51,000 ಕೋಟಿ ರೂಪಾಯಿ ಮಂಜೂರಿಗೆ ಕೇಂದ್ರ ಸಂಪುಟ ಅಸ್ತು: ಯೋಜನೆಗಳು ಯಾವುವು?..PM Dhan Dhanya Yojana

ಬೆಂಗಳೂರು, ಜುಲೈ 17: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ದೇಶದ ಕೃಷಿಕರಿಗೆ ಸಹಾಯವಾಗುವ ಮಹತ್ವ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರವು ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆಗೆ ಅನುಮೋದನೆ ನೀಡಿದೆ. ಅಲ್ಲದೇ ಪ್ರಮುಖ ಯೋಜನೆಗಳಿಗೆಬ 51,000 ಕೋಟಿ ರೂಪಾಯಿ ಮಂಜೂರು ಮಾಡಲಾಗಿದೆ. ಯಾವೆಲ್ಲ ರೈತ ಯೋಜನೆಗಳಿಗೆ ಅನುಕೂಲವಾಗಲಿವೆ, ಅನುಮೋದನೆ ಪಡೆದ ಕಾರ್ಯಕ್ರಮಗಳ ವಿವರ ಇಲ್ಲಿದೆ.

ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆತ್ಮನಿರ್ಭರ ಕೃಷಿಯತ್ತ ಬೃಹತ್ ಹೆಜ್ಜೆ ಇಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ 'ಪ್ರಧಾನಮಂತ್ರಿ ಧನ್-ಧಾನ್ಯ ಕೃಷಿ ಯೋಜನೆ'ಗೆ ಅನುಮೋದನೆ ನೀಡಿದೆ. ಈ ಯೋಜನೆಯು ರೈತರ ಆದಾಯವನ್ನು ಹೆಚ್ಚಿಸುತ್ತದೆ. ಬೆಳೆ ವೈವಿ‌ಧ್ಯೀಕರಣವನ್ನು ಉತ್ತೇಜಿಸುತ್ತದೆ. ಸುಸ್ಥಿರ ಕೃಷಿ ಪದ್ಧತಿಯನ್ನು ಉತ್ತೇಜಿಸುವುದರೊಂದಿಗೆ ಸ್ಥಳೀಯವಾಗಿ ಉದ್ಯೋಗಗಳನ್ನೂ ಸೃಷ್ಟಿಸುತ್ತದೆ ಎಂದು ಅವರು ವಿವರಿಸಿದರು.

PM Modi Led Central Cabinet Approves 51 000 Cr Schemes for Farmers Green Energy

ದೇಶ ಕೃಷ್ಯ ವ್ಯವಸ್ಥೆಯಲ್ಲಿನ ಉತ್ಪಾದಕತೆ ಹೆಚ್ಚಿಸಲು ಹಾಗೂ ಸುಸ್ಥಿರ ಕೃಷಿ ಉತ್ತೇಜಿಸುತ್ತಿದೆ. 'ಪಿಎಂ ಧನ್-ಧಾನ್ಯ' ಕೃಷಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಂಪುಟ ಸಭೆಸಭೆಯಲ್ಲಿ 24 ಸಾವಿರ ಕೋಟಿ ಹೂಡಿಕೆಗೆ ಮಾಡಲು ನಿರ್ಧರಿಸಲಾಗಿದೆ.

2030ರ ವೇಳೆಗೆ ಮರುಬಳಕೆ ಇಂಧನ ಸಾಮರ್ಥ್ಯ 60 ಗಿಗಾವ್ಯಾಟ್‌ಗೆ ಹೆಚ್ಚಿಸಲು 20 ಸಾವಿರ ಕೋಟಿ ರೂ.ಹಾಗೂ ಪರಿಸರ ಇಂಧನ ಸಾಮರ್ಥ್ಯ ವಿಸ್ತರಿಸಲು ಇಂಧನ ಸಂಸ್ಥೆ ಎನ್‌ಐಆರ್‌ಎಲ್‌ನಲ್ಲಿ 7 ಸಾವಿರ ಕೋಟಿ ಹೂಡಿಕೆ ಮಾಡಲು ತಿರ್ಮಾನಿಸಲಾಯಿತು. ಕೃಷಿ, ನವೀಕರಣ ಇಂಧನ ಸೇರಿ 3 ವಲಯಗಳಲ್ಲಿ 51 ಸಾವಿರ ಕೋಟಿ ರೂ. ವಿನಿಯೋಗಿಸಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತು.

