PM Modi Speech: ವಿಪಕ್ಷಗಳಿಗೆ ಪ್ರಧಾನಿ ಮೋದಿ 'ಎಲ್‌ಐಸಿ' ಏಟು!
ನವದೆಹಲಿ: ಪ್ರಧಾನಿ ಮೋದಿ ಮತ್ತು ವಿಪಕ್ಷಗಳ ನಡುವೆ ತಿಕ್ಕಾಟ ಜೋರಾಗಿದೆ. ಇಂದು ಅವಿಶ್ವಾಸ ನಿರ್ಣಯದ ಬಗ್ಗೆ ಉತ್ತರಿಸಿದ ಪ್ರಧಾನಿ ಮೋದಿ, ವಿರೋಧ ಪಕ್ಷಗಳ ನಾಯಕರಿಗೆ ತಿರುಗೇಟು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಎಲ್‌ಐಸಿ ಹಾಗೂ ಎಚ್‌ಎಎಲ್ ವಿಚಾರ ಪ್ರಸ್ತಾಪಿಸಿ ವಿಪಕ್ಷಗಳಿಗೆ ಗುದ್ದು ಕೊಟ್ಟರು. ಹಾಗಾದರೆ ಪ್ರಧಾನಿ ಮೋದಿ ಅಧಿವೇಶದಲ್ಲಿ ದಿಢೀರ್ ಎಲ್‌ಐಸಿ ವಿಚಾರ ಪ್ರಸ್ತಾಪ ಮಾಡಿದ್ದೇಕೆ? ಮುಂದೆ ಓದಿ.
ಕಾಂಗ್ರೆಸ್ ಮತ್ತು ಎನ್‌ಡಿಎ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಬೆಂಗಳೂರಿನ ಎಚ್‌ಎಎಲ್, ಸಾರ್ವಜನಿಕ ಬ್ಯಾಂಕ್‌ಗಳು ಮತ್ತು ಎಲ್‌ಐಸಿ ಬೆಳವಣಿಗೆ ಬಗ್ಗೆ ಪ್ರಸ್ತಾಪಿಸಿದರು. ಪ್ರತಿಪಕ್ಷಗಳು ಸಾರ್ವಜನಿಕ ಬ್ಯಾಂಕ್‌ಗಳು, ಏರೋಸ್ಪೇಸ್ ಸಂಸ್ಥೆ ಎಚ್‌ಎಎಲ್ ಮತ್ತು ವಿಮಾ ಕಂಪನಿ ಎಲ್‌ಐಸಿ ಮುಳುಗುತ್ತವೆ ಎಂದು ಹೇಳುತ್ತಿದ್ದರು. ಆದರೆ ಅವೆಲ್ಲಾ ಹಿಂದೆಂದಿಗಿಂತ ಈಗ ಉತ್ತಮವಾಗಿ ಕೆಲಸ ಮಾಡುತ್ತಿವೆ. ಹೊಸ ಎತ್ತರವನ್ನು ತಲುಪುತ್ತಿವೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ. ವಿಶೇಷವಾಗಿ ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಎಚ್‌ಎಎಲ್ ಸಂಸ್ಥೆಯನ್ನ ಪ್ರಧಾನಿ ಮೋದಿ ಶ್ಲಾಘಿಸಿದ್ದು, ವಿಪಕ್ಷಗಳ ಬಗ್ಗೆ ಗರಂ ಆಗಿದ್ದರು.

ಎಚ್‌ಎಎಲ್ ಸಾಧನೆ ಉಲ್ಲೇಖಿಸಿದ ಪ್ರಧಾನಿ
ಪ್ರತಿಪಕ್ಷಗಳು ಎಚ್‌ಎಎಲ್ ಅನ್ನೇ ಗುರಿಯಾಗಿಸಿಕೊಂಡು ಆರೋಪ ಮಾಡಿದ್ದರು, ಅಲ್ಲದೆ ಎಚ್‌ಎಎಲ್ ಸಂಸ್ಥೆಯ ಸಿಬ್ಬಂದಿ ಮತ್ತು ಉದ್ಯೋಗಿಗಳಿಗೆ ಏನೇನೋ ಹೇಳುವ ಕೆಲಸವೂ ನಡೆದಿತ್ತು. ಆದರೆ ಇಂದು ಎಚ್‌ಎಎಲ್ ಸಾಧನೆ ಹಾದಿಯಲ್ಲಿದ್ದು, ಹೊಸ ಎತ್ತರವನ್ನೂ ತಲುಪುತ್ತಿದೆ. ಈ ವರ್ಷ ತನ್ನ ಅತ್ಯಧಿಕ ಆದಾಯ ದಾಖಲಿಸಿದ್ದು, ರಾಷ್ಟ್ರದ ಹೆಮ್ಮೆಯಾಗಿದೆ ಎಂದರು. ಈ ಮೂಲಕ ಎಚ್‌ಎಎಲ್ ವಿಚಾರದಲ್ಲಿ ತಮ್ಮ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಪರೋಕ್ಷವಾಗಿ ಸಮರ್ಥನೆ ನೀಡಿದರು.
ಪ್ರತಿಪಕ್ಷಗಳ ಮಾತೇ ಸುಳ್ಳು!
