PM Modi Special Interview: ಮೋದಿ ಏಕೆ ಪತ್ರಿಕಾಗೋಷ್ಠಿ ನಡೆಸುವುದಿಲ್ಲ? ಪ್ರಧಾನಿ ಉತ್ತರಿಸಿದ್ದು ಹೀಗೆ...
ಲೋಕಸಭಾ ಚುನಾವಣಾ ಪ್ರಚಾರದ ಗದ್ದಲದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಟುಡೇ ಜೊತೆ ವಿಶೇಷ ಸಂವಾದ ನಡೆಸಿದರು. ಈ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರಿಸಿದರು.
ವಿಶೇಷ ಸಂವಾದದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರಿಕಾಗೋಷ್ಠಿ ನಡೆಸದಿರುವ ಬಗ್ಗೆ ಮತ್ತು ಸಂದರ್ಶನಗಳನ್ನು ನೀಡದಿರುವ ಬಗ್ಗೆ ಪ್ರಶ್ನೆ ಕೇಳಲಾಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ತುಂಬಾ ಆಸಕ್ತಿದಾಯಕ ಉತ್ತರಗಳನ್ನು ನೀಡಿದ್ದಾರೆ.

ಈ ಬಗ್ಗೆ ಉತ್ತರಿಸಿದ ಪ್ರಧಾನಿ ಮೋದಿ, 'ಮೊದಲ ವಿಷಯವೆಂದರೆ ನಾನು ಎಂದಿಗೂ ಅದನ್ನು ನಿರಾಕರಿಸಿಲ್ಲ. ಮಾಧ್ಯಮಗಳನ್ನು ಒಂದು ನಿರ್ಧಿಷ್ಟ ರೀತಿಯಲ್ಲಿ ಬಳಸಲಾಗಿದೆ. ನಾನು ಆ ದಾರಿಯಲ್ಲಿ ಹೋಗಲು ಬಯಸುವುದಿಲ್ಲ. ನಾನು ಕಷ್ಟಪಟ್ಟು ಕೆಲಸ ಮಾಡಲು ಬಯಸುತ್ತೇನೆ. ನಾನು ಬಡವರ ಮನೆ ಬಾಗಿಲನ್ನು ತಲುಪಲು ಬಯಸುತ್ತೇನೆ' ಎಂದು ಅವರು ಹೇಳಿದರು.
'ನಾನು ವಿಜ್ಞಾನ ಭವನದಲ್ಲಿ ರಿಬ್ಬನ್‌ಗಳನ್ನು ಕತ್ತರಿಸಬಲ್ಲೆ ಮತ್ತು ಫೋಟೋಗಳನ್ನು ತೆಗೆಯಬಲ್ಲೆ. ಆದರೆ ನಾನು ಹಾಗೆ ಮಾಡುವುದಿಲ್ಲ. ನಾನು ಜಾರ್ಖಂಡ್‌ನಂತ ಸಣ್ಣ ಜಿಲ್ಲೆಗೆ ಹೋಗಿ ಕೆಲಸ ಮಾಡಲು ಬಯಸುತ್ತೇನೆ' ಎಂದರು. 'ನಾನು ಹೊಸ ಸಂಸ್ಕೃತಿಯನ್ನು ತಂದಿದ್ದೇನೆ. ಆ ಸಂಸ್ಕೃತಿ ಸರಿಯಾಗಿದ್ದರೆ, ಮಾಧ್ಯಮಗಳು ಅದನ್ನು ಸರಿಯಾದ ರೀತಿಯಲ್ಲಿ ಪ್ರಸ್ತುತಪಡಿಸುತ್ತವೆ ಇಲ್ಲವಾದಲ್ಲಿ ಬಿಡುತ್ತವೆ'' ಎಂದರು.
'ಎರಡನೆಯದಾಗಿ, ನಾನು ಸಂಸತ್ತಿಗೆ ಜವಾಬ್ದಾರನಾಗಿದ್ದೇನೆ. ಸಂಸತ್ತಿನಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ' ಎಂದು ಮೋದಿ ಹೇಳಿದರು. 'ಮೂರನೆಯದಾಗಿ, ಮಾಧ್ಯಮಗಳು ಹಿಂದೆ ಇದ್ದಂತೆ ಇಲ್ಲ. ಏಕೆಂದರೆ ನಾನು ಆಜ್ ತಕ್ ಜೊತೆ ಮಾತನಾಡುತ್ತಿದ್ದೆ. ಆದರೆ ಈಗ ನಾನು ಯಾರೊಂದಿಗೆ ಮಾತನಾಡುತ್ತಿದ್ದೇನೆ ಎಂದು ವೀಕ್ಷಕರಿಗೆ ತಿಳಿದಿದೆ' ಎಂದರು.
'ಇಂದು, ಮಾಧ್ಯಮ ಪ್ರತ್ಯೇಕ ಘಟಕವಲ್ಲ. ಮೊದಲು ಸಂವಹನಕ್ಕೆ ಒಂದೇ ಒಂದು ಮೂಲವಿತ್ತು ಮತ್ತು ಮಾಧ್ಯಮವೇ ಸರ್ವಸ್ವವಾಗಿತ್ತು. ಇಂದು ದ್ವಿಮುಖ ಸಂವಹನವಿದೆ. ಮಾಧ್ಯಮಗಳಿಲ್ಲದೆ ಸಾರ್ವಜನಿಕರೂ ಮಾತನಾಡಬಹುದು' ಎಂದು ಅವರು ಹೇಳಿದರು. ತಮ್ಮ ಬಗ್ಗೆ ಚಾನೆಲ್‌ಗಳು ಏನು ಹೇಳುತ್ತವೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ವಿವಿಧ ಭಾಷೆಗಳಲ್ಲಿ 900 ಭಾರತೀಯ ಚಾನೆಲ್‌ಗಳಿವೆ ಎಂದು ಹೆಮ್ಮೆಪಡುತ್ತೇನೆ ಎಂದು ಪ್ರಧಾನಿ ಹೇಳಿದರು.












Click it and Unblock the Notifications