ಪ್ರಧಾನಿ ಮೋದಿ ಆಸ್ತಿ ಒಂದೂವರೆ ಕೋಟಿ ರು ದಾಟಿಲ್ಲ!
ನವದೆಹಲಿ, ಫೆ. 01: ನರೇಂದ್ರ ಮೋದಿ ಅವರು ಗುಜರಾತ್ ಸಾಮ್ರಾಜ್ಯವನ್ನು ಬಿಟ್ಟು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸಂಪಾದಿಸಿದ್ದು ಅಪಾರ ಜನ ಸಮೂಹದ ಪ್ರೀತಿಯನ್ನು ಮಾತ್ರ ಎಂದು ಬಿಜೆಪಿ ಪ್ರಕಟಿಸಿದರೆ ನೀವು ನಂಬಲೇ ಬೇಕು. ಪ್ರಧಾನಿ ಮೋದಿ ಅವರ ಆಸ್ತಿ ವಿವರ ಬಹಿರಂಗವಾಗಿದ್ದು, ಅವರ ಕೈಲಿ 4,700 ರು ಮಾತ್ರ ನಗದು ಉಳಿದಿದೆ.
ಪ್ರಧಾನಿ ಮೋದಿ ಅವರ ಒಟ್ಟಾರೆ ಆಸ್ತಿ ಮೊತ್ತ 1.41 ಕೋಟಿ ರು ದಾಟಿಲ್ಲ. ಪ್ರಧಾನಿ ಸಚಿವಾಲಯ ಹೊರ ಹಾಕಿದ ಮಾಹಿತಿ ಪ್ರಕಾರ 13ವರ್ಷ ಹಿಂದೆ ಖರೀದಿಸಿದ ನಿವೇಶನ ಬೆಲೆ ಏರಿಕೆಯಾಗಿರುವ ಹಿನ್ನಲೆಯಲ್ಲಿ ಮೋದಿ ಅವರ ಸ್ಥಿರಾಸ್ತಿ ಮೊತ್ತ ಕೋಟಿ ರು ದಾಟಿದೆಯಂತೆ.
ಕಳೆದ ಆರ್ಥಿಕ ವರ್ಷದ ಲೆಕ್ಕಾಚಾರದಂತೆ 4,700 ರು ನಗದು ಮೊತ್ತ ಮಾತ್ರ ಉಳಿಸಿಕೊಂಡಿದ್ದಾರೆ. 2014ರ ಆಗಸ್ಟ್ 18ರಂತೆ 38,700 ರು ನಗದು ಹೊಂದಿದ್ದರು. ಮಾರ್ಚ್ 31, 2015ರಂತೆ ಸ್ಥಿರಾಸ್ತಿ ಹಾಗೂ ಚರಾಸ್ತಿ ಮೊತ್ತ ಲೆಕ್ಕ ಹಾಕಿದರೆ 1,26,12,288 ರು ನಿಂದ 1,41,14,893 ರು ಗೆ ಏರಿಕೆಯಾಗಿದೆ. [ಜಯಲಲಿತಾ ಘೋಷಣೆ ಮಾಡಿದ ಆಸ್ತಿ ಎಷ್ಟು ಗೊತ್ತಾ?]

ಮೇ 26, 2014 ರಂದು ಅಧಿಕಾರ ಸ್ವೀಕರಿಸಿದ ಮೋದಿ ಅವರ ಬಳಿ ಮೋಟರ್ ವೆಹಿಕಲ್, ಏರ್ ಕ್ರಾಫ್ಟ್, ಯಾಚ್, ಹಡಗು ಯಾವುದು ಇಲ್ಲ. ಅವರ ಬ್ಯಾಂಕ್ ಖಾತೆ ಇನ್ನೂ ಗುಜರಾತ್ ಅಡ್ರೆಸ್ ನಲ್ಲೇ ಇದೆ.ದೆಹಲಿಯಲ್ಲಿ ಅಕೌಂಟೂ ಇಲ್ಲ, ಯಾವುದೇ ಸಾಲ ಸೋಲ ಹೊರೆಯೂ ಒಲ್ಲ.
ಮಾರ್ಚ್ 31, 2015 ರಂತೆ ಒಂದು ನಾಲ್ಕು ಪೀಸ್ ಚಿನ್ನದ ಉಂಗುರ ಅಂದಾಜು 45ಗ್ರಾಮ್ಸ್ ಬೆಲೆ 1.19 ಲಕ್ಷ ರು ನಷ್ಟು ಮಾತ್ರ ಹೊಂದಿದ್ದಾರೆ.
ಉಳಿದಂತೆ ಎಲ್ ಅಂಡ್ ಟಿ ಇನ್ಫ್ರಾ ಬಾಂಡ್ಸ್ (ತೆರಿಗೆ ಉಳಿತಾಯ) ನಲ್ಲಿ 20,000 ರು ಹೂಡಿಕೆ ಮಾಡಿದ್ದಾರೆ. 5.45 ಲಕ್ಷ ರು ಮೌಲ್ಯದ ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ 1.99 ಲಕ್ಷ ರು ಮೌಲ್ಯದ ಜೀವ ವಿಮೆ ಪಾಲಿಸಿ. ಒಟ್ಟಾರೆ ಚರಾಸ್ತಿ 41.15 ಲಕ್ಷ ರು ಮಾತ್ರ ಹೊಂದಿದ್ದಾರೆ ಎಂದು ಮಾಹಿತಿ ನೀಡಲಾಗಿದೆ.
ಮೋದಿ ಅವರು ಗಾಂಧಿನಗರದಲ್ಲಿರುವ ಪೂರ್ವಿಕರ ಆಸ್ತಿಯಾದ ನಿವೇಶನದಲ್ಲಿ 3,531.45 ಚದರ ಅಡಿ ಹಾಗೂ ಬಿಲ್ಟ್ ಅಪ್ ಏರಿಯಾ 169.81 ಚದರ ಅಡಿ ಪಾಲು ಹೊಂದಿದ್ದಾರೆ. ಅಕ್ಟೋಬರ್ 25, 2002ರಂದು ಖರೀದಿ ಮಾಡಲಾಗಿದೆ. ಈಗಿನ ಮಾರುಕಟ್ಟೆ ದರ 1 ಕೋಟಿ ರು ದಾಟುತ್ತದೆ.
(ಪಿಟಿಐ)












Click it and Unblock the Notifications