ಇನ್ನು ಇದೇ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರ ಭಾಷಣವನ್ನ ಪಿಎಂ ಮೋದಿ ಉಲ್ಲೇಖಿಸಿದರು. ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ಬೆಳವಣಿಗೆ ಮತ್ತು ಪ್ರಗತಿಯ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ಹಾಗೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಅಂದರೆ ಎಚ್‌ಎಎಲ್ ಬಗ್ಗೆ ಮಾತನಾಡಿದ್ದಾರೆ. ಆದರೆ ಎಚ್‌ಎಎಲ್ ನಾಶವಾಗುತ್ತೆ ಅಂತಾ ವಿಪಕ್ಷಗಳು ಈ ಹಿಂದೆ ಸುಳ್ಳು ಹೇಳಿಕೆ ನೀಡಿದ್ದವು ಎಂದು ಕುಟುಕಿದರು.

ಬಡವರ ಹಣ ಮುಳುಗುತ್ತಿದೆ ಎಂದಿದ್ದರು..
ಎಚ್‌ಎಎಲ್ ಸಂಸ್ಥೆ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಳ್ಳುತ್ತಾರೆ ಎಂದು ಪ್ರೇರೇಪಿಸಿದ್ದರು. ಆದರೆ ಇಂದು ಎಚ್‌ಎಎಲ್ ಯಶಸ್ಸಿನ ಹೊಸ ಉತ್ತುಂಗ ಮುಟ್ಟುತ್ತಿದೆ. ಈ ಸಾಧನೆಗೆ ನಾವು ಎಚ್‌ಎಎಲ್‌ನ ಈ ವರ್ಷದ ಆದಾಯವನ್ನು ಉದಾಹರಣೆಯಾಗಿ ನೀಡಬಹುದು. ಆದರೆ ವಿಪಕ್ಷಗಳು ಮಾತ್ರ ಸುಳ್ಳು ಸುದ್ದಿ ಹರಡಿದ್ದವು. ಎಲ್‌ಐಸಿ ಐಪಿಒ ಮತ್ತು ಲಿಸ್ಟಿಂಗ್ ವಿಚಾರ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಎಲ್‌ಐಸಿ ವಿಚಾರದಲ್ಲಿ ಬಡವರ ಹಣ ಮುಳುಗುತ್ತದೆ ಎಂದು ಪ್ರತಿಪಕ್ಷಗಳು ಆರೋಪ ಮಾಡಿದ್ದವು. ಆದ್ರೆ ಈಗ ನೋಡಿ ಎಲ್ಐಸಿ ಬಲವಾಗುತ್ತಿದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಹೆಮ್ಮೆ ವ್ಯಕ್ತಪಡಿಸಿದರು.
ಹಾಗೇ ಅಂತಿಮವಾಗಿ ವಿಪಕ್ಷಗಳ ಬಾಣವನ್ನೇ ಅವರಿಗೆ ತಿರುಗುಬಾಣ ಮಾಡುವಂತೆ ಪಿಎಂ ಮೋದಿ ಮಾತನಾಡಿದರು, ಕಾಂಗ್ರೆಸ್ ಟೀಕಿಸಿದವರೆಲ್ಲರಿಗೂ ಒಳ್ಳೆಯದಾಗಿದೆ. ಬ್ಯಾಂಕಿಂಗ್ ವ್ಯವಸ್ಥೆ ಬಗ್ಗೆ ಅಪ ಪ್ರಚಾರ ಮಾಡಿದರು, ಎಲ್‌ಐಸಿ ಬಗ್ಗೆ ದೊಡ್ಡ ಅಪ ಪ್ರಚಾರ ಮಾಡಿದರು. ಬಡವರ ಹಣ ನಷ್ಟವಾಯಿತು ಎಂದರು. ಆದರೆ ಇದೀಗ ಎಲ್‌ಐಸಿ ಅತ್ಯಂತ ಬಲಿಷ್ಠವಾಗಿದೆ. ಎಚ್‌ಎಎಲ್ ಬಗ್ಗೆ ಅನೇಕ ಸುಳ್ಳು ಹೇಳಿದ್ರು. ವಿಪಕ್ಷಗಳು ಟೀಕಿಸಿದ ಎಲ್ಲ ಕಂಪನಿಗಳ ಷೇರನ್ನ ಜನ ಖರೀದಿಸುತ್ತಿದ್ದಾರೆ. ಷೇರುಪೇಟೆಯಲ್ಲಿ ಆಸಕ್ತಿ ಇರುವವರಿಗೆ ನನ್ನ ಸಲಹೆ ಸರ್ಕಾರಿ ಕಂಪನಿ ಷೇರುಗಳಲ್ಲಿ ಹೂಡಿಕೆ ಮಾಡಿ & ನಿಮ್ಮ ಹಣ ಬೆಳೆಯುತ್ತದೆ ಎಂದು ಪ್ರಧಾನಿ ಸಲಹೆಯನ್ನ ನೀಡಿದರು. ಇದೀಗ ವಿಪಕ್ಷಗಳು ಪ್ರಧಾನಿ ಮಾತಿಗೆ ಯಾವ ರೀತಿ ತಿರುಗೇಟು ನೀಡಲಿವೆ? ಎಂಬುದನ್ನ ಕಾದು ನೋಡಬೇಕು.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications