Parakram Diwas 2023: ಅಂಡಮಾನ್ ನಿಕೋಬಾರ್‌ನ 21 ದ್ವೀಪಗಳಿಗೆ ಮೋದಿಯಿಂದ ನಾಮಕರಣ: ಸಂಪೂರ್ಣ ಪಟ್ಟಿ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿಯವರು ಇಂದು ಅಂಡಮಾನ್ ನಿಕೋಬಾರ್ ದ್ವೀಪಗಳಿಗೆ ಹೊಸ ಹೆಸರನ್ನು ನಾಮಕರಣ ಮಾಡಿದರು. ಕೇಂದ್ರ ಸರ್ಕಾರ ಪರಮವೀರ ಚಕ್ರ ಪುರಸ್ಕೃತರ ಹೆಸರನ್ನು ಅಂಡಮಾನ್ ನಿಕೋಬಾರ್ ದ್ವೀಪ ಸೇರಿದಂತೆ ಉಳಿದ ಐಲ್ಯಾಂಡ್‌ಗಳಿಗೂ ನಾಮಕರಣ ಮಾಡಿದೆ. 21 ದ್ವೀಪಗಳಿಗೆ 21 ಮಂದಿ ಪರಮವೀರ ಚಕ್ರ ಪದಕ ಪುರಸ್ಕೃತ ಹೆಸರು ನಾಮಕರಣ ಮಾಡಿದರು.

ಪರಮವೀರ ಚಕ್ರ ಪುರಸ್ಖೃತರ ಹೆಸರನ್ನು ಚಿರಸ್ಥಾಯಿಗೊಳಿಸುವುದು ಕೇಂದ್ರದ ಉದ್ದೇಶವಾಗಿದೆ. ಹೀಗಾಗಿ ಭಾರತದ ದ್ವೀಪಗಳಿಗೆ ಹೊಸ ಹೆಸರನ್ನು ನಾಮಕರಣ ಮಾಡಲಾಗಿದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ಪ್ರತಿ ವರ್ಷ ಜನವರಿ 23 ರಂದು 'ಪರಾಕ್ರಮ್ ದಿವಸ್' ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126 ನೇ ಜನ್ಮದಿನದ ಅಂಗವಾಗಿ ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ 21 ಹೆಸರಿಲ್ಲದ ದ್ವೀಪಗಳಿಗೆ ನಾಮಕರಣ ಮಾಡಿದರು.

ಮೇಜರ್ ಸೋಮನಾಥ ಶರ್ಮಾ, ಸುಬೇದಾರ್ ಮತ್ತು ಹೊನಿ ಕ್ಯಾಪ್ಟನ್ (ಆಗ ಲ್ಯಾನ್ಸ್ ನಾಯಕ್) ಕರಮ್ ಸಿಂಗ್, 2 ನೇ ಲೆಫ್ಟಿನೆಂಟ್ ರಾಮ ರಾಘೋಬಾ ರಾಣೆ ಮತ್ತು ನಾಯಕ್ ಜಾದುನಾಥ್ ಸಿಂಗ್ ಸೇರಿದಂತೆ 21 ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಈ ದ್ವೀಪಗಳಿಗೆ ಇಡಲಾಗಿದೆ.

ಈ ವೇಳೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲಿರುವ ನೇತಾಜಿಗೆ ಮೀಸಲಾಗಿರುವ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದರು. "ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಐತಿಹಾಸಿಕ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸ್ಮರಣೆಯನ್ನು ಗೌರವಿಸಲು, ರಾಸ್ ದ್ವೀಪಗಳನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಮರುನಾಮಕರಣ ಮಾಡಿದರು. ಹ್ಯಾವ್ಲಾಕ್ ದ್ವೀಪವನ್ನು ಶಹೀದ್ ದ್ವೀಪ ಮತ್ತು ಸ್ವರಾಜ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ" ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

PM Modi named 21 islands of Andaman and Nicobar after Param Vir Chakra awardees

21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರಿನ ದ್ವೀಪಗಳ ಸಂಪೂರ್ಣ ಪಟ್ಟಿ ಇಲ್ಲಿದೆ-

*ಮೇಜರ್ ಸೋಮನಾಥ ಶರ್ಮಾ

*ಸುಬೇದಾರ್ ಮತ್ತು ಹೊನಿ ಕ್ಯಾಪ್ಟನ್ (ಆಗ ಲ್ಯಾನ್ಸ್ ನಾಯಕ್) ಕರಮ್ ಸಿಂಗ್

*2ನೇ ಲೆಫ್ಟಿನೆಂಟ್ ರಾಮ ರಾಘೋಬ ರಾಣೆ

*ನಾಯಕ್ ಜಾದುನಾಥ್ ಸಿಂಗ್

*ಕಂಪನಿ ಹವಾಲ್ದಾರ್ ಮೇಜರ್ ಪಿರು ಸಿಂಗ್

*ಕ್ಯಾಪ್ಟನ್ ಜಿಎಸ್ ಸಲಾರಿಯಾ

*ಲೆಫ್ಟಿನೆಂಟ್ ಕರ್ನಲ್ (ಆಗಿನ ಮೇಜರ್) ಧನ್ ಸಿಂಗ್ ಥಾಪಾ

*ಸುಬೇದಾರ್ ಜೋಗಿಂದರ್ ಸಿಂಗ್

*ಮೇಜರ್ ಶೈತಾನ್ ಸಿಂಗ್

*ಅಬ್ದುಲ್ ಹಮೀದ್

*ಲೆಫ್ಟಿನೆಂಟ್ ಕರ್ನಲ್ ಅರ್ದೇಶಿರ್ ಬುರ್ಜೋರ್ಜಿ ತಾರಾಪೋರ್

*ಲ್ಯಾನ್ಸ್ ನಾಯಕ್ ಆಲ್ಬರ್ಟ್ ಎಕ್ಕಾ

*ಮೇಜರ್ ಹೋಶಿಯಾರ್ ಸಿಂಗ್

*2ನೇ ಲೆಫ್ಟಿನೆಂಟ್ ಅರುಣ್ ಖೇತ್ರಪಾಲ್

*ಫ್ಲೈಯಿಂಗ್ ಆಫೀಸರ್ ನಿರ್ಮಲಜಿತ್ ಸಿಂಗ್ ಸೆಖೋನ್

*ಮೇಜರ್ ರಾಮಸ್ವಾಮಿ ಪರಮೇಶ್ವರನ್

*ನಾಯಬ್ ಸುಬೇದಾರ್ ಬನಾ ಸಿಂಗ್

*ಕ್ಯಾಪ್ಟನ್ ವಿಕ್ರಮ್ ಬಾತ್ರಾ

*ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ

*ಸುಬೇದಾರ್ ಮೇಜರ್ (ಆಗಿನ ರೈಫಲ್ ಮ್ಯಾನ್) ಸಂಜಯ್ ಕುಮಾರ್

*ಸುಬೇದಾರ್ ಮೇಜರ್ ನಿವೃತ್ತ (ಹಾನಿ ಕ್ಯಾಪ್ಟನ್) ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+