PMGKAY Extend: 'ಅಕ್ಕಿ ವಿತರಣೆ' ಯೋಜನೆ ಮತ್ತೆ ವಿಸ್ತರಿಸಿದ ಕೇಂದ್ರ ಸರ್ಕಾರ, ಎಷ್ಟು ವರ್ಷ? ಮಾಹಿತಿ
ನವದೆಹಲಿ, ನವೆಂಬರ್ 29: ಕೊರೊನಾ ಕಾಲದಲ್ಲಿ ಆರಂಭಿಸಿದ್ದ ಉಚಿತ ಆಹಾರ ಧಾನ್ಯಗಳನ್ನು ನೀಡುವ 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ (PMGKAY)' ಯೋಜನೆಯನ್ನು ಇನ್ನೂ ಐದು ವರ್ಷಗಳ ಅವಧಿಯವರೆಗೆ ಮುಂದುವರಿಸಲ
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
PMGKAY ಯೋಜನೆಯನ್ನು ಕೋವಿಡ್ ಸಾಂಕ್ರಾಮಿಕ ಆರಂಭದಲ್ಲಿ ಜನರಿಗೆ ಅನುಕೂಲವಾಗಲೆಂದು ಆರಂಭಿಸಲಾಯಿತು. ಅರ್ಹ ಪಡಿತರ ಚೀಟಿ ಹೊಂದಿರುವವರಿಗೆ (ಗೋಧಿ/ ಅಕ್ಕಿ)ಐದು ಕೇಜಿ ವಿತರಣೆ ಮಾಡಲಾಗುತ್ತಿತ್ತು. ಈ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯನ್ನು ಕೇಂದ್ರ ವಿಸ್ತರಿಸಲಿದೆ ಎಂದು ಸ್ವತಃ ಪ್ರಧಾನಿಯವರೇ ಕೆಲವು ಚುನಾವಣೆ ಭಾಷಣಗಳಲ್ಲಿ ತಿಳಿಸಿದ್ದರು.

ಏಪ್ರಿಲ್ 2020 ರಂದು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅನ್ನು ಪ್ರಾರಂಭಿಸಲಾಯಿತು. ಈ ಮೂಲಕ ಕೋವಿಡ್‌ನಿಂದ ತೊಂದರೆಗೀಡಾದ ಬಡವರಿಗೆ, ಆರ್ಥಿಕವಾಗಿ ಸಂಕಷ್ಟ ಎದುರಿಸಿದವರಿಗೆ ನೆರವಾಗುವಂತೆ ವಿತರಿಸಲಾಗುತ್ತಾ ಬರಲಾಗಿತ್ತು. ಅದು ಕೆಲವು ಬಾರಿ ವಿಸ್ತರಣೆ ಆಗಿತ್ತು. ಇದೀಗ ಮುಂದಿನ ಐದು ವರ್ಷಗಳವರೆಗೆ ವಿಸ್ತರನೇ ಆಗಿದೆ.
ಮೊದ ಮೊದಲು 2020-21ರಲ್ಲಿ ಏಪ್ರಿಲ್ ನಿಂದ ಜೂನ್ ವರೆಗೆ ಕೇವಲ ಮೂರು ತಿಂಗಳ ಅವಧಿಗೆ PMGKAY ಯೋಜನೆ ವಿಸ್ತರಣೆ ಮಾಡಲಾಯಿತು. ನಂತರ ಯೋಜನೆಯ ವಿತರಣೆ ಸತತ ಏಳು ಹಂತಗಳಲ್ಲಿ ಡಿಸೆಂಬರ್ 2022ರವರೆಗೆ ವಿಸ್ತರಣೆ ಆಯಿತು.

ಯೋಜನೆಯಿಂದ 80 ಕೋಟಿ ಫಲಾನುಭವಿಗಳಿಗೆ ಪ್ರಯೋಜನೆ
ನವೆಂಬರ್ 4 ರಂದು ಛತ್ತೀಸ್‌ಗಢ ಚುನಾವಣೆ ರ್ಯಾಲಿಯಲ್ಲಿ ಪ್ರಧಾನಿ ಮೋದಿಯವರು ಉಚಿತ ಪಡಿತರ ಯೋಜನೆಯನ್ನು ವಿಸ್ತರಿಸುವ ನಿರ್ಧಾರ ಪ್ರಕಟಿಸಿದ್ದರು. ಇದೀಗ ಆ ನಿರ್ಧಾರವನ್ನು ಸಂಪುಟದಲ್ಲಿ ಅಂಗೀಕರಿಸಲಾಗಿದೆ.
ಬಿಜೆಪಿ ಸರ್ಕಾರವು ದೇಶದ 80 ಕೋಟಿ ಬಡವರಿಗೆ ಉಚಿತ ಪಡಿತರ ನೀಡುವ ಯೋಜನೆಯನ್ನು ಮುಂದಿನ 5 ವರ್ಷಗಳವರೆಗೆ ವಿಸ್ತರಿಸಲು ನಿರ್ಧರಿಸಿದ್ದೇವೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದವು ಅಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ನನಗೆ ನೀಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.












Click it and Unblock the Notifications