯೆ 314 ಸ್ಥಾನ ಪಡೆದ ಎನ್‌ಡಿಗೆ ಅಂದು ಇದ್ದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ವಿಶ್ವಾಸಮತಕ್ಕೆ ಅವಕಾಶ ಕಲ್ಪಿಸಿಕೊಟ್ಟರು. ಬಳಿಕ ಎರಡನೇ ಬಾರಿಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು.
ವಿಡಿಯೋ:ಕುತೂಹಲ ಕೆರಳಿಸಿದ ಪ್ರಧಾನಿ ಹೇಳಿಕೆ
ಐದು ವರ್ಷಗಳ ಹಿಂದಿನ ಇತಿಹಾಸ ಹಾಗೂ ಪ್ರಧಾನಿ ಮೋದಿಯವರು ಹೇಳಿದ್ದನ್ನು ನೋಡಿದರೆ, ವಿರೋಧ ಪಕ್ಷಗಳ ಅವಿಶ್ವಾಸ ಮಂಡನೆ ಆಗಿದೆ. ಇದು ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತು ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುವ ಮುನ್ಸೂಚನೆ ಎಂಬ ಕುತೂಹಲ ಕೆರಳುವಂತೆ ಮಾಡಿದೆ.
ಇತ್ತ ಕೇಂದ್ರ ವಿರೋಧ ಪಕ್ಷಗಳು ಮಣಿಪುರ ಜನಾಂಗೀಯ ಸಂಘರ್ಷವನ್ನು ಇಟ್ಟುಕೊಂಡು ಚುನಾವಣಾ ರಣತಂತ್ರ ಹೆಣೆಯುತ್ತಿವೆ.












Click it and Unblock the Notifications