ಪ್ರಧಾನಿ ಮೋದಿ ದೇಶಕ್ಕೆ 'ಗಾಡ್ ಗಿಫ್ಟ್' ಹೇಳಿಕೆ ಸಮಂಜಸವೇ?

Posted By:
Subscribe to Oneindia Kannada

ಪ್ರಧಾನಮಂತ್ರಿ ನರೇಂದ್ರ ಮೋದಿ 'ಭಾರತಕ್ಕೆ ದೇವರು ಕೊಟ್ಟ ಕೊಡುಗೆ' ಎಂದು ಹೇಳಿದ್ದ ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆಯ ಸಚಿವ ವೆಂಕಯ್ಯ ನಾಯ್ಡು ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದೆ.

ಮೋದಿ ತುಂಬಾ ಹೊಗಳು ಭಟ್ಟರೇ ಸುತ್ತುವರಿದಿದ್ದಾರೆ, ಅವರಿಗೂ ಅಂಥವರೇ ಬೇಕಿದೆ. ತಮಿಳುನಾಡು ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಗೆ ಏನೂ ವ್ಯತ್ಯಾಸವಿಲ್ಲ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ತುರ್ತು ಪರಿಸ್ಥಿತಿಯ ವೇಳೆ 'ಇಂಡಿಯಾ ಅಂದರೆ ಇಂದಿರಾ, ಇಂದಿರಾ ಅಂದರೆ ಇಂಡಿಯಾ' ಎಂದು ದೇವಕಾಂತ್ ಬರೂವಾ ಹೇಳಿದ್ದರು. ಇಂತಹ ಹೇಳಿಕೆ ನೀಡಿದ್ದ ದೇವಕಾಂತ್ ಅವರಿಗೆ ಪಕ್ಷ ಛೀಮಾರಿ ಹಾಕಿತ್ತು ಎಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ.

ಆ ಸಮಯದಲ್ಲಿ ದೇವಕಾಂತ್ ಪಕ್ಷದ ಅಧ್ಯಕ್ಷರಾಗಿದ್ದರು, ಆದರೂ ಪಕ್ಷ ಇಂತಹ ಹೇಳಿಕೆಯನ್ನು ಸಹಿಸುವುದಿಲ್ಲ. ವೆಂಕಯ್ಯ ನಾಯ್ಡು ಅವರ ಹೇಳಿಕೆ ಹೊಗಳುಭಟ್ಟತವನ್ನು ತೋರಿಸುತ್ತದೆ ಎಂದು ಸಿಂಘ್ವಿ ತರಾಟೆಗೆ ತೆಗೆದುಕೊಂಡಿದ್ದಾರೆ. (ಮೋದಿಯನ್ನು ಮೆಚ್ಚಿದ ಪ್ರವಾದಿ)

ಜಯಲಲಿತಾ ಕ್ಯಾಬಿನೆಟ್ ನಲ್ಲಿರುವ ಸಚಿವರು ಮತ್ತು ಶಾಸಕರು ಹೇಗೆ ತಮ್ಮ ನಾಯಕಿಯನ್ನು ಹೊಗಳುವುದೇ ಕಾಯಕ ಮಾಡಿಕೊಂಡಿದ್ದಾರೋ, ಮೋದಿ ಸುತ್ತಮುತ್ತ ಇರುವವರೆಲ್ಲಾ ಅದೇ ಕೆಲಸವನ್ನು ಮಾಡಿಕೊಂಡಿದ್ದಾರೆಂದು ಕಾಂಗ್ರೆಸ್ಸಿನ ಇನ್ನೊಬ್ಬ ವಕ್ತಾರ ಸಂಜಯ್ ಝಾ ಹೇಳಿದ್ದಾರೆ.

ವೆಂಕಯ್ಯ ನಾಯ್ಡು ಹೇಳಿದ್ದೇನು, ಸ್ಲೈಡಿನಲ್ಲಿ..

ದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕ

ದೊಡ್ಡ ಪ್ರಜಾಪ್ರಭುತ್ವ ದೇಶದ ನಾಯಕ

ತನ್ನ ರಾಜಕೀಯ ಜೀವನದಲ್ಲಿ ಮತ್ತು ಪ್ರಧಾನಿಯಾದ ಮೇಲೆ ಎದುರಾದ ಎಲ್ಲಾ ಸವಾಲುಗಳನ್ನು ಮೋದಿ ಸಮರ್ಥವಾಗಿ ಎದುರಿಸುತ್ತಿದ್ದಾರೆ. ಅವರು ವಿಶ್ವದ ಅತಿದೊಡ್ಡ ಪ್ರಭಾಪ್ರಭುತ್ವ ದೇಶವನ್ನು ಮುನ್ನಡೆಸುತ್ತಿದ್ದಾರೆ - ವೆಂಕಯ್ಯ ನಾಯ್ಡು

ಮೋದಿ ಈಸ್ ಗಾಡ್ ಗಿಫ್ಟ್

ಮೋದಿ ಈಸ್ ಗಾಡ್ ಗಿಫ್ಟ್

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಾತನಾಡುತ್ತಿದ್ದ ನಾಯ್ಡು, ಮೋದಿ ಬಡವರ ಬಂಧು, ಅವರ ಆಡಳಿತ ಶೈಲಿಯಿಂದಾಗಿ ಇಡೀ ವಿಶ್ವವೇ ನಮ್ಮತ್ತ ತಿರುಗಿ ನೋಡುತ್ತಿದೆ. ಮೋದಿ ದೇಶಕ್ಕೆ ದೇವರು ನೀಡಿದ ಕೊಡುಗೆ ಎಂದು ಹೇಳಿದ್ದರು. ನಾಯ್ಡು ಹೇಳಿಕೆಗೆ ಕಾಂಗ್ರೆಸ್ ಖಾರವಾಗಿ ಪ್ರತಿಕ್ರಿಯಿಸಿದೆ.

ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ವೆಂಕಯ್ಯ ನಾಯ್ಡು ಈ ರೀತಿ ಹೇಳಿದ್ದು ನನ್ನ ಗಮನಕ್ಕೆ ಬಂದಿಲ್ಲ ಮತ್ತು ಈ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಿಲ್ಲ.

ಗುಜರಾತ್ ಗಲಭೆ

ಗುಜರಾತ್ ಗಲಭೆಯಲ್ಲಿ ಮಡಿದ ಕುಟುಂಬದವರನ್ನು, ಇಶಾನ್ ಜಾಫ್ರಿ ಕುಟುಂಬದವರನ್ನು ಕೇಳಿ ಮೋದಿ ಗಾಡ್ ಗಿಫ್ಟಾ ಎಂದು - ಸಂಜಯ್ ಝಾ ಟ್ವೀಟ್

ಮನೀಶ್ ತಿವಾರಿ

ಮೋದಿ ದೇಶದ ಗಿಫ್ಟಾ ಅಥವಾ ಕೆಲವು ಜನರಿಗೆ ಮಾತ್ರ ಗಿಫ್ಟಾ ಎನ್ನುವ ಸಮೀಕ್ಷೆ ನಡೆಸಲು ನ್ಯಾಯದರ್ಶಿಗಳು ಹೋಗಿದ್ದಾರೆ, ಸದ್ಯದಲ್ಲೇ ಗೊತ್ತಾಗಲಿದೆ - ಮನೀಶ್ ತಿವಾರಿ.

ಅಭಿಷೇಕ್ ಸಿಂಘ್ವಿ

ಜಯಾ ಕ್ಯಾಬಿನೆಟ್ ಮತ್ತು ಮೋದಿ ಸರಕಾರಕ್ಕೆ ಏನೂ ವ್ಯತ್ಯಾಸವಿಲ್ಲ - ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Congress (INC) took a dig at Union Minister Venkaiah Naidu for hailing Prime Minister Narendra Modi as a "God's gift to India".
Please Wait while comments are loading...