Full list: ಕರ್ನಾಟಕದ ನಾಲ್ವರು ಸೇರಿ 43 ಮಂದಿ ಪ್ರಮಾಣ ವಚನ
ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಎನ್ ಡಿಎ 2.0 ಸರ್ಕಾರದ ಸಚಿವ ಸಂಪುಟ ಪುನರ್ ರಚನೆ/ವಿಸ್ತರಣೆಯಲ್ಲಿ ಒಟ್ಟು 43 ಮಂದಿ ಜುಲೈ 8ರಂದು ಪ್ರತಿಜ್ಞಾ ವಿಧಿ ಸ್ವೀಕರಿಸಿ ನೂತನ ಸಚಿವರಾಗಲಿದ್ದಾರೆ.
ಇಬ್ಬರು ಸಚಿವರ ನಿಧನ, ಮಿತ್ರಪಕ್ಷಗಳಾಗಿದ್ದ ಅಕಾಲಿದಳ, ಶಿವಸೇನೆ ಮೈತ್ರಿ ಕಳೆದುಕೊಂಡಿದ್ದರಿಂದ ಉಂಟಾಗಿರುವ ಖಾಲಿ ಸ್ಥಾನ ಸೇರಿಸಿ 28 ಸ್ಥಾನಗಳನ್ನು ತುಂಬಬಹುದಾಗಿದೆ.
ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್, ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್, ಸದಾನಂದ ಗೌಡ ಸೇರಿದಂತೆ ಒಟ್ಟು 12 ಮಂದಿಯನ್ನು ಸಂಪುಟದಿಂದ ಕೈ ಬಿಡಲಾಗಿದ್ದು, ಎಲ್ಲರೂ ರಾಜೀನಾಮೆ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಸ್ಥಾನಕ್ಕೆ ಥಾವರಚಂದ್ ಗೆಹ್ಲೋಟ್ ರಾಜೀನಾಮೆ ಸಲ್ಲಿಸಿದ್ದು, ಕರ್ನಾಟಕದ ಹೊಸ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.

ಹಾಲಿ ಸಚಿವ ಅನುರಾಗ್ ಠಾಕೂರ್, ಪುರುಷೋತ್ತಮ್ ರುಪಾಲಾ ಹಾಗೂ ಜಿ ಕಿಶಾನ್ ರೆಡ್ಡಿ, ಕಿರಣ್ ರಿಜಿಜು, ಹರ್ದೀಪ್ ಸಿಂಗ್ ಪುರಿ, ಮನುಷ್ ಮಾಂಡವ್ಯ ಹೆಚ್ಚುವರಿ ಜವಾಬ್ದಾರಿ ಪಡೆದುಕೊಳ್ಳುವ ಸಾಧ್ಯತೆಯಿದೆ.
ಪ್ರಮಾಣ ವಚನ ಸ್ವೀಕರಿಸಲಿರುವವರು:
1. ನಾರಾಯಣ ರಾಣೆ
2. ಸರ್ಬಾನಂದ್ ಸೋನೊವಾಲ್
3. ಡಾ. ವೀರೇಂದ್ರ ಕುಮಾರ್
4. ಜ್ಯೋತಿರಾದಿತ್ಯ ಸಿಂಧಿಯಾ
5. ರಾಮಚಂದ್ರ ಪ್ರಸಾದ್ ಸಿಂಗ್
6. ಅಶ್ವಿನಿ ವೈಭವ್
7. ಪಶುಪತಿ ಕುಮಾರ್ ಪರಾಸ್
8. ಕಿರಣ್ ರಿಜಿಜು
9. ರಾಜ್ ಕುಮಾರ್ ಸಿಗ್
10. ಹರ್ದೀಪ್ ಸಿಂಗ್ ಪುರಿ
11. ಮನ್ಸುಖ್ ಮಾಂಡವಿಯಾ
12. ಭೂಪೇಂದ್ರ ಯಾದವ್.
13. ಪುರುಷೋತ್ತಮ್ ರುಪಾಲ
14. ಜಿ ಕಿಶನ್ ರೆಡ್ಡಿ
15. ಅನುರಾಗ್ ಸಿಂಗ್ ಠಾಕೂರ್
16. ಪಂಕಜ್ ಚೌಧುರಿ
17. ಅನುಪ್ರಿಯ ಸಿಂಗ್ ಪಟೇಲ್
18. ಡಾ ಸತ್ಯಪಾಲ್ ಸಿಂಗ್ ಭಘೇಲ್
19. ರಾಜೀವ್ ಚಂದ್ರಶೇಖರ್
20. ಶೋಭಾ ಕರಂದ್ಲಾಜೆ
21. ಭಾನುಪ್ರತಾಪ್ ಸಿಂಗ್ ವರ್ಮಾ
22 ದರ್ಶನ ವಿಕ್ರಮ ಜರ್ದೋಶ್
23. ಮೀನಾಕ್ಷಿ ಲೇಖಿ
24. ಅನ್ನಪೂರ್ಣ ದೇವಿ
25. ಎ ನಾರಾಯಣ ಸ್ವಾಮಿ
26. ಕೌಶಲ್ ಕಿಶೋರ್
27. ಅಜಯ್ ಭಟ್
28. ಬಿ.ಎಲ್ ವರ್ಮ
29. ಅಜಯ್ ಕುಮಾರ್
30. ಚೌಹಾಣ್ ದೇವುಸಿಂಗ್
31. ಭಗವಂತ್ ಖೂಬಾ
32. ಕಪಿಲ್ ಮೊರೇಶ್ವರ್ ಪಾಟೀಲ್
33. ಪ್ರತಿಮಾ ಭೌಮಿಕ್
34. ಡಾ. ಸುಭಾಶ್ ಸರ್ಕಾರ್
35. ಡಾ ಭಗವತ್ ಕಿಶನ್ ರಾವ್ ಕರಡ್
36. ಡಾ. ರಾಜ್ ಕುಮಾರ್ ರಂಜನ್ ಸಿಂಗ್
37. ಡಾ ಭಾರತಿ ಪ್ರವೀಣ್ ಪವಾರ್
38. ಬಿಶ್ವೇಶ್ವರ್ ತುಡು
39. ಶಂತನು ಠಾಕೂರ್
40. ಜಾನ್ ಬರ್ಲಾ
41. ಡಾ. ಎಲ್ ಮುರುಗನ್
42. ನಿತೀಶ್ ಪ್ರಾಮಾಣಿಕ್.












Click it and Unblock the Notifications