* ಪಿಎಂ ಧನಧಾನ್ಯ ಯೋಜನೆಗೆ 24,000 ಕೋಟಿ

* ನವೀಕರಿಸಬಲ್ಲ ಇಂಧನ ಯೋಜನೆ 20,000 ಕೋಟಿ

* ಎನ್‌ಐಆರ್‌ಎಲ್ ನಲ್ಲಿ 7000 ಕೋಟಿ ಹೂಡಿಕೆ

* ಒಟ್ಟು 51,000 ಕೋಟಿ ಮಂಜೂರು

PM Modi Led Central Cabinet Approves 51 000 Cr Schemes for Farmers Green Energy

ಪಿಎಂ ಧನ ಧಾನ್ಯ ಯೋಜನೆಗೆ ಮಂಜೂರಾತಿ ಸಿಕ್ಕಿದ್ದು, 2025 ರಿಂದ ಮುಂದಿನ ಆರು ವರ್ಷಗಳ ಜಾರಿಯಲ್ಲಿರಲಿದೆ. 100 ಜಿಲ್ಲೆಗಳಲ್ಲಿ ವ್ಯಾಪಿಸಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರದ 36 ಯೋಜನೆಗಳನ್ನು ಮತ್ತು 11 ಸಚಿವಾಲಯಗಳನ್ನು ಪರಸ್ಪರ ಸಂಪರ್ಕಿಸಲಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿವರಿಸಿದ್ದಾರೆ.

ರೈತರ ಬೆಳೆ ವಿಮೆ: ಏಜೆಂಟರ್ ಹಾವಳಿ ಹೆಚ್ಚಳ

ಸುದ್ದಿಗಾರರ ಜೊತೆಗೆ ಮಾತನಾಡುವಾಗ ಕರ್ನಾಟಕ ರಾಜ್ಯ ರೈತರ ಕುರಿತು ಪ್ರಸ್ತಾಪಿಸಿದ ಬೊಮ್ಮಾಯಿ ಅವರು, ರೈತರ ಬೆಳೆ ವಿಮೆ ಮಾಡಿಸುವ ಹೆಸರಿನಲ್ಲಿ ಏಜೆಂಟರ್ ಹಾವಳಿ ಹೆಚ್ಚಾಗಿದ್ದರ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದಾರೆ. ಬೆಳೆ ವಿಮೆ ಪಡೆಯಲು ಶೇಕಡಾ 20% ಬೋಗಸ್ ಫಲಾನುಭವಿಗಳು ಇರುತ್ತಿದ್ದರು ಅದನ್ನು ಈ ವರ್ಷ ತಡೆಯಲು ಸೂಚನೆ ನೀಡಿದ್ದೇನೆ ಎಂದರು.

ರೈತರಿಗೆ ಬೆಳೆ ಸಾಲ ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ಎಕರೆವಾರು ನೀಡುವ ಸಾಲದ ಪ್ರಮಾಣ ಹೆಚ್ಚಾಗಬೇಕು. ಸಹಕಾರಿ ಬ್ಯಾಂಕ್ ಗಳ ಮೂಲಕ ಸಾಲ ಪಡೆಯದೇ ಹೊರಗುಳಿದವರನ್ನು ಸಹಕಾರಿ ವ್ಯವಸ್ಥೆಯ ವ್ಯಾಪ್ತಿಗೆ ತಂದು ಸಾಲ ನೀಡಬೇಕು. ರೈತರಿಗೆ ಸಾಲ ಕೊಡುವಾಗ ಸಿಬಿಲ್ ಮಾನದಂಡ ಅನ್ವಯಿಸಬಾರದು ಎನ್ನುವುದು ನಮ್ಮ ಚಿಂತನೆ ಇದೆ. ಇದನ್ನು ರಾಷ್ಟ್ರಮಟ್ಟದಲ್ಲಿಯೇ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+