RSS ಶತಮಾನೋತ್ಸವ: ವಿಶೇಷ ಲಾಂಛನದ ₹100 ನಾಣ್ಯ & ಅಂಚೆ ಚೀಟಿ ಬಿಡುಗಡೆ: ಪ್ರಧಾನಿ ಮೋದಿ

ನವದೆಹಲಿ, ಅಕ್ಟೋಬರ್ 01: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವ ಸಂಭ್ರಮದಲ್ಲಿದೆ. ಸಂಘಟನೆಯನ್ನು ಭಾರತದ ಪ್ರತಿಯೊಂದು ಅಂಶದ ಮೇಲೆ ಪ್ರಭಾವ ಬೀರಿದ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯ "ಸದ್ಗುಣಶೀಲ ಅವತಾರ' ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದ್ದಾರೆ. ಇದೇ ವೇಳೆ 100 ರೂಪಾಯಿಯ ನಾಣ್ಯವನ್ನು ಪ್ರಧಾನಿ ಬಿಡುಗಡೆ ಮಾಡಿದರು.

ನಾಗ್ಪುರದಲ್ಲಿ 1925ರಲ್ಲಿ ಡಾ. ಕೇಶವ್ ಬಲಿರಾಮ್ ಹೆಡ್ಗೆವಾರ್ ಸ್ಥಾಪಿಸಿದ ಆರ್‌ಎಸ್‌ಎಸ್, ಸಾಂಸ್ಕೃತಿಕ ಅರಿವು, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸುವ ಸ್ವಯಂಸೇವಕ ಆಧಾರಿತ ಸಂಘಟನೆಯಾಗಿ ಆರಂಭಗೊಂಡಿತು. ಕಳೆದ ಒಂದು ಶತಮಾನದಲ್ಲಿ ಇದು ಭಾರತದ ಅತ್ಯಂತ ಪ್ರಭಾವಶಾಲಿ ಸಾಮಾಜಿಕ-ಸಾಂಸ್ಕೃತಿಕ ಸಂಘಟನೆಗಳಲ್ಲಿ ಒಂದಾಗಿ ಬೆಳೆದಿದ್ದು, 100 ವರ್ಷ ಪೂರೈಸಿದೆ.

PM Modi Flags Off RSS Centenary Releases 100 Coin and Stamp Know specialities

ಇಂದು ಬುಧವಾರ (ಅಕ್ಟೋಬರ್ 1) ರಾಷ್ಟ್ರ ರಾಜಧಾನಿ ದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಶತಮಾನೋತ್ಸವ ಸಮಾರಂಭದಲ್ಲಿ ಪ್ರಧಾನಿ ಮೋದಿ ಮುಖ್ಯ ಪಾಲ್ಗೊಂಡರು. ಈ ಸಂದರ್ಭದಲ್ಲಿ ವಿಶೇಷ ಅಂಚೆ ಚೀಟಿ ಮತ್ತು ₹100 ನಾಣ್ಯವನ್ನು ಬಿಡುಗಡೆ ಮಾಡಲಾಯಿತು. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ವಿಶೇಷ ಲಾಂಛನ ಹೊಂದಿರುವ ನಾಣ್ಯ ಬಿಡುಗಡೆ ಆಗಿದೆ.

ಮಂಗಳವಾರ 93ನೇ ವಯಸ್ಸಿನಲ್ಲಿ ನಿಧನರಾದ ಹಿರಿಯ ಬಿಜೆಪಿ ನಾಯಕ ವಿಜಯ್ ಕುಮಾರ್ ಮಲ್ಹೋತ್ರಾ ಹಾಗೂ ಸಂಸ್ಥಾಪಕ ಹೆಡ್ಗೆವಾರ್ ಅವರಿಗೆ ಗೌರವ ಸಲ್ಲಿಸುವ ಮೂಲಕ ಪ್ರಧಾನಿ ಮೋದಿ ತಮ್ಮ ಮಾತು ಆರಂಭಿಸಿದರು. ಮೋದಿ ಅವರು, ವಿಜಯದಶಮಿಯು ಕೆಟ್ಟದಿನ ಮೇಲೆ ಒಳ್ಳೆಯತನ, ಅನ್ಯಾಯದ ಮೇಲೆ ನ್ಯಾಯ, ಸುಳ್ಳಿನ ಮೇಲೆ ಸತ್ಯ ಮತ್ತು ಕತ್ತಲೆಯ ಮೇಲೆ ಬೆಳಕಿನ ಜಯದ ಘೋಷಣೆ ಆಗಿದೆ. ಆರ್‌ಎಸ್‌ಎಸ್ ಸ್ಥಾಪನೆ 100 ವರ್ಷಗಳ ಹಿಂದೆ ಕಾಕತಾಳೀಯವಲ್ಲ. ಸಂಘವು ನಮ್ಮ ಶಾಶ್ವತ ರಾಷ್ಟ್ರೀಯ ಪ್ರಜ್ಞೆಯ ಸದ್ಗುಣ ಅವತಾರವಾಗಿದೆ ಎಂದು ಹೇಳಿದರು.

ದೇಶದಲ್ಲಿ ಸ್ವತಂತ್ರ ನಮತರ ಮೊದಲ ಬಾರಿಗೆ ಬಿಡುಗಡೆ ಮಾಡಲಾದ ನಾಣ್ಯವು ಭಾರತಮಾತೆಯ ಚಿತ್ರ, ಸಿಂಹ ಹಾಗೂ ಸ್ವಯಂಸೇವಕರ ನಮಸ್ಕಾರವನ್ನು ಒಳಗೊಂಡಿತ್ತು. 1963ರ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಆರ್‌ಎಸ್‌ಎಸ್ ಸ್ವಯಂಸೇವಕರು ಭಾಗವಹಿಸುವುದನ್ನು ಬಿಡುಗಡೆಯಾದ ಅಂಚೆ ಚೀಟಿ ಪ್ರದರ್ಶಿಸುತ್ತದೆ

ನದಿ ತೀರಗಳಲ್ಲಿ ಸಮುದಾಯಗಳು ಬೆಳೆಯುವಂತೆ, ಸಂಘದ ಪ್ರವಾಹದ ಮೂಲಕ ಅನೇಕ ಜೀವಗಳು ಬೆಳೆದಿವೆ. ಆರ್‌ಎಸ್‌ಎಸ್ ದೇಶದ ಪ್ರತಿಯೊಂದು ಅಂಶ, ಗೌರವವನ್ನು ಸ್ಪರ್ಶಿಸುತ್ತದೆ. ಅನೇಕ ಉಪಸಂಘಟನೆಗಳಿದ್ದರೂ ಅವೆಲ್ಲವೂ ಒಂದೇ ಧ್ಯೇಯ ಹೊಂದಿವೆ "ರಾಷ್ಟ್ರ ಮೊದಲು' ಎಂದು ಪ್ರಧಾನಿ ಮೋದಿ